ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನರೇಂದ್ರ ಮೋದಿ ಸರ್ಕಾರಕ್ಕೆ 'F' ಗ್ರೇಡ್ ಕೊಟ್ಟ ರಾಹುಲ್ ಮೇಷ್ಟ್ರು!

|
Google Oneindia Kannada News

Recommended Video

ನರೇಂದ್ರ ಮೋದಿ ಸರ್ಕಾರಕ್ಕೆ 'F' ಗ್ರೇಡ್ ಕೊಟ್ಟ ರಾಹುಲ್ ಗಾಂಧಿ | Filmibeat Kannada

ನವದೆಹಲಿ, ಮೇ 26: ಬಿಜೆಪಿ ನೇತೃತ್ವದ ಎನ್ ಡಿಎ ಮೈತ್ರಿ ಸರ್ಕಾರಕ್ಕೆ ನಾಲ್ಕು ವರ್ಷ ತುಂಬಿದೆ. ನಾಲ್ಕು ವರ್ಷಗಳ ಕಾಲ ಮೋದಿ ಸರ್ಕಾರ ಮಾಡಿದ ಸಾಧನೆಗಳು, ಎಡವಿದ ಹೆಜ್ಜೆಗಳ ಕುರಿತು ಈಗಾಗಲೇ ಸಾಕಷ್ಟು ಚರ್ಚೆ ನಡೆಯುತ್ತಿದೆ.

ಈ ಹೊತ್ತಲ್ಲಿ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ, ನರೇಂದ್ರ ಮೋದಿ ಸರ್ಕಾರಕ್ಕೆ F ಗ್ರೇಡ್ ನೀಡುವ ಮೂಲಕ ನಾಲ್ಕು ವರ್ಷದ ಸಾಧನೆ ತೀರಾ ಕಳಪೆ ಎಂದಿದ್ದಾರೆ! ಅಂದರೆ ರಾಹುಲ್ ಗಾಂಧಿ ಅವರ ಪ್ರಕಾರ ನಾಲ್ಕು ವರ್ಷದ ಆಡಳಿತ ಪರೀಕ್ಷೆಯಲ್ಲಿ ಮೋದಿ ಸರ್ಕಾರ ಫೇಲ್ ಆಗಿದೆ!

ಎಬಿಪಿ ಸಮೀಕ್ಷೆ: ಮೋದಿ ಹವಾ ದುರ್ಬಲ, ರಾಹುಲ್ ಜನಪ್ರಿಯತೆ ಏರಿಕೆಎಬಿಪಿ ಸಮೀಕ್ಷೆ: ಮೋದಿ ಹವಾ ದುರ್ಬಲ, ರಾಹುಲ್ ಜನಪ್ರಿಯತೆ ಏರಿಕೆ

ಈ ಕುರಿತು ಟ್ವೀಟ್ ಮಾಡಿರುವ ಅವರು, ಕೃಷಿ- F, ವಿದೇಶಿ ನೀತಿ- F, ಇಂಧನ ದರ - F, ಉದ್ಯೋಗ ಸೃಷ್ಟಿ - F, ಘೋಷಣೆ ಸೃಷ್ಟಿ - F, ಸ್ವಪ್ರಚಾರ - A+, ಯೋಗ- B- ಎಂದು ಗ್ರೇಡ್ ನೀಡಿದ್ದಾರೆ.

BJPs 4-yr govt: PM Modi fails in Rahuls report card

ಕೃಷಿ, ವಿದೇಶಿ ನೀತಿ, ಇಂಧನ ದರ, ಉದ್ಯೋಗ ಸೃಷ್ಟಿ ಇವುಗಳಲ್ಲಿ ನರೇಂದ್ರ ಮೋದಿ ಸರ್ಕಾರ ಸಂಪೂರ್ಣ ವೈಫಲ್ಯ ಕಂಡಿದೆ ಎಂದಿದ್ದಲ್ಲದೆ, F ಗ್ರೇಡ್ ನೀಡುವ ಮೂಲಕ ಮೋದಿ ಸರ್ಕಾರದ್ದು ತೀರಾ ಕಳಪೆ ಸಾಧನೆ ಎಂದು ಅವರು ಹೇಳಿದ್ದಾರೆ.

ಅಷ್ಟೆ ಅಲ್ಲ, ರಿಪೋರ್ಟ್ ಕಾರ್ಡಿನ ಕೆಳಗೆ ರಿಮಾರ್ಕ್ಸ್ ಕೊಟ್ಟಿರುವ ರಾಹುಲ್ ಗಾಂಧಿ ಮೋದಿಯವರು "ಪ್ರಚಂಡ ಸಂವಹನಕಾರ, ಸಂಕೀರ್ಣ ವಿಷಯಗಳೊಂದಿಗೆ ಹೋರಾಟ, ಗಮನ ಸೆಳೆಯುವಲ್ಲಿ ನಿಸ್ಸೀಮ!" ಎಂದು ವ್ಯಂಗ್ಯವಾಡಿದ್ದಾರೆ ಸಹ.

ಮೇ 27, 2014 ರಲ್ಲಿ ಸಂಪೂರ್ಣ ಬಹುಮತದೊಂದಿಗೆ ಪ್ರಧಾನಿ ಮೋದಿ ನೇತೃತ್ವದ ಎನ್ ಡಿಎ ಸರ್ಕಾರ ಅಧಿಕಾರಕ್ಕೆ ಬಂದಿತ್ತು. ಇಂದು ನಾಲ್ಕನೇ ವರ್ಷದ ವಾರ್ಷಿಕೋತ್ಸವವನ್ನು ದೇಶದಾದ್ಯಂತ ವಿವಿಧ ಕಾರಯಕ್ರಮಗಳ ಮೂಲಕ ಬಿಜೆಪಿ ಆಚರಿಸುತ್ತಿದ್ದರೆ, ಈ ದಿನವನ್ನು ವಿಶ್ವಾಸಘಾತ ದಿವಸ್ ಎಂದು ಕಾಂಗ್ರೆಸ್ ಆಚರಿಸುತ್ತಿದೆ.

English summary
Congress President Rahul Gandhi in his report card, to the Bharatiya Janata Party (BJP)-led government at the Centre, gave an "F" with a remark terming Prime Minister Narendra Modi as "Master communicator with a short attention span".
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X