ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಲೋಕಸಭೆಯಲ್ಲಿ Sorry, Sorry, Sorry, ಎಂದರಲ್ಲ ಸಾದ್ವಿ ಪ್ರಗ್ಯಾ ಸಿಂಗ್!

|
Google Oneindia Kannada News

ದೆಹಲಿ, ನವೆಂಬರ್.29: ನಾಲಗೆ ಮೇಲೆ ಕಂಟ್ರೋಲ್ ಇಲ್ಲ ಎಂದರೆ ಏನೆಲ್ಲ ಆಗುತ್ತೆ ಅನ್ನೋದಕ್ಕೆ ಈ ಬಿಜೆಪಿ ಸಂಸದರೆ ಬೆಸ್ಟ್ ಎಕ್ಸಾಂಪಲ್. ಆತುರಕ್ಕೆ ಬಿದ್ದು ಆಡಿದ ಒಂದೇ ಒಂದು ಮಾತಿಗೆ ಇಂದು ತುಂಬಿದ ಸಭೆಯಲ್ಲಿ ತಪ್ಪಾಯ್ತು, ತಪ್ಪಾಯ್ತು, ತಪ್ಪಾಯ್ತು ಎಂದು ಬಾರಿ ಬಾರಿ ಕ್ಷಮೆ ಕೋರಿದ್ದಾರೆ.

ಅರೆ, ಅದ್ಯಾರಪ್ಪಾ ಆ ಬಿಜೆಪಿ ಸಂಸದರೆ, ಅಷ್ಟಕ್ಕೂ ಅವರ ಆಡಿದ ಆ ಮಾತು ಏನು ಎಂದು ಅಚ್ಚರಿಪಡಬೇಕಿಲ್ಲ. ಇದು ಕಳೆದ ಎರಡು ದಿನಗಳಿಂದ ದೇಶಾದ್ಯಂತ ಸದ್ದು ಮಾಡಿರುವ ವಿಚಾರ. ಅಂದು ಲೋಕಸಭೆಯಲ್ಲಿ ಆಡಿದ ಮಾತಿನಿಂದ ಈಗ ಅದೇ ಲೋಕಸಭೆ ತಲೆ ತಗ್ಗಿಸಿ ನಿಂತಿದ್ದರು ಬಿಜೆಪಿ ಸಂಸದೆ ಸಾಧ್ವಿ ಪ್ರಗ್ಯಾ ಸಿಂಗ್.

ಮಹಾತ್ಮ ಗಾಂಧಿ ಹಂತಕನೇ ದೇಶಭಕ್ತ: ಬಿಜೆಪಿ ಸಂಸದರೇ ಏನು ಇದೆಲ್ಲ?ಮಹಾತ್ಮ ಗಾಂಧಿ ಹಂತಕನೇ ದೇಶಭಕ್ತ: ಬಿಜೆಪಿ ಸಂಸದರೇ ಏನು ಇದೆಲ್ಲ?

ಹೌದು, ಮಹಾತ್ಮ ಗಾಂಧೀಜಿ ಎಂದರೆ ರಾಷ್ಟ್ರಪಿತ ಎಂಬ ಗೌರವ ಪ್ರತಿಯೊಬ್ಬರಲ್ಲೂ ಇದೆ. ಮಹಾತ್ಮ ಗಾಂಧಿ ಯಾವುದೇ ಒಂದು ಪಕ್ಷಕ್ಕೆ ಸೀಮಿತರಾದವರು ಅಲ್ಲ. ಅಂಥ ಸ್ವಾತಂತ್ರ್ಯ ಹೋರಾಟಗಾರರನ್ನು ನಾಥುರಾಮ್ ಗೋಡ್ಸೆ ಹತ್ಯೆಗೈದಿದ್ದರು ಎಲ್ಲರಿಗೂ ಗೊತ್ತಿದೆ. ಹೀಗೆ ರಾಷ್ಟ್ರದ ಮಹಾತ್ಮನನ್ನು ಕೊಂದ ವ್ಯಕ್ತಿ ಬಿಜೆಪಿ ಸಂಸದರ ಪಾಲಿಗೆ ದೇಶಭಕ್ತನಂತೆ. ಇದೊಂದೇ ಮಾತಿಗೆ ಇಂದು ಸಾಧ್ವಿ ಪ್ರಗ್ಯಾ ಸಿಂಗ್, ಲೋಕಭೆಯಲ್ಲಿ ಎಲ್ಲ ಸದಸ್ಯರ ಕ್ಷಮೆ ಕೋರಿದ್ದಾರೆ.

Sorry, Sorry, Sorry ಎಂದ ಸಾಧ್ವಿ ಪ್ರಗ್ಯಾ ಸಿಂಗ್!

Sorry, Sorry, Sorry ಎಂದ ಸಾಧ್ವಿ ಪ್ರಗ್ಯಾ ಸಿಂಗ್!

ಲೋಕಸಭೆಯಲ್ಲಿ ನನ್ನ ಹೇಳಿಕೆಯಿಂದ ಸದಸ್ಯರ ಮನಸಿಗೆ ನೋವಾಗಿದ್ದರೆ ನಾನು ಎಲ್ಲರಲ್ಲೂ ಕ್ಷಮೆಯಾಚಿಸುತ್ತೇನೆ ಎಂದು ಬಿಜೆಪಿ ಸಂಸದೆ ಸಾಧ್ವಿ ಪ್ರಗ್ಯಾ ಸಿಂಗ್ ಹೇಳಿದರು. ಇದೇ ವೇಳೆ ತಮ್ಮ ಹೇಳಿಕೆಯನ್ನೂ ಸಮರ್ಥಿಸಿಕೊಂಡರು. ನಾನು ನೀಡಿದ ಹೇಳಿಕೆಯೇ ಬೇರೆ, ಅದನ್ನು ಅರ್ಥೈಸಿದ ಪರಿಯೇ ಬೇರೆ. ನನ್ನ ಹೇಳಿಕೆಯನ್ನು ತಿರುಚಲಾಗಿದೆ ಎಂದು ಆರೋಪಿಸಿದರು.

ರಾಹುಲ್ ಗಾಂಧಿ ವಿರುದ್ಧ ರೇಗಿದ ಸಾಧ್ವಿ ಪ್ರಗ್ಯಾ ಸಿಂಗ್!

ರಾಹುಲ್ ಗಾಂಧಿ ವಿರುದ್ಧ ರೇಗಿದ ಸಾಧ್ವಿ ಪ್ರಗ್ಯಾ ಸಿಂಗ್!

ಭಾರತದ ಸ್ವಾತಂತ್ರ್ಯಕ್ಕಾಗಿ ಶ್ರಮಿಸಿದ ರಾಷ್ಟ್ರಪಿತ ಮಹಾತ್ಮ ಗಾಂಧೀಜಿ ಅವರ ಬಗ್ಗೆ ನನಗೂ ಅಪಾರ ಗೌರವವಿದೆ. ನನ್ನ ಹೇಳಿಕೆ ತಿರುಚಿದ್ದನ್ನು ನಾನು ಖಂಡಿಸುತ್ತೇನೆ ಎಂದರು. ಯಾವುದೇ ಸದಸ್ಯರ ಹೆಸರನ್ನು ಉಲ್ಲೇಖಿಸದೇ ಸಾಧ್ವಿ ಪ್ರಗ್ಯಾ ಸಿಂಗ್, ರಾಹುಲ್ ಗಾಂಧಿ ವಿರುದ್ಧ ಕಿಡಿ ಕಾರಿದರು. ಲೋಕಸಭೆ ಸದಸ್ಯರೊಬ್ಬರು ನನ್ನನ್ನು ಉಗ್ರ ಎಂದು ಬಹಿರಂಗವಾಗಿ ಸಂಬೋಧಿಸಿದ್ದಾರೆ. ಇದು ಕೇವಲ ಒಬ್ಬ ಸಂಸದೆಗೆ ಮಾಡಿದ ಅವಮಾನವಲ್ಲ, ಬದಲಿಗೆ ಮಹಿಳೆಯರಿಗೆ ಮಾಡಿರುವ ಅಪಮಾನವಾಗಿದೆ. ಇದನ್ನು ನಾನು ಖಂಡಿಸುತ್ತೇನೆ ಎಂದು ರಾಹುಲ್ ಗಾಂಧಿ ವಿರುದ್ಧ ಹೆಸರು ಹೇಳದೇ ಕಿಡಿ ಕಾರಿದ್ದಾರೆ.

ಗೋಡ್ಸೆಯನ್ನು ಹೊಗಳಿದ ಪ್ರಗ್ಯಾ ಸಿಂಗ್‌ಗೆ ಪಾಠ ಕಲಿಸಿದ ಬಿಜೆಪಿಗೋಡ್ಸೆಯನ್ನು ಹೊಗಳಿದ ಪ್ರಗ್ಯಾ ಸಿಂಗ್‌ಗೆ ಪಾಠ ಕಲಿಸಿದ ಬಿಜೆಪಿ

ಸಂಸದರ ಹೇಳಿಕೆಯಿಂದ ರಾಷ್ಟ್ರಪಿತರಿಗೆ ಅಪಮಾನ

ಸಂಸದರ ಹೇಳಿಕೆಯಿಂದ ರಾಷ್ಟ್ರಪಿತರಿಗೆ ಅಪಮಾನ

ಇದಕ್ಕೂ ಮುನ್ನ ಸಾಧ್ವಿ ಪ್ರಗ್ಯಾ ಸಿಂಗ್ ಹೇಳಿಕೆ ಕುರಿತು ಶೂನ್ಯ ಅವಧಿಯಲ್ಲಿ ಚರ್ಚಿಸುವಂತೆ ಕಾಂಗ್ರೆಸ್ ಸದಸ್ಯ ಅಧೀರ್ ರಂಜನ್ ಚೌಧರಿ ಪ್ರಸ್ತಾಪಿಸಿದರು. ಬಿಜೆಪಿ ಸಂಸದೆಯ ಹೇಳಿಕೆಯಿಂದ ಕಲಾಪಕ್ಕೆ ಅಗೌರವ ತೋರಿದಂತೆ ಆಗಿದೆ. ಮಹಾತ್ಮ ಗಾಂಧೀಜಿ ಕೇವಲ ದೇಶಕ್ಕೆ ತಂದೆಯಾಗಿದ್ದವರು ಅಲ್ಲ, ಅವರೊಬ್ಬ ಜಾಗತಿಕ ನಾಯಕರಾಗಿದ್ದರು.

ಗಾಂಧೀಜಿಗೆ ಜೈಕಾರಿ, ಗೋಡ್ಸೆಗೆ ಧಿಕ್ಕಾರ!

ಗಾಂಧೀಜಿಗೆ ಜೈಕಾರಿ, ಗೋಡ್ಸೆಗೆ ಧಿಕ್ಕಾರ!

ಇದರ ನಡುವೆ ಬಿಜೆಪಿ ಸಂಸದೆ ಸಾಧ್ವಿ ಪ್ರಗ್ಯಾ ಸಿಂಗ್ ವಿರುದ್ಧ ಪ್ರತಿಪಕ್ಷ ಸದಸ್ಯರು ಪ್ರತಿಭಟನೆಗೆ ಇಳಿದರು. ಲೋಕಸಭ ಸದನದ ಬಾವಿಗಿಳಿದ ಕಾಂಗ್ರೆಸ್, ಡಿಎಂಕೆ, ತೃಣಮೂಲ ಕಾಂಗ್ರೆಸ್, ಬಹುಜನ ಸಮಾಜವಾದಿ ಪಕ್ಷದ ಸದಸ್ಯರು ಪ್ರತಿಭಟನೆ ನಡೆಸಿದರು. ಮಹಾತ್ಮ ಗಾಂಧೀಜಿಗೆ ಜೈಕಾರ ಕೂಗಿದ ಸದಸ್ಯರು, ನಾಥೂರಾಮ್ ಗೋಡ್ಸೆ ವಿರುದ್ಧ ಧಿಕ್ಕಾರ ಕೂಗಿದರು.

ಸಾಧ್ವಿ ಪ್ರಗ್ಯಾ ಸಿಂಗ್ ಹೇಳಿಕೆ ವಿವಾದ ಏನು?

ಸಾಧ್ವಿ ಪ್ರಗ್ಯಾ ಸಿಂಗ್ ಹೇಳಿಕೆ ವಿವಾದ ಏನು?

ಕಳೆದ ಸೋಮವಾರ ಲೋಕಸಭೆಯಲ್ಲಿ ದೇಶದ ಗಣ್ಯರಿಗೆ ವಿಶೇಷ ಭದ್ರತಾ ಸೌಲಭ್ಯ ಮಸೂದೆ 2019ರ ಬಗ್ಗೆ ಚರ್ಚೆ ನಡೆಯುತ್ತಿತ್ತು. ಈ ವೇಳೆ ಮಹಾತ್ಮ ಗಾಂಧೀಜಿ ಹತ್ಯೆ ಬಗ್ಗೆ ಡಿಎಂಕೆ ಸದಸ್ಯ ಎ.ರಾಜ ಪ್ರಸ್ತಾಪಿಸಿದ್ದು, ನಾಥೂರಾಮ್ ಗೋಡ್ಸೆಯನ್ನು ಉದಾಹರಣೆಯಾಗಿ ನೀಡಿದರು. ಇದೇ ಸಂದರ್ಭದಲ್ಲಿ ಎದ್ದು ನಿಂತ ಬಿಜೆಪಿ ಸಂಸದೆ ಸಾಧ್ವಿ ಪ್ರಗ್ಯಾ ಸಿಂಗ್, ನಾಥೂರಾಮ್ ಗೋಡ್ಸೆಯನ್ನು ದೇಶಭಕ್ತ ಎಂದು ಸಂಬೋಧಿಸಿದ್ದರು. ಇದು ದೇಶಾದ್ಯಂತ ಸಾಕಷ್ಟು ವಿರೋಧಕ್ಕೆ ಕಾರಣವಾಗಿದ್ದು, ಸಾಧ್ವಿ ಪ್ರಗ್ಯಾ ಸಿಗ್ ವಿರುದ್ಧ ವಿಪಕ್ಷ ನಾಯಕರು ಕೆಂಡಾಮಂಡರಾಗಿದ್ದರು. ಅಂದೇ ಲೋಕಸಭೆ ಸ್ಪೀಕರ್ ಓಂ ಬಿರ್ಲಾ, ಬಿಜೆಪಿ ಸಂಸದೆಯನ್ನು ಕಲಾಪದಿಂದ ಹೊರಗೆ ಕಳುಹಿಸಿದ್ದರು.

English summary
BJP MP Sadhvi Pragya Singh Apologises Again For Godse Remarks. Opposition Party Leaders Protest In Lok Sabha.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X