ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

2019 ರಲ್ಲಿ ಮೋದಿ ಸರ್ಕಾರ ಅಧಿಕಾರಕ್ಕೆ ಬರೋಲ್ಲ: ಭವಿಷ್ಯ ನುಡಿದಿದ್ದು ಯಾರು?!

|
Google Oneindia Kannada News

Recommended Video

ಉತ್ತರಪ್ರದೇಶ ಹಾಗೂ ಬಿಹಾರದಲ್ಲಿ ಬಿಜೆಪಿ ಅಧಿಕಾರಕ್ಕೆ ಬರುವುದು ಅಸಾಧ್ಯ ಎಂದು ವಿಪಕ್ಷ ನಾಯಕ ಶರದ್ ಯಾದವ್ ಹೇಳಿದ್ದಾರೆ

ನವದೆಹಲಿ, ನವೆಂಬರ್ 19: 2019 ರ ಲೋಕಸಭಾ ಚುನಾವಣೆಯಲ್ಲಿ ಕೇಂದ್ರದಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬರುವುದಕ್ಕೆ ಸಾಧ್ಯವೇ ಇಲ್ಲ ಎಂದು ಲೋಕತಾಂತ್ರಿಕ ಜನತಾ ದಳದ ಮುಖಂಡ ಶರದ್ ಯಾದವ್ ಭವಿಷ್ಯ ನುಡಿದಿದ್ದಾರೆ.

ಪಿಟಿಐ ಗೆ ಅವರು ನೀಡಿದ ಸಂದರ್ಶನದಲ್ಲಿ, '2014 ರಲ್ಲಿ ಬಿಜೆಪಿಗೆ ಅದ್ಭುತ ಜಯ ತಂದುಕೊಟ್ಟಿದ್ದ ಉತ್ತರ ಪ್ರದೇಶ ಮತ್ತು ಬಿಹಾರ ರಾಜ್ಯಗಳೇ ಈ ಬಾರಿ ಬಿಜೆಪಿಗೆ ಸೋಲು ತಂದೊಡ್ಡಲಿವೆ' ಎಂದರು.

ಇಂಡಿಯಾ ಟಿವಿ-ಸಿಎನ್ ಎಕ್ಸ್ ಸಮೀಕ್ಷೆ : ನರೇಂದ್ರ ಮೋದಿ ಮತ್ತೆ ಪ್ರಧಾನಿ?ಇಂಡಿಯಾ ಟಿವಿ-ಸಿಎನ್ ಎಕ್ಸ್ ಸಮೀಕ್ಷೆ : ನರೇಂದ್ರ ಮೋದಿ ಮತ್ತೆ ಪ್ರಧಾನಿ?

'ಪ್ರಧಾನಿ ನರೇಂದ್ರ ಮೋದಿಯವರು ಜನರನ್ನು ಭಾವನಾತ್ಮಕವಾಗಿ ಮೋಡಿ ಮಾಡಲು ನೋಡುತ್ತಿದ್ದಾರೆ. ತಮ್ಮ ಚಹಾ ವ್ಯಾಪಾರದ ಹಿನ್ನೆಲೆಯ ಬಗ್ಗೆಯೇ ಸದಾ ಹೇಳುವ ಮೋದಿಯವರು ಮೊದಲು ತಮ್ಮ ಸರ್ಕಾರದ ಸಾಧನೆಗಳೇನು, ನಾಲ್ಕೂವರೆ ವರ್ಷದಲ್ಲಿ ತಮ್ಮ ಸರ್ಕಾರ ಜನರಿಗೆ ಏನು ಮಾಡಿದೆ ಎಂಬುದನ್ನು ಹೇಳಬೇಕು' ಎಂದು ಅಭಿಪ್ರಾಯಪಟ್ಟರು.

BJP will not come to power in centre in 2019: Sharad Yadav

ಲೋಕಸಭೆ ಚುನಾವಣೆ ಸಮೀಕ್ಷೆ: ಪಶ್ಚಿಮ ಬಂಗಾಳದಲ್ಲಿ ಹೆಚ್ಚಲಿದೆ ಬಿಜೆಪಿ ಹವಾ ಲೋಕಸಭೆ ಚುನಾವಣೆ ಸಮೀಕ್ಷೆ: ಪಶ್ಚಿಮ ಬಂಗಾಳದಲ್ಲಿ ಹೆಚ್ಚಲಿದೆ ಬಿಜೆಪಿ ಹವಾ

'ಈ ನವೆಂಬರ್-ಡಿಸೆಂಬರ್ ನಲ್ಲಿ ನಡೆಯಲಿರುವ ಐದು ರಾಜ್ಯಗಳ ಚುನಾವಣೆಯಲ್ಲಿ ಕಾಂಗ್ರೆಸ್ ಮುನ್ನಡೆಯಲ್ಲಿದೆ. ಜನರಿಗೆ ಬಿಜೆಪಿ ನೇತೃತ್ವದ ಸರ್ಕಾರದ ಮೇಲೆ ಜಿಗುಪ್ಸೆ ಬಂದಿದೆ. 2019 ರ ಲೋಕಸಭಾ ಚುನಾವಣೆಗೆ ಈ ವಿಧಾನಸಭೆ ಚುನಾವಣೆಗಳು ಭದ್ರ ತಳಪಾಯ ಹಾಕಲಿವೆ' ಎಂದರು.

English summary
Opposition leader Sharad Yadav said on Sunday the BJP's hope to return to power at the Centre will be buried in the same states -- Uttar Pradesh and Bihar -- which had propelled it to a big win in 2014
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X