ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನರೇಂದ್ರ ಮೋದಿ ಸಭೆಗೆ ಕಾಂಗ್ರೆಸ್ ಸಿಎಂಗೆ ಆಹ್ವಾನ

|
Google Oneindia Kannada News

ನವದೆಹಲಿ, ಸೆ 28: ಅನಿರೀಕ್ಷಿತ ನಡೆಯೊಂದರಲ್ಲಿ ಭಾನುವಾರ (ಸೆ 29) ರಾಜಧಾನಿಯಲ್ಲಿ ನಡೆಯಲಿರುವ ಬೃಹತ್ ಸಾರ್ವಜನಿಕ ಸಭೆಗೆ ಬಿಜೆಪಿ, ದೆಹಲಿ ಕಾಂಗ್ರೆಸ್ ಮುಖ್ಯಮಂತ್ರಿ ಶೀಲಾ ದೀಕ್ಷಿತ್ ಅವರಿಗೆ ಆಹ್ವಾನ ನೀಡಿದೆ.

ಬೆಲೆ ಏರಿಕೆ, ಅತ್ಯಾಚಾರ ಪ್ರಕರಣಗಳು, ಭ್ರಷ್ಟಾಚಾರ, ರೂಪಾಯಿ ಅಪಮೌಲ್ಯ ಮುಂತಾದ ಗಂಭೀರ ವಿಚಾರದ ಬಗ್ಗೆ ಜನರು ಕಾಂಗ್ರೆಸ್ ಬಗ್ಗೆ ಮತ್ತು ನಿಮ್ಮ ಸರಕಾರದ ಬಗ್ಗೆ ಏನೆನ್ನುತ್ತಾರೆಂದು ಕೇಳಲು ನೀವು ಈ ಸಾರ್ವಜನಿಕ ಸಭೆಗೆ ಬರ ಬೇಕೆಂದು ಬಿಜೆಪಿ ಮುಖ್ಯಮಂತ್ರಿ ಶೀಲಾ ದೀಕ್ಷಿತ್ ಅವರಿಗೆ ಸವಾಲೆಸೆದಿದೆ.

ಭಾನುವಾರ ಬಿಜೆಪಿಯ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ ಭಾಗವಹಿಸುವ ಐತಿಹಾಸಿಕ ಸಭೆಗೆ ದೆಹಲಿ ಮುಖ್ಯಮಂತ್ರಿಗೆ ಅಧಿಕೃತ ಆಹ್ವಾನ ಕಳುಹಿಸಲಾಗಿದೆ ಎಂದು ಹಿರಿಯ ಬಿಜೆಪಿ ಮುಖಂಡ ವಿಜೇಂದರ್ ಗುಪ್ತಾ ಹೇಳಿದ್ದಾರೆ.

ರಾಜಧಾನಿ ಸೇರಿದಂತೆ ಎಲ್ಲಡೆ ನರೇಂದ್ರ ಮೋದಿ ಪರ ಗಾಳಿ ಬೀಸುತ್ತಿದೆ. ಈ ಸಾರ್ವಜನಿಕ ಸಭೆಯ ಮೂಲಕ ದೆಹಲಿ ಜನತೆಯ ಪ್ರೀತಿ, ವಿಶ್ವಾಸವನ್ನು ಗಳಿಸುತ್ತೇವೆ ಎಂದು ಗುಪ್ತಾ ಹೇಳಿದ್ದಾರೆ.

ನಾಳೆ ನಡೆಯಲಿರುವ ನರೇಂದ್ರ ಮೋದಿ ಸಭೆಗೆ ದೆಹಲಿ ಪೋಲೀಸರು, ಮೆಟ್ರೋ ಸರ್ವ ಸನ್ನದ್ದವಾಗಿದೆ. ಈ ಸಾರ್ವಜನಿಕ ಸಭೆಯಲ್ಲಿ ಸುಮಾರು ಐದು ಲಕ್ಷ ಜನ ಭಾಗವಹಿಸುವ ನಿರೀಕ್ಷೆಯನ್ನು ಬಿಜೆಪಿ ಹೊಂದಿದೆ.

ಪ್ಪ್ರಧಾನಿ ಅಭ್ಯರ್ಥಿ ಎಂದು ಘೋಷಣೆಯಾದ ನಂತರ ಇದೇ ಮೊದಲ ಬಾರಿಗೆ ರಾಜಧಾನಿಯ ಸಭೆಯಲ್ಲಿ ಭಾಗವಹಿಸಲಿರುವ ಮೋದಿ, ನೇರವಾಗಿ ಹೆಲಿಕಾಪ್ಟರ್ ಮೂಲಕ ಸಾರ್ವಜನಿಕ ಸಭೆ ನಡೆಯುವ ನಗರದ ರೋಹಿಣಿಯಲ್ಲಿರುವ ಜಪಾನೀಸ್ ಪಾರ್ಕಿನಲ್ಲಿ ಇಳಿಯಲಿದ್ದಾರೆ. ಈ ಸಾರ್ವಜನಿಕ ಸಭೆ ನಾಳೆ ಬೆಳಗ್ಗೆ ಹತ್ತು ಗಂಟೆಗೆ ಆರಂಭವಾಗಲಿದೆ.

ಜಪಾನೀಸ್ ಪಾರ್ಕ್, ರೋಹಿಣಿ: ಸುಮಾರು ಮೂವತ್ತು ವರ್ಷದ ಹಿಂದೆ ವಾಯುವ್ಯ ದೆಹಲಿಯಲ್ಲಿ ನಿರ್ಮಾಣವಾಗಿರುವ ಸುಸಜ್ಜಿತ ಬಡಾವಣೆಯ ಪ್ರದೇಶ . ಇದು ದ್ವಾರಕಾ ನಂತರ ಏಷ್ಯಾದ ಎರಡನೇ ಅತಿದೊಡ್ಡ ಬಡಾವಣೆ. ಇಲ್ಲಿರುವ ಜಪಾನೀಸ್ ಪಾರ್ಕ್ ಅಥವಾ ಸ್ವರ್ಣ ಜಯಂತಿ ಪಾರ್ಕ್ ದೆಹಲಿಯ ಅತಿ ದೊಡ್ಡ ಪಾರ್ಕ್. ಈ ಪಾರ್ಕಿನಲ್ಲಿ ಐದು ಕೊಳಗಳಿದ್ದು, ಪೊಗೋ ಚಾನೆಲ್ ಇಲ್ಲಿ ಕಾರ್ಯ ನಿರ್ವಹಿಸಲಿದೆ.

ನಾಳೆಯ ಸಭೆಗೆ ಬಿಜೆಪಿ ಹಿರಿಯ ನಾಯಕರಾದ ಎಲ್ ಕೆ ಆಡ್ವಾಣಿ ಮತ್ತು ಸುಷ್ಮಾ ಸ್ವರಾಜ್ ಭಾಗವಹಿಸುತ್ತಿಲ್ಲ ಎನ್ನಲಾಗುತ್ತಿದೆ.

ಭಾನುವಾರ ನಡೆಯಲಿರುವ ಮೋದಿ ಸಾರ್ವಜನಿಕ ಸಭೆಯ ವಿಶೇಷತೆಗಳು.. ಸ್ಲೈಡಿನಲ್ಲಿ

ಎಲ್ ಸಿ ಡಿ ಸ್ಕ್ರೀನ್

ಎಲ್ ಸಿ ಡಿ ಸ್ಕ್ರೀನ್

ಮೋದಿ ಸಾರ್ವಜನಿಕ ಸಭೆಯನ್ನು ದೆಹಲಿ ಜನತೆ ಸುಲಭವಾಗಿ ವೀಕ್ಷಿಸುವಂತಾಗಲು ದೆಹಲಿ ಬಿಜೆಪಿ ಘಟಕ ಮಹಾನಗರದ ವಿವಿಧ ಭಾಗಗಳಲ್ಲಿ ಸುಮಾರು ನೂರು ಎಲ್ ಸಿ ಡಿ ಸ್ಕ್ರೀನ್ ಹಾಕಿ ನೇರ ಪ್ರಸಾರ ನೀಡಲಿದೆ.

ಅಮೆರಿಕಾ ಹೈಕಮಿಷನರ್

ಅಮೆರಿಕಾ ಹೈಕಮಿಷನರ್

ನರೇಂದ್ರ ಮೋದಿಗೆ ಅಮೆರಿಕಾ ವೀಸಾ ನಿರಾಕರಿಸಿದರೂ ಬಿಜೆಪಿ, ಭಾರತದಲ್ಲಿರುವ ಅಮೆರಿಕಾದ ಹೈಕಮಿಷನರ್ ಅವರನ್ನು ನಾಳೆಯ ಸಭೆಯಲ್ಲಿ ಭಾಗವಹಿಸುವಂತೆ ಆಹ್ವಾನಿಸಿದೆ.

ವಿದೇಶಿ ರಾಯಭಾರಿಗಳು

ವಿದೇಶಿ ರಾಯಭಾರಿಗಳು

ವಿಡಿಯೋ ಕಾನ್ಫರೆನ್ಸ್ ಮೂಲಕ ಈಗಾಗಲೇ ಅಮೆರಿಕಾ ಮತ್ತು ಬ್ರಿಟನ್ ಅನಿವಾಸಿ ಭಾರತೀಯರ ಜೊತೆ ಸಂವಾದ ನಡೆಸಿರುವ ಮೋದಿ, ನಾಳೆಯ ಸಭೆಗೆ ಭಾರತದಲ್ಲಿರುವ ವಿವಿಧ ದೇಶದ ರಾಯಭಾರಿಗಳಿಗೆ ಸಭೆಯಲ್ಲಿ ಭಾಗವಹಿಸಿಲು ಕೇಳಿಕೊಂಡಿದೆ.

ವಿವಿಧ ಸಂಘಟನೆಗಳು

ವಿವಿಧ ಸಂಘಟನೆಗಳು

ಸಭೆಯಲ್ಲಿ ಭಾಗವಹಿಸಲು ವಿವಿಧ ಸಂಘಟನೆಗಳು ಒಲವು ತೋರಿದ ಹಿನ್ನಲೆಯಲ್ಲಿ ಬಿಜೆಪಿ ಎಲ್ಲಾ ಸಂಘಟನೆಗಳಿಗೂ ಪ್ರತ್ಯೇಕ ಪ್ರತ್ಯೇಕವಾಗಿ ಆಹ್ವಾನಿಸಿದೆ. ಕಾರ್ಪೋರೇಟ್ ಕ್ಷೇತ್ರದವರೂ ಸೇರಿ ಸುಮಾರು ಹತ್ತು ಸಾವಿರಕ್ಕೂ ಹೆಚ್ಚು ವಿಐಪಿಗಳು ನಾಳಿನ ಸಭೆಯಲ್ಲಿ ಭಾಗವಹಿಸಲಿದ್ದಾರೆ.

ಮೆಟ್ರೋ ವಿಶೇಷ ಸರ್ವಿಸ್

ಮೆಟ್ರೋ ವಿಶೇಷ ಸರ್ವಿಸ್

ರಜಾದಿನವಾದ ಭಾನುವಾರದಂದು ಪೂರ್ಣ ಪ್ರಮಾಣದ ಸೇವೆ ಇರದ ದೆಹಲಿ ಮೆಟ್ರೋ ಸರ್ವಿಸ್ ನಾಳಿನ ಸಭೆಗೆ ವಿಶೇಷ ವ್ಯವಸ್ಥೆ ಮಾಡಲು ಒಪ್ಪಿಕೊಂಡಿದೆ. ಸುಮಾರು ಐವತ್ತು ಸಾವಿರ ಜನ ಮೆಟ್ರೋ ಮೂಲಕ ಸಭೆಗೆ ಬರುವ ನಿರೀಕ್ಷೆ ಇರುವುದರಿಂದ ಮೆಟ್ರೋ ಇಪ್ಪತ್ತು ವಿಶೇಷ ರೈಲು ಓಡಿಸಲಿದೆ.

English summary
In an unusual move Delhi BJP unit invites Delhi Congress Chief Minister Sheila Dikshit to attend Narendra Modi public rally scheduled tomorrow, Sep 29.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X