• search
  • Live TV
ನವದೆಹಲಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಅಸಾದುದ್ದೀನ್ ಓವೈಸಿಯನ್ನು 'ವೈರಸ್' ಎಂದು ಉದ್ಗರಿಸಿದ ಬಿಜೆಪಿ ಮುಖಂಡ

|
Google Oneindia Kannada News

ನವದೆಹಲಿ, ಸೆಪ್ಟೆಂಬರ್ 11: ಎಐಎಂಐಎಂ ಮುಖಂಡ ಅಸಾದುದ್ದೀನ್ ಓವೈಸಿಯನ್ನು ಬಿಜೆಪಿ ಮುಖಂಡರೊಬ್ಬರು 'ವೈರಸ್' ಎಂದು ಉದ್ಗರಿಸಿರುವ ಘಟನೆ ನಡೆದಿದೆ.

ಬಿಜೆಪಿ ರಾಷ್ಟ್ರೀಯ ಉಪಾಧ್ಯಕ್ಷ ರಾಧಾ ಮೋಹನ್ ಸಿಂಗ್ ಅವರು ಎಐಎಂಐಎಂ ಮುಖ್ಯಸ್ಥ ಅಸಾದುದ್ದೀನ್ ಓವೈಸಿಯವರನ್ನು ವೈರಸ್ ಎಂದು ಕರೆದು ವಿವಾದ ಸೃಷ್ಟಿಸಿಕೊಂಡಿದ್ದಾರೆ.

ಮೊದಲು ಭಾರತದಲ್ಲಿನ ಅಲ್ಪಸಂಖ್ಯಾತರ ಬಗ್ಗೆ ಯೋಚಿಸಿ; ಓವೈಸಿ ಮೊದಲು ಭಾರತದಲ್ಲಿನ ಅಲ್ಪಸಂಖ್ಯಾತರ ಬಗ್ಗೆ ಯೋಚಿಸಿ; ಓವೈಸಿ

ಮೈನಾರಿಟಿ ಮೋರ್ಚಾ ಕಾರ್ಯಕ್ರಮವೊಂದರಲ್ಲಿ ಪಾಲ್ಗೊಂಡಿದ್ದ ಸಿಂಗ್ ಅವರು ವೈರಸ್‌ನ್ನು ನಿರ್ಣಾಮಗೊಳಿಸಲು ಮೈನಾರಿಟಿ ಮೋರ್ಚವೇ ದೊಡ್ಡ ಲಸಿಕೆ ಎಂದರು. ಓವೈಸಿ ವಿರುದ್ಧ ವಾಗ್ದಾಳಿ ನಡೆಸಿದರು. ಮಧ್ಯಪ್ರದೇಶದ ಬಿಜೆಪಿ ನಾಯಕ ವಿಶ್ವಾಸ್ ಸಾರಂಗ್ ಅವರು ಶುಕ್ರವಾರ ಓವೈಸಿ ವಿರುದ್ಧ ವಾಗ್ದಾಳಿ ನಡೆಸಿ ಮೊಹಮ್ಮದ್ಅಲಿ ಜಿನ್ನಾರಂತೆ ಆಗಬೇಡಿ ಎಂದು ಹೇಳಿದ್ದರು.

ಈ ವಾರದ ಆರಂಭದಲ್ಲಿ ಓವೈಸಿ ಉತ್ತರ ಪ್ರದೇಶಕ್ಕೆ ಮೂರು ದಿನಗಳ ಭೇಟಿಗೆಂದು ಬಂದಿದ್ದರು. ಎಐಎಂಐಎಂ ರಾಜ್ಯದಲ್ಲಿ 100 ಸ್ಥಾನಗಳಲ್ಲಿ ಸ್ಪರ್ಧಿಸಲು ಯೋಜಿಸಿದೆ ಮತ್ತು ಬಿಹಾರ ಸೂತ್ರವನ್ನು ಚುನಾವಣೆಯಲ್ಲಿ ಅನ್ವಯಿಸುವ ಸಾಧ್ಯತೆ ಇದೆ.

ಉತ್ತರ ಪ್ರದೇಶ ಚುನಾವಣೆಯು 2022ರಲ್ಲಿ ನಡೆಯಲಿದೆ. ಉತ್ತರ ಪ್ರದೇಶ ವಿಧಾನಸಭೆಯಲ್ಲಿ 403 ಮಂದಿ ಸದಸ್ಯರಿದ್ದಾರೆ. ಪ್ರಮುಖ ಪ್ರಕ್ಷಗಳಲ್ಲಿ ಬಿಜೆಪಿ 309, ಸಮಾಜವಾದಿ ಪಕ್ಷ 49, ಬಿಎಸ್‌ಪಿ 18 ಕಾಂಗ್ರೆಸ್ 7 ಮಂದಿ ಇದ್ದಾರೆ.

ಪಕ್ಷದ ಕಾರ್ಯಕ್ರಮಕ್ಕಾಗಿ ಅಯೋಧ್ಯೆ ಜಿಲ್ಲೆಗೆ ಹೋಗುವ ಮೊದಲು, ಸೆಪ್ಟೆಂಬರ್ 7 ರಂದು, ಲಕ್ನೋದಲ್ಲಿ ಪತ್ರಕರ್ತರೊಂದಿಗಿನ ಸಂವಾದ ನಡೆಸಿದ್ದರು. ಈ ವೇಳೆ ಓವೈಸಿ ಅವರು ಪಕ್ಷ ಇತ್ತೀಚಿನವರೆಗೂ ಸಾಂಸ್ಥಿಕ ನೆಲೆ ಹೊಂದಿಲ್ಲ ಎಂಬುದನ್ನು ಒಪ್ಪಿಕೊಳ್ಳಲಿಲ್ಲ.

ಆದಾಗ್ಯೂ, 2017 ರಿಂದ ತಮ್ಮ ಪಕ್ಷವು 38 ಕ್ಷೇತ್ರಗಳಲ್ಲಿ ಸ್ಪರ್ಧಿಸಿ 34 ರಲ್ಲಿ ಠೇವಣಿ ಕಳೆದುಕೊಂಡ ನಂತರ ಅವರ ಪಕ್ಷವು ಮುನ್ನಡೆದಿದೆ ಎಂದು ಅವರು ಹೇಳಿದರು. ಇವುಗಳಲ್ಲಿ ಹೆಚ್ಚಿನ ಕ್ಷೇತ್ರಗಳು ಮುಸ್ಲಿಮರ ಗಣನೀಯ ಸಂಖ್ಯೆಯನ್ನು ಹೊಂದಿದ್ದವು.

ಮುಂದಿನ ವರ್ಷದ ಆರಂಭದಲ್ಲಿ ಉತ್ತರಪ್ರದೇಶ ವಿಧಾನಸಭೆಗೆ ಚುನಾವಣೆ ನಡೆಯಲಿದೆ. ಈ ಚುನಾವಣೆಯಲ್ಲಿ AIMIM ಈಗ 100 ಕ್ಕಿಂತ ಕಡಿಮೆ ಕ್ಷೇತ್ರಗಳಲ್ಲಿ ಸ್ಪರ್ಧಿಸಲು ಉದ್ದೇಶಿಸಿದೆ. ಭಗಿದರಿ ಸಂಕಲ್ಪ ಮೋರ್ಚಾವನ್ನು ಒಟ್ಟುಗೂಡಿಸುವ ಕೆಲವು ಇತರ ಸಣ್ಣ ಜಾತಿ ಆಧಾರಿತ ಪಕ್ಷಗಳೊಂದಿಗಿನ ಮೈತ್ರಿಯ ಬಗ್ಗೆಯೂ ಒವೈಸಿ ಒಲವು ಹೊಂದಿದ್ದಾರೆ. "ಭೂತಕಾಲವು ನಮ್ಮ ಹಿಂದೆ ಇದೆ.

2022 ರ ಚುನಾವಣೆಯಲ್ಲಿ ನಮ್ಮ ಪಕ್ಷವು ರಾಜ್ಯದಲ್ಲಿ ತನ್ನ ಅಸ್ತಿತ್ವವನ್ನು ತೋರಿಸುತ್ತದೆ," ಎಂದು ಅವರು ಹೇಳಿದರು." ಸಮಾಜವಾದಿ ಪಾರ್ಟಿ ಮತ್ತು ಬಿಎಸ್‌ಪಿಯಂತಹ ಪಕ್ಷಗಳಿಂದ ಅಲ್ಪಸಂಖ್ಯಾತರು ವಂಚನೆಗೊಳಗಾಗಿದ್ದಾರೆ. ಅಖಿಲೇಶ್ ಯಾದವ್ ಮತ್ತು ಮಾಯಾವತಿ ಬಿಜೆಪಿ ಬೆದರಿಕೆಯ ಹೆಸರೇಳಿಕೊಂಡು ಮುಸ್ಲಿಮರ ಮತಗಳನ್ನು ಪಡೆಯುತ್ತಾರೆ. ಆದರೆ ಎಂದಿಗೂ ಅವರ ಸಮಸ್ಯೆಗಳಿಗೆ ಪರಿಹಾರವಾಗಿ ಇದುವರೆಗೂ ನಿಂತಿಲ್ಲ ಎಂದು ಆರೋಪಿಸಿದರು.

ಪ್ರಸ್ತುತ ಸನ್ನಿವೇಶದಲ್ಲಿ, ಎಐಎಂಐಎಂನ ರಾಜಕೀಯಕ್ಕೆ ಉತ್ತರಪ್ರದೇಶ ಫಲವತ್ತಾದ ನೆಲವಾಗಿರಬೇಕು. ಪಶ್ಚಿಮ ಬಂಗಾಳಕ್ಕೆ ಹೋಲಿಸಿದರೆ, ಇಲ್ಲಿನ ಮುಸ್ಲಿಮರು ಒಂದು ಸಣ್ಣ ಶೇಕಡಾವಾರು ಮತದಾನದ ಗುಂಪನ್ನು ಹೊಂದಿದ್ದಾರೆ.

ಆದರೆ ದೇಶದಾದ್ಯಂತ ಜನಸಂಖ್ಯೆಯ ದೃಷ್ಟಿಯಿಂದ ಇದು ಅತಿ ದೊಡ್ಡದಾಗಿದೆ. ಮುಸ್ಲಿಮರು ಹಲವಾರು ಕ್ಷೇತ್ರಗಳಲ್ಲಿ, ವಿಶೇಷವಾಗಿ ಪಶ್ಚಿಮ ಯುಪಿ ಮತ್ತು ರೋಹಿಲ್‌ಖಂಡ್‌ನ ಪ್ರದೇಶಗಳಲ್ಲಿ, ಮೀರತ್, ಶಾಮ್ಲಿ, ಮುಜಾಫರ್ ನಗರ, ಅಲಿಘರ್, ಮೊರಾದಾಬಾದ್, ಬಿಜ್ನೋರ್ ಮತ್ತು ಬರೇಲಿಯಂತಹ ಜಿಲ್ಲೆಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಇದ್ದಾರೆ.

ಸೈದ್ಧಾಂತಿಕವಾಗಿ ಹೇಳುವುದಾದರೆ, ಎಐಎಂಐಎಂಗೆ ಹೆಚ್ಚಿನ ಲಾಭ ಪಡೆಯಲು ದೊಡ್ಡ ಪ್ರಮಾಣದ ಅವಕಾಶಗಳು ಇಲ್ಲಿ ಹೇರಳವಾಗಿದೆ. ಆದರೆ, ಪ್ರಾಯೋಗಿಕವಾಗಿ, ಇದು ನಿರೀಕ್ಷೆಯಂತೆ ಆಗಲಿಲ್ಲ.

ಕನಿಷ್ಠ 2017 ರ ವಿಧಾನಸಭೆ ಸ್ಪರ್ಧೆಯಲ್ಲಿ ಎಐಎಂಐಎಂ ತಾನು ಸ್ಪರ್ಧಿಸಿದ ಎಲ್ಲಾ 38 ಕ್ಷೇತ್ರಗಳ ಮೇಲೆ ಪಡೆದ ಒಟ್ಟು ಮತಗಳು ಸುಮಾರು 2 ಲಕ್ಷ. ಪಕ್ಷವು 34 ಕ್ಷೇತ್ರಗಳಲ್ಲಿ ತನ್ನ ಠೇವಣಿ ಸಹ ಕಳೆದುಕೊಂಡಿತು. 38 ಕ್ಷೇತ್ರಗಳಲ್ಲಿ 22 ಕ್ಷೇತ್ರಗಳು ಬಿಜೆಪಿ ಪಾಲಾದರೆ, 15 ಕ್ಷೇತ್ರಗಳು ಸಮಾಜವಾದಿ ಪಕ್ಷಕ್ಕೆ ಮತ್ತು ಒಂದು ಬಿಜೆಪಿ ಮಿತ್ರ ಪಕ್ಷ ಅಪ್ನಾ ದಳದ ಪಾಲಾದವು.

English summary
BJP national vice president Radha Mohan Singh called AIMIM chief Asaduddin Owaisi a “virus” and said that the party’s minority morcha is the vaccine that can prevent its spread.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X