ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

'ರೇಪ್ ಇನ್ ಇಂಡಿಯಾ' ಎಂದ ರಾಹುಲ್ ಗಾಂಧಿ ವಿರುದ್ಧ ಸಂಸತ್‌ನಲ್ಲಿ ಪ್ರತಿಭಟನೆ

|
Google Oneindia Kannada News

ನವದೆಹಲಿ, ಡಿಸೆಂಬರ್ 13: ರಾಹುಲ್ ಗಾಂಧಿ ಅವರ 'ರೇಪ್ ಇನ್ ಇಂಡಿಯಾ' ಹೇಳಿಕೆ ವಿರುದ್ಧ ಬಿಜೆಪಿ ಸಂಸದರು ಸಂಸತ್‌ನಲ್ಲಿ ಭಾರಿ ಪ್ರತಿಭಟನೆ ನಡೆಸಿದ್ದಾರೆ.

'ಮೋದಿ ಮೇಕ್‌ ಇನ್ ಇಂಡಿಯಾ' ಎಂದಿದ್ದರು. ಆದರೆ ಈಗದು 'ರೇಪ್ ಇನ್ ಇಂಡಿಯಾ' ಆಗಿಬಿಟ್ಟಿದೆ' ಎಂದು ಇತ್ತೀಚೆಗೆ ರಾಹುಲ್ ಗಾಂಧಿ ಹೇಳಿದ್ದರು. ಈ ಕುರಿತು ಬಿಜೆಪಿ ಸದಸ್ಯರು ತೀವ್ರ ಆಕ್ಷೇಪ ವ್ಯಕ್ತಪಡಿಸಿ, ಸಚಿವೆ ಸ್ಮೃತಿ ಇರಾನಿ ನೇತೃತ್ವದಲ್ಲಿ ಪ್ರತಿಭಟನೆ ನಡೆಸಿದರು.

'ರೇಪ್ ಇನ್ ಇಂಡಿಯಾ' ಹೇಳಿಕೆಗೆ ಕ್ಷಮೆ ಯಾಚಿಸಲ್ಲ ಎಂದ ರಾಹುಲ್ ಗಾಂಧಿ'ರೇಪ್ ಇನ್ ಇಂಡಿಯಾ' ಹೇಳಿಕೆಗೆ ಕ್ಷಮೆ ಯಾಚಿಸಲ್ಲ ಎಂದ ರಾಹುಲ್ ಗಾಂಧಿ

ಇಂದು ಲೋಕಸಭೆಯಲ್ಲಿ ಮಾತನಾಡಿದ ಕೇಂದ್ರ ಸಚಿವೆ ಸ್ಮೃತಿ ಇರಾನಿ, 'ಭಾರತಕ್ಕೆ ಅವಮಾನ ಮಾಡುವ, ಇಲ್ಲಿನ ಮಹಿಳೆಯರು, ಪುರುಷರಿಗೆ ಅವಮಾನ ಮಾಡುವ ಹೇಳಿಕೆಯನ್ನು ರಾಹುಲ್ ಗಾಂಧಿ ನೀಡಿದ್ದಾರೆ. ಅವರು ಈ ಕೂಡಲೇ ಕ್ಷಮೆ ಯಾಚಿಸಬೇಕು' ಎಂದು ಆಕ್ರೋಶ ವ್ಯಕ್ತಪಡಿಸಿದ್ದರು.

BJP Protest In Parliament Against Rahul Gandhis Rape In India Statement

'ಭಾರತದ ಎಲ್ಲ ಪುರುಷರನ್ನು ಅತ್ಯಾಚಾರಿಗಳೆಂದಿರುವುದು, ಮತ್ತು ಅತ್ಯಾಚಾರಕ್ಕೆ ಪ್ರೇರಿಪಿಸುವುದು ಇದೇ ಮೊದಲು, ಹಿಂದೆ ಇಂತಹಾ ಘಟನೆ ಆಗಿಲ್ಲ, ರಾಹುಲ್ ಗಾಂಧಿ ಬೇಷರತ್ ಕ್ಷಮೆ ಕೇಳಬೇಕು' ಎಂದು ಪಟ್ಟು ಹಿಡಿದರು.

ಬಿಜೆಪಿಯ ಮಹಿಳಾ ಸಂಸದರೂ ಸಹ ರಾಹುಲ್ ಗಾಂಧಿ ವಿರುದ್ಧ ಮುಗಿಬಿದ್ದರು. ಸದನದ ಬಾವಿಗೆ ಇಳಿದು ಪ್ರತಿಭಟನೆ ನಡೆಸುವ ಪ್ರಯತ್ನ ನಡೆಸಿದರು. ರಾಹುಲ್ ಗಾಂಧಿ ವಿರುದ್ಧ ಘೋಷಣಾ ಪತ್ರಗಳನ್ನೂ ಪ್ರದರ್ಶಿಸಿದರು.

ತಮ್ಮ ಹೇಳಿಕೆಗೆ ಬದ್ಧರಾಗಿರುವ ರಾಹುಲ್ ಗಾಂಧಿ, 'ಕ್ಷಮೆ ಕೇಳಬೇಕಿರುವುದು ನಾನಲ್ಲ ಮೋದಿ, ಈಶಾನ್ಯ ರಾಜ್ಯಗಳಿಗೆ ಬೆಂಕಿ ಇಟ್ಟದ್ದಕ್ಕೆ, ಭಾರತದ ಆರ್ಥಿಕತೆಯನ್ನು ಹಾಳು ಮಾಡಿದ್ದಕ್ಕೆ' ಎಂದಿದ್ದಾರೆ.

ತಮ್ಮ ಹೇಳಿಕೆ ಕ್ಷಮೆ ಕೋರುವುದಿಲ್ಲ ಎಂದಿರುವ ರಾಹುಲ್ ಗಾಂಧಿ ಟ್ವೀಟ್‌ನಲ್ಲಿ ಮೋದಿ ಭಾಷಣದ ಒಂದು ವಿಡಿಯೋ ತುಣುಕನ್ನೂ ಹಂಚಿಕೊಂಡಿದ್ದು, ಮೋದಿ ಅವರು ದೆಹಲಿಯಲ್ಲಿ 'ರೇಪ್ ಕ್ಯಾಪಿಟಲ್ ಆಫ್ ಇಂಡಿಯಾ' (ಭಾರತದ ಅತ್ಯಾಚಾರ ರಾಜಧಾನಿ ದೆಹಲಿ) ಎಂದು ಹೇಳಿರುವ ಭಾಷಣದ ತುಣುಕು ಅದಾಗಿದೆ.

'ದೇಶದ ಆರ್ಥಿಕತೆಯನ್ನು ಹಳ್ಳ ಹಿಡಿಸಿದ್ದಕ್ಕೆ, ಈಶಾನ್ಯ ರಾಜ್ಯಗಳಿಗೆ ಬೆಂಕಿ ಹಚ್ಚಿದ್ದಕ್ಕೆ ಮೋದಿ ಅವರೇ ಕ್ಷಮಾಪಣೆ ಕೇಳಬೇಕು' ಎಂದಿದ್ದಾರೆ.

English summary
BJP MPs protest in parliament against Rahul Gandhi's 'rape in India' statement.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X