ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬಿಜೆಪಿಗೆ ಗಾಯದ ಮೇಲೆ ಬರೆ ಎಳೆಯುತ್ತಿರುವ ಟ್ರೋಲ್ ಹೈಕ್ಳು!

|
Google Oneindia Kannada News

ನವದೆಹಲಿ, ಡಿಸೆಂಬರ್ 12: ಹೇಳಿ ಕೇಳಿ ಇದು ಟ್ರೋಲ್ ಕಾಲ. ಸೋಶಿಯಲ್ ಲೈಪ್ ನಲ್ಲಿರುವವರೆಲ್ಲ ನಿಂತರೂ, ಕೂತರೂ ಸುದ್ದಿಯಾಗೋ ಕಾಲ! ಇಂಥ ಸಮಯದಲ್ಲಿ ಮೂರು ರಾಜ್ಯಗಳಲ್ಲಿ ಬಿಜೆಪಿ ಸೋಲುಂಡಿದ್ದಂತೂ ಟ್ರೋಲ್ ಹೈಕ್ಳಿಗೆ ಹಬ್ಬದೂಟ ಬಡಿಸಿದಂತಾಗಿದೆ.

ಸಾಮಾಜಿಕ ಜಾಲತಾಣಗಳಲ್ಲಿ ಪ್ರಧಾನಿ ಮೋದಿಯಾದಿಯಾಗಿ, ಯೋಗಿ, ಶಿವರಾಜ್ ಸಿಂಗ್ ಚೌಹಾಣ್ ಮುಂತಾದ ಘಟಾನುಘಟಿಗಳು ಟ್ರೋಲ್ ಹೈಕ್ಳ ಕೈಯಲ್ಲಿ ಸಿಕ್ಕು, ತರಹೇವಾರಿ ಜೋಕುಗಳಿಗೆ ಆಹಾರವಾಗಿದ್ದಾರೆ.

5 ವರ್ಷಗಳಲ್ಲಿ ಭಾರತದ 'ಬಣ್ಣ' ಎಷ್ಟೆಲ್ಲ ಬದಲಾಯಿತು ನೋಡಿ... 5 ವರ್ಷಗಳಲ್ಲಿ ಭಾರತದ 'ಬಣ್ಣ' ಎಷ್ಟೆಲ್ಲ ಬದಲಾಯಿತು ನೋಡಿ...

ಛತ್ತೀಸ್ ಗಢ, ರಾಜಸ್ಥಾನ ಮತ್ತು ಮಧ್ಯಪ್ರದೇಶ ಮೂರು ರಾಜ್ಯಗಳಲ್ಲೂ ಬಿಜೆಪಿ ಸೋತಿದ್ದು, ಕಾಂಗ್ರೆಸ್ ಸರ್ಕಾರ ರಚಿಸುವುದು ಬಹುತೇಕ ಖಚಿತವಾಗಿದೆ. ಒಂದಾನೊಂದು ಕಾಲದಲ್ಲಿ ಕಾಂಗ್ರೆಸ್ ಅನ್ನು ಆಡಿಕೊಳ್ಳಲು ಹುಟ್ಟಿಕೊಂಡ ಜೋಕುಗಳೇ ಇದೀಗ ಬಿಜೆಪಿಯತ್ತ ತಿರುಗಿವೆ. ಸೋಲಿನ ಗಾಯದಿಂದ ಹಣ್ಣಾಗಿರುವ ಬಿಜೆಪಿಗೆ ಈ ಜೋಕುಗಳ ಬರೆ ಮತ್ತಷ್ಟು ಕಸಿವಿಸಿಯನ್ನುಂಟು ಮಾಡಿದೆ.

Array

ಮೋದಿ ಅಲೆ ಈಗ...

ಮೋದಿ ಅಲೆಯ ಒಂದು ಸದ್ಯದ ಚಿತ್ರ ಇದು ಎಂದು ಒಬ್ಬರು ಟ್ವೀಟ್ ಮಾಡಿದ್ದಾರೆ. ಹೇಗಿದೆ ಅಲೆ, ನೀವೇ ನೋಡಿ!

ಅಚ್ಚೇ ದಿನ್

ಮೋದಿಯವರನ್ನು ನೋಡಿ ಜವಾಹರಲಾಲ್ ನೆಹರೂ ಅವರು ನಗುತ್ತಿರುವ ಚಿತ್ರವನ್ನು ಅಚ್ಚೇ ದಿನ್ ಮೀಮ್ಸ್ ಫೇಸ್ ಬುಕ್ ನಲ್ಲಿ ಪೋಸ್ಟ್ ಮಾಡಿದ್ದಾರೆ ನೋಡಿ.

15 ವರ್ಷದ ಬಳಿಕ ಛತ್ತೀಸ್ ಗಢದಲ್ಲಿ ಮುಗ್ಗರಿಸಿದ ಬಿಜೆಪಿ: ಸೋಲಿಗೆ 5 ಕಾರಣಗಳು 15 ವರ್ಷದ ಬಳಿಕ ಛತ್ತೀಸ್ ಗಢದಲ್ಲಿ ಮುಗ್ಗರಿಸಿದ ಬಿಜೆಪಿ: ಸೋಲಿಗೆ 5 ಕಾರಣಗಳು

ಹೆಸರು ಬದಲಿಸೋಣ

ಈಗ ಏನು ಮಾಡೋಣ? ಎಂಬ ಮೋದಿ ಪ್ರಶ್ನೆಗೆ ಯೋಗಿಯ ಉತ್ತರ 'ಕಾಂಗ್ರೆಸ್ ಹೆಸರನ್ನು ಬಿಜೆಪಿ ಎಂದು ಬದಲಿಸೋಣ!' ಇದು ಸಹ ಅಚ್ಚೇ ದಿನ್ ಮೀಮ್ಸ್ ನ ಪೋಸ್ಟ್!

Array

ಯೋಗಿ ಹೆಸರು ಬದಲಿಸಿ

ರಾಜಸ್ಥಾನ ಮತ್ತು ಛತ್ತೀಸ್ ಗಢದ ಸೋಲಿನ ನಂತರ ಬಿಜೆಪಿಯು ತನ್ನ ಸ್ಟಾರ್ ಕ್ಯಾಂಪೇನರ್ ಯೋಗಿಯ ಹೆಸರನ್ನು ಬದಲಿಸಿದೆ. 'ವಿನ್ ಡೀಸೆಲ್' ಅನ್ನು 'ಲಾಸ್ ಡೀಸೆಲ್' ಎಂದು ಬದಲಿಸೋಣ ಎಂದಿದ್ದಾರೆ ಅರ್ರೆ.

ಪಂಚ ರಾಜ್ಯ ಸೋಲಿನ ಬಳಿಕ ಬಿಜೆಪಿಗೆ ಉಳಿದದ್ದು ಎಷ್ಟು ರಾಜ್ಯಗಳು? ಪಂಚ ರಾಜ್ಯ ಸೋಲಿನ ಬಳಿಕ ಬಿಜೆಪಿಗೆ ಉಳಿದದ್ದು ಎಷ್ಟು ರಾಜ್ಯಗಳು?

English summary
5 states assembly elections 2018: After BJP's huge lose in 3 states elections social media people are busy in trolling the party.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X