• search
  • Live TV
ನವದೆಹಲಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಸಬರ್ಬನ್ ರೈಲ್ವೆ ಯೋಜನೆ ಬಗ್ಗೆ ಸಂಸದ ಪಿ.ಸಿ. ಮೋಹನ್ ರಿಂದ ಮಹತ್ವ ಘೋಷಣೆ

|

ನವದೆಹಲಿ, ಅಕ್ಟೋಬರ್ 31: "ಸಬರ್ಬನ್ ರೈಲ್ವೆ ಯೋಜನೆ ಬೆಂಗಳೂರಿಗರ ಬಹುದಿನಗಳ ಕನಸು, ಅದೀಗ ನನಸಾಗುವ ಸಮಯ ಬರುತ್ತಿದೆ. ಇಂದು ರೈಲ್ವೆ ಸಚಿವರನ್ನು ಭೇಟಿ ಮಾಡಿ ಯೋಜನೆ ಬಗ್ಗೆ ಚರ್ಚಿಸಿದ್ದೇನೆ, ರೈಲ್ವೆ ಬೋರ್ಡ್ ಅಧ್ಯಕ್ಷರ ಜೊತೆಯೂ ಚರ್ಚೆ ಮಾಡಿದ್ದೇನೆ. ಈ ಸಂಬಂಧ ನವದೆಹಲಿಯಲ್ಲಿ ನವೆಂಬರ್ 4ರಂದು ರೈಲ್ವೆ Extend ಬೋರ್ಡ್ ಮಿಟಿಂಗ್ ಹಮ್ಮಿಕೊಳ್ಳಲಾಗಿದೆ. ಬಳಿಕ ರಾಜ್ಯರೈಲ್ವೆ ಖಾತೆ ಸಚಿವ ಸುರೇಶ್ ಅಂಗಡಿ ಮತ್ತು ರೈಲ್ವೇ ಬೋರ್ಡ್ ಛೇರ್ಮನ್ ಅವರುಗಳು ಮಂಗಳವಾರ ಬೆಂಗಳೂರಿಗೆ ಆಗಮಿಸಲಿದ್ದು, ಈ ಸಂಬಂಧ ರಾಜ್ಯ ಸರ್ಕಾರದೊಂದಿಗೆ ಚರ್ಚಿಸಲಿದ್ದಾರೆ" ಎಂದು ಸಂಸದ ಪಿಸಿ ಮೋಹನ್ ಇಂದು ಹೇಳಿದರು.

IRCTC: ಒಂದೇ ಐಡಿ ಬಳಸಿ 12 ಟಿಕೆಟ್ ಬುಕ್ ಮಾಡುವುದು ಹೇಗೆ?

ಮುಂಬರುವ ಸಂಸತ್ ಅಧಿವೇಶನದಲ್ಲಿ ಸಬರ್ಬನ್ ರೈಲ್ವೆ ಅನುಷ್ಠಾನ ಸಂಬಂಧ ರಾಜ್ಯದ ಸಂಸದರೆಲ್ಲಾ ಪ್ರಧಾನ ಮಂತ್ರಿ ಅವರನ್ನು ಭೇಟಿಯಾಗಿ ಚರ್ಚಿಸಲಿದ್ದೇವೆ‌, ಎರಡೂ ಸಭೆಗಳ ಬಳಿಕ ಯೋಜನೆಗೆ ಅಂತಿಮ ಸ್ವರೂಪ ಸಿಗಲಿದೆ. ಯೋಜನೆ ತ್ವರಿತವಾಗಿ ಚಾಲನೆಗೆ ಬರಬೇಕು ಎನ್ನುವುದು ನಮ್ಮ ಉದ್ದೇಶ, ಈಗಾಗಲೇ ಕೇಂದ್ರದ ಬಜೆಟ್ ನಲ್ಲಿ ಅನುಮೋದನೆ ಸಿಕ್ಕಿದೆ, ಬಜೆಟ್ ನಲ್ಲಿ 17 ಸಾವಿರ ಕೋಟಿ ರೂ. ನೀಡಲಾಗಿದೆ.

ಬೆಂಗಳೂರಿಗೆ ಮೆಟ್ರೋ ಜತೆಗೆ ಸಬ್ ಅರ್ಬನ್ ರೈಲು?

"ಈ ಹಿಂದಿನ ಡಿಪಿಅರ್ ನಲ್ಲಿ ಮೆಟ್ರೋವಿರುವ ಕಡೆ ಸಬರ್ಬನ್ ರೈಲು ಇರಬಾರದು, ಇದರಿಂದ ಮೆಟ್ರೋ ಆದಾಯ ಕಡಿಮೆ ಆಗುತ್ತದೆ ಎಂಬ ಈ ನೆಪ ಹೇಳಲಾಗಿತ್ತು. ರಾಜ್ಯದಲ್ಲಿ ಬಿಜೆಪಿ ಸರ್ಕಾರ ಬಂದ ಮೇಲೆ ರಿವೈಸ್ಡ್ ಡಿಪಿಆರ್ ಕಳುಹಿಸಿಕೊಡಲಾಗಿದೆ, ಬೆಂಗಳೂರಿಗೆ ಮಲ್ಟಿ ಮೋಡ್ ಟ್ರಾನ್ಸ್ ಪೋರ್ಟ್ ಬೇಕು, ಈ ಯೋಜನೆಯಿಂದ ಬೆಂಗಳೂರಿನ‌ ಹೊರಭಾಗದ ಜನರಿಗೂ ಅನುಕೂಲ ಆಗಲಿದೆ" ಎಂದು ಸಂಸದ ಪಿ.ಸಿ.ಮೋಹನ್ ತಿಳಿಸಿದರು. ಉಪನಗರ ರೈಲು ಯೋಜನೆ ಅನುಷ್ಠಾನಗೊಳಿಸುವ ಮೂಲಕ ಬೆಂಗಳೂರಿನ ನಾಗರಿಕರ ಹಲವಾರು ದಶಕಗಳ ಕನಸು ನನಸಾಗಲಿದೆ ಎಂದು ಪಿ.ಸಿ.ಮೋಹನ್ ಹೇಳಿದರು.

ಬೆಂಗಳೂರಿನ ನಾಗರಿಕರ ಅನುಕೂಲಕ್ಕಾಗಿ

ಬೆಂಗಳೂರಿನ ನಾಗರಿಕರ ಅನುಕೂಲಕ್ಕಾಗಿ

ಸಂಚಾರ ದಟ್ಟಣೆಯಿಂದ ಬಳಲುತ್ತಿರುವ ಬೆಂಗಳೂರಿನ ನಾಗರಿಕರ ಅನುಕೂಲಕ್ಕಾಗಿ ಉಪನಗರ (ಸಬರ್ಬನ್) ರೈಲು ಯೋಜನೆಯನ್ನು ಶೀಘ್ರದಲ್ಲಿ ಅನುಷ್ಠಾನಗೊಳಿಸುವಂತೆ ರೈಲ್ವೆಸಚಿವ ಪೀಯೂಶ್ ಗೋಯೆಲ್ ಮತ್ತು ರೈಲ್ವೆ ರಾಜ್ಯಸಚಿವ ಸುರೇಶ್ ಅಂಗಡಿಯವರನ್ನು ಬೆಂಗಳೂರು ಕೇಂದ್ರ ಲೋಕಸಭಾ ಸದಸ್ಯ ಪಿ.ಸಿ.ಮೋಹನ್ ಇಂದು ನವದೆಹಲಿಯಲ್ಲಿ ಭೇಟಿ ಮಾಡಿ ಒತ್ತಾಯಿಸಿದ್ದಾರೆ. ಇದಕ್ಕೆ ಸ್ಪಂದಿಸಿರುವ ರೈಲ್ವೆ ಸಚಿವರು, ಯೋಜನೆ ಅನುಷ್ಠಾನ ನಿಟ್ಟಿನಲ್ಲಿ ಎಲ್ಲ ಅಗತ್ಯ ಸಹಕಾರ, ನೆರವು ಮತ್ತು ಅನುಮೋದನೆಗಳನ್ನು ಆದಷ್ಟು ಶೀಘ್ರದಲ್ಲಿ ಒದಗಿಸುವುದಾಗಿ ಭರವಸೆ ನೀಡಿದ್ದಾರೆ.

ಯೋಜನೆ ಅನುಷ್ಠಾನದಲ್ಲಿ ಆಗುತ್ತಿರುವ ವಿಳಂಬ

ಯೋಜನೆ ಅನುಷ್ಠಾನದಲ್ಲಿ ಆಗುತ್ತಿರುವ ವಿಳಂಬ

ಈ ಕುರಿತು ಸಚಿವ ಸುರೇಶ್ ಅಂಗಡಿಯವರಿಗೆ ಬರೆದ ಪತ್ರದಲ್ಲಿ ಮೋಹನ್ ಅವರು, ಸಂಚಾರ ದಟ್ಟಣೆಯಿಂದ ನಲುಗುತ್ತಿರುವ ಬೆಂಗಳೂರು ನಗರಕ್ಕೆ ಉಪನಗರ ರೈಲು ಯೋಜನೆಯಂತಹ ಸಮರ್ಪಕ ಸಾರ್ವಜನಿಕ ಸಾರಿಗೆ ವ್ಯವಸ್ಥೆ ಅತ್ಯಗತ್ಯವಾಗಿದ್ದು, ಆಡಳಿತಾತ್ಮಕ ಕಾರಣಗಳಿಂದ ಯೋಜನೆ ಅನುಷ್ಠಾನದಲ್ಲಿ ಆಗುತ್ತಿರುವ ವಿಳಂಬದಿಂದಾಗಿ ಬೆಂಗಳೂರಿನ ನಾಗರಿಕರು ನಿತ್ಯ ತೊಂದರೆ ಅನುಭವಿಸುವಂತಾಗಿದೆ ಎಂದಿದ್ದಾರೆ. ಸಿಲಿಕಾನ್ ಸಿಟಿ ಎಂದು ಜಾಗತಿಕವಾಗಿ ಖ್ಯಾತಿ ಪಡೆದಿರುವ ಬೆಂಗಳೂರಿಗೆ ಉಪನಗರ ರೈಲು ಯೋಜನೆಯಂತಹ ಸಾರಿಗೆ ವ್ಯವಸ್ಥೆ ಅನಿವಾರ್ಯವಾಗಿದೆ. ಬ್ರ್ಯಾಂಡ್ ಬೆಂಗಳೂರಿನ ಖ್ಯಾತಿಗೆ ತಕ್ಕಂತೆ ಸಂಚಾರ ವ್ಯವಸ್ಥೆ ರೂಪಿಸುವ ನಿಟ್ಟಿನಲ್ಲಿ ಉಪನಗರ ರೈಲು ಯೋಜನೆ ಮಹತ್ವದ್ದಾಗಿದೆ ಎಂದು ರೈಲ್ವೆ ಸಚಿವರಿಗೆ ಬರೆದ ಪತ್ರದಲ್ಲಿ ಮೋಹನ್ ಹೇಳಿದ್ದಾರೆ.

ಮೋದಿ ಸರ್ಕಾರದಿಂದ ಸೂಕ್ತ ಸ್ಪಂದನೆ

ಮೋದಿ ಸರ್ಕಾರದಿಂದ ಸೂಕ್ತ ಸ್ಪಂದನೆ

ಉಪನಗರ ರೈಲು ಯೋಜನೆಗಾಗಿ ದಿ. ಅನಂತಕುಮಾರ್, ಹಾಲಿ ಕೇಂದ್ರ ಸಚಿವ ಡಿ.ವಿ.ಸದಾನಂದಗೌಡರು ಮತ್ತು ತಾವು ನಡೆಸಿದ ಹಲವಾರು ವರ್ಷಗಳ ನಿರಂತರ ಪ್ರಯತ್ನಗಳನ್ನು ಉಲ್ಲೇಖಿಸಿರುವ ಪಿ.ಸಿ.ಮೋಹನ್, ಇದೆಲ್ಲದರ ಫಲವಾಗಿ ಕೇಂದ್ರ ಹಾಗು ರಾಜ್ಯಸರ್ಕಾರಗಳು ಯೋಜನೆ ಜಾರಿಗಾಗಿ ಒಂದು ನೆಲೆಯಲ್ಲಿ ನಿಂತು, ನಂತರ ಕೇಂದ್ರ ಕೇಂದ್ರದ ನರೇಂದ್ರಮೋದಿ ಸರ್ಕಾರ ಕೂಡ ಈ ನಿಟ್ಟಿನಲ್ಲಿ ಪೂರಕವಾಗಿ ಸ್ಪಂದಿಸಿ, ಬಜೆಟ್ಟಿನಲ್ಲಿ ಯೋಜನೆಗೆ ಹಣ ಮೀಸಲಿಡುವಂತಾಯಿತು ಎಂದು ತಿಳಿಸಿದ್ದಾರೆ. ಪರಿಷ್ಕೃತ ಯೋಜನಾ ವರದಿಗೆ ಅನುಮೋದನೆ ನೀಡುವುದೂ ಸೇರಿದಂತೆ ರಾಜ್ಯಸರ್ಕಾರದ ವಿಶೇಷ ಉದ್ದೇಶಿತ ವಾಹಕದ (SPV) ಮೂಲಕ ಆದಷ್ಟು ಶೀಘ್ರದಲ್ಲಿ ಯೋಜನೆ ಅನುಷ್ಠಾನ ಪ್ರಾರಂಭವಾಗಬೇಕು ಎಂದು ಪಿ.ಸಿ.ಮೋಹನ್ ಮನವಿ ಮಾಡಿಕೊಂಡಿದ್ದಾರೆ.

ಶೇ.40ರಷ್ಟು ಸಂಚಾರ ಸುಗಮವಾಗುತ್ತದೆ

ಶೇ.40ರಷ್ಟು ಸಂಚಾರ ಸುಗಮವಾಗುತ್ತದೆ

160 ಕಿಮೀ ಉದ್ದದ ಈ ಯೋಜನೆಯಲ್ಲಿ 83 ನಿಲ್ದಾಣಗಳಿರಲಿದ್ದು 12 ಕಡೆ ಮೆಟ್ರೊ ಮಾರ್ಗಕ್ಕೆ ಅಡ್ಡವಾಗಿ ಹಾದುಹೋಗಲಿದೆ. ಉಪನಗರ ರೈಲು ದಿನಕ್ಕೆ 30 ಲಕ್ಷಕ್ಕೂ ಹೆಚ್ಚು ಪ್ರಯಾಣಿಕರನ್ನು ಸಾಗಿಸುವ ಸಾಮರ್ಥ್ಯವಿದ್ದು, ಬೆಂಗಳೂರು ಹಾಗು ಸುತ್ತಮುತ್ತಲಿನ ಪ್ರದೇಶಗಳ ಸಾರಿಗೆ ವ್ಯವಸ್ಥೆಯನ್ನೇ ಪರಿವರ್ತಿಸಲಿದೆ. ಸಬ್ ಅರ್ಬನ್ ರೈಲು ಯೋಜನೆಗೆ ಬೇರೆ ರೈಲು ಹಳಿಗಳ ನಿರ್ಮಾಣದ ಅಗತ್ಯವಿಲ್ಲ. ಇರುವ ನಿಲ್ದಾಣಗಳಿಗೆ ಮೂಲಸೌಕರ್ಯಗಳನ್ನು ಒದಗಿಸಿದರೆ ಹೆಚ್ಚು ಅನುಕೂಲವಾಗುತ್ತದೆ. ಲೋಕಲ್ ಟ್ರೈನ್ ಸಂಚಾರ ಆರಂಭವಾದರೆ ಶೇ.40ರಷ್ಟು ಸಂಚಾರ ಸುಗಮವಾಗುತ್ತದೆ.

ಬೆಂಗಳೂರಿಗೆ ಮೆಟ್ರೋ ಜತೆಗೆ ಸಬ್ ಅರ್ಬನ್ ರೈಲು?

ಈ ಯೋಜನೆಯ ಅನುಷ್ಠಾನಕ್ಕಾಗಿ ರೈಲ್ವೆ ಸಚಿವ ಪಿಯೂಶ್ ಗೋಯೆಲ್ ಅವರು ಅಗತ್ಯ ಅನುದಾನ ಬಿಡುಗಡೆ ಮಾಡಿದ್ದಲ್ಲದೆ, ಹೆಚ್ಚಿನ ಆಸಕ್ತಿ ವಹಿಸಿ, ಎಲ್ಲಾ ಅನುಮೋದನೆಗಳನ್ನು ನೀಡಿ, ಯೋಜನೆ ಅನುಷ್ಠಾನವಾಗುವ ನಿಟ್ಟಿನಲ್ಲಿ ಅತ್ಯಂತ ಕಾಳಜಿ ವಹಿಸಿದ್ದಕ್ಕಾಗಿ ಅವರಿಗೆ ವಿಶೇಷವಾಗಿ ನನ್ನ ಕೃತಜ್ಞತೆಗಳನ್ನು ಸಲ್ಲಿಸುತ್ತೇನೆ.

English summary
BJP lawmaker PC Mohan on Thursday met Railway Minister Piyush Goyal and sought early approval of the long-pending Rs 17,000 crore suburban rail project for Bengaluru city.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more
X