ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸಾರ್ವಜನಿಕವಾಗಿ ನೇಣು ಹಾಕಿಕೊಳ್ಳುತ್ತೇನೆ: ಕೇಜ್ರಿವಾಲ್‌ಗೆ ಗಂಭೀರ್ ಸವಾಲು

|
Google Oneindia Kannada News

ನವದೆಹಲಿ, ಮೇ 10: ತಮ್ಮ ಪ್ರತಿಸ್ಪರ್ಧಿ ಅಭ್ಯರ್ಥಿ ಎಎಪಿಯ ಅತಿಶಿ ಅವರ ವಿರುದ್ದ ಅವಹೇಳನಾಕಾರಿ ಕರಪತ್ರ ಹಂಚಿರುವ ಆರೋಪ ಎದುರಿಸುತ್ತಿರುವ ಬಿಜೆಪಿಯ ಗೌತಮ್ ಗಂಭೀರ್, ಆರೋಪವನ್ನು ಸಾಬೀತುಪಡಿಸಿದರೆ ಸಾರ್ವಜನಿಕವಾಗಿ ನೇಣು ಹಾಕಿಕೊಳ್ಳುವುದಾಗಿ ಎಎಪಿಗೆ ಸವಾಲು ಹಾಕಿದ್ದಾರೆ.

ಪೂರ್ವ ದೆಹಲಿ ಕ್ಷೇತ್ರದ ಎಎಪಿ ಅಭ್ಯರ್ಥಿ ಅತಿಶಿ ಅವರು, ಗಂಭೀರ್ ತಮ್ಮ ವಿರುದ್ಧ ಅಶ್ಲೀಲ ಬರಹವುಳ್ಳ ಕರಪತ್ರವನ್ನು ಹಂಚುತ್ತಿದ್ದಾರೆ ಎಂದು ಆರೋಪಿಸಿದ್ದರು.

ಲೋಕಸಭಾ ಚುನಾವಣೆ 2019 | ವಿಶೇಷ ಪುಟ | ಗ್ಯಾಲರಿ

ಇದಕ್ಕೆ ಗುರುವಾರ ಟ್ವಿಟ್ಟರ್‌ನಲ್ಲಿ ಪ್ರತಿಕ್ರಿಯೆ ನೀಡಿದ್ದ ಗಂಭೀರ್, ಆರೋಪವನ್ನು ಸಾಬೀತುಪಡಿಸುವಂತೆ ಸವಾಲು ಹಾಕಿದ್ದರು. ಅವರು ಪುರಾವೆ ನೀಡಿದರೆ ನಾನು ಈಗಲೇ ರಾಜೀನಾಮೆ ಕೊಡುತ್ತೇನೆ. ಅವರಿಗೆ 23ರಂದು ಪುರಾವೆ ದೊರೆತರೆ, ಆ ದಿನವೇ ರಾಜೀನಾಮೆ ನೀಡುತ್ತೇನೆ. ಆದರೆ ಅರವಿಂದ್ ಕೇಜ್ರಿವಾಲ್ ಅವರು ಪುರಾವೆ ಒದಗಿಸಲು ವಿಫಲರಾದರೆ, ತಾವು ರಾಜಕೀಯವನ್ನು ಸಂಪೂರ್ಣವಾಗಿ ತ್ಯಜಿಸುವುದಾಗಿ 23ರಂದು ಒಪ್ಪಿಕೊಳ್ಳುತ್ತಾರೆಯೇ? ಎಂದು ಪ್ರಶ್ನಿಸಿದ್ದರು.

ಅಭ್ಯರ್ಥಿ ಅವಹೇಳನೆ ಆರೋಪ: ಗೌತಮ್ ಗಂಭೀರ್ ಪ್ರತಿ ಸವಾಲುಅಭ್ಯರ್ಥಿ ಅವಹೇಳನೆ ಆರೋಪ: ಗೌತಮ್ ಗಂಭೀರ್ ಪ್ರತಿ ಸವಾಲು

ತಮ್ಮ ವಿರುದ್ಧ ಗಂಭೀರ ಆರೋಪ ಮಾಡಿದ ಎಎಪಿ ಮುಖಂಡರಾದ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್. ಉಪ ಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಮತ್ತು ಅಭ್ಯರ್ಥಿ ಅತಿಶಿ ಮರ್ಲೇನಾ ಅವರ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡಿರುವುದಾಗಿ ಗಂಭೀರ್ ತಿಳಿಸಿದ್ದಾರೆ.

ಇದೊಂದು ಪೂರ್ವ ನಿಯೋಜಿತ ಸಂಚು ಎಂದು ಗಂಭೀರ್ ಪರ ಅಭಿಮಾನಿಗಳು ಅನುಮಾನ ವ್ಯಕ್ತಪಡಿಸಿದ್ದಾರೆ. ಗಂಭೀರ್ ಅವರ ಜತೆ ಕ್ರಿಕೆಟ್ ವೇಳೆ ಹಲವು ವರ್ಷ ಕಳೆದಿರುವ ಅವರ ಮಾಜಿ ಸಹೋದ್ಯೋಗಿಗಳು ಕೂಡ ಗಂಭೀರ್ ಅವರ ವ್ಯಕ್ತಿತ್ವವನ್ನು ಕಂಡಿದ್ದೇವೆ. ಅವರು ಮಹಿಳೆಯರನ್ನು ಗೌರವಿಸುತ್ತಾರೆ ಎಂದು ಬೆಂಬಲಕ್ಕೆ ನಿಂತಿದ್ದಾರೆ.

ಮಾನನಷ್ಟ ಮೊಕದ್ದಮೆ ಹಾಕಿದ್ದೇನೆ

'ಆಗಿರುವ ಘಟನೆಯನ್ನು ನಾನು ಖಂಡಿಸುತ್ತೇನೆ. ಮಹಿಳೆಯರನ್ನು ಗೌರವಿಸುವಂತೆ ಕಲಿಸಿರುವ ಮನೆತನದಿಂದ ನಾನು ಬಂದಿದ್ದೇನೆ. ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಇಷ್ಟು ಕೀಳುಮಟ್ಟಕ್ಕೆ ಇಳಿಯುತ್ತಾರೆ ಎಂದು ನನಗೆ ತಿಳಿದಿರಲಿಲ್ಲ. ಶುಕ್ರವಾರ ಎಎಪಿ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡಿದ್ದೇನೆ' ಎಂದು ಅವರು ತಿಳಿಸಿದ್ದಾರೆ.

ಕೇಜ್ರಿವಾಲ್‌ಗೆ ಮಾನನಷ್ಟ ಮೊಕದ್ದಮೆ ನೋಟಿಸ್ ನೀಡಿದ ಗೌತಮ್ ಗಂಭೀರ್ ಕೇಜ್ರಿವಾಲ್‌ಗೆ ಮಾನನಷ್ಟ ಮೊಕದ್ದಮೆ ನೋಟಿಸ್ ನೀಡಿದ ಗೌತಮ್ ಗಂಭೀರ್

ನೇಣು ಹಾಕಿಕೊಳ್ಳಲು ಸಿದ್ಧ

ಅರವಿಂದ್ ಕೇಜ್ರಿವಾಲ್ ಮತ್ತು ಎಎಪಿಗೆ ಮೂರನೇ ಸವಾಲು. ಈ ಕರಪತ್ರದ ವಿಚಾರದಲ್ಲಿ ನನ್ನ ಕೈವಾಡ ಇದೆ ಎಂದು ಅವರು ಸಾಬೀತುಪಡಿಸಲು ಸಾಧ್ಯವಾದರೆ ನಾನು ಸಾರ್ವಜನಿಕವಾಗಿ ನೇಣು ಹಾಕಿಕೊಳ್ಳುತ್ತೇನೆ. ಇಲ್ಲದೆ ಹೋದರೆ ಅರವಿಂದ್ ಕೇಜ್ರಿವಾಲ್ ರಾಜಕೀಯ ತ್ಯಜಿಸಬೇಕು. ಒಪ್ಪುತ್ತೀರಾ? ಎಂದು ಸವಾಲು ಹಾಕಿದ್ದಾರೆ.

ನಾನು ದೃಢಪಡಿಸುತ್ತೇನೆ

ನಿನ್ನೆಯ ಬೆಳವಣಿಗೆಗಳ ಬಗ್ಗೆ ಕೇಳಿ ಆಘಾತವಾಯಿತು. ಸುಮಾರು ಎರಡು ದಶಕಗಳಿಂದ ಗೌತಮ್ ಗಂಭೀರ್ ನನಗೆ ಪರಿಚಯ. ಅವರ ಸಮಗ್ರತೆ, ನಡತೆ ಮತ್ತು ಮಹಿಳೆಯರೆಡೆಗಿನ ಗೌರವವನ್ನು ನಾನು ದೃಢಪಡಿಸುತ್ತೇನೆ ಎಂದು ಮಾಜಿ ಕ್ರಿಕೆಟಿಗ ವಿವಿಎಸ್ ಲಕ್ಷ್ಮಣ್ ಹೇಳಿದ್ದಾರೆ.

ಕೀಳಾಗಿ ಮಾತನಾಡಲಾರರು

ಗೌತಮ್ ಗಂಭೀರ್ ಅವರ ಹೆಸರು ಕೇಳಿಬಂದಿರುವ ನಿನ್ನೆಯ ಘಟನೆ ನನಗೆ ಆಘಾತ ಉಂಟುಮಾಡಿದೆ. ಅವರನ್ನು ನಾನು ಚೆನ್ನಾಗಿ ಬಲ್ಲೆ. ಅವರು ಯಾವುದೇ ಮಹಿಳೆ ಕುರಿತು ಕೀಳಾಗಿ ಮಾತನಾಡಲಾರರು. ಅವರು ಸೋಲುತ್ತಾರೋ ಅಥವಾ ಗೆಲ್ಲುತ್ತಾರೋ ಎನ್ನುವುದು ಬೇರೆ ಸಂಗತಿ. ಆದರೆ, ಈ ವ್ಯಕ್ತಿ ಇವೆಲ್ಲದರಿಗಿಂತಲೂ ಮೇಲಿದ್ದಾರೆ ಎಂದು ಕ್ರಿಕೆಟಿಗ ಹರ್ಭಜನ್ ಸಿಂಗ್ ಟ್ವೀಟ್ ಮಾಡಿದ್ದಾರೆ.

English summary
Delhi East BJP candidate Gautam Gambhir challenged AAP and Arvind Kejriwal to prove the alleged derogatary pamphlet on AAP candidate Atishi. If it was proved I will hand myself in public, he said.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X