• search
  • Live TV
ನವದೆಹಲಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

'ರತನ್ ಟಾಟಾಗೆ ಭಾರತ ರತ್ನ ನೀಡಬೇಕು': ಟ್ವಿಟ್ಟರ್ ನಲ್ಲಿ ಅಭಿಯಾನ

|

ನವ ದೆಹಲಿ, ಏಪ್ರಿಲ್ 10: ಭಾರತದ ಖ್ಯಾತ ಉದ್ಯಮಿ, ಟಾಟಾ ಗೂಪ್ ಚೇರ್ ಮನ್ ರತನ್ ಟಾಟಾ ಅವರಿಗೆ ಭಾರತ ರತ್ನ ನೀಡಬೇಕು ಎಂದು ಟ್ವಿಟ್ಟರ್‌ನಲ್ಲಿ ಅಭಿಯಾನ ಶುರು ಮಾಡಲಾಗಿದೆ. ಪ್ರಧಾನ ಮಂತ್ರಿ ನರೇಂದ್ರ ಮೋದಿಗೆ ಈ ಬಗ್ಗೆ ಹಲವರು ಮನವಿ ಮಾಡುತ್ತಿದ್ದಾರೆ.

ರತನ್ ಟಾಟಾ ಸಾಧನೆ, ಭಾರತಕ್ಕೆ ಅವರ ಕೊಡುಗೆ, ಅವರ ಚಾರಿಟಿ ಹಾಗೂ ಕೊರೊನಾ ಸಮಯದಲ್ಲಿ ಅವರು ಸ್ಪಂದಿಸುತ್ತಿರುವ ರೀತಿಯನ್ನು ಗಮನಿಸಿ ಈ ಅಭಿಯಾನ ಪ್ರಾರಂಭ ಮಾಡಿದ್ದಾರೆ. ಭಾರತ ರತ್ನ ಪಡೆಯುವ ಅರ್ಹತೆ ರತನ್ ಟಾಟಾರಿಗೆ ಇದೆ ಎಂದು ಅನೇಕರು ಹೇಳಿದ್ದಾರೆ.

ನೆಟ್ಟಿಗರ ಮನ ಗೆದ್ದ ರತನ್ ಟಾಟಾ ಎಮೋಷನಲ್ ಪೋಸ್ಟ್‌

ನೂರಾರೂ ಸರಣಿ ಟ್ವೀಟ್‌ಗಳು ಬಂದಿವೆ. ರತನ್ ಟಾಟಾ ಅವರಿಗೆ ಭಾರತ ರತ್ನದ ಅಗತ್ಯ ಇಲ್ಲ. ಆದರೆ, ಭಾರತ ರತ್ನಕ್ಕೆ ರತನ್ ಟಾಟಾ ಅವರ ಅಗತ್ಯ ಇದೆ ಎಂದು ಕೆಲವರು ಬರೆದುಕೊಂಡಿದ್ದಾರೆ.

ರತನ್ ಟಾಟಾ

ರತನ್ ಟಾಟಾ ಕೊರೊನಾ ವಿರುದ್ಧ ಹೋರಾಟಕ್ಕೆ 1500 ಕೋಟಿ ರೂಪಾಯಿ ನೀಡುವುದಾಗಿ ತಿಳಿಸಿದ್ದರು. ಬ್ಯುಸಿನೆಸ್ ಕಂಪನಿಯೊಂದು ಕೊರೊನಾ ನಿಯಂತ್ರಣಕ್ಕೆ ಘೋಷಣೆ ಮಾಡಿದ ಅತಿ ಹೆಚ್ಚು ಹಣ ಇದಾಗಿದೆ. ರತನ್ ಟಾಟಾ ನಿರ್ಧಾರವನ್ನು ಸಾವಿರರೂ ಜನರು ಟ್ವಿಟ್ಟರ್ ನಲ್ಲಿ ಮೆಚ್ಚಿಕೊಂಡಿದ್ದಾರೆ.

ಕೊರೊನಾ ತಡೆಗೆ ಆಸ್ಪತ್ರೆ ನಿರ್ಮಾಣ

ಕೊರೊನಾ ತಡೆಗೆ ಆಸ್ಪತ್ರೆ ನಿರ್ಮಾಣಕ್ಕೆ ಸಹ ಕೈ ಜೋಡಿಸುವುದಾಗಿ ರತ್ನ್ ಟಾಟಾ ತಿಳಿಸಿದ್ದಾರೆ. ಜೊತೆಗೆ ಕೊರೊನಾಗೆ ಚಿಕಿತ್ಸೆ ನೀಡುತ್ತಿರುವ ವೈದ್ಯರಿಗೆ ತಾಜ್ ಹೋಟೆಲ್‌ನಲ್ಲಿ ಉಳಿದುಕೊಳ್ಳಲು ಸಹಾಯ ಮಾಡಿದ್ದರು.

ಟ್ವಿಟ್ಟರ್ ಅಭಿಯಾನ

ಟ್ವಿಟ್ಟರ್ ಅಭಿಯಾನದ ಜೊತೆಗೆ ಆನ್ ಲೈನ್ ಪಿಟಿಷನ್ ಕೂಡ ಸಿದ್ಧ ಮಾಡಿದ್ದು, ಇಲ್ಲಿ 14 ಲಕ್ಷಕ್ಕೂ ಅಧಿಕ ಜನರು ಇದಕ್ಕೆ ಸಹಿ ಹಾಕಿದ್ದಾರೆ.

ಬರೀ 1500 ಕೋಟಿ ಅಲ್ಲ

''ಬರೀ 1500 ಕೋಟಿ ಅಲ್ಲ. ದೇಶದ ಕಷ್ಟ ಬಂದರೆ, ನಾನು ನನ್ನ ಎಲ್ಲ ಆಸ್ತಿಯನ್ನು ನೀಡುತ್ತೇನೆ'' ಎಂದು ಹೇಳಿದ ರತನ್ ಟಾಟಾ ಮಾತನ್ನು ಸಾಕಷ್ಟು ಮಂದಿ ಟ್ವಿಟ್ಟರ್ ನಲ್ಲಿ ಉಲ್ಲೇಖ ಮಾಡಿದ್ದಾರೆ.

English summary
Bharat Ratna for Ratan Tata a campaign in twitter. People demand Bharat Ratna to Ratan Tata.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X