ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಭಾರತದಲ್ಲಿ ಭಯೋತ್ಪಾದನೆ ನಿಗ್ರಹಕ್ಕೆ ಇರುವುದೊಂದೇ ದಾರಿ: ಬಿಪಿನ್ ರಾವತ್

|
Google Oneindia Kannada News

ನವದೆಹಲಿ, ಜನವರಿ 16: ದೇಶದಲ್ಲಿ ಭಯೋತ್ಪಾದನೆ ನಿಗ್ರಹಕ್ಕೆ ಇರುವುದೊಂದೇ ದಾರಿ ಅಮೆರಿಕದ ರೀತಿಯಲ್ಲಿ ನಿಗ್ರಹಿಸಬೇಕು ಎಂದು ಸೇನಾ ಮುಖ್ಯಸ್ಥ ಜನರಲ್ ಬಿಪಿನ್ ರಾವತ್ ಹೇಳಿದ್ದಾರೆ.

9/11 ದಾಳಿ ಬಳಿಕ ಅಮೆರಿಕ ಹೇಗೆ ಭಯೋತ್ಪಾದಕರನ್ನ ಮಟ್ಟ ಹಾಕಿತೋ ಹಾಗೆಯೇ ಭಾರತವೂ ಕೂಡ ಭಯೋತ್ಪಾದನೆಯನ್ನು ಮೆಟ್ಟಿ ನಿಲ್ಲಬೇಕು ಎಂದರು.

ಚೀಫ್‌ ಡಿಫೆನ್ಸ್‌ ಸ್ಟಾಫ್ ಹುದ್ದೆಗೆ ನಿವೃತ್ತಿ ನಿಯಮ ಅಂತಿಮಚೀಫ್‌ ಡಿಫೆನ್ಸ್‌ ಸ್ಟಾಫ್ ಹುದ್ದೆಗೆ ನಿವೃತ್ತಿ ನಿಯಮ ಅಂತಿಮ

ಕೆಲವು ರಾಜ್ಯಗಳ್ಲಲಿ ಭಯೋತ್ಪಾದಕರಿಗೆ ಶಸ್ತ್ರಾಸ್ತ್ರಗಳು ಲಭ್ಯವಾಗುವಂತೆ ಮಾಡುತ್ತಾರೆ, ಅವರಿಗೆ ಹಣವನ್ನು ಒದಗಿಸುತ್ತಾರೆ. ಹೀಗಾದರೆ ಭಯೋತ್ಪಾದನೆ ನಿಗ್ರಹ ಹೇಗೆ ಸಾಧ್ಯ.

Bipin Rawat Chants Terrorism Ending Mantra

ನಾವು ಭಯೋತ್ಪಾದನೆಯನ್ನು ಅಂತ್ಯಗೊಳಿಸಬೇಕಾದರೆ, 9/11 ರ ನಂತರ ಅಮೆರಿಕನ್ನರು ಪ್ರಾರಂಭಿಸಿದ ರೀತಿಯಲ್ಲಿಯೇ ಮಾಡಬೇಕಾಗುತ್ತದೆ. ಭಯೋತ್ಪಾದನೆ ವಿರುದ್ಧದ ಜಾಗತಿಕ ಯುದ್ಧದ ಬಗ್ಗೆ ನಾವು ಮಾತನಾಡೋಣ ಎಂದು ಅವರು ಹೇಳಿದರು.

ನೀವು ಭಯೋತ್ಪಾದಕರನ್ನು ಪ್ರತ್ಯೇಕಿಸಬೇಕು, ಭಯೋತ್ಪಾದನೆಗೆ ಪ್ರಾಯೋಜಕತ್ವ ನೀಡುವವರನ್ನು ಗುರುತಿಸಬೇಕು. ಫೈನಾನ್ಷಿಯಲ್ ಆಕ್ಷನ್ ಟಾಸ್ಕ್ ಫೋರ್ಸ್ (ಎಫ್‌ಎಟಿಎಫ್) ನಿಂದ ಕಪ್ಪುಪಟ್ಟಿಗೆ ಸೇರಿಸುವುದು ಒಂದು ಉತ್ತಮ ಕ್ರಮ ಎಂದು ನಾನು ಭಾವಿಸುತ್ತೇನೆ.

ರಾಜತಾಂತ್ರಿಕ ಪ್ರತ್ಯೇಕತೆಯನ್ನು ಮಾಡಲೇಬೇಕಾಗಿದೆ. 2008ರ ಮುಂಬೈನಲ್ಲಿ ನಡೆದ ಭಯೋತ್ಪಾದಕ ದಾಳಿಗೆ ಕಾರಣರಾದ ಪಾಕಿಸ್ತಾನದವರಿಗೆ ಭಾರತ ಆಶ್ರಯ ನೀಡಿದೆ.

English summary
Terrorism will remain as long as there are states that sponsor it and the only way to end it is like America after 9/11, India's Chief of Defence Staff General Bipin Rawat said on Thursday.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X