ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಆಪ್‌ಗೆ ತಿರುಗೇಟು : ಬಿಜೆಪಿ ದೂರದೃಷ್ಟಿಯಲ್ಲಿ 270 ಅಂಶ

By Kiran B Hegde
|
Google Oneindia Kannada News

ನವದೆಹಲಿ, ಫೆ. 3: ಆಮ್ ಆದ್ಮಿಯ 70 ಅಂಶಗಳ ಪ್ರಣಾಳಿಕೆಗೆ ಉತ್ತರವಾಗಿ ಬಿಜೆಪಿ 270 ಅಂಶಗಳ ದೂರದೃಷ್ಟಿ ದಾಖಲೆಯನ್ನು ಮಂಗಳವಾರ ಬಿಡುಗಡೆ ಮಾಡಿದೆ. ಇದಲ್ಲದೆ, ತುರ್ತು ಅಗತ್ಯಗಳಿಗೆ ಆದ್ಯತೆ ನೀಡಲಾಗುವುದು ಹಾಗೂ ದೆಹಲಿಯನ್ನು ಜಾಗತಿಕ ಮಟ್ಟದ ಸ್ಮಾರ್ಟ್ ಸಿಟಿಯಾಗಿ ಪರಿವರ್ತಿಸಲಾಗುವುದು ಎಂದು ತಿಳಿಸಿದ್ದಾರೆ.

ದೂರದೃಷ್ಟಿ ದಾಖಲೆ ಬಿಡುಗಡೆ ಸಂದರ್ಭದಲ್ಲಿ ಬಿಜೆಪಿ ಮುಖಂಡರಾದ ಸತೀಶ್ ಉಪಾಧ್ಯಾಯ, ಕೇಂದ್ರ ಸಚಿವರಾದ ಅನಂತಕುಮಾರ್, ನಿರ್ಮಲಾ ಸೀತಾರಾಮನ್, ಹರ್ಷವರ್ಧನ್ ಇತರರು ಇದ್ದರು. ಆದರೆ, ಈ ದಾಖಲೆಯಲ್ಲಿ ದೆಹಲಿಗೆ ಸಂಪೂರ್ಣ ರಾಜ್ಯಾಧಿಕಾರ ನೀಡುವ ಭರವಸೆಯನ್ನು ನೀಡಲಾಗಿಲ್ಲ. ಈ ಕುರಿತು ಆಮ್ ಆದ್ಮಿ ಪಕ್ಷ ಟೀಕಿಸಿದೆ. [ಎಎಪಿ ಮುಂದೆ, ಬಿಜೆಪಿ ಹಿಂದೆ]

bjp

ಬಿಜೆಪಿಯ ದೂರದೃಷ್ಟಿ ದಾಖಲೆಯಲ್ಲಿನ ಮುಖ್ಯಾಂಶಗಳನ್ನು ಪಕ್ಷದ ಮುಖ್ಯಮಂತ್ರಿ ಅಭ್ಯರ್ಥಿ ಕಿರಣ್ ಬೇಡಿ ವಿವರಿಸಿದ್ದಾರೆ. [ಕಿರಣ್ ಬೇಡಿ ದಶ ಸೂತ್ರ]

  • ಶೇ. 100ರಷ್ಟು ಪಾರದರ್ಶಕ ಆಡಳಿತ, ಪ್ರಶ್ನಾತೀತ ಸಮಗ್ರತೆ, ಪೊಲೀಸ್ ಹೊಣೆಗಾರಿಕೆ, ಆರ್ಥಿಕ ವಿವೇಕ, ಭ್ರಷ್ಚಾಚಾರ ಕುರಿತು ಅಸಹಿಷ್ಣುತೆ.
  • ಯುವಜನತೆಯತ್ತ ಗಮನ, ವಿದ್ಯುತ್ ಮತ್ತು ನೀರು, ಸ್ವಚ್ಛತೆ, ವಿದ್ಯಾರ್ಜನೆ ಮತ್ತು ಕೌಶಲ್ಯಾಭಿವೃದ್ಧಿ ತರಬೇತಿ.
  • ಪ್ರಮುಖ ಸಮಸ್ಯೆ ನಿವಾರಣೆ ಹಾಗೂ ಮಹಿಳಾ ಭದ್ರತೆಗೆ ಆದ್ಯತೆ.
  • ಸರ್ಕಾರಿ ಯೋಜನೆ ಹಾಗೂ ಅಭಿವೃದ್ಧಿ ಮೇಲೆ ನಿರಂತರ ಗಮನ.
  • ಬಡವರು ಹಾಗೂ ಬಡತನ ರೇಖೆಗಿಂತ ಕೆಳಗಿನವರಿಗೆ ಸಬ್ಸಿಡಿ ವಿದ್ಯುತ್. [ಆಪ್ ಪ್ರಣಾಳಿಕೆಯಲ್ಲಿ 70 ಅಂಶ]
bjp
  • ಡಿಜಿಟಲ್ ಇಂಡಿಯಾ ನಿರ್ಮಾಣಕ್ಕಾಗಿ ಆನ್‌ಲೈನ್ ಹಾಗೂ ಮೊಬೈಲ್ ತಂತ್ರಾಂಶಗಳಿಗೆ ಒತ್ತು.
  • ಮಧ್ಯಸ್ಥಿಕೆದಾರರ ಜೊತೆ ಜೊತೆ ನಿರಂತರ ಸಂವಹನ. ತಿಂಗಳಿಗೊಮ್ಮೆ ರೇಡಿಯೋದಲ್ಲಿ 'ಮನ್ ಕಿ ಬಾತ್' ಕಾರ್ಯಕ್ರಮ. ಸಂಪುಟ ಸಚಿವರು ಹಾಗೂ ಶಾಸಕರಿಂದಲೂ ಮಾತು.
  • ಉತ್ತಮ ಆಡಳಿತ ಹಾಗೂ ಅಭಿವೃದ್ಧಿಯೇ ದೂರದೃಷ್ಟಿ ದಾಖಲೆಯ ಮುಖ್ಯ ಉದ್ದೇಶ : ಸತೀಶ್ ಉಪಾಧ್ಯಾಯ
  • ದಕ್ಷಿಣ ದೆಹಲಿಯಲ್ಲಿ ನಿರ್ಮಿಸಲು ಉದ್ದೇಶಿಸಿರುವ ವಿವಾದಿತ ಬಸ್ ರ್ಯಾಪಿಡ್ ಕಾರಿಡಾರ್ ಯೋಜನೆ ರದ್ದು.
  • ಪ್ರತಿ 5 ಕಿ.ಮೀ. ದೂರದಲ್ಲಿ 15 ಹಾಸಿಗೆಗಳ ಆಸ್ಪತ್ರೆ, ಆಂಬುಲೆನ್ಸ್ ಹಾಗೂ ಅರೆವೈದ್ಯಕೀಯ ಸಿಬ್ಬಂದಿ. ಎಲ್ಲ ಆಸ್ಪತ್ರೆಗಳಲ್ಲಿ ಹೊರರೋಗಿ ವಿಭಾಗ.
  • ಅಕ್ರಮ ಬಡಾವಣೆಗಳ ಸಕ್ರಮ. ಹರ್ಯಾಣ ಸರ್ಕಾರದ ನೆರವಿನೊಂದಿಗೆ ಮುನಾಕ್ ಕೆನಾಲ್‌ನಿಂದ ನೀರು ಸರಬರಾಜು.
  • ಸ್ವಚ್ಛ ಕುಡಿಯುವ ನೀರು ಪೂರೈಕೆ, ಮಳೆ ನೀರು ಕೊಯ್ಲು, ಯಮುನಾ ನದಿಗೆ ಚೆಕ್ ಡ್ಯಾಂ ನಿರ್ಮಾಣ.
English summary
BJP unveils vision document for New Delhi on Tuesday. Kiran Bedi said, "the document covers more than 270 points. We will focus on many urgent matters and work towards making Delhi a world-class smart city."
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X