• search
 • Live TV
ನವದೆಹಲಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಸುಷ್ಮಾ ಮೃತದೇಹಕ್ಕೆ ಹೆಗಲಾದ ಬಿಜೆಪಿ ಹಿರಿಯ ನಾಯಕರು: ವಿಡಿಯೋ ವೈರಲ್

|
Google Oneindia Kannada News
   Sushma Swaraj : ಸುಷ್ಮಾ ಸ್ವರಾಜ್ ಕಳೇಬರಕ್ಕೆ ಹೆಗಲಾದ ಬಿಜೆಪಿ ನಾಯಕರು | ವೈರಲ್ ವಿಡಿಯೋ

   ನವದೆಹಲಿ, ಆಗಸ್ಟ್ 07: ಹೀಗೆ ಪ್ರತಿಯೊಬ್ಬರ ಮನಸ್ಸಿನಲ್ಲೂ ಅಚ್ಚಳಿಯದ ಹೆಜ್ಜೆ ಗುರುತು ಮೂಡಿಸೋದು ಸುಲಭವಲ್ಲ. ಆದರೆ ಸುಷ್ಮಾ ಸ್ವರಾಜ್ ತಮ್ಮ ಸಹೋದ್ಯೋಗಿಗಳ ವಲಯದಲ್ಲಿ ಗಳಿಸಿದ್ದ ಪ್ರೀತಿ, ಅವರಿಗೆಲ್ಲ ತೋರಿದ್ದ ಮಾತೃತ್ವದ ಅಕ್ಕರೆಗೆ ಸಾಕ್ಷಿಯಾಗಿದ್ದು ಬಿಜೆಪಿ ಹಿರಿಯ ನಾಯಕರೆಲ್ಲರೂ ಆಕೆಯ ಮೃತದೇಹಕ್ಕೆ ಹೆಗಲಾದ ದೃಶ್ಯ.

   ವಿಡಿಯೋ ನೋಡಲು ಈ ಲಿಂಕ್ ಕ್ಲಿಕ್ಕಿಸಿ

   ಹುದ್ದೆ, ವಯಸ್ಸು ಎಲ್ಲವನ್ನೂ ಮರೆತು ಅಮ್ಮನ ಪಾರ್ಥಿವ ಶರೀರಕ್ಕೆ ಮಕ್ಕಲು ಹೆಗಲು ಕೊಡುವಷ್ಟೇ ಭಾವುಕತೆಯಿಂದ ಬಿಜೆಪಿಯ ಹಿರಿಯ ನಾಯಕರು ಸುಷ್ಮಾ ಪಾರ್ಥಿವ ಶರೀರವನ್ನು ಹೆಗಲ ಮೇಲೆ ಹೊತ್ತರು.

   ಚಿತ್ರಗಳಲ್ಲಿ ಸುಷ್ಮಾ ಸ್ವರಾಜ್ ಅಂತಿಮ ದರ್ಶನ

   ರಕ್ಷಣಾ ಸಚಿವ ರಾಜನಾಥ್ ಸಿಂಗ್, ಬಿಜೆಪಿ ಅಧ್ಯಕ್ಷ ಜೆಪಿ ನಡ್ಡಾ, ಕಾನೂನು ಸಚಿವ ರವಿಶಂಕರ್ ಪ್ರಸಾದ್, ರೈಲ್ವೇ ಸಚಿವ ಪಿಯೂಶ್ ಗೋಯಲ್ ಸೇರಿದಂತೆ ಬಿಜೆಪಿಯ ಹಿರಿಯ ನಾಯಕರು ಜನಜಂಗುಳಿಯ ನಡುವಲ್ಲಿ ಸುಷ್ಮಾ ಅವರ ಮೃತದೇಹವನ್ನು ಅಂತ್ಯಕ್ರಿಯೆಗಾಗಿ ಹೊತ್ತೊಯ್ದ ದೃಶ್ಯ ಕಣ್ಣನ್ನು ತೇವವಾಗಿಸುತ್ತದೆ.

   ಮಂಗಳವಾರದಂದು ರಾತ್ರಿ ಹೃದಯಾಘಾತದಿಂದ ದೆಹಲಿಯ ಏಮ್ಸ್ ಆಸ್ಪತ್ರೆಯಲ್ಲಿ ನಿಧನರಾದ ಸುಷ್ಮಾ ಸ್ವರಾಜ್ ಅವರ ಅಂತ್ಯಕ್ರಿಯೆ ದೆಹಲಿಯ ಲೋಧಿ ರಸ್ತೆಯ ರುದ್ರಭೂಮಿಯಲ್ಲಿ ನಡೆಯಿತು.

   English summary
   Rajnath Singh, JP Nadda, Ravi Shankar Prasad, Piyush Goyal and other BJP leaders give a shoulder to mortal remains of Sushma Swaraj
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X