ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ದೆಹಲಿಯಲ್ಲೂ ನೂರಾರು ಕಾಗೆಗಳ ಸಾವು: ಪಕ್ಷಿ ಜ್ವರ ದೃಢ!

|
Google Oneindia Kannada News

ನವದೆಹಲಿ, ಜನವರಿ 11: ಸತ್ತ ಕಾಗೆಗಳು ಮತ್ತು ಬಾತುಕೋಳಿಗಳಿಂದ ಎಂಟು ಮಾದರಿಗಳನ್ನು ಪರೀಕ್ಷಿಸಿದ ನಂತರ ದೆಹಲಿಯಲ್ಲಿ ಪಕ್ಷಿ ಜ್ವರ ದೃಢವಾಗಿದೆ. ಏವಿಯನ್ ಜ್ವರಕ್ಕೆ ಧನಾತ್ಮಕವಾಗಿ ಪರೀಕ್ಷಿಸಿದ ಎಲ್ಲಾ ಮಾದರಿಗಳು ಪಕ್ಷಿ ಜ್ವರ ಎಂದು ಸಾಭೀತಾಗಿದೆ ಎಂದು ದೆಹಲಿಯ ಪಶುಸಂಗೋಪನಾ ಇಲಾಖೆ ತಿಳಿಸಿದೆ.

ಪಕ್ಷಿಗಳನ್ನು ಆಮದು ಮಾಡಿಕೊಳ್ಳುವುದು ಮತ್ತು ಕೇಜ್‌ಗಳು, ಸಗಟು ಕೋಳಿ ಮಾರುಕಟ್ಟೆಯನ್ನು ದೆಹಲಿಯಲ್ಲಿ ತಾತ್ಕಾಲಿಕವಾಗಿ ಮುಚ್ಚಲಾಗಿದೆ. ಈ ಹಿಂದೆ, ಸಂಜಯ್ ಸರೋವರದಲ್ಲಿ 17 ಬಾತುಕೋಳಿಗಳು ಸತ್ತಿದ್ದು, ಇದನ್ನು ಎಚ್ಚರಿಕೆ ವಲಯ ಎಂದು ಘೋಷಿಸಲು ಅಧಿಕಾರಿಗಳನ್ನು ಪ್ರೇರೇಪಿಸಿತು. ಅಲ್ಲದೆ, ಕಳೆದ ಕೆಲವು ದಿನಗಳಲ್ಲಿ 14 ದೆಹಲಿಯ ಉದ್ಯಾನವನಗಳಲ್ಲಿ 91 ಕಾಗೆಗಳು ಮೃತಪಟ್ಟಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಈ ಸಮಯಕ್ಕೆ ದೇಶದಲ್ಲಿ ಹಕ್ಕಿ ಜ್ವರದ ಸ್ಥಿತಿ ಗತಿ ಹೇಗಿದೆ?ಈ ಸಮಯಕ್ಕೆ ದೇಶದಲ್ಲಿ ಹಕ್ಕಿ ಜ್ವರದ ಸ್ಥಿತಿ ಗತಿ ಹೇಗಿದೆ?

ಇದಕ್ಕೂ ಮೊದಲು ಮಹಾರಾಷ್ಟ್ರದ ಪರಭಾನಿ ಜಿಲ್ಲೆಯ ಮುರುಂಬಾ ಗ್ರಾಮದಲ್ಲಿ 800 ಕೋಳಿಗಳು ಜ್ವರದಿಂದ ಸಾವನ್ನಪ್ಪಿವೆ ಎಂದು ಪರೀಕ್ಷಾ ಫಲಿತಾಂಶಗಳೊಂದಿಗೆ ದೃಢವಾಗಿದೆ.

Bird Flu Confirmed In Delhi After Testing 8 Samples From Dead Crows And Ducks

"ಮೂರು ದಿನಗಳ ಹಿಂದೆ ಮುರುಂಬಾ ಗ್ರಾಮದಲ್ಲಿ 800 ಕೋಳಿಗಳು ಪಕ್ಷಿ ಜ್ವರದಿಂದ ಸಾವನ್ನಪ್ಪಿವೆ. ಸತ್ತ ಕೋಳಿಗಳ ರಕ್ತದ ಮಾದರಿಗಳನ್ನು ಜಿಲ್ಲಾಡಳಿತ ರಾಷ್ಟ್ರೀಯ ಪ್ರಯೋಗಾಲಯಕ್ಕೆ ಕಳುಹಿಸಿತ್ತು. ಹಕ್ಕಿ ಜ್ವರದಿಂದ ಕೋಳಿಗಳು ಸಾವನ್ನಪ್ಪಿವೆ ಎಂದು ವರದಿಗಳು ಖಚಿತಪಡಿಸುತ್ತವೆ "ಎಂದು ಪರಭಾನಿಯ ಜಿಲ್ಲಾಧಿಕಾರಿ ದೀಪಕ್ ಮೊಘ್ಲಿಕರ್ ಸೋಮವಾರ ಸುದ್ದಿ ಸಂಸ್ಥೆ ಎಎನ್‌ಐಗೆ ತಿಳಿಸಿದ್ದಾರೆ.

ಮುಂಬೈನ ಚೆಂಬೂರು ಪ್ರದೇಶದಲ್ಲಿ ಭಾನುವಾರ 11 ಕಾಗೆಗಳು ಸತ್ತುಬಿದ್ದಿವೆ ಎಂದು ಪೊಲೀಸರು ತಿಳಿಸಿದ್ದಾರೆ. ಸತ್ತ ಕಾಗೆಗಳ ಮಾದರಿಗಳನ್ನು ಪರೀಕ್ಷೆಗೆ ಕಳುಹಿಸಲಾಗಿದೆ. ಏತನ್ಮಧ್ಯೆ, ಪಕ್ಷಿ ಜ್ವರ ಹರಡುವಿಕೆಯನ್ನು ಮೇಲ್ವಿಚಾರಣೆ ಮಾಡಲು ರಚಿಸಲಾದ ಕೇಂದ್ರ ತಂಡಗಳು ದೇಶಾದ್ಯಂತ ಏಳು ರಾಜ್ಯಗಳಲ್ಲಿ ಪೀಡಿತ ಸ್ಥಳಗಳಿಗೆ ಭೇಟಿ ನೀಡುತ್ತಿವೆ ಎಂದು ಮೀನುಗಾರಿಕೆ, ಪಶುಸಂಗೋಪನೆ ಮತ್ತು ಹೈನುಗಾರಿಕೆ ಸಚಿವಾಲಯ ಭಾನುವಾರ ತಿಳಿಸಿದೆ.

English summary
Delhi on Monday confirmed bird flu after samples of eight dead crows and ducks tested positive for avian flu
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X