ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಒಂದೇ ವರ್ಷದಲ್ಲಿ ಬಿಜೆಪಿಗೆ ಇಷ್ಟೊಂದು ಕೋಟಿ ಕೋಟಿ!

|
Google Oneindia Kannada News

Recommended Video

BJP declares receiving donations over Rs 700 crore in FY 2018-19 | Oneindia Kannada

ನವದೆಹಲಿ, ನವೆಂಬರ್.12: ಓಡುವ ಕುದುರೆಗೆ ಬೆಲೆ ಜಾಸ್ತಿ ಅಂತಾರಲ್ವಾ. ಈಗ ದೇಶದಲ್ಲಿ ನಡೆಯುತ್ತಿರುವ ರಾಜಕಾರಣವೂ ಒಂದು ರೀತಿ ಹಾಗೆ ಆಗಿದೆ. ಭಾರತೀಯ ಜನತಾ ಪಕ್ಷ ಸದ್ಯ ಓಡುವ ಕುದುರೆಯಂತೆ ಆಗಿ ಬಿಟ್ಟಿದೆ.

2018-2019ನೇ ಆರ್ಥಿಕ ಸಾಲಿನಲ್ಲಿ ಬಿಜೆಪಿಗೆ ಕೋಟಿ ಕೋಟಿ ಅನುದಾನ ಹರಿದು ಬಂದಿದೆ. ಕಳೆದ ಸಾಲಿನಲ್ಲಿ ಪಕ್ಷಕ್ಕೆ ಸಿಕ್ಕ ಅನುದಾನ ಎಷ್ಟು ಎಂಬುದು ಇದೀಗ ಹೊರ ಬಿದ್ದಿದೆ. ಆ ಮೊತ್ತವನ್ನು ಕೇಳಿದರೆ ಎಂಥವರೂ ಕೂಡಾ ಶಾಕ್ ಆಗುತ್ತಾರೆ.

ಸಾರ್ವತ್ರಿಕ ಚುನಾವಣಾ ಪ್ರಚಾರಕ್ಕೆ ಕೋಟಿ ಕೋಟಿ ಖರ್ಚು ಮಾಡಿದ ಕಾಂಗ್ರೆಸ್ಸಾರ್ವತ್ರಿಕ ಚುನಾವಣಾ ಪ್ರಚಾರಕ್ಕೆ ಕೋಟಿ ಕೋಟಿ ಖರ್ಚು ಮಾಡಿದ ಕಾಂಗ್ರೆಸ್

ಕೇಂದ್ರ ಹಾಗೂ ದೇಶದ ಹಲವು ರಾಜ್ಯಗಳಲ್ಲಿ ಆಡಳಿತ ನಡೆಸುತ್ತಿರುವ ಬಿಜೆಪಿಗೆ ಕಳೆದ ಸಾಲಿನಲ್ಲಿ ಬರೋಬ್ಬರಿ 700 ಕೋಟಿ ರೂಪಾಯಿ ಅನುದಾನ ಹರಿದು ಬಂದಿದೆ. ಪಕ್ಷಕ್ಕೆ ಚೆಕ್ ಹಾಗೂ ಆನ್ ಲೈನ್ ಮೂಲಕವೇ ಇಷ್ಟೊಂದು ಮೊತ್ತದ ಅನುದಾನ ಸಿಕ್ಕಿದೆ. ಕಳೆದ ಸಾಲಿನಲ್ಲಿ ಪಕ್ಷಕ್ಕೆ ಬಂದ ಅನುದಾನದ ಕುರಿತು ಕೇಂದ್ರ ಚುನಾವಣಾ ಆಯೋಗಕ್ಕೆ ಬಿಜೆಪಿ ಲೆಕ್ಕ ಕೊಟ್ಟಿದೆ.

ಒಂದೇ ಟ್ರಸ್ಟ್ ನಿಂದ 300ಕೋಟಿ ಅನುದಾನ

ಒಂದೇ ಟ್ರಸ್ಟ್ ನಿಂದ 300ಕೋಟಿ ಅನುದಾನ

ಬಿಜೆಪಿಗೆ 700 ಕೋಟಿ ರೂಪಾಯಿ ಅನುದಾನ ಸಿಕ್ಕಿದ್ದು, ಇದರಲ್ಲಿ ಟಾಟಾ ಕಂಪನಿಯ ಸಿಂಹಪಾಲು ಇದೆ. ಟಾಟಾ ಕಂಪನಿ ಹಿಡಿತದಲ್ಲಿರುವ ಪ್ರಗತಿಶೀಲ ಚುನಾವಣಾ ಟ್ರಸ್ಟ್ ಒಟ್ಟು ಮೊತ್ತದ ಅರ್ಥಕ್ಕಿಂತ ಹೆಚ್ಚು ಪಾಲು ಅನುದಾನವನ್ನು ನೀಡಿದೆ. ಕಳೆದ ಒಂದೇ ವರ್ಷದಲ್ಲಿ ಟ್ರಸ್ಟ್ ನಿಂದ ಬಿಜೆಪಿಗೆ 356 ಕೋಟಿ ರೂಪಾಯಿ ಅನುದಾನ ಹರಿದು ಬಂದಿದೆ.

ದೇಶದ ಶ್ರೀಮಂತ ಟ್ರಸ್ಟ್ ಕೊಟ್ಟಿದ್ದೆಷ್ಟು?

ದೇಶದ ಶ್ರೀಮಂತ ಟ್ರಸ್ಟ್ ಕೊಟ್ಟಿದ್ದೆಷ್ಟು?

ವಿವೇಕಯುತ ಚುನಾವಣಾ ಟ್ರಸ್ಟ್ ದೇಶದ ಶ್ರೀಮಂತ ಟ್ರಸ್ಚ್ ಎನಿಸಿದೆ. ಕೇಂದ್ರದಲ್ಲಿ ಅಧಿಕಾರ ನಡೆಸುತ್ತಿರುವ ಬಿಜೆಪಿಗೆ ಈ ಟ್ರಸ್ಟ್ ನಿಂದ 54.25 ಕೋಟಿ ರೂಪಾಯಿ ಅನುದಾನ ಸಿಕ್ಕಿದೆ. ಈ ಟ್ರಸ್ಟ್ ಭಾರತಿ ಗ್ರೂಪ್ ಸೇರಿದಂತೆ ಹಲವು ಕಾರ್ಪೊರೇಟ್ ಕಂಪನಿಗಳ ಹಿನ್ನಲೆಯನ್ನು ಹೊಂದಿದೆ.

ಇವರೂ ಕೊಟ್ಟಿದ್ದಾರೆ ಕೋಟಿ ಕೋಟಿ ಕಾಸು!

ಇವರೂ ಕೊಟ್ಟಿದ್ದಾರೆ ಕೋಟಿ ಕೋಟಿ ಕಾಸು!

ಎರಡು ಟ್ರಸ್ಟ್ ಗಳ ಹೊರತಾಗಿಯೂ ಬಿಜೆಪಿಗೆ ಹಲವು ಕಾರ್ಪೊರೇಟ್ ಕಂಪನಿಗಳಿಂದ ಫಂಡ್ ಬಂದಿದೆ. ಹೀರೋ, ಮೋಟಾರ್ ಕಾಪ್, ಜುಬಿಲಿಯೆಂಟ್ ಫುಡ್ ವರ್ಕ್, ಓರಿಯೆಂಟಲ್ ಸಿಮೆಂಟ್, ಡಿಎಲ್ಎಫ್, ಜೆಕೆ ಟೈಯರ್ಸ್ ಸೇರಿದಂತೆ ವಿವಿಧ ಕಾರ್ಪೊರೇಟ್ ಕಂಪನಿಗಳಿಂದ ಚೆಕ್ ಹಾಗೂ ಆನ್ ಲೈನ್ ಮೂಲಕ ಕೋಟಿ ಕೋಟಿ ರೂಪಾಯಿ ಅನುದಾನ ಹರಿದು ಬಂದಿದೆ.

ಇವರಿಗೆ 20 ಸಾವಿರ ಕೊಟ್ಟವರು ಲೆಕ್ಕಕ್ಕೇ ಇಲ್ಲ!

ಇವರಿಗೆ 20 ಸಾವಿರ ಕೊಟ್ಟವರು ಲೆಕ್ಕಕ್ಕೇ ಇಲ್ಲ!

ಕೇಂದ್ರ ಚುನಾವಣಾ ಆಯೋಗದ ಪ್ರಕಾರ 20 ಸಾವಿರಕ್ಕಿಂತ ಹೆಚ್ಚು ಅನುದಾನ ಕೊಟ್ಟವರ ಹೆಸರನ್ನು ಮಾತ್ರ ರಾಜಕೀಯ ಪಕ್ಷಗಳು ಪ್ರಕಟಿಸಬೇಕು. 20 ಸಾವಿರಕ್ಕಿಂತ ಕಡಿಮೆ ಅನುದಾನವನ್ನು ನೀಡಿದ ವ್ಯಕ್ತಿ ಅಥವಾ ಕಂಪನಿಗಳ ಬಗ್ಗೆ ಲೆಕ್ಕ ನೀಡುವ ಅಗತ್ಯ ಇರುವುದಿಲ್ಲ. ಹೀಗೆ 20 ಸಾವಿರಕ್ಕಿಂತ ಕಡಿಮೆ ಅನುದಾನವನ್ನು ನೀಡಿದ ವ್ಯಕ್ತಿಗಳು ಹಾಗೂ ಕಂಪನಿಗಳು ಅದೆಷ್ಟು ಎಂಬುದು ಲೆಕ್ಕಕ್ಕೆ ಸಿಕ್ಕಿಲ್ಲ.

English summary
The Ruling Bjp Has Disclosed Receiving Over 700 Crore In Donation.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X