ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮೋದಿ ಕುರಿತು ಕಾಮಿಡಿ ಚಿತ್ರ ಮಾಡಿ ಎಂದ ಊರ್ಮಿಳಾ ಮಾತೋಂಡ್ಕರ್

|
Google Oneindia Kannada News

ನವದೆಹಲಿ,ಏ.19: ಪ್ರಧಾನಿ ನರೇಂದ್ರ ಮೋದಿ ಬಯೋಪಿಕ್ ಬಗ್ಗೆ ಲೇವಡಿ ಮಾಡಿರುವ ನಟಿ ಹಾಗೂ ಕಾಂಗ್ರೆಸ್ ಅಭ್ಯರ್ಥಿ ಊರ್ಮಿಳಾ ಮಾತೋಂಡ್ಕರ್, ಮೋದಿ ಬಗ್ಗೆ ಕಾಮಿಡಿ ಚಿತ್ರ ಮಾಡಿ ಎಂದಿದ್ದಾರೆ.

ಲೋಕಸಭಾ ಚುನಾವಣೆ 2019 : ವಿಶೇಷ ಪುಟ | ಗ್ಯಾಲರಿ

ಮೋದಿ ಕುರಿತು ಹಾಸ್ಯ ಸನಿಮಾವನ್ನು ಮಾಡಿ ಎಂದಿರುವ ಅವರು, ಪ್ರಧಾನಿ ಮೋದಿಯವರ ಜೀವನಾಧಾರಿತ ಸಿನಿಮಾ ಮಾಡಿರುವುದರಲ್ಲಿ ಏನೂ ಲಾಭ ಇಲ್ಲ. ಆದರೆ ಅವರು ಪ್ರಧಾನಿಯಾಗಿ ಏನನ್ನೂ ಮಾಡಿಲ್ಲ.

ಮುಂಬೈ ಉತ್ತರ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಊರ್ಮಿಳಾ ಆಸ್ತಿ ವಿವರ ಮುಂಬೈ ಉತ್ತರ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಊರ್ಮಿಳಾ ಆಸ್ತಿ ವಿವರ

56 ಇಂಚಿನ ಎದೆಯನ್ನು ಹೊಂದಿರುವುದನ್ನು ಹೇಳಿಕೊಂಡಿರುವುದೊಂದು ತಮಾಷೆಯಾಗಿದೆ. ಅವರ ಜೀವನಾಧಾರಿತ ಕುರಿತು ಸಿನಿಮಾ ಮಾಡಿರುವುದು ಭಾರತದ ಹಾನಿಗೊಳಗಾಗಿರುವ ಪ್ರಜಾಪ್ರಭುತ್ವ, ಬಡತನ ಮತ್ತು ವೈವಿಧ್ಯತೆಯ ಮೇಲಿನ ಹಾಸ್ಯಾಸ್ಪದವಾಗಿದೆ ಎಂದು ಕಿಡಿಕಾರಿದ್ದಾರೆ.

Biopic Joke Make Comedy Film On Him Urmila Matondkar Attacks Modi

ದೇಶಕ್ಕೆ ಮೋದಿ ಏನನ್ನೂ ಮಾಡಿಲ್ಲ, ಸರ್ಕಾರದ ಮುಖ್ಯಸ್ಥನಾಗಿದ್ದುಕೊಂಡು ಏನನ್ನು ಮಾಡಲು ವಿಫಲವಾಗಿರುವ ಪ್ರಧಾನಿ ಮೋದಿ ಬಯೋಪಿಕ್‌ಗೆ ಅರ್ಹರಲ್ಲ ಎಂದು ಹೇಳಿದ್ದಾರೆ.

ಬಿಜೆಪಿ, ಕಾಂಗ್ರೆಸ್, ಸಿಪಿಎಂ ಪ್ರಣಾಳಿಕೆಯ ತುಲನೆ. ಯಾವ ಪಕ್ಷದ ಪ್ರಣಾಳಿಕೆ ಉತ್ತಮವಾಗಿದೆ?

ಮುಂದುವರಿದು ಪ್ರಧಾನಿ ಮೋದಿ ಅವರ ಮೇಲೆ ಹಾಸ್ಯ ಚಿತ್ರವೊಂದನ್ನು ಮಾಡಬೇಕು ಮತ್ತು ಅವರ ಈಡೇರದ ಭರವಸೆಗಳ ಕುರಿತು ಸಿನಿಮಾವಾಗಲಿ. ಒಂದು ಪ್ರಜಾಪ್ರಭುತ್ವದ ದೇಶದ ಪ್ರಧಾನಿಯಾಗಿ ಕಳೆದ ಐದು ವರ್ಷಗಳಲ್ಲಿ ಒಂದೇ ಒಂದು ಪತ್ರಿಕಾಗೋಷ್ಠಿಯನ್ನು ನಡೆಸದಿರುವುದಕ್ಕಿಂತ ಕೆಟ್ಟದ್ದು ಮತ್ತೇನಿದೆ ಎಂದು ಊರ್ಮಿಳಾ ಮತೋಂಡ್ಕರ್‌ ಮೋದಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಊರ್ಮಿಳಾ ಮುಖ ನೋಡಿ ಮಣೆ ಹಾಕಿದ ಕಾಂಗ್ರೆಸ್: ಬಿಜೆಪಿ ಸಂಸದ ಊರ್ಮಿಳಾ ಮುಖ ನೋಡಿ ಮಣೆ ಹಾಕಿದ ಕಾಂಗ್ರೆಸ್: ಬಿಜೆಪಿ ಸಂಸದ

ಇತ್ತೀಚೆಗಷ್ಟೇ ಕಾಂಗ್ರೆಸ್‌ಗೆ ಸೇರ್ಪಡೆಯಾದ ಊರ್ಮಿಳಾ, ಬಿಜೆಪಿಯ ಸಂಸದ ಗೋಪಾಲ್‌ ಶೆಟ್ಟಿ ವಿರುದ್ಧ ಮುಂಬೈ ಉತ್ತರ ಲೋಕಸಭಾ ಕ್ಷೇತ್ರದಿಂದ ಕಣಕ್ಕಿಳಿದಿದ್ದಾರೆ.

English summary
Actor-turned-politician Urmila Matondkar on Thursday took a savage dig at Prime Minister Narendra Modi, saying he didn't deserve a biopic as he failed to deliver anything as the head of the government.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X