ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಜಲಿಯನ್ ವಾಲಾ ಬಾಗ್ ಸ್ಮಾರಕ ಟ್ರಸ್ಟಿಯಿಂದ ಕಾಂಗ್ರೆಸ್ ಅಧ್ಯಕ್ಷರಿಗೆ ಗೇಟ್ ಪಾಸ್

|
Google Oneindia Kannada News

ನವ ದೆಹಲಿ, ನವೆಂಬರ್ 20: ಕಾಂಗ್ರೆಸ್ ಅಧ್ಯಕ್ಷರನ್ನು ಜಲಿಯನ್ ವಾಲಾ ಬಾಗ್ ರಾಷ್ಟ್ರೀಯ ಸ್ಮಾರಕದ ಖಾಯಂ ಟ್ರಸ್ಟಿಯಿಂದ ತೆಗೆದು ಹಾಕುವ ಮಸೂದೆಯನ್ನು ಸಂಸತ್ತು ಮಂಗಳವಾರ ಅಂಗೀಕರಿಸಿದೆ. ರಾಜ್ಯಸಭೆಯಲ್ಲಿ ಧ್ವನಿ ಮತದ ಮೂಲಕ ಜಲಿಯನ್ ವಾಲಾ ರಾಷ್ಟ್ರೀಯ ಸ್ಮಾರಕ ಮಸೂದೆಗೆ ತಿದ್ದುಪಡಿ ಮಾಡಿ, ಕಾಂಗ್ರೆಸ್ ಮುಖ್ಯಸ್ಥರು ಇನ್ನು ಮುಂದೆ ಖಾಯಂ ಸದಸ್ಯತ್ವದಿಂದ ಹೊರಗಿಡಲಾಗಿದೆ.

'ಮಹಾ'ದಲ್ಲಿ ರಾಷ್ಟ್ರಪತಿ ಆಡಳಿತ: ಅಮಿತ್ ಶಾ ವರದಿ ಸಲ್ಲಿಕೆ'ಮಹಾ'ದಲ್ಲಿ ರಾಷ್ಟ್ರಪತಿ ಆಡಳಿತ: ಅಮಿತ್ ಶಾ ವರದಿ ಸಲ್ಲಿಕೆ

ಲೋಕಸಭೆಯು ಈಗಾಗಲೇ ಅಗಸ್ಟ್ 2 ರಂದು ಈ ಮಸೂದೆಯನ್ನು ಅಂಗೀಕರಿಸಿತ್ತು, ಈಗ ರಾಜ್ಯಸಭೆಯಲ್ಲಿಯೂ ಒಪ್ಪಿಗೆ ದೊರೆತಿದ್ದು ,ರಾಷ್ಟ್ರಪತಿಯವರ ಅಂಕಿತ ಮಾತ್ರ ಬಾಕಿ ಇದೆ. ಈ ಮಸೂದೆಯ ಪ್ರಕಾರ ಇನ್ನು ಮುಂದೆ ಲೋಕಸಭೆಯ ಅತಿದೊಡ್ಡ ವಿರೋಧ ಪಕ್ಷದ ನಾಯಕ ಮಾತ್ರ ಟ್ರಸ್ಟ್ ನ ಸದಸ್ಯರಾಗಲಿದ್ದಾರೆ.

Bill for Removal of Congress Chief as Jallianwala Memorial Trustee Passed in Parliament

ಈ ಕುರಿತು ರಾಜ್ಯಸಭೆಯಲ್ಲಿ ನಡೆದ ಚರ್ಚೆಗೆ ಉತ್ತರಿಸಿದ ಪ್ರವಾಸೋದ್ಯಮ ಮತ್ತು ಸಂಸ್ಕೃತಿ ಸಚಿವ ಪ್ರಹ್ಲಾದ್ ಸಿಂಗ್ ಪಟೇಲ್ "ತಿದ್ದುಪಡೆಯಾಗಿರುವ ಮಸೂದೆಯು ಟ್ರಸ್ಟ್ ಹೊಂದಿದ್ದ ರಾಜಕೀಯ ಬಣ್ಣವನ್ನು ಕೊನೆಯಾಗಿಸುತ್ತದೆ, ಪ್ರತಿಪಕ್ಷಗಳನ್ನು ತರಾಟೆಗೆ ತೆಗೆದುಕೊಂಡ ಅವರು ಮಸೂದೆಯ ಇತರ ನಿಬಂಧನೆಗಳ ಬಗ್ಗೆ ಯಾವುದೇ ಸಮಸ್ಯೆ ಇಲ್ಲ ಆದರೆ ಪಕ್ಷದ ಅಧ್ಯಕ್ಷರನ್ನು ಮಾತ್ರ ಟ್ರಸ್ಟಿಯಿಂದ ತೆಗೆಯಲಾಗಿದೆ ಎಂದು ಹೇಳಿದರು.

Bill for Removal of Congress Chief as Jallianwala Memorial Trustee Passed in Parliament

ಕಸ ಸುಟ್ಟಿದ್ದಕ್ಕಾಗಿ ಮಥುರಾದಲ್ಲಿ 16 ರೈತರ ಬಂಧನಕಸ ಸುಟ್ಟಿದ್ದಕ್ಕಾಗಿ ಮಥುರಾದಲ್ಲಿ 16 ರೈತರ ಬಂಧನ

"ಕಾಂಗ್ರೆಸ್ ಪಕ್ಷವು ಸ್ಮಾರಕ್ಕೆ ಎಷ್ಟು ಚೆಕ್ ನೀಡಿದೆ ಎಂದು ನಾನು ಕೇಳಲು ಬಯಸುತ್ತೇನೆ" ಎಂದರು. ಇತಿಹಾಸವನ್ನು ಪುನಃ ಬರೆಯಲು ಸರ್ಕಾರ ಯತ್ನಿಸುತ್ತಿದೆ ಎಂಬ ಆರೋಪವನ್ನು ಅವರು ಅಲ್ಲಗೆಳೆದರು. "ಇತಿಹಾಸವನ್ನು ಬದಲಾಯಿಸಲು ಯಾರೂ ಬಯಸುವುದಿಲ್ಲ, ಜನರ ದಾರಿ ತಪ್ಪಿಸುವ ಕೆಲಸ ಮಾಡಬೇಡಿ" ಎಂದು ಪಟೇಲ್ ವಿಪಕ್ಷದ ಆರೋಪಗಳಿಗೆ ಉತ್ತರಿಸಿದರು.

English summary
Parliament on Tuesday passed a bill which seeks to remove the Congress president as a trustee of the Jallianwala Bagh National Memorial. which deletes the provision of the Congress chief being a permanent member of the trust which runs the Jallianwala Bagh National Memorial.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X