ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

17 ನೇ ಲೋಕಸಭಾ ಸ್ಪೀಕರ್ ಆಗಿ ಓಂ ಬಿರ್ಲಾ ಆಯ್ಕೆ, ಮೋದಿ ಅಭಿನಂದನೆ

|
Google Oneindia Kannada News

ನವದೆಹಲಿ, ಜೂನ್ 19: ಹದಿನೇಳನೇ ಲೋಕಸಭೆಯ ಸ್ಪೀಕರ್ ಆಗಿ ನಿರೀಕ್ಷೆಯಂತೆಯೇ ಬಿಜೆಪಿಯ ಸಂಸದ ಓಂ ಬಿರ್ಲಾ ಅವರು ಆಯ್ಕೆಯಾಗಿದ್ದಾರೆ.

ಕಾಂಗ್ರೆಸ್ ನೇತೃತ್ವದ ಯುಪಿಎ ಮೈತ್ರಿಕೂಟವೂ ಯಾವುದೇ ಅಭ್ಯರ್ಥಿಗಳನ್ನು ನಿಲ್ಲಿಸದೆ, ಓಂ ಬಿರ್ಲಾ ಅವರನ್ನು ಬೆಂಬಲಿಸಿದ ಕಾರಣ ಅವರು ಅವಿರೋಧವಾಗಿ ಆಯ್ಕೆಯಾದರು.

ಲೋಕಸಭಾ ಸ್ಪೀಕರ್ ಸ್ಥಾನಕ್ಕೆ ರಾಜಸ್ಥಾನದ ಕೋಟಾ ಸಂಸದ ಓಂ ಬಿರ್ಲಾ ಲೋಕಸಭಾ ಸ್ಪೀಕರ್ ಸ್ಥಾನಕ್ಕೆ ರಾಜಸ್ಥಾನದ ಕೋಟಾ ಸಂಸದ ಓಂ ಬಿರ್ಲಾ

ಸ್ಪೀಕರ್ ಆಗಿ ಆಯ್ಕೆಯಾದ ಓಂ ಬಿರ್ಲಾ ಅವರಿಗೆ ಪ್ರಧಾನಿ ನರೇಂದ್ರ ಮೋದಿ ಅವರು ಅಭಿನಂದನೆ ಸಲ್ಲಿಸಿದರು.

BJP MP Om Birla elected as the Speaker of the 17th Lok Sabha.

ರಾಜಸ್ಥಾನದ ಕೋಟಾ ಬಂಡಿ ಲೋಕಸಭಾ ಕ್ಷೇತ್ರದಿಂದ ಎರಡು ಬಾರಿ ಸಂಸದರಾಗಿ ಆಯ್ಕೆಯಾಗಿದ್ದ ಓಂ ಬಿರ್ಲಾಅವರನ್ನು ಎನ್ ಡಿಎ ತನ್ನ ಅಭ್ಯರ್ಥಿಯನ್ನಾಗಿ ಆರಿಸಿತ್ತು. ಅದಕ್ಕೆ ಎನ್ ಡಿಎ ಮೈತ್ರಿಕೂಟದ ಎಲ್ಲ ಪಕ್ಷಗಳೂ ಬೆಂಬಲ ಸೂಚಿಸಿದ್ದವು.

ಮುಂಗಾರು ಅಧಿವೇಶನ LIVE: ನೂತನ ಸ್ಪೀಕರ್ ನಮ್ಮ ಹೆಮ್ಮೆ ಎಂದ ಮೋದಿಮುಂಗಾರು ಅಧಿವೇಶನ LIVE: ನೂತನ ಸ್ಪೀಕರ್ ನಮ್ಮ ಹೆಮ್ಮೆ ಎಂದ ಮೋದಿ

ಸಂಸದರಾಗಿ ಮಂಗಳವಾರ ಪ್ರಮಾಣ ವಚನ ಸ್ವೀಕರಿಸುತ್ತಿದ್ದಂತೆಯೇ ಸ್ಪೀಕರ್ ಸ್ಥಾನಕ್ಕಾಗಿ ಅವರು ನಾಮಪತ್ರ ಸಲ್ಲಿಸಿದ್ದರು. 352 ಸದಸ್ಯ ಬಲವನ್ನು ಹೊಂದಿರುವ ಎನ್ ಡಿಎ ಗೆ ಸ್ಪೀಕರ್ ಆಯ್ಕೆ ಸುಲಭವೇ ಆಗಿತ್ತು. ಈ ವಿಷಯ ಗೊತ್ತೇ ಇದ್ದಿದ್ದರಿಂದ ಕಾಂಗ್ರೆಸ್ ನೇತೃತ್ವದ ಯುಪಿಎ ಮೈತ್ರಿಕೂಟ ತನ್ನ ಅಭ್ಯರ್ಥಿಯನ್ನು ಕಣಕ್ಕಿಳಿಸಿರಲಿಲ್ಲ. ಆದ್ದರಿಂದ ಓಂ ಬಿರ್ಲಾ ಅವಿರೋಧವಾಗಿ ಆಯ್ಕೆಯಾದರು.

English summary
BJP MP from Kota, Om Birla elected as the Speaker of the 17th Lok Sabha. PM Narendra Modi Congratulates him.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X