ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪಿಓಕೆ ಇರುವುದು ಉಗ್ರರ ಹಿಡಿತದಲ್ಲಿ, ಪಾಕ್‌ ನಿಯಂತ್ರಣದಲ್ಲಲ್ಲ: ರಾವತ್

|
Google Oneindia Kannada News

ನವದೆಹಲಿ, ಅಕ್ಟೋಬರ್ 25: ಪಾಕಿಸ್ತಾನವು ಆಕ್ರಮಿಸಿಕೊಂಡಿರುವ ಜಮ್ಮು ಮತ್ತು ಕಾಶ್ಮೀರದ ಭಾಗವು (ಪಿಓಕೆ) ಭಯೋತ್ಪಾದಕರ ನಿಯಂತ್ರಣದಲ್ಲಿಯೇ ಹೊರತು ಪಾಕ್ ಸರ್ಕಾರದ ಹಿಡಿತದಲ್ಲಿ ಅಲ್ಲ ಎಂದು ಭಾರತೀಯ ಸೇನಾ ಮುಖ್ಯಸ್ಥ ಬಿಪಿನ್ ರಾವತ್ ಹೇಳಿದರು.

ನವದೆಹಲಿಯಲ್ಲಿ ಶುಕ್ರವಾರ ಸೇನಾ ಕಮಾಂಡರ್‌ಗಳ ಸಮಾವೇಶದಲ್ಲಿ ಮಾತನಾಡಿದ ಅವರು, ಪಾಕಿಸ್ತಾನವು ಅಕ್ರಮವಾಗಿ ವಶಪಡಿಸಿಕೊಂಡಿರುವ ಪ್ರದೇಶದಲ್ಲಿ ವಾಸ್ತವವಾಗಿ ಉಗ್ರರ ನಿಯಂತ್ರಣವಿದೆ ಎಂದರು.

ಪಾಕ್ ನುಸುಳುಕೋರರನ್ನು ಸದೆಬಡಿದ ಭಾರತೀಯ ಸೇನೆ ಪಾಕ್ ನುಸುಳುಕೋರರನ್ನು ಸದೆಬಡಿದ ಭಾರತೀಯ ಸೇನೆ

'ನಾವು ಜಮ್ಮು ಮತ್ತು ಕಾಶ್ಮೀರ ಎಂದಾಗ ಅದರಲ್ಲಿ ಪಿಓಕೆ ಮತ್ತು ಗಿಲ್ಗಿಟ್ ಬಲ್ಟಿಸ್ತಾನ್ ಒಳಗೊಂಡ ಸಂಪೂರ್ಣ ಜಮ್ಮು ಮತ್ತು ಕಾಶ್ಮೀರ ರಾಜ್ಯವಿರುತ್ತದೆ. ಹಾಗಾಗಿ ಪಿಓಕೆ ಮತ್ತು ಗಿಲ್ಗಿಟ್ ಬಲ್ಟಿಸ್ತಾನಗಳು ಆಕ್ರಮಿತ ಪ್ರದೇಶಗಳಾಗಿದ್ದು, ನಮ್ಮ ಪಶ್ಚಿಮದಲ್ಲಿರುವ ನೆರೆಯ ದೇಶವು ಅಕ್ರಮವಾಗಿ ಆಕ್ರಮಿಸಿರುವ ಪ್ರದೇಶವಾಗಿದೆ' ಎಂದು ಹೇಳಿದರು.

Bipin Rawat PoK Is Illegally Occupied By Pakistan Controlled By Terrorists

370ನೇ ವಿಧಿಯನ್ನು ತಾತ್ಕಾಲಿಕ ಕ್ರಮವನ್ನಾಗಿ ತರಲಾಗಿತ್ತು. 370ನೇ ವಿಧಿಯನ್ನು ತಾತ್ಕಾಲಿಕ ಎಂಬ ಪದದೊಂದಿಗೆ ಪರಿಚಯಿಸಿದಾಗ ಅದಕ್ಕೆ ಆಕ್ಷೇಪಗಳಿರಲಿಲ್ಲ. ಪಾಕಿಸ್ತಾನ ಅದಕ್ಕೆ ಆಕ್ಷೇಪ ವ್ಯಕ್ತಪಡಿಸಿರಲಿಲ್ಲ. ಹೀಗಿರುವಾಗ 370ನೇ ವಿಧಿಯ ಬಗ್ಗೆ ಪಾಕಿಸ್ತಾನ ಇದ್ದಕ್ಕಿದ್ದಂತೆ ಮಾತನಾಡಲು ಶುರುಮಾಡಿದ್ದು ಏಕೆ? ಎಂದು ಪ್ರಶ್ನಿಸಿದರು.

ಪಿಒಕೆಯಲ್ಲಿ ಪಾಕ್ ವಿರುದ್ಧ ಪ್ರತಿಭಟನೆ: ಲಾಠಿ ಚಾರ್ಜ್ ನಲ್ಲಿ ಇಬ್ಬರ ಸಾವುಪಿಒಕೆಯಲ್ಲಿ ಪಾಕ್ ವಿರುದ್ಧ ಪ್ರತಿಭಟನೆ: ಲಾಠಿ ಚಾರ್ಜ್ ನಲ್ಲಿ ಇಬ್ಬರ ಸಾವು

ಏಕೆಂದರೆ ಪಾಕಿಸ್ತಾನವು ಅಕ್ರಮವಾಗಿ ಆಕ್ರಮಿಸಿಕೊಂಡಿರುವ ಪ್ರದೇಶವು ವಾಸ್ತವವಾಗಿ ಪಾಕಿಸ್ತಾನದ ಸರ್ಕಾರದ ನಿಯಂತ್ರಣದಲ್ಲಿ ಇಲ್ಲ, ಅದನ್ನು ನಿಯಂತ್ರಿಸುತ್ತಿರುವುದು ಭಯೋತ್ಪಾದಕರು. ಪಿಓಕೆಯು ಭಯೋತ್ಪಾದಕರ ಹಿಡಿತದಲ್ಲಿರುವ ದೇಶದ ನಿಯಂತ್ರಣದಲ್ಲಿದೆ ಎಂದರು.

ಜಗತ್ತಿನಲ್ಲಿ ಲಭ್ಯವಿರುವ ಅತ್ಯುತ್ತಮ ರೈಫಲ್ ಸಿಗ್ ಸಾಯುರ್ ಅಮೆರಿಕದಿಂದ ಈ ವರ್ಷದ ಅಂತ್ಯದೊಳಗೆ ನಮ್ಮ ಇನ್‌ಫೆಂಟ್ರಿ ಸೈನಿಕರಿಗೆ ಲಭ್ಯವಾಗಲಿದೆ ಎಂಬ ಭರವಸೆ ನೀಡುತ್ತೇನೆ ಎಂದು ಹೇಳಿದರು.

English summary
Army chief Bipin Rawat on Friday said that, PoK is illegally occupied by Pakistan, is actually controlled by terrorists.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X