ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

"ಸಿಎಎ ಬಗ್ಗೆ ರಾಹುಲ್ ಗಾಂಧಿ 10 ಸಾಲು ಮಾತಾಡಲಿ ನೋಡೋಣ"

|
Google Oneindia Kannada News

ನವದೆಹಲಿ, ಜನವರಿ.17: ಪೌರತ್ವ ತಿದ್ದುಪಡಿ ಕಾಯ್ದೆ ಹಾಗೂ ರಾಷ್ಟ್ರೀಯ ನಾಗರಿಕ ನೊಂದಣಿ ಬಗ್ಗೆ ಕೇವಲ 10 ಸಾಲು ಮಾತನಾಡಲಿ ಸಾಕು ಎಂದು ಎಐಸಿಸಿ ಮಾಜಿ ಅಧ್ಯಕ್ಷ ರಾಹುಲ್ ಗಾಂಧಿಗೆ ಬಿಜೆಪಿ ಕಾರ್ಯಾಧ್ಯಕ್ಷ ಜಗತ್ ಪ್ರಕಾಶ್ ನಡ್ಡಾ ಸವಾಲ್ ಹಾಕಿದ್ದಾರೆ.

ನವದೆಹಲಿಯಲ್ಲಿ ಮಾತನಾಡಿದ ಬಿಜೆಪಿ ರಾಷ್ಟ್ರೀಯ ಕಾರ್ಯಾಧ್ಯಕ್ಷ ಜೆ.ಪಿ. ನಡ್ಡಾ, ಕೇಂದ್ರ ಸರ್ಕಾರ ಜಾರಿಗೊಳಿಸಿರುವ ಸಿಎಎ ಹಾಗೂ ಎನ್ಆರ್ ಸಿ ವಿರುದ್ಧ ವ್ಯಾಪಕ ಪ್ರತಿಭಟನೆಗಳು ನಡೆಯುತ್ತಿವೆ. ಆದರೆ, ಅದೇಕೆ ಪ್ರತಿಭಟನೆ ನಡೆಸುತ್ತಿದ್ದೇವೆ ಎಂಬ ಮಾಹಿತಿಯೇ ಜನರಿಗೆ ಇಲ್ಲದಂತೆ ಆಗಿದೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

ಹೇಳುವವರು, ಕೇಳುವವರು ಇಲ್ಲವೇ ನಿಮಗೆ: ಕೇರಳ ಸರ್ಕಾರಕ್ಕೆ ತರಾಟೆ!ಹೇಳುವವರು, ಕೇಳುವವರು ಇಲ್ಲವೇ ನಿಮಗೆ: ಕೇರಳ ಸರ್ಕಾರಕ್ಕೆ ತರಾಟೆ!

ಸಿಎಎ ವಿರೋಧಿಸುವುದಕ್ಕೆ ಯಾವುದೇ ಕಾರಣಗಳೂ ಇಲ್ಲ. ಸಿಎಎ ಬಗ್ಗೆ ಅರ್ಥ ಮಾಡಿಕೊಳ್ಳದೇ ಯಾವುದೇ ಮಾಹಿತಿಯೂ ಇಲ್ಲದೇ ಜನರು ಸುಖಾಸುಮ್ಮನೆ ಕೇಂದ್ರ ಸರ್ಕಾರದ ವಿರುದ್ಧ ಪ್ರತಿಭಟನೆಗೆ ಇಳಿಯುತ್ತಿದ್ದಾರೆ. ಇದು ದೇಶದ ಇತಿಹಾಸದಲ್ಲೇ ಅತ್ಯಂತ ದುರಾದೃಷ್ಟಕರ ಸಂಗತಿ ಎಂದು ಹೇಳಿದ್ದಾರೆ.

BJP Working President J P Nadda Challenged Rahul Gandhi To Speak 10 Lines On CAA

ರಾಹುಲ್ ಗಾಂಧಿ ವಿರುದ್ಧ ನಡ್ಡಾ ಸವಾಲ್:

ದೇಶಾದ್ಯಂತ ಪೌರತ್ವ ತಿದ್ದುಪಡಿ ಕಾಯ್ದೆ ವಿರುದ್ಧ ಪ್ರತಿಭಟನೆ ನಡೆಸಲಾಗುತ್ತಿದೆ. ಈ ಹೋರಾಟಕ್ಕೆ ಬೆಂಬಲ ನೀಡುತ್ತಿರುವ ಎಐಸಿಸಿ ಮಾಜಿ ಅಧ್ಯಕ್ಷ ರಾಹುಲ್ ಗಾಂಧಿ ಅವರು, ಸಿಎಎ ಬೇಡ ಎನ್ನಲು ಕಾರಣ ಏನು ಎಂದು ಹೇಳಲಿ. ಸಿಎಎ ಬಗ್ಗೆ ಕೇವಲ ಹತ್ತೇ ಹತ್ತು ಸಾಲು ಮಾತನಾಡಲಿ ನೋಡೋಣ ಎಂದು ಬಿಜೆಪಿ ಕಾರ್ಯಾಧ್ಯಕ್ಷ ಜೆ.ಪಿ.ನಡ್ಡಾ ಸವಾಲ್ ಹಾಕಿದ್ದಾರೆ.

ಕೇಂದ್ರ ಸರ್ಕಾರದ ಉದ್ದೇಶವನ್ನು ಅರ್ಥ ಮಾಡಿಕೊಳ್ಳದೇ ಪ್ರತಿಭಟನೆಗಳನ್ನು ನಡೆಸುವುದರ ಮೂಲಕ ದೇಶವನ್ನು ದುರ್ಬಲಗೊಳಿಸುತ್ತಿದ್ದಾರೆ. ಇದೊಂದು ದುರಾದೃಷ್ಟಕರ ವಿಚಾರ ಎಂದು ನಡ್ಡಾ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

English summary
Citizenship Amendment Act: BJP Working President J P Nadda Challenged To AICC Ex-President Rahul Gandhi To Speak 10 Lines On CAA.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X