ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಲೋಕಸಭೆಯಲ್ಲಿ ಸಂತಾನೋತ್ಪತ್ತಿ ನೆರವು ತಂತ್ರಜ್ಞಾನ ಮಸೂದೆ ಅಂಗೀಕಾರ

|
Google Oneindia Kannada News

ನವದೆಹಲಿ, ಡಿಸೆಂಬರ್ 02: ಲೋಕಸಭೆಯಲ್ಲಿ 'ಸಂತಾನೋತ್ಪತ್ತಿ ನೆರವು ತಂತ್ರಜ್ಞಾನ ಮಸೂದೆ' ಬುಧವಾರ ಅಂಗೀಕಾರಗೊಂಡಿದೆ.

ಆಸ್ಪತ್ರೆಗಳಲ್ಲಿ ಕೆಲಸ ಮಾಡುವವರು ಪಾಲಿಸಬೇಕಾದ ನೀತಿ ಸಂಹಿತೆ, ಭೌತಿಕ ಮೂಲಸೌಕರ್ಯ, ಪ್ರಯೋಗಾಲಯ ಮತ್ತು ರೋಗನಿರ್ಣಯ ಸಾಧನಗಳು ಮತ್ತು ಚಿಕಿತ್ಸಾಲಯಗಳು ಮತ್ತು ಬ್ಯಾಂಕುಗಳು ಬಳಸಬೇಕಾದ ಪರಿಣಿತ ಮಾನವಶಕ್ತಿಯ ಕನಿಷ್ಠ ಮಾನದಂಡಗಳನ್ನು ರಾಷ್ಟ್ರೀಯ ಮಂಡಳಿಯು ನಿಗದಿಪಡಿಸುತ್ತದೆ.

ಈ ಮಸೂದೆಯನ್ನು ಸೆಪ್ಟೆಂಬರ್ 14, 2020 ರಂದು ಲೋಕಸಭೆಯಲ್ಲಿ ಪರಿಚಯಿಸಲಾಯಿತು. ನಂತರ ಅದನ್ನು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಸ್ಥಾಯಿ ಸಮಿತಿಗೆ ಉಲ್ಲೇಖಿಸಲಾಯಿತು. ಸಮಿತಿಯ ವರದಿಯನ್ನು ಮಾರ್ಚ್ 19, 2021 ರಂದು ಲೋಕಸಭೆಯಲ್ಲಿ ಮಂಡಿಸಿತ್ತು.

Bill To Regulate IVF Clinics Passed In Lok Sabha

ಕೇಂದ್ರ ಆರೋಗ್ಯ ಸಚಿವ ಮನ್ಸುಖ್ ಮಾಂಡವಿಯಾ ಅವರು ನವೆಂಬರ್ 29 ರಂದು ಅಧಿವೇಶನದ ಮೊದಲ ದಿನದಂದು ಮತ್ತೊಮ್ಮೆ ಲೋಕಸಭೆಯಲ್ಲಿ ಮಸೂದೆಯನ್ನು ಮಂಡಿಸಲು ನಿರ್ಧರಿಸಿದ್ದರು. ಆದರೆ ಕೃಷಿ ಕಾನೂನುಗಳ ರದ್ದತಿ ಮಸೂದೆಯ ನಂತರ ವಿಪಕ್ಷಗಳ ಗದ್ದಲದಿಂದಾಗಿ ಲೋಕಸಭೆಯು ದಿನಕ್ಕೆ ಮುಂದೂಡಲ್ಪಟ್ಟ ಕಾರಣ ಅದು ಸಾಧ್ಯವಾಗಿರಲಿಲ್ಲ.

ಏನಿದು ಐವಿಎಫ್: ಸಹಜವಾಗಿ ಗರ್ಭಧಾರಣೆಯಾಗದಿದ್ದರೆ ಕೃತಕವಾಗಿ ಇನ್‌ ವಿಟ್ರೊ ಫರ್ಟಿಲೈಸೇಷನ್‌ (ಐವಿಎಫ್‌) ಮೂಲಕ ಗರ್ಭಧಾರಣೆ ಮಾಡಬಹುದು. ಈ ವಿಧಾನದಲ್ಲಿ, ಪತ್ನಿಯ ಅಂಡಾಣು ಹಾಗೂ ಪತಿಯ ವೀರ್ಯಾಣು ತೆಗೆದು ಪ್ರಯೋಗಾಲಯದಲ್ಲಿಎರಡನ್ನೂ ಸೇರಿಸಿ ನಿಗದಿತ ಅವಧಿಯವರೆಗೆ ಭ್ರೂಣವನ್ನು ಬೆಳೆಸಲಾಗುತ್ತದೆ. ನಂತರ ಅದನ್ನು ಪತ್ನಿಯ ಗರ್ಭಕೋಶಕ್ಕೆ ವರ್ಗಾವಣೆ ಮಾಡಲಾಗುತ್ತದೆ.

ಸಾಮಾನ್ಯವಾಗಿ ಐಯುಐ ಮತ್ತು ಐವಿಎಫ್‌ ಚಿಕಿತ್ಸೆ ಮೂಲಕ ಮಕ್ಕಳನ್ನು ಮಾಡಿಕೊಳ್ಳಲು ತುಂಬಾ ದುಬಾರಿ ಹಣ ತೆರಬೇಕಾಗುತ್ತದೆ ಎಂಬ ಭಾವನೆ ಜನರಲ್ಲಿದೆ. ಆದರೆ ಆ ತಂತ್ರಜ್ಞಾನದ ಚಿಕಿತ್ಸೆ ತೀರಾ ದುಬಾರಿಯಲ್ಲ. ಉತ್ತಮ ಲ್ಯಾಬ್‌ ಹಾಗೂ ಆಧುನಿಕ ತಂತ್ರಜ್ಞಾನ ಬಳಕೆಯಿಂದ ಸ್ವಲ್ಪ ಹೆಚ್ಚು ಹಣ ಖರ್ಚಾಗಲಿದೆ. ಅಗತ್ಯ ಪರೀಕ್ಷೆಗಳ ನಂತರ ಐಯುಐಗೆ ಸುಮಾರು 10 ಸಾವಿರ ಮತ್ತು ಐವಿಎಫ್‌ಗೆ ಸುಮಾರು 1.75 ರೂ. ವೆಚ್ಚ ತಗುಲಬಹುದು.

ಎಆರ್​​ಟಿ ಮೂಲಕ ಜನಿಸಿದ ಮಗುವನ್ನು ಪಡೆದ ದಂಪತಿಗಳ ಜೈವಿಕ ಮಗು ಎಂದು ಪರಿಗಣಿಸಲಾಗುತ್ತದೆ ಮತ್ತು ಆ ದಂಪತಿಯ ಮಗು ಲಭ್ಯವಿರುವ ಹಕ್ಕುಗಳು ಮತ್ತು ಸವಲತ್ತುಗಳಿಗೆ ಅರ್ಹರಾಗಿರುತ್ತಾರೆ. ಗ್ಯಾಮೆಟ್ ದಾನಿಯು ಮಗುವಿನ ಮೇಲೆ ಪೋಷಕರ ಹಕ್ಕುಗಳನ್ನು ಹೊಂದಿರುವುದಿಲ್ಲ.

ಎಆರ್​​ಟಿ ಸೇವೆಗಳನ್ನು ಬಯಸುವ ವ್ಯಕ್ತಿ ಹಾಗೂ ಗ್ಯಾಮೆಟ್ ದಾನಿ ಇಬ್ಬರ ಲಿಖಿತ ಒಪ್ಪಿಗೆಯೊಂದಿಗೆ ಮಾತ್ರ ಎಆರ್​​ಟಿ ಕಾರ್ಯವಿಧಾನಗಳನ್ನು ಕೈಗೊಳ್ಳಬಹುದು. ಎಆರ್​​ಟಿ ಸೇವೆಗಳನ್ನು ಬಯಸುವ ಜನರು ದಾನಿಯ ಯಾವುದೇ ನಷ್ಟ, ಹಾನಿ ಅಥವಾ ಸಾವಿಗೆ ಓಸೈಟ್ ದಾನಿಯ ಪರವಾಗಿ ವಿಮಾ ರಕ್ಷಣೆಯನ್ನು ಒದಗಿಸುವ ಅಗತ್ಯವಿದೆ.

ಹೆಚ್ಚುವರಿಯಾಗಿ ಮಗುವಿನ ಲಿಂಗ ಪೂರ್ವ ನಿರ್ಧರಿಸುವುದನ್ನು ಕ್ಲಿನಿಕ್​​ಗಳು ನಿಷೇಧಿಸಿವೆ. ಪಿಆರ್‌ಎಸ್ ಶಾಸಕಾಂಗ ಸಂಶೋಧನೆಯ ಪ್ರಕಾರ, ಭ್ರೂಣವನ್ನು ಅಳವಡಿಸುವ ಮೊದಲು ಆನುವಂಶಿಕ ಕಾಯಿಲೆಗಳನ್ನು ಪರಿಶೀಲಿಸುವ ಅಗತ್ಯವಿದೆ.

ಪ್ರಯೋಜನಗಳು: ಈ ಕಾಯ್ದೆಯ ಪ್ರಮುಖ ಪ್ರಯೋಜನವೆಂದರೆ ಇದು ದೇಶದಲ್ಲಿ ಸಂತಾನೋತ್ಪತ್ತಿ ನೆರವಿನ ತಂತ್ರಜ್ಞಾನ ಸೇವೆಗಳನ್ನು ನಿಯಂತ್ರಿಸುತ್ತದೆ. ಪರಿಣಾಮವಾಗಿ, ಬಂಜೆತನದ ದಂಪತಿಗಳು ಎಆರ್‌ಟಿಗಳಲ್ಲಿನ ಚಟುವಟಿಕೆಗಳ ಬಗ್ಗೆ ಹೆಚ್ಚು ಭರವಸೆ ಹೊಂದುತ್ತಾರೆ. ಹಿನ್ನೆಲೆ

ಮಹಿಳೆಯರ ಸಂತಾನೋತ್ಪತ್ತಿ ಹಕ್ಕುಗಳ ಸಂರಕ್ಷಣೆಗೆ ಕೇಂದ್ರ ಸಂಪುಟವು ಅನುಮೋದಿಸಿದ ಕಾಯ್ದೆಗಳ ಸರಣಿಯಲ್ಲಿ ಸಂತಾನೋತ್ಪತ್ತಿ ನೆರವಿನ ತಂತ್ರಜ್ಞಾನ ನಿಯಂತ್ರಣ ಮಸೂದೆ -2020 ಇತ್ತೀಚಿನದು.

ಮಸೂದೆಯು ದೇಶದಲ್ಲಿ ಸಂತಾನೋತ್ಪತ್ತಿ ನೆರವಿನ ತಂತ್ರಜ್ಞಾನ ಸೇವೆಗಳ ಸುರಕ್ಷಿತ ಮತ್ತು ನೈತಿಕ ಚಟುವಟಿಕೆಗಳಿಗೆ ಅವಕಾಶ ನೀಡುತ್ತದೆ. ಮಸೂದೆಯ ಮೂಲಕ, ರಾಷ್ಟ್ರೀಯ ಮಂಡಳಿ, ರಾಜ್ಯ ಮಂಡಳಿಗಳು, ರಾಷ್ಟ್ರೀಯ ನೋಂದಾವಣೆ ಮತ್ತು ರಾಜ್ಯ ನೋಂದಣಿ ಪ್ರಾಧಿಕಾರಗಳು ಕ್ರಮವಾಗಿ ಸಂತಾನೋತ್ಪತ್ತಿ ನೆರವಿನ ತಂತ್ರಜ್ಞಾನ ಚಿಕಿತ್ಸಾಲಯಗಳು ಮತ್ತು ಸಂತಾನೋತ್ಪತ್ತಿ ನೆರವಿನ ತಂತ್ರಜ್ಞಾನ ಬ್ಯಾಂಕುಗಳನ್ನು ನಿಯಂತ್ರಿಸುತ್ತವೆ ಮತ್ತು ಇವುಗಳ ಮೇಲ್ವಿಚಾರಣೆ ಮಾಡುತ್ತವೆ.

ಸಂತಾನೋತ್ಪತ್ತಿ ನೆರವಿನ ತಂತ್ರಜ್ಞಾನವು (ಎಆರ್‌ಟಿ) ಇತ್ತೀಚಿನ ವರ್ಷಗಳಲ್ಲಿ ಅಧಿಕವಾಗಿ ಬೆಳೆದಿದೆ. ಎಆರ್‌ಟಿ ಕೇಂದ್ರಗಳ ಅತ್ಯಧಿಕ ಬೆಳವಣಿಗೆಯಲ್ಲಿ ಭಾರತವೂ ಒಂದಾಗಿದೆ. ಇನ್-ವಿಟ್ರೊ ಫರ್ಟಿಲೈಸೇಶನ್ (ಐವಿಎಫ್) ಸೇರಿದಂತೆ ಸಂತಾನೋತ್ಪತ್ತಿ ನೆರವಿನ ತಂತ್ರಜ್ಞಾನವು ಬಂಜೆತನದಿಂದ ಬಳಲುತ್ತಿರುವ ಹಲವರಿಗೆ ಭರವಸೆ ಒದಗಿಸಿದೆ. ಆದರೆ ಕಾನೂನು, ನೈತಿಕತೆ ಮತ್ತು ಸಾಮಾಜಿಕ ಸಮಸ್ಯೆಗಳನ್ನೂ ಸಹ ತಂದೊಡ್ಡಿದೆ.

ಭಾರತವು ಜಾಗತಿಕ ಫಲವತ್ತತೆ ಉದ್ಯಮದ ಪ್ರಮುಖ ಕೇಂದ್ರಗಳಲ್ಲಿ ಒಂದಾಗಿದೆ. ಸಂತಾನೋತ್ಪತ್ತಿ ವೈದ್ಯಕೀಯ ಪ್ರವಾಸೋದ್ಯಮವು ಮಹತ್ವದ ಚಟುವಟಿಕೆಯಾಗಿದೆ. ಭಾರತದಲ್ಲಿನ ಆಸ್ಪತ್ರೆಗಳು ಲಿಂಗಾಣು ದಾನ, ಗರ್ಭಾಶಯದ ಗರ್ಭಧಾರಣೆ (ಐಯುಐ), ಐವಿಎಫ್, ಐಸಿಎಸ್ಐ, ಪಿಜಿಡಿ ಮತ್ತು ಬಾಡಿಗೆ ಗರ್ಭಾವಸ್ಥೆಯಂತಹ ಬಹುತೇಕ ಎಲ್ಲಾ ಎಆರ್‌ಟಿ ಸೇವೆಗಳನ್ನು ಒದಗಿಸುತ್ತವೆ. ಭಾರತದಲ್ಲಿ ಇಷ್ಟೆಲ್ಲಾ ಚಟುವಟಿಕೆಗಳು ನಡೆಯುತ್ತಿದ್ದರೂ ಪ್ರಮಾಣೀಕರಣ ಮತ್ತು ವರದಿ ಇನ್ನೂ ಅಸಮರ್ಪಕವಾಗಿದೆ.

ಮುಖ್ಯವಾಗಿ ಸಂತ್ರಸ್ತ ಮಹಿಳೆಯರು ಮತ್ತು ಮಕ್ಕಳನ್ನು ಶೋಷಣೆಯಿಂದ ರಕ್ಷಿಸುವುದೇ ಸಂತಾನೋತ್ಪತ್ತಿ ನೆರವಿನ ತಂತ್ರಜ್ಞಾನ ಸೇವೆಗಳ ನಿಯಂತ್ರಣದ ಉದ್ದೇಶವಾಗಿದೆ. ಅಂಡಾಣು ದಾನಿಯನ್ನು ವಿಮೆಯಿಂದ ರಕ್ಷಿಸುವುದು, ಬಹು ಭ್ರೂಣ ಅಳವಡಿಕೆಯಿಂದ ರಕ್ಷಣೆ ಮತ್ತು ಸಂತಾನೋತ್ಪತ್ತಿ ನೆರವಿನ ತಂತ್ರಜ್ಞಾನದ ಮೂಲಕ ಜನಿಸಿದ ಮಕ್ಕಳಿಗೆ ಜೈವಿಕವಾಗಿ ಜನಿಸಿದ ಮಕ್ಕಳಿಗೆ ಸಮಾನವಾದ ಎಲ್ಲಾ ಹಕ್ಕುಗಳನ್ನು ಒದಗಿಸುವುದು ಮುಖ್ಯವಾಗಿದೆ.

ಎಆರ್‌ಟಿ ಬ್ಯಾಂಕುಗಳ ವೀರ್ಯ, ಅಂಡಾಣುಗಳು ಮತ್ತು ಭ್ರೂಣದ ಸಂಗ್ರಹವನ್ನು ನಿಯಂತ್ರಿಸಬೇಕಾಗಿದೆ ಮತ್ತು ಸಂತಾನೋತ್ಪತ್ತಿ ನೆರವಿನ ತಂತ್ರಜ್ಞಾನದ ಮೂಲಕ ಜನಿಸಿದ ಮಗುವಿನ ಅನುಕೂಲಕ್ಕಾಗಿ ಪೂರ್ವ-ಜೆನೆಟಿಕ್ ಇಂಪ್ಲಾಂಟೇಶನ್ ಪರೀಕ್ಷೆಯನ್ನು ಕಡ್ಡಾಯಗೊಳಿಸಲು ಮಸೂದೆ ಉದ್ದೇಶಿಸಿದೆ.

English summary
The Assisted Reproductive Technology (Regulation) Bill, 2020 that proposes the establishment of a national registry and registration authority for all clinics and medical professionals serving in the field was passed by the Lok Sabha on Wednesday.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X