ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮೋದಿಯ ಅಭಿಮಾನಕ್ಕಾಗಿ ಟೀ ಮಾರಲು ಬಂದ ಬಿಹಾರದ ಯುವಕ

|
Google Oneindia Kannada News

ನವದೆಹಲಿ, ಮೇ 30: ಪ್ರಧಾನಿ ನರೇಂದ್ರ ಮೋದಿ ಅವರ ಅಭಿಮಾನಿಗಳ ಸಂಭ್ರಮಕ್ಕೀಗ ಪಾರವೇ ಇಲ್ಲ. ಎಲ್ಲೆಡೆ ಮೋದಿ ಅವರ ಪರವಾಗಿ ಜಯಘೋಷ ಮೊಳಗಿಸುತ್ತಿದ್ದಾರೆ. ಇನ್ನು ಕೆಲವರು ಮೋದಿ ಅವರ ಅಭಿಮಾನಕ್ಕಾಗಿ ಹತ್ತಾರು ಕೆಲಸಗಳನ್ನು ಮಾಡುತ್ತಿದ್ದಾರೆ.

ನವದೆಹಲಿಯ ರಾಷ್ಟ್ರಪತಿ ಭವನದಲ್ಲಿ ಗುರುವಾರ ಸಂಜೆ ಮೋದಿ ಅವರು ಎರಡನೆಯ ಅವಧಿಗೆ ಪ್ರಧಾನಿಯಾಗಿ ಪ್ರಮಾಣವಚನ ಸ್ವೀಕರಿಸಲಿದ್ದಾರೆ. ಈ ಸಮಾರಂಭಕ್ಕೆ ಸಾವಿರಾರು ಗಣ್ಯರನ್ನು ಆಹ್ವಾನಿಸಲಾಗಿದೆ. ಇನ್ನು ಸಮಾರಂಭ ನಡೆಯುವ ಸ್ಥಳಕ್ಕೆ ಪ್ರವೇಶ ಸಿಗದಿದ್ದರೂ, ಮೋದಿ ಅವರು ಮತ್ತೆ ಅಧಿಕಾರಕ್ಕೇರುವ ಗಳಿಗೆಯನ್ನು ಆನಂದಿಸಲು ಸಾವಿರಾರು ಮಂದಿ ದೆಹಲಿಗೆ ತೆರಳಿದ್ದಾರೆ.

ಚಹಾ ವಿತರಿಸಿ ಸಂಭ್ರಮಿಸಿದ ಮೋದಿ ಅಭಿಮಾನಿಗಳುಚಹಾ ವಿತರಿಸಿ ಸಂಭ್ರಮಿಸಿದ ಮೋದಿ ಅಭಿಮಾನಿಗಳು

ಬಿಜೆಪಿ ಬಾವುಟಗಳನ್ನು, ಮೋದಿ ಅವರ ಭಾವಚಿತ್ರಗಳನ್ನು ಹಿಡಿದು ಪ್ರಮುಖ ಬೀದಿಗಳಲ್ಲಿ ಓಡಾಡಿ ಖುಷಿ ಪಡುತ್ತಿದ್ದಾರೆ. ಅವರ ನಡುವೆ ಬಿಹಾರದ ಯುವಕನೊಬ್ಬ ಗಮನ ಸೆಳೆದಿದ್ದಾನೆ.

bihar resident ashok selling tea in narendra modi swearing in ceremony

ಪ್ರಧಾನಿ ಮೇಲಿನ ಅಭಿಮಾನ ಮೆರೆಯಲು ಬಿಹಾರದ ಯುವಕ ಅಶೋಕ್, ದೆಹಲಿಯ ಬೀದಿಗಳಲ್ಲಿ ಚಹಾ ಮಾರುತ್ತಿದ್ದಾನೆ. ತಮ್ಮ ಮೈಮೇಲೆ ಮೋದಿ ಅವರ ಚಿತ್ರವನ್ನು ಬರೆಸಿಕೊಂಡಿರುವ ಆತ, ಮೋದಿ ಅವರು ಸಹ ತನ್ನ ವೃತ್ತಿ ಮಾಡುತ್ತಿದ್ದರು ಎಂಬುದನ್ನು ಹೆಮ್ಮೆಯಿಂದ ತೋರಿಸಿಕೊಳ್ಳುತ್ತಿದ್ದಾನೆ.

ಮೋದಿ ಪ್ರಮಾಣ ವಚನ; ಸುಳ್ಯದಲ್ಲಿ 10 ಸಾವಿರ ಲಡ್ಡು ರೆಡಿಮೋದಿ ಪ್ರಮಾಣ ವಚನ; ಸುಳ್ಯದಲ್ಲಿ 10 ಸಾವಿರ ಲಡ್ಡು ರೆಡಿ

ಮುಜಫ್ಫರ್‌ಪುರದ ನಿವಾಸಿಯಾಗಿರುವ ಅಶೋಕ್, ತನ್ನ ಊರಿನಲ್ಲಿ ಚಹಾ ಮಾರುತ್ತಾನೆ. ಮೋದಿ ಅವರು ಸಾರ್ವಜನಿಕ ಸಭೆಗಳನ್ನು ಆಯೋಜಿಸಿದ ಸ್ಥಳಗಳಿಗೆಲ್ಲ ತೆರಳಿ ಅಲ್ಲಿಯೂ ಚಹಾ ಮಾರಲು ಪ್ರಯತ್ನಿಸುತ್ತಾನೆ. ರಾಷ್ಟ್ರಪತಿ ಭವನದಲ್ಲಿ ಪ್ರಮಾಣವಚನ ಸ್ವೀಕಾರ ಸಮಾರಂಭ ಮುಗಿಯುವರೆಗೂ ಆತ ಚಹಾ ಮಾರಾಟ ಮಾಡಲು ನಿರ್ಧರಿಸಿದ್ದಾನೆ. 'ಸಮಾರಂಭ ಮುಗಿದ ಬಳಿಕ ನನ್ನ ಊರಿಗೆ ಮರಳಿ ಹೋಗುತ್ತೇನೆ' ಎಂದು ಆತ ತಿಳಿಸಿದ್ದಾನೆ.

English summary
A resident from Bihar's Muzaffarpur Ashok is selling tea in Delhi. He wants to sell tea until the ceremony.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X