ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕಾರ್ಪೊರೇಟ್ ಸಂಸ್ಥೆಗಳಿಂದ ರಾಜಕೀಯ ಪಕ್ಷಗಳಿಗೆ ದೇಣಿಗೆ; ಬಿಜೆಪಿಗೆ ಅಗ್ರಸ್ಥಾನ

|
Google Oneindia Kannada News

ನವದೆಹಲಿ, ಏಪ್ರಿಲ್ 5: 2019-20ನೇ ಹಣಕಾಸು ವರ್ಷದಲ್ಲಿ ಕಾರ್ಪೊರೇಟ್ ಮತ್ತು ವ್ಯಾಪಾರ ಸಂಸ್ಥೆಗಳಿಂದ ರಾಷ್ಟ್ರೀಯ ರಾಜಕೀಯ ಪಕ್ಷಗಳಿಗೆ ಬರೋಬ್ಬರಿ 921.95 ಕೋಟಿ ರೂ. ದೇಣಿಗೆಯಾಗಿ ಬಂದಿದ್ದು, ಇದರಲ್ಲಿ ಕೇಂದ್ರದಲ್ಲಿ ಅಧಿಕಾರದಲ್ಲಿರುವ ಭಾರತೀಯ ಜನತಾ ಪಕ್ಷಕ್ಕೆ (ಬಿಜೆಪಿ) ಗರಿಷ್ಠ ದೇಣಿಗೆ ಪಡೆದಿದೆ.

ಅಸೋಸಿಯೇಷನ್ ​​ಫಾರ್ ಡೆಮಾಕ್ರಟಿಕ್ ರಿಫಾರ್ಮ್ಸ್ (ಎಡಿಆರ್) ವರದಿಯ ಪ್ರಕಾರ, ಈ ಹಣಕಾಸು ವರ್ಷದಲ್ಲಿ ಭಾರತೀಯ ಜನತಾ ಪಕ್ಷ ಒಟ್ಟು 720.407 ಕೋಟಿ ರೂಪಾಯಿ ಕಾರ್ಪೊರೇಟ್ ದೇಣಿಗೆಯನ್ನು ಸ್ವೀಕರಿಸಿದೆ. ಈ ವರದಿಯಲ್ಲಿ, ಐದು ಪಕ್ಷಗಳು ಪಡೆದ ದೇಣಿಗೆಗಳನ್ನು ವಿಶ್ಲೇಷಿಸಲಾಗಿದೆ.

ಲೆಕ್ಕಾಚಾರ : ಬಿಜೆಪಿ ಪಾರ್ಟಿ ಹುಂಡಿಗೆ ಹಣ ಎಲ್ಲಿಂದ ಬಿತ್ತು? ಲೆಕ್ಕಾಚಾರ : ಬಿಜೆಪಿ ಪಾರ್ಟಿ ಹುಂಡಿಗೆ ಹಣ ಎಲ್ಲಿಂದ ಬಿತ್ತು?

ಚುನಾವಣಾ ರಾಜಕೀಯದಲ್ಲಿ ಪಾರದರ್ಶಕತೆ ತರಲು ಕಾರ್ಯನಿರ್ವಹಿಸುತ್ತಿರುವ ಎನ್‌ಜಿಒ ಎಡಿಆರ್‌ನ ವಿಶ್ಲೇಷಣೆಯ ಪ್ರಕಾರ, ರಾಷ್ಟ್ರೀಯ ರಾಜಕೀಯ ಪಕ್ಷಗಳಿಗೆ ಕಾರ್ಪೊರೇಟ್ ದೇಣಿಗೆಗಳು 2017-18 ಮತ್ತು 2018-19ರ ಆರ್ಥಿಕ ವರ್ಷಗಳ ನಡುವೆ ಶೇಕಡಾ 109 ರಷ್ಟು ಹೆಚ್ಚಾಗಿದೆ.

BJP receives maximum funding from corporate donors in FY 2019-20, says report

ಒಂದು ಆರ್ಥಿಕ ವರ್ಷದಲ್ಲಿ 20,000 ರೂ.ಗಿಂತ ಹೆಚ್ಚು ದೇಣಿಗೆ ನೀಡಿದ ಪಕ್ಷಗಳು ಚುನಾವಣಾ ಆಯೋಗಕ್ಕೆ ನೀಡಿದ ದಾನಿಗಳ ಮಾಹಿತಿಯ ಮೇಲೆ ಈ ವಿಶ್ಲೇಷಣೆ ಮಾಡಲಾಗಿದೆ.

ಎಡಿಆರ್ ವಿಶ್ಲೇಷಿಸಿದ ಐದು ರಾಜಕೀಯ ಪಕ್ಷಗಳೆಂದರೆ ಬಿಜೆಪಿ, ಕಾಂಗ್ರೆಸ್, ನ್ಯಾಶನಲಿಸ್ಟ್ ಕಾಂಗ್ರೆಸ್ ಪಾರ್ಟಿ (ಎನ್‌ಸಿಪಿ), ತೃಣಮೂಲ ಕಾಂಗ್ರೆಸ್ (ಟಿಎಂಸಿ) ಮತ್ತು ಕಮ್ಯುನಿಸ್ಟ್ ಪಾರ್ಟಿ ಆಫ್ ಇಂಡಿಯಾ-ಮಾರ್ಕ್ಸ್‌ವಾದಿ (ಸಿಪಿಎಂ).

ವರದಿಯ ಪ್ರಕಾರ 2019-20ರ ಆರ್ಥಿಕ ವರ್ಷದಲ್ಲಿ, ಕಾಂಗ್ರೆಸ್ ಪಕ್ಷವು 154 ದಾನಿಗಳಿಂದ 133.04 ಕೋಟಿ ರೂಪಾಯಿ ಪಡೆದಿದ್ದರೆ, 36 ಕಾರ್ಪೊರೇಟ್ ದಾನಿಗಳಿಂದ ಎನ್‌ಸಿಪಿ 57.08 ಕೋಟಿ ರೂಪಾಯಿಗಳನ್ನು ಸ್ವೀಕರಿಸಿದೆ.

ಯಾವುದೇ ಆದಾಯವನ್ನು ತೋರಿಸದ ಸಿಪಿಎಂ
ಮತ್ತೊಂದೆಡೆ, ಸಿಪಿಎಂ ಈ ಆರ್ಥಿಕ ವರ್ಷದಲ್ಲಿ ಕಾರ್ಪೊರೇಟ್ ಸಂಸ್ಥೆಗಳಿಂದ ಯಾವುದೇ ಆದಾಯವನ್ನು ತೋರಿಸಿಲ್ಲ. ವರದಿಯ ಪ್ರಕಾರ, 2019-20ರಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್‌ಗೆ ದೇಣಿಗೆ ನೀಡಿದ ಪಟ್ಟಿಯಲ್ಲಿ ಪ್ರುಡೆಂಟ್ ಎಲೆಕ್ಟೋರಲ್ ಟ್ರಸ್ಟ್ ಅಗ್ರಸ್ಥಾನದಲ್ಲಿದೆ.

ಈ ಟ್ರಸ್ಟ್ ಎರಡೂ ಪಕ್ಷಗಳಿಗೆ ವರ್ಷದಲ್ಲಿ 38 ಬಾರಿ ದೇಣಿಗೆ ನೀಡಿದ್ದು, ಒಟ್ಟು 247.54 ಕೋಟಿ ರೂ ದಾನ ಮಾಡಿದೆ. ಬಿಜೆಪಿ ಒಟ್ಟು 2025 ಕಾರ್ಪೊರೇಟ್ ದಾನಿಗಳಿಂದ ಒಟ್ಟು 710.407 ಕೋಟಿ ರೂಪಾಯಿಗಳನ್ನು ದೇಣಿಗೆಯಾಗಿ ಸ್ವೀಕರಿಸಿದೆ.

'ಬಿಜೆಪಿಯು ಪ್ರುಡೆಂಟ್ ಎಲೆಕ್ಟೋರಲ್ ಟ್ರಸ್ಟ್‌ನಿಂದ 216.75 ಕೋಟಿ ರೂಪಾಯಿ ದೇಣಿಗೆ ನೀಡುವುದಾಗಿ ಘೋಷಿಸಿದ್ದು, ಟ್ರಸ್ಟ್‌ನಿಂದ 31 ಕೋಟಿ ರೂಪಾಯಿ ದೇಣಿಗೆ ಪಡೆಯುವುದಾಗಿ ಕಾಂಗ್ರೆಸ್ ಭರವಸೆ ನೀಡಿತ್ತು' ಎಂದು ವರದಿ ಹೇಳಿದೆ.

ಇದೇ ಸಮಯದಲ್ಲಿ, BG ಶಿರ್ಕೆ ಕನ್ಸ್ಟ್ರಕ್ಷನ್ ಟೆಕ್ನಾಲಜಿ ಪ್ರೈವೇಟ್ ಲಿಮಿಟೆಡ್ 2019-20ರ ಆರ್ಥಿಕ ವರ್ಷದಲ್ಲಿ NCP ಗಾಗಿ ಅತಿ ಹೆಚ್ಚು ದೇಣಿಗೆಯನ್ನು ಸ್ವೀಕರಿಸಿದೆ. ಒಟ್ಟು ದೇಣಿಗೆಗಳಲ್ಲಿ, 22.312 ಕೋಟಿ ರೂ. ಮೊತ್ತವು ಆನ್‌ಲೈನ್ ಮಾಹಿತಿ ಲಭ್ಯವಿಲ್ಲದ ಕಂಪನಿಗಳಿಂದ ಬಂದಿದೆ ಎಂದು ಮಾಹಿತಿಯಿಂದ ತಿಳಿದುಬಂದಿದೆ.

English summary
During FY19-20, a total of Rs 921.95 crore was donated by all the corporate/business houses to the 5 national parties, The maximum donation was to the BJP.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X