ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಲಸಿಕೆ ತುರ್ತು ಬಳಕೆಗೆ ಮತ್ತೆ ಅರ್ಜಿ; ಅನುಮೋದನೆ ಸಿಗುವುದು ಯಾವಾಗ?

|
Google Oneindia Kannada News

ನವದೆಹಲಿ, ಡಿಸೆಂಬರ್ 24: ಭಾರತದ ಲಸಿಕಾ ಉತ್ಪಾದಕ ಸಂಸ್ಥೆ ಭಾರತ್ ಬಯೋಟೆಕ್ ತನ್ನ "ಕೊವಾಕ್ಸಿನ್" ಲಸಿಕೆಯ ತುರ್ತು ಬಳಕೆಗೆ ಅನುಮತಿ ಕೋರಿ ಮತ್ತೆ ಅರ್ಜಿ ಸಲ್ಲಿಸಿರುವುದಾಗಿ ತಿಳಿದುಬಂದಿದೆ.

ಹೈದರಾಬಾದ್ ಮೂಲದ ಭಾರತ್ ಬಯೋಟೆಕ್ ಭಾರತದ ವಿವಿಧೆಡೆಗಳಲ್ಲಿ ಕೊವಾಕ್ಸಿನ್ ಲಸಿಕೆಯ ಮೂರನೇ ಹಂತದ ಪ್ರಯೋಗ ನಡೆಸುತ್ತಿದೆ. ಇದೀಗ ಮತ್ತೆ ಲಸಿಕೆಯ ತುರ್ತು ಬಳಕೆಗೆ ಅನುಮತಿ ಕೋರಿ ಡಿಸಿಜಿಐಗೆ ಅರ್ಜಿ ಸಲ್ಲಿಸಿರುವುದಾಗಿ ಮೂಲಗಳು ತಿಳಿಸಿವೆ. ಮುಂದೆ ಓದಿ...

ಮುಂದಿನ ವಾರದೊಳಗೆ ಭಾರತದಲ್ಲಿ ಲಸಿಕೆ ತುರ್ತು ಬಳಕೆಗೆ ಅನುಮತಿಮುಂದಿನ ವಾರದೊಳಗೆ ಭಾರತದಲ್ಲಿ ಲಸಿಕೆ ತುರ್ತು ಬಳಕೆಗೆ ಅನುಮತಿ

 ಭಾರತದಲ್ಲಿ ಮೂರನೇ ಹಂತದ ಪ್ರಯೋಗ

ಭಾರತದಲ್ಲಿ ಮೂರನೇ ಹಂತದ ಪ್ರಯೋಗ

ಭಾರತದ 25 ಕಡೆಗಳಲ್ಲಿ 26,000 ಸ್ವಯಂ ಸೇವಕರನ್ನು ಒಳಗೊಂಡಂತೆ ಮೂರನೇ ಹಂತದ ಲಸಿಕೆ ಪ್ರಯೋಗ ನಡೆಯುತ್ತಿದ್ದು, ಮೊದಲು ಹಾಗೂ ಎರಡನೇ ಹಂತದ ಪ್ರಯೋಗವನ್ನು ಸಾವಿರ ಮಂದಿ ಮೇಲೆ ನಡೆಸಲಾಗಿತ್ತು. ಹೀಗಾಗಿ ಡಿ.7ರಂದು ಲಸಿಕೆಯ ತುರ್ತು ಬಳಕೆಗೆ ಅನುಮತಿ ಕೋರಿ ಪ್ರಸ್ತಾವ ಸಲ್ಲಿಸಿತ್ತು. ಪ್ರಸ್ತಾವದೊಂದಿಗೆ ಮೊದಲ ಹಾಗೂ ಎರಡನೇ ಹಂತದ ಪರೀಕ್ಷೆಯ ವರದಿಯನ್ನೂ ಸಲ್ಲಿಸಿತ್ತು.

ಹೆಚ್ಚುವರಿ ಮಾಹಿತಿ ಕೇಳಿದ್ದ ಸಂಸ್ಥೆ

ಹೆಚ್ಚುವರಿ ಮಾಹಿತಿ ಕೇಳಿದ್ದ ಸಂಸ್ಥೆ

ಕೇಂದ್ರ ಔಷಧ ಪ್ರಮಾಣಿತ ನಿಯಂತ್ರಣ ಸಂಸ್ಥೆಯ ತಜ್ಞರು ಲಸಿಕೆಯ ಸುರಕ್ಷತೆ ಮತ್ತು ಪರಿಣಾಮಕಾರಿ ಅಂಶಗಳ ಹೆಚ್ಚುವರಿ ಮಾಹಿತಿಯನ್ನು, ಹೆಚ್ಚು ಅಂಕಿ ಅಂಶಗಳನ್ನು ಒದಗಿಸುವಂತೆ ತಿಳಿಸಿದ್ದರು. ಈ ನಡುವೆ ಬುಧವಾರ ಸೆರಂ ಇನ್ ಸ್ಟಿಟ್ಯೂಟ್ ಹೆಚ್ಚುವರಿ ಅಂಕಿ ಅಂಶಗಳನ್ನು ಒದಗಿಸಿದ್ದು, ಕೆಲವೇ ದಿನಗಳಲ್ಲಿ ಅನುಮೋದನೆ ಸಿಗುವ ಸೂಚನೆ ದೊರೆತಿದೆ.

 ಡಿಸೆಂಬರ್ ಒಳಗೆ ಲಸಿಕೆ ತುರ್ತು ಬಳಕೆಗೆ ಅನುಮತಿ

ಡಿಸೆಂಬರ್ ಒಳಗೆ ಲಸಿಕೆ ತುರ್ತು ಬಳಕೆಗೆ ಅನುಮತಿ

ಭಾರತದಲ್ಲಿ ಡಿಸೆಂಬರ್ ಒಳಗೆ ಕೊರೊನಾ ಲಸಿಕೆಗಳ ತುರ್ತು ಬಳಕೆಗೆ ಅನುಮತಿ ದೊರೆಯಲಿದ್ದು, ಸೆರಂ ಇನ್ ಸ್ಟಿಟ್ಯೂಟ್, ಫೈಜರ್ ಲಸಿಕೆಗಳ ತುರ್ತು ಬಳಕೆ ಕುರಿತು ತಜ್ಞರ ಸಮಿತಿ ಪರಿಶೀಲನೆ ನಡೆಸುತ್ತಿರುವುದಾಗಿ ತಿಳಿದುಬಂದಿದೆ. ಸೆರಂ ಇನ್ ಸ್ಟಿಟ್ಯೂಟ್ ಗೆ ಮೊದಲು ಅನುಮತಿ ದೊರೆತದ್ದೇ ಆದರೆ, ಭಾರತದಲ್ಲಿ ಆಸ್ಟ್ರಾಜೆನೆಕಾ ಲಸಿಕೆಯನ್ನು ಆರಂಭಿಕ ಹಂತದಲ್ಲಿ ನೀಡಲಾಗುತ್ತದೆ.

 ಅರ್ಜಿ ಸಲ್ಲಿಸಿರುವ ಲಸಿಕಾ ಸಂಸ್ಥೆಗಳು

ಅರ್ಜಿ ಸಲ್ಲಿಸಿರುವ ಲಸಿಕಾ ಸಂಸ್ಥೆಗಳು

ಅಮೆರಿಕದ ಫೈಜರ್ ಲಸಿಕೆಗೆ ಡಿಸೆಂಬರ್ 4ಕ್ಕೆ ಅನುಮತಿ ಕೋರಲಾಗಿತ್ತು. ಡಿಸೆಂಬರ್ 6ರಂದು ಸೆರಂ ಇನ್ ಸ್ಟಿಟ್ಯೂಟ್ ಹಾಗೂ ಡಿ.7ರಂದು ಭಾರತ್ ಬಯೋಟೆಕ್ ಅನುಮತಿ ಕೋರಿತ್ತು. ಇದೀಗ ತುರ್ತು ಬಳಕೆಗೆ ಯಾರಿಗೆ ಅನುಮತಿ ದೊರೆಯುತ್ತದೆ ಎಂಬ ಕುರಿತು ಚರ್ಚೆ ನಡೆಯುತ್ತಿದೆ.

English summary
It is said that Bharat Biotech has again applied for authorisation to emergency use of covaxin,
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X