ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮಹಾಘಟಬಂಧನಕ್ಕೆ ಭಾರೀ ಮುಖಭಂಗ: ಸಭೆಗೆ ಗೈರಾಗಲು ದೀದಿ, ಮಾಯ ನಿರ್ಧಾರ

|
Google Oneindia Kannada News

ನವದೆಹಲಿ, ಮೇ 13: ಲೋಕಸಭೆ ಚುನಾವಣೆ ಫಲಿತಾಂಶಕ್ಕೂ ಮುನ್ನ ಪ್ರಧಾನಿ ಅಭ್ಯರ್ಥಿ ಆಯ್ಕೆಗಾಗಿ ಸಭೆ ಸೇರಲಿರುವ ವಿಪಕ್ಷಗಳಿಗೆ ಭಾರೀ ಆಘಾತ ಎದುರಾಗಿದೆ.

ಲೋಕಸಭಾ ಚುನಾವಣೆ 2019 : ವಿಶೇಷ ಪುಟ | ಗ್ಯಾಲರಿ

ವಿಪಕ್ಷಗಳ ಮಹಾಘಟಬಂಧಕ್ಕೆ ಬೆಂಬಲ ಸೂಚಿಸಿದ್ದ ಪಶ್ಚಿಮ ಬಂಗಾಳದ ಮುಖ್ಯಮಂತ್ರಿ, ಟಿಎಂ ಸಿ ನಾಯಕಿ ಮಮತಾ ಬ್ಯಾನರ್ಜಿ ಈ ಸಭೆಗೆ ಗೈರಾಗುವ ಸಾಧ್ಯತೆ ಇದೆ.

ಮೇ 21 ರಂದು ರಾಷ್ಟ್ರ ರಾಜಕಾರಣದಲ್ಲಿ ಮಹತ್ವದ ಬೆಳವಣಿಗೆ, ಏನದು?ಮೇ 21 ರಂದು ರಾಷ್ಟ್ರ ರಾಜಕಾರಣದಲ್ಲಿ ಮಹತ್ವದ ಬೆಳವಣಿಗೆ, ಏನದು?

ಅಷ್ಟೇ ಅಲ್ಲ, ಬಿಎಸ್ಪಿ ನಾಯಕಿ ಮಾಯಾವತಿ ಮತ್ತು ಸಮಾಜವಾದಿ ಪಕ್ಷದ ನಾಯಕ ಅಖಿಲೇಶ್ ಯಾದವ್ ಅವರೂ ಈ ಸಭೆ ಬಗ್ಗೆ ಋಣಾತ್ಮಕ ಅಭಿಪ್ರಾಯ ನೀಡಿದ್ದು, ಅವರೂ ಹಾಜರಾಗುವುದಿಲ್ಲ ಎನ್ನಲಾಗಿದೆ.

Big set back to grand alliance: Mayawati, Mamata, Akhilesh may skip the meeting

ಈಗಾಗಲೇ ಕಾಂಗ್ರೆಸ್ ಜೊತೆ ಅಷ್ಟೊಂದು ಉತ್ತಮ ಬಾಂಧವ್ಯ ಹೊಂದಿಲ್ಲದ ಟಿಎಂಸಿ ಮತ್ತು ಬಿಎಸ್ಪಿ-ಎಸ್ಪಿ ಪಕ್ಷಗಳು ತಮ್ಮ ತಮ್ಮ ರಾಜ್ಯದಲ್ಲೂ ಕಾಂಗ್ರೆಸ್ ಜೊತೆ ಚುನಾವಣಾ ಪೂರ್ವ ಮೈತ್ರಿಗೆ ಒಲ್ಲೆ ಎಂದಿದ್ದವು.

ಅಖಾಡಕ್ಕಿಳಿದ ನಾಯ್ಡು, ದೇಶದ ರಾಜಕೀಯದಲ್ಲಿನ್ನು ಮಿಂಚಿನ ಸಂಚಾರ!ಅಖಾಡಕ್ಕಿಳಿದ ನಾಯ್ಡು, ದೇಶದ ರಾಜಕೀಯದಲ್ಲಿನ್ನು ಮಿಂಚಿನ ಸಂಚಾರ!

ಕಾಂಗ್ರೆಸ್ ನೇತೃತ್ವದಲ್ಲಿ ಚುನಾವಣೆ ಫಲಿತಾಂಶಕ್ಕೂ ಮುನ್ನ ಮಹತ್ವದ ಸಭೆ ನಡೆಸಲು ನಿರ್ಧರಿಸಲಾಗಿತ್ತು. ಅದಕ್ಕೆ ಬ್ಯಾನರ್ಜಿ, ಮಾಯಾವತಿ, ಅಖಿಲೇಶ್ ಹೀಗೆ ಮಹಾಮೈತ್ರಿಕೂಟದ ಎಲ್ಲ ಸದಸ್ಯರನ್ನೂ ಆಮಂತ್ರಿಸಲಾಗಿತ್ತು. ಪ್ರಧಾನಿ ಅಭ್ಯರ್ಥಿಯನ್ನು ಆರಿಸುವುದಕ್ಕೆಂದು ಆಯೋಜಿಸಿರುವ ಈ ಸಭೆಗೆ ಮಾಯಾವತಿ, ಮಮತಾ ಬ್ಯಾನರ್ಜಿ ಹಾಜರಾಗದೆ ಇರಲು ನಿರ್ಧರಿಸುವ ಮೂಲಕ ಮಹಾಘಟಬಂಧನಕ್ಕೆ ತಮ್ಮ ಬೆಂಬಲವಿಲ್ಲ ಎಂಬ ಸೂಚನೆ ನೀಡಿವೆ.

ಮಹತ್ವದ ಬೆಳವಣಿಗೆಯಲ್ಲಿ ತೆಲಂಗಾಣ ಮುಖ್ಯಮಂತ್ರಿ ಕೆ ಚಂದ್ರಶೇಖರ್ ರಾವ್ ಅವರೂ ಕಾಂಗ್ರೆಸ್ ನೇತೃತ್ವದ ಮಹಾಮೈತ್ರಿಕೂಟಕ್ಕೆ ತಮ್ಮ ಬೆಂಬಲ ಸೂಚಿಸುವ ಸಾಧ್ಯತೆಗಳಲಿದ್ದು, ಅವರೂ ಸಸಭೆಯಲ್ಲಿ ಭಾಗವಹಿಸಬಹುದು.

English summary
In a big set back to Grand alliance who are going to meet on 21st May in Delhi to choose PM Candidate, Mamata Banerjee, Mayawati and Akhilesh Yadav may skip the meeting.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X