ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ವಿಚಾರವಾದಿಗಳ ಬಂಧನ: ಎಡಪಕ್ಷಗಳಿಂದ ಇಂದು ಪ್ರತಿಭಟನೆ

|
Google Oneindia Kannada News

ನವದೆಹಲಿ, ಆಗಸ್ಟ್ 30: ವಿಚಾರವಾದಿಗಳ ಬಂಧನವನ್ನು ವಿರೋಧಿಸಿ ನವದೆಹಲಿಯ ಜಂತರ್ ಮಂತರ್ ನಲ್ಲಿ ಎಡಪಕ್ಷಗಳು ಇಂದು(ಆ.30) ಪ್ರತಿಭಟನೆ ನಡೆಸಲು ನಿರ್ಧರಿಸಿವೆ.

ಮಹಾರಾಷ್ಟ್ರದಲ್ಲಿ ಕಳೆದ ಡಿಸೆಂಬರ್-ಜನವರಿಯಲ್ಲಿ ನಡೆದ ಭೀಮಾ ಕೊರೆಗಾಂವ್ ವರ್ಷಾಚರಣೆಯ ಸಂದರ್ಭದ ಹಿಂಸಾಚಾರದಲ್ಲಿ ಕೆಲವು ವಿಚಾರವಾದಿಗಳ ಕೈವಾಡವಿದೆ ಎಂದು ಅವರನ್ನು ಮಂಗಳವಾರ ಬಂಧಿಸಲಾಗಿತ್ತು.

ಬಂಧಿತರಾಗಿರುವ ಐವರು ವಿಚಾರವಾದಿಗಳು ಯಾರು, ಅವರ ಹಿನ್ನೆಲೆ ಏನು?ಬಂಧಿತರಾಗಿರುವ ಐವರು ವಿಚಾರವಾದಿಗಳು ಯಾರು, ಅವರ ಹಿನ್ನೆಲೆ ಏನು?

ಆದರೆ ಈ ಬಂಧನವನ್ನು 'ನೈತಿಕತೆಯ ಅಧಃಪತನ' ಎಂದು ಕರೆದಿರುವ ಎಡಪಕ್ಷಗಳು, ಬಂಧನದ ವಿರುದ್ಧ ಇಂದು ಪ್ರತಿಭಟನೆ ನಡೆಸಲಿವೆ ಎಂದು ಸಿಪಿಐಎಂ ಪಕ್ಷದ ಪ್ರಧಾನ ಕಾರ್ಯದರ್ಶಿ ಸೀತಾರಾಮ್ ಯೆಚೂರಿ ಹೇಳಿದ್ದಾರೆ.

Bhima Koregao: Left parties to protest against arrest of activists today at Delhi

ಮಂಗಳವಾರ ಸಂಜೆ ದೆಹಲಿ, ಹೈದರಾಬಾದ್ ಸೇರಿದಂತೆ ಹಲವು ನಗರಗಳಲ್ಲಿರುವ ವಿಚಾರವಾದಿಗಳ ಮನೆಯ ಮೇಲೆ ಏಕಕಾಲಕ್ಕೆ ದಾಳಿ ನಡೆಸಲಾಗಿತ್ತು.

ದಲಿತರ ಭೀಮಾ ಕೋರೆಗಾಂವ್ ಕದನದ ಇತಿಹಾಸದಲಿತರ ಭೀಮಾ ಕೋರೆಗಾಂವ್ ಕದನದ ಇತಿಹಾಸ

ಆಂಧ್ರದ ಕ್ರಾಂತಿಕಾರಿ ಕವಿ ವರವರ ರಾವ್, ನಾಗರೀಕ ಹಕ್ಕುಗಳ ಹೋರಾಟಗಾರ್ತಿ ಸುಧಾ ಭಾರದ್ವಾಜ್, ಲೇಖಕ ಆನಂದ ತೆಲ್ತುಂಬ್ಡೆ, ಮಾನವ ಹಕ್ಕು ಕಾರ್ಯಕರ್ತ ಅರುಣ್, ಪತ್ರಕರ್ತ ಗೌತಮ್, ಮಾನವ ಹಕ್ಕುಗಳ ಕಾರ್ಯಕರ್ತೆ ಸುಸಾನ್ ಅಬ್ರಹಾಂ, ಸಾಮಾಜಿಕ ಹೋರಾಟಗಾರ ಗೊನ್ಸಾಲ್ವಿಸ್ ಅವರುಗಳನ್ನು ಮಹಾರಾಷ್ಟ್ರ ಪೊಲೀಸರು ಬಂಧಿಸಲಾಗಿದೆ.

ಏನಿದು ಭೀಮಾ ಕೊರೆಗಾಂವ್ ವಿವಾದ? ವಿಚಾರವಾದಿಗಳ ಬಂಧನ ಏಕೆ?ಏನಿದು ಭೀಮಾ ಕೊರೆಗಾಂವ್ ವಿವಾದ? ವಿಚಾರವಾದಿಗಳ ಬಂಧನ ಏಕೆ?

ಭೀಮಾ ಕೊರೆಗಾಂವ್ ಹಿಸಾಚಾರದಲ್ಲಿ ಕೈವಾಡ, ಮಾವೋವಾದಿಗಳೊಂದಿಗೆ ನಂಟು, ಮತ್ತು ಮೋದಿ ಹತ್ಯೆಗೆ ಸಂಚು ರೂಪಿಸಿದ್ದ ಮಾವೋವಾದಿಗಳ ಪತ್ರ ಪೊಲೀಸರ ಕೈ ಸೇರಿರುವುದು ಎಲ್ಲವುಗಳ ಆರೋಪದ ಮೇಲೆ ವಿಚಾರವಾದಿಗಳನ್ನು ಬಂಧಿಸಲಾಗಿದೆ.

English summary
Bhima-Koregaon Raids: Left parties will on Thursday lead a protest at the Jantar Mantar in New Delhi, against the arrest of social activists.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X