ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಗೌತಮ್‌ ಗಂಭೀರ್‌ ಮೂರನೇ ಬಾರಿಗೆ ಜೀವ ಬೆದರಿಕೆ!

|
Google Oneindia Kannada News

ನವದೆಹಲಿ, ನವೆಂಬರ್‌ 28: ಭಾರತ ತಂಡದ ಮಾಜಿ ಕ್ರಿಕೆಟಿಗ ಹಾಗೂ ಭಾರತ ಜನತಾ ಪಕ್ಷ (ಬಿಜೆಪಿ) ಸಂಸದ ಗೌತಮ್‌ ಗಂಭೀರ್‌ಗೆ ಈ ವಾರದಲ್ಲಿ ಮೂರನೇ ಬಾರಿಗೆ ಜೀವ ಬೆದರಿಕೆ ಬಂದಿದೆ. ಪಾಕಿಸ್ತಾನ ಕರಾಚಿಯಿಂದ ಮೂರನೇ ಬಾರಿಗೆ ಜೀವ ಬೆದರಿಕೆ ಇ-ಮೇಲ್‌ ಬಂದಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಐಸಿಸ್‌ ಉಗ್ರರಿಂದ ಭಾನುವಾರ ಮಧ್ಯರಾತ್ರಿ 1:37ರ ಸುಮಾರಿಗೆ ಈ ಜೀವ ಬೆದರಿಕೆಯ ಇ-ಮೇಲ್‌ ಬಂದಿದೆ. [email protected] ಎಂಬ ಐಸಿಸ್ ಕಾಶ್ಮೀರ್​ ಇಮೇಲ್‌ ಐಡಿಯಿಂದ ಈ ಜೀವ ಬೆದರಿಕೆ ಬಂದಿದೆ. ಈ ಬೆದರಿಕೆಯಲ್ಲಿ ದೆಹಲಿ ಪೊಲೀಸ್​ ಮತ್ತು ಕೇಂದ್ರ ದೆಹಲಿ ಡಿಸಿಪಿ ಶ್ವೇತಾ ಚೌಹ್ವಾಣ್ ಹೆಸರನ್ನು ಕೂಡಾ ಪ್ರಸ್ತಾಪ ಮಾಡಲಾಗಿದೆ.

ಜೀವ ಬೆದರಿಕೆ ಕರೆ: ಸಂಸದ ಗಂಭೀರ್‌ ಮನೆಗೆ ಬಿಗಿ ಭದ್ರತೆ ಜೀವ ಬೆದರಿಕೆ ಕರೆ: ಸಂಸದ ಗಂಭೀರ್‌ ಮನೆಗೆ ಬಿಗಿ ಭದ್ರತೆ

"ದೆಹಲಿ ಪೊಲೀಸರು ಮತ್ತು ಐಪಿಎಸ್ ಶ್ವೇತಾ ಚೌಹಾಣ್ ಅವರ ಗೂಢಚಾರರು ಸಹ ಪಡೆಗಳಲ್ಲಿ ಇರುವುದರಿಂದ ಏನನ್ನೂ ಮಾಡಲು ಸಾಧ್ಯವಿಲ್ಲ," ಎಂದು ಈ ಜೀವ ಬೆದರಿಕೆಯಲ್ಲಿ ಉಲ್ಲೇಖ ಮಾಡಲಾಗಿದೆ. ಇಮೇಲ್‌ನ ಮೂಲವನ್ನು ಪತ್ತೆ ಹಚ್ಚುವ ನಿಟ್ಟಿನಲ್ಲಿ ವಿಶೇಷ ಸೆಲ್‌ನ ಸೈಬರ್ ಸೆಲ್‌ಗೆ ದೂರು ನೀಡಲಾಗಿದೆ ಎಂದು ದೆಹಲಿ ಪೊಲೀಸ್ ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ. ಹೆಚ್ಚಿನ ತನಿಖೆ ನಡೆಸಲಾಗುತ್ತಿದೆ.

BJP MP Gautam Gambhir Gets Third Death Threat in a Week

ಈ ಹಿಂದೆ ಎರಡು ಬಾರಿ ಬಿಜೆಪಿ ಸಂಸದ ಗೌತಮ್‌ ಗಂಭೀರ್‌ಗೆ ಜೀವ ಬೆದರಿಕೆಯು ಬಂದಿದೆ. ಆ ಬಳಿಕ ಗೌತಮ್‌ ಗಂಭೀರ್‌ ಮನೆಯ ಹೊರಗೆ ಭದ್ರತೆಯನ್ನು ಅಧಿಕ ಮಾಡಲಾಗಿದೆ. ಮೊದಲ ಬಾರಿಗೆ ಜೀವ ಬೆದರಿಕೆ ಬರುತ್ತಿದ್ದಂತೆ ಗೌತಮ್‌ ಗಂಭೀರ್‌ ದೂರನ್ನು ನೀಡಿದ್ದರು. ಈಗ ಮೂರನೇ ಬಾರಿಗೆ ಜೀವ ಬೆದರಿಕೆಯು ಬಂದಿದ್ದು, ಈ ಜೀವ ಬೆದರಿಕೆ ಇಮೇಲ್‌ನಲ್ಲಿ ಬಿಜೆಪಿ ಸಂಸದ ಗೌತಮ್‌ ಗಂಭೀರ್‌ ಮಾತ್ರವಲ್ಲೇ ಅವರ ಕುಟುಂಬಸ್ಥರಿಗೂ ಬೆದರಿಕೆ ಹಾಕಲಾಗಿದೆ. 2018ರಲ್ಲೂ ಗಂಭೀರ್ ಅವರಿಗೆ ಜೀವ ಬೆದರಿಕೆ ಕರೆಗಳು ಬಂದಿತ್ತು. ಅಂತಾರಾಷ್ಟ್ರೀಯ ದೂರವಾಣಿ ಸಂಖ್ಯೆಯೊಂದರಿಂದ ಜೀವ ಬೆದರಿಕೆ ಕರೆ ಮಾಡಲಾಗಿತ್ತು.

ಗೌತಮ್‌ ಗಂಭೀರ್‌ಗೆ ಮೊದಲ ಜೀವ ಬೆದರಿಕೆ

ನವೆಂಬರ್​ 23ರ ಬೆಳಿಗ್ಗೆ ಗೌತಮ್​ ಗಂಭೀರ್​ ಅವರ ಅಧಿಕೃತ ಇಮೇಲ್​ ಐಡಿಗೆ, ಗಂಭೀರ್‌ ಕುಟುಂಬವನ್ನು ಹತ್ಯೆ ಮಾಡುವ ಬೆದರಿಕೆ ಸಂದೇಶ ಬಂದಿತ್ತು. ನಂತರ ಗೌತಮ್‌ ಗಂಭೀರ್‌ರ ಪಿಎ ಗೌರವ್​ ಅರೋರ ಡಿಸಿಪಿ ಚೌಹ್ವಾಣ್​ಗೆ ಎಫ್​ಐಆರ್ ದಾಖಲಿಸಲು ಮತ್ತು ಹೆಚ್ಚಿನ ಭದ್ರತೆ ಒದಗಿಸಲು ಪತ್ರ ಬರೆದಿದ್ದರು. ರಾತ್ರಿ 9.32ರ ವೇಳೆಗೆ ಗಂಭೀರ್ ಅವರ ಅಧಿಕೃತ ಇಮೇಲ್ ಐಡಿಗೆ ಬೆದರಿಕೆ ಪತ್ರ ಬಂದಿದ್ದು, "ISIS Kashmir" ಎಂದು ಸಹಿ ಹಾಕಲಾಗಿತ್ತು. ಈ ಇಮೇಲ್‌ನಲ್ಲಿ ನಾವು ನಿನ್ನನ್ನು ನಿನ್ನ ಕುಟುಂಬವನ್ನು ಕೊಲ್ಲುತ್ತೇವೆ. ನಿನ್ನ ಮೇಲೆ ನಿರಂತರವಾಗಿ ನಿಗಾ ಇಟ್ಟಿದ್ದೇವೆ ಎಂದು ಬರೆಯಲಾಗಿದೆ. ಗುಪ್ತಚರ ಇಲಾಖೆ ವಿಶೇಷ ವಿಭಾಗದ ಸಿಬ್ಬಂದಿಗಳು ಪತ್ರದ ಬಗ್ಗೆ ಹೆಚ್ಚಿನ ಮಾಹಿತಿಯನ್ನು ಪಡೆಯಲು ಗೂಗಲ್ ಸಂಸ್ಥೆಗೆ ಮನವಿ ಸಲ್ಲಿಸಿದ್ದಾರೆ. ಇಮೇಲ್ ಕಳಿಸಿದವರು ಯಾರು? ಐಪಿ ಲೊಕೇಷನ್ ಎಲ್ಲಿದೆ? ಯಾವ ಸಾಧನದಿಂದ ಕಳಿಸಲಾಗಿದೆ? ಎಂಬುದರ ಬಗ್ಗೆ ಮಾಹಿತಿ ಕೋರಲಾಗಿದೆ ಎಂದು ಹಿರಿಯ ಅಧಿಕಾರಿಗಳು ಹೇಳಿದ್ದರು.

ಕೋವಿಡ್ ಔಷಧ ದಾಸ್ತಾನು: ಗಂಭೀರ್ ಫೌಂಡೇಷನ್ ತಪ್ಪು ಸಾಬೀತು ಕೋವಿಡ್ ಔಷಧ ದಾಸ್ತಾನು: ಗಂಭೀರ್ ಫೌಂಡೇಷನ್ ತಪ್ಪು ಸಾಬೀತು

ಎರಡನೇ ಬಾರಿಗೆ ಜೀವ ಬೆದರಿಕೆ ಇ-ಮೇಲ್‌

ಮೊದಲ ಬಾರಿಗೆ ಬೆದರಿಕೆ ಇ-ಮೇಲ್‌ ಬಂದ ಬಳಿಕ ಗೌತಮ್‌ ಗಂಭೀರ್‌ಗೆ ಮತ್ತೆ ಎರಡನೇ ಬಾರಿಗೆ ಬೆದರಿಕೆ ಇಮೇಲ್‌ ಬಂದಿದ್ದವು. ಈ ಹಿನ್ನೆಲೆಯಿಂದಾಗಿ ''ತಮಗೆ ಎರಡನೇ ಬಾರಿ ಜೀವ ಬೆದರಿಕೆ ಕರೆ ಬಂದಿದ್ದು, ಸೂಕ್ತ ಭದ್ರತೆ ಒದಗಿಸಿ,'' ಎಂದು ಮಾಜಿ ಕ್ರಿಕೆಟಿಗ, ಸಂಸದ ಗೌತಮ್ ಗಂಭೀರ್ ಪೊಲೀಸರಿಗೆ ಮನವಿ ಮಾಡಿದ್ದರು. "ನನಗೆ ಹಾಗೂ ನನ್ನ ಕುಟುಂಬಕ್ಕೆ ಜೀವ ಬೆದರಿಕೆ ಇಮೇಲ್ ಬರುತ್ತಿವೆ. ಈ ವಿಷಯ ಸಂಬಂಧ ಎಫ್​ಐಆರ್ ದಾಖಲಿಸಿ ಕುಟುಂಬಕ್ಕೆ ಸೂಕ್ತ ಭದ್ರತೆ ನೀಡಿ," ಎಂದು ಗೌತಮ್‌ ಗಂಭೀರ್‌ ಪೊಲೀಸರಿಗೆ ಮನವಿ ಮಾಡಿದ್ದಾರೆ.

(ಒನ್‌ಇಂಡಿಯಾ ಸುದ್ದಿ)

English summary
Former Indian cricketer and Bharatiya Janta Party (BJP) MP Gautam Gambhir Gets Third Death Threat in a Week.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X