ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಟಿವಿ ಜಾಹೀರಾತು ನೀಡುವುದರಲ್ಲಿ ಬಿಜೆಪಿ ನಂಬರ್ ಒನ್

|
Google Oneindia Kannada News

ನವದೆಹಲಿ, ನವೆಂಬರ್ 24: ಐದು ರಾಜ್ಯಗಳ ವಿಧಾನಸಭೆ ಚುನಾವಣೆ ಸಮೀಪಿಸುತ್ತಿರುವಂತೆಯೇ ದೇಶದಲ್ಲಿ ಟೆಲಿವಿಷನ್ ಜಾಹೀರಾತುಗಳನ್ನು ನೀಡುವುದರಲ್ಲಿ ಬಿಜೆಪಿ ಮೊದಲ ಸ್ಥಾನಕ್ಕೇರಿದೆ.

ಬ್ರಾಡ್ ಕಾಸ್ಟ್ ಆಡಿಯನ್ಸ್ ರೀಸರ್ಚ್ ಕೌನ್ಸಿಲ್ (ಬಾರ್ಕ್) ಸಂಸ್ಥೆ ನ.10ರಿಂದ 16ರ ವರೆಗಿನ ಅವಧಿಗೆ ನೀಡಿರುವ ಒಂದು ವಾರದ ಜಾಹೀರಾತು ಪ್ರಸಾರದ ವರದಿ ಪ್ರಕಾರ ಇತರೆ ಸಂಸ್ಥೆಗಳು, ವಾಣಿಜ್ಯ ಉತ್ಪನ್ನಗಳು ಮುಂತಾದವುಗಳಿಗಿಂತಲೂ ಅತಿ ಹೆಚ್ಚು ಜಾಹೀರಾತುಗಳನ್ನು ಬಿಜೆಪಿ ನೀಡಿದೆ.

ನನ್ನನ್ನು ಎದುರಿಸಲಾಗದೆ ತಾಯಿಯ ಹೆಸರನ್ನು ತೆಗೆದುಕೊಂಡಿದೆ ಕಾಂಗ್ರೆಸ್: ಮೋದಿನನ್ನನ್ನು ಎದುರಿಸಲಾಗದೆ ತಾಯಿಯ ಹೆಸರನ್ನು ತೆಗೆದುಕೊಂಡಿದೆ ಕಾಂಗ್ರೆಸ್: ಮೋದಿ

ನೆಟ್ ಫ್ಲಿಕ್ಸ್ ಮತ್ತು ಹೋಟೆಲ್ ದರ ಹೋಲಿಕೆ ವೆಬ್‌ಸೈಟ್ ಜಾಹೀರಾತು ನೀಡುವಿಕೆಯಲ್ಲಿ ನಂತರದ ಸ್ಥಾನಗಳಲ್ಲಿವೆ.

BJP number one in television advertisement five state polls

ಹಿಂದುಸ್ತಾನ್ ಯುನಿಲಿವರ್ ಲಿಮಿಟೆಡ್, ರೆಕಿಟ್ ಬೆಂಕಿಸೆರ್, ಅಮೇಜಾನ್ ಮತ್ತು ಇತರೆ ಪ್ರಮುಖ ಜಾಹಿರಾತುದಾರರನ್ನು ಬಿಜೆಪಿ ಹಿಂದಿಕ್ಕಿದೆ.

ಕಳೆದ ವಾರ ಬಿಜೆಪಿ ಎರಡನೆಯ ಸ್ಥಾನದಲ್ಲಿತ್ತು. ಕಾಂಗ್ರೆಸ್ ಟಾಪ್ 10ರ ಪಟ್ಟಿಯಲ್ಲಿ ಸ್ಥಾನ ಪಡೆದಿಲ್ಲ.

ಚಳಿಗಾಲದ ಅಧಿವೇಶನದಲ್ಲಿ ರಾಮಮಂದಿರ ನಿರ್ಮಾಣಕ್ಕೆ ಮಸೂದೆ ಮಂಡನೆ?ಚಳಿಗಾಲದ ಅಧಿವೇಶನದಲ್ಲಿ ರಾಮಮಂದಿರ ನಿರ್ಮಾಣಕ್ಕೆ ಮಸೂದೆ ಮಂಡನೆ?

BJP number one in television advertisement five state polls

ಮಧ್ಯಪ್ರದೇಶ, ರಾಜಸ್ಥಾನ, ಛತ್ತೀಸ್ ಗಢ, ತೆಲಂಗಾಣ ಮತ್ತು ಮಿಜೋರಾಂಗಳಲ್ಲಿ ಚುನಾವಣೆ ನಡೆಯುತ್ತಿದ್ದು, ಇವುಗಳಲ್ಲಿನ ಪ್ರಚಾರಕ್ಕಾಗಿ ಬಿಜೆಪಿ ಟಿಲಿವಿಷನ್‌ಗಳಲ್ಲಿ ಜಾಹೀರಾತುಗಳನ್ನು ಪ್ರಸಾರ ಮಾಡುತ್ತಿದೆ.

ಕೇಂದ್ರ ಬಿಜೆಪಿ ಸರ್ಕಾರದ ವಿರುದ್ಧ ಅಸಮಾಧಾನ ಹೊರಹಾಕಿದ ಪೇಜಾವರ ಶ್ರೀ ಕೇಂದ್ರ ಬಿಜೆಪಿ ಸರ್ಕಾರದ ವಿರುದ್ಧ ಅಸಮಾಧಾನ ಹೊರಹಾಕಿದ ಪೇಜಾವರ ಶ್ರೀ

ನವೆಂಬರ್ 10-16ರ ಅವಧಿಯಲ್ಲಿ ಬಿಜೆಪಿಯ ಜಾಹೀರಾತುಗಳು ಟಿವಿಯಲ್ಲಿ 22,099 ಬಾರಿ ಪ್ರಸಾರವಾಗಿದೆ. ಎರಡನೆಯ ಸ್ಥಾನದಲ್ಲಿರುವ ನೆಟ್ ಫ್ಲಿಕ್ಸ್, ಬಿಜೆಪಿಯ ಸಮೀಪದಲ್ಲಿಯೂ ಇಲ್ಲ. ನೆಟ್‌ಫ್ಲಿಕ್ಸ್ ಜಾಹೀರಾತು 12,951 ಬಾರಿ ಪ್ರಸಾರವಾಗಿದೆ.

ಟ್ರಿವಿಗೋ ಕಂಪೆನಿ ಜಾಹಿರಾತುಗಳು 12,795 ಬಾರಿ ಪ್ರಸಾರವಾಗಿವೆ. ಸಂತೂರ್ ಸ್ಯಾಂಡಲ್ ಸೋಪ್ ಜಾಹೀರಾತು 11,222 ಬಾರಿ ಪ್ರಸಾರವಾಗಿದೆ ಎಂದು ಬಾರ್ಕ್ ಅಧ್ಯಯನ ತಿಳಿಸಿದೆ.

English summary
BJP became the number advertiser on television in the perion between November 10 to 16 ahead of Netflix and Trivago.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X