ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ದೇಣಿಗೆ ಸಂಗ್ರಹದಲ್ಲಿ ಬಿಜೆಪಿ ನಂಬರ್ 1: ಇತರೆ ಪಕ್ಷಗಳ ಸ್ಥಿತಿ ಏನು ಗೊತ್ತಾ?

|
Google Oneindia Kannada News

ನವದೆಹಲಿ ಜೂನ್ 1: ಆಡಳಿತಾರೂಢ ಭಾರತೀಯ ಜನತಾ ಪಕ್ಷ (ಬಿಜೆಪಿ) ನಿಧಿ ಸಂಗ್ರಹದಲ್ಲಿ ಮುಂಚೂಣಿಯಲ್ಲಿದೆ. 4,800 ಕೋಟಿಗೂ ಹೆಚ್ಚು ಆಸ್ತಿಯನ್ನು ಘೋಷಿಸಿಕೊಂಡಿದೆ. ಇದಲ್ಲದೇ ವರ್ಷಕ್ಕೆ 400 ಕೋಟಿಗೂ ಹೆಚ್ಚು ದೇಣಿಗೆ ಪಡೆಯುತ್ತದೆ. 2020-21ರ ಆರ್ಥಿಕ ವರ್ಷದಲ್ಲಿ ಬಿಜೆಪಿ 477.5 ಕೋಟಿ ದೇಣಿಗೆ ಪಡೆದಿದ್ದರೆ, ಪ್ರತಿಪಕ್ಷ ಕಾಂಗ್ರೆಸ್ 74.50 ಕೋಟಿ ದೇಣಿಗೆ ಪಡೆದಿದೆ.

ಭಾರತೀಯ ಚುನಾವಣಾ ಆಯೋಗ ಈ ವಿಷಯವನ್ನು ಬಹಿರಂಗಪಡಿಸಿದೆ. ರಾಜಕೀಯ ಪಕ್ಷಗಳ ದೇಣಿಗೆಗೆ ಸಂಬಂಧಿಸಿದ ವರದಿಯನ್ನು ಚುನಾವಣಾ ಆಯೋಗ ಬಹಿರಂಗಗೊಳಿಸಿದೆ. ಈ ವರದಿಯ ಪ್ರಕಾರ ಬಿಜೆಪಿಯು ವಿವಿಧ ಘಟಕಗಳು, ಚುನಾವಣಾ ಟ್ರಸ್ಟ್‌ಗಳು ಮತ್ತು ವ್ಯಕ್ತಿಗಳಿಂದ 4,77,54,50,077 ರೂ.ಗಳ ದೇಣಿಗೆ ಪಡೆದಿದೆ. ಈ ನಿಟ್ಟಿನಲ್ಲಿ 2020-21ರ ಆರ್ಥಿಕ ವರ್ಷದಲ್ಲಿ ಪಡೆದ ದೇಣಿಗೆಯ ವರದಿಯನ್ನು ಬಿಜೆಪಿ ಮಾರ್ಚ್ 14 ರಂದು ಆಯೋಗಕ್ಕೆ ಸಲ್ಲಿಸಿದೆ.

ಭಗವಾಧ್ವಜ ಹೇಳಿಕೆ ವಿವಾದ: ಈಶ್ವರಪ್ಪ ಬಂಧನಕ್ಕೆ ಎಎಪಿ ಆಗ್ರಹಭಗವಾಧ್ವಜ ಹೇಳಿಕೆ ವಿವಾದ: ಈಶ್ವರಪ್ಪ ಬಂಧನಕ್ಕೆ ಎಎಪಿ ಆಗ್ರಹ

ದೇಣಿಗೆ ಸಂಗ್ರಹ ಸ್ಪರ್ಧೆಯಲ್ಲಿ ಕಾಂಗ್ರೆಸ್ ಪೈಪೋಟಿ

ದೇಣಿಗೆ ಸಂಗ್ರಹ ಸ್ಪರ್ಧೆಯಲ್ಲಿ ಕಾಂಗ್ರೆಸ್ ಪೈಪೋಟಿ

ದೇಣಿಗೆ ಸಂಗ್ರಹಿಸುವುದರಲ್ಲಿ ಬಿಜೆಪಿ ಶ್ರೀಮಂತ ಪಕ್ಷವಾಗಿದೆ ಎಂದು ಭಾರತೀಯ ಚುನಾವಣಾ ಆಯೋಗ ವರದಿ ಹೇಳುತ್ತದೆ. ನಿಧಿ ಸಂಗ್ರಹಿಸುವುದಲ್ಲದೆ, ಆಸ್ತಿ ವಿಚಾರದಲ್ಲಿ ಬಿಜೆಪಿ ದೇಶದ ಇತರ ಎಲ್ಲ ಪಕ್ಷಗಳಿಗೆ ಹೋಲಿಸಿದರೆ ಶ್ರೀಮಂತವಾಗಿದೆ. 2019-20ರಲ್ಲಿ ಬಿಜೆಪಿ 4,847 ಕೋಟಿ ರೂಪಾಯಿ ಆಸ್ತಿ ಹೊಂದಿದೆ ಎಂದು ಹೇಳಲಾಗಿದೆ. 2022ಕ್ಕೆ ಒಂದು ಸಾವಿರ ಕೋಟಿ ರೂಪಾಯಿಗಳನ್ನು ಹೆಚ್ಚಿಸಲಾಗಿದೆ ಎಂದು ಪರಿಗಣಿಸಿದರೆ, ಅದು 6 ಸಾವಿರ ಕೋಟಿ ರೂಪಾಯಿಗಳಿಗಿಂತ ಹೆಚ್ಚು ಆಗುತ್ತದೆ. 2022 ರ ಮೊದಲು ಬಿಜೆಪಿ ಅಧಿಕಾರದಲ್ಲಿದ್ದ ರಾಜ್ಯಗಳು ಈ ವರ್ಷದ ಚುನಾವಣೆಯಲ್ಲಿ ಮತ್ತೆ ಅಧಿಕಾರಕ್ಕೆ ಬಂದವು.

ಸಮಾಜದ ಸ್ವಾಸ್ಥ್ಯ ಕೆಡಿಸಿದ ರಾಜಕಾರಣದ ತಂತ್ರಗಳು!ಸಮಾಜದ ಸ್ವಾಸ್ಥ್ಯ ಕೆಡಿಸಿದ ರಾಜಕಾರಣದ ತಂತ್ರಗಳು!

ಅಫಿಡವಿಟ್ ನಲ್ಲಿ ಉಲ್ಲೇಖ

ಅಫಿಡವಿಟ್ ನಲ್ಲಿ ಉಲ್ಲೇಖ

2020-21ರಲ್ಲಿ ಸ್ವೀಕರಿಸಿದ ದೇಣಿಗೆಯ ವರದಿಯನ್ನು ಸಾರ್ವಜನಿಕಗೊಳಿಸುವಾಗ, ಚುನಾವಣಾ ಆಯೋಗ ಕಾಂಗ್ರೆಸ್ ಮತ್ತು ಇತರ ಪಕ್ಷಗಳ ಬಗ್ಗೆಯೂ ಮಾಹಿತಿ ನೀಡಿದೆ. ಒಂದು ವರ್ಷದಲ್ಲಿ ಕಾಂಗ್ರೆಸ್ 74 ಕೋಟಿ ರೂಪಾಯಿ ದೇಣಿಗೆ ಪಡೆದಿದೆ ಎಂದು ಹೇಳಲಾಗಿದೆ. ಜೊತೆಗೆ ಅವರು 2019-20 ರಲ್ಲಿ 588 ಕೋಟಿ ರೂ. ವಿವಿಧ ಘಟಕಗಳು ಹಾಗೂ ವ್ಯಕ್ತಿಗಳಿಂದ 74,50,49,731 ರೂಪಾಯಿ ದೇಣಿಗೆ ಪಡೆದಿರುವುದಾಗಿ ಸ್ವತಃ ಕಾಂಗ್ರೆಸ್ ನೀಡಿರುವ ಅಫಿಡವಿಟ್ ನಲ್ಲಿ ಉಲ್ಲೇಖಿಸಲಾಗಿದೆ.

ಕಾಂಗ್ರೆಸ್‌ಗೆ ಎರಡನೇ ಸ್ಥಾನ

ಕಾಂಗ್ರೆಸ್‌ಗೆ ಎರಡನೇ ಸ್ಥಾನ

ಕಾಂಗ್ರೆಸ್ ನಂತರ ಎಸ್‌ಪಿ-ಬಿಎಸ್‌ಪಿ ಮತ್ತು ದಕ್ಷಿಣ ಭಾರತದ ಪಕ್ಷಗಳ ಸಂಖ್ಯೆ ಬರುತ್ತದೆ. ಆಸ್ತಿಯ ವಿಷಯಕ್ಕೆ ಬಂದರೆ, 2019-20ರಲ್ಲಿ ಬಿಜೆಪಿ ಪ್ರಥಮ, ಬಿಎಸ್‌ಪಿ ಎರಡನೇ ಮತ್ತು ಕಾಂಗ್ರೆಸ್ ಮೂರನೇ ಸ್ಥಾನದಲ್ಲಿದೆ. ಚುನಾವಣಾ ಕಾಯ್ದೆಯ ನಿಬಂಧನೆಗಳ ಪ್ರಕಾರ, ರಾಜಕೀಯ ಪಕ್ಷಗಳು 20,000 ರೂ.ಗಿಂತ ಹೆಚ್ಚಿನ ದೇಣಿಗೆಗೆ ಸಂಬಂಧಿಸಿದ ಮಾಹಿತಿಯನ್ನು ನೀಡಬೇಕಾಗುತ್ತದೆ.

ಯಾರು ಎಷ್ಟು ದೇಣಿಗೆ

ಯಾರು ಎಷ್ಟು ದೇಣಿಗೆ

ಅಸೋಸಿಯೇಷನ್ ​​ಫಾರ್ ಡೆಮಾಕ್ರಟಿಕ್ ರಿಫಾರ್ಮ್ಸ್ (ಎಡಿಆರ್) ಕೂಡ ದೇಣಿಗೆಗೆ ಸಂಬಂಧಿಸಿದಂತೆ ವರದಿಯನ್ನು ಬಿಡುಗಡೆ ಮಾಡಿತ್ತು. ಬಿಜೆಪಿ, ಕಾಂಗ್ರೆಸ್, ಸಿಪಿಐಎಂ, ಎನ್‌ಸಿಪಿ ಮತ್ತು ಟಿಎಂಸಿಯಂತಹ ದೊಡ್ಡ ಪಕ್ಷಗಳನ್ನು ಆ ವರದಿಯಲ್ಲಿ ಸೇರಿಸಲಾಗಿದೆ. ಈ ವರದಿಯಲ್ಲಿ "2020-21ರಲ್ಲಿ ಬಿಜೆಪಿ ಒಂದು ವರ್ಷದಲ್ಲಿ 2025 ಕಾರ್ಪೊರೇಟ್-ದಾನಿಗಳಿಂದ 720.407 ಕೋಟಿ ದೇಣಿಗೆ ಪಡೆದಿದೆ. ಕಾಂಗ್ರೆಸ್ 133.04 ಕೋಟಿ ದೇಣಿಗೆ ಪಡೆದಿದೆ. ಎನ್‌ಸಿಪಿ 57.086 ಕೋಟಿ ದೇಣಿಗೆ ಪಡೆದಿದೆ" ಎಂದು ತಿಳಿಸಲಾಗಿದೆ.

English summary
The ruling Bharatiya Janata Party (BJP) is at the forefront of fund raising. It has declared assets worth more than 4,800 crores. This disclosure has been made by the Election Commission of India.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X