ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಲೋಕಸಭೆ: ಗರ್ಭಪಾತ ಗರಿಷ್ಠ ಅವಧಿ ಮಿತಿ ಮಸೂದೆ ಮಂಡನೆ

|
Google Oneindia Kannada News

ನವದೆಹಲಿ, ಮಾರ್ಚ್ 2: ಲೋಕಸಭೆಯಲ್ಲಿ ಗರ್ಭಪಾತ ಗರಿಷ್ಠ ಅವಧಿ ಮಿತಿ ಮಸೂದೆ ಮಂಡನೆ ಮಾಡಲಾಗಿದೆ.

ಗರ್ಭಪಾತ ಮಾಡಿಸುವುದಕ್ಕೆ ಅವಕಾಶ ನೀಡುವ ಗರಿಷ್ಠ ಅವಧಿಯ ಮಿತಿಯನ್ನು ಈಗ ಇರುವ 20 ವಾರಗಳಿಂದ 24 ವಾರಗಳಿಗೆ ಏರಿಸುವ ಮಹತ್ವದ ಮಸೂದೆಯನ್ನು ಸರ್ಕಾರ ಸೋಮವಾರ ಲೋಕಸಭೆಯಲ್ಲಿ ಮಂಡಿಸಿದೆ.

ಕಾವೇರಿ ನದಿ ಮುಖಜಭೂಮಿ: ತಮಿಳುನಾಡು ಮಹತ್ವದ ತೀರ್ಮಾನಕಾವೇರಿ ನದಿ ಮುಖಜಭೂಮಿ: ತಮಿಳುನಾಡು ಮಹತ್ವದ ತೀರ್ಮಾನ

ಸರ್ಕಾರ ಈ ಮಸೂದೆಗೆ ಕಳೆದ ತಿಂಗಳು ಅಂಕಿತ ಹಾಕಿತ್ತು. ಸುರಕ್ಷಿತ ಗರ್ಭಪಾತ ಮಾಡಿಸುವುದಕ್ಕೆ ಅವಕಾಶ ನೀಡುವ ನಿಟ್ಟಿನಲ್ಲಿ ಮತ್ತು ಮಹಿಳೆಯರಿಗೆ ಅವರ ಶರೀರದ ಮೇಲಿನ ಪ್ರತ್ಯುತ್ಪಾದನಾ ಹಕ್ಕುಗಳನ್ನು ಖಾತರಿಗೊಳಿಸುವ ವಿಚಾರವಾಗಿ ಈ ಮಸೂದೆ ಸಹಕಾರಿ ಎಂದು ಸರ್ಕಾರ ಹೇಳಿಕೊಂಡಿದೆ.

Bill For Extending Upper Limit Of Abortion To 24 Weeks

ಕೇಂದ್ರ ಆರೋಗ್ಯ ಸಚಿವ ಹರ್ಷವರ್ಧನ್​ ಅವರು ಇಂದು ದ ಮೆಡಿಕಲ್ ಟರ್ಮಿನೇಷನ್​ ಆಫ್ ಪ್ರೆಗ್ನೆನ್ಸಿ(ಅಮೆಂಡಮೆಂಟ್​) ಬಿಲ್ 2020 ಅನ್ನು ಲೋಕಸಭೆಯಲ್ಲಿ ಮಂಡಿಸಿದ್ದಾರೆ.

ಈಶಾನ್ಯ ದೆಹಲಿ ಹಿಂಸಾಚಾರಕ್ಕೆ ಸಂಬಂಧಿಸಿ 40ಕ್ಕೂ ಹೆಚ್ಚು ಜನ ಸಾವನ್ನಪ್ಪಿರುವ ವಿಚಾರದಲ್ಲಿ ಲೋಕಸಭೆಯಲ್ಲಿ ಪ್ರತಿಪಕ್ಷ ಸದಸ್ಯರು ಮಾತಿಗೆ ಅವಕಾಶ ಕೋರಿದಾಗ ಉಂಟಾದ ಗದ್ದಲದ ನಡುವೆಯೇ ಈ ಮಸೂದೆ ಮಂಡನೆ ಆಗಿದೆ.

ಗರ್ಭಧಾರಣೆಯ 20ನೇ ವಾರದ ಬಳಿಕ ಗರ್ಭಿಣಿಯರಲ್ಲಿ ಗಂಭೀರ ಅಸಹಜ ಸಮಸ್ಯೆಗಳು ಕಂಡುಬಂದ ಅನೇಕ ಪ್ರಕರಣಗಳು ವರದಿಯಾಗಿರುವುದನ್ನು ಅಧ್ಯಯನಗಳು ತಿಳಿಸಿವೆ. ಗರ್ಭಾವಸ್ಥೆಯನ್ನು ಮುಂದವರಿಸಲು ಬಯಸುವ ಗರ್ಭಿಣಿಯರು ಗರ್ಭಪಾತವನ್ನು ಆಯ್ಕೆ ಮಾಡಿಕೊಳ್ಳುವ ಮಹಿಳೆಯರಿಗೆ ಹೋಲಿಸಿದರೆ ಮಾನಸಿಕ ಉದ್ವೇಗ, ಆತಂಕಕ್ಕೆ ಒಳಗಾಗುತ್ತಾರೆ. ಹೀಗಾಗಿ ಅವರಲ್ಲಿ ಆರೋಗ್ಯದ ಸಮಸ್ಯೆಗಳು ಹೆಚ್ಚುವ ಅಪಾಯವಿದೆ ಎಂದು ಸರ್ಕಾರ ಹೇಳಿದೆ.

ಅತ್ಯಾಚಾರ ಸಂತ್ರಸ್ತೆಯರಿಗೆ ಮತ್ತು ಅಪ್ರಾಪ್ತೆಯರಿಗೆ, ಅಂಗವೈಕಲ್ಯ ಹೊಂದಿದವರಿಗೆ ಮತ್ತು ತಾವು ಗರ್ಭ ಧರಿಸಿದ ವಿಚಾರ ಅರಿವಿಗೆ ಬಾರದೇ ಇದ್ದವರಿಗೆ ನೆರವಾಗುವ ವಿಶೇಷ ವಿಷಯಗಳು ಈ ಮಸೂದೆಯಲ್ಲಿದೆ.

English summary
A bill that seeks to extend the upper limit for permitting abortions from the present 20 weeks to 24 weeks was introduced in Lok Sabha on Monday.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X