ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬೆಂಗಳೂರಿನ ಬಾಲಕೃಷ್ಣ ಈಗ ಮಿಸ್ಟರ್ ಏಷ್ಯಾ!

|
Google Oneindia Kannada News

ನವದೆಹಲಿ, ಅಕ್ಟೋಬರ್. 25: ಇತ್ತೀಚೆಗೆ ಫಿಲಿಪ್ಪೈನ್ಸ್ ನಲ್ಲಿ ನಡೆದ ಫಿಲಿ-ಏಷ್ಯಾ ಚಾಂಪಿಯನ್ ಷಿಪ್ ನಲ್ಲಿ ಬೆಂಗಳೂರು ವೈಟ್ ಫೀಲ್ಡ್ ಮೂಲದ ಜಿ.ಬಾಲಕೃಷ್ಣ (25) ಎಂಬ ಟ್ಯಾಂಕರ್ ಡ್ರೈವರ್ ಪ್ರತಿಷ್ಠಾತ್ಮಕವಾದ ಐದನೇ ಫಿಲಿ-ಏಷ್ಯಾ ಬಾಡಿ ಬಿಲ್ಡಿಂಗ್ ಚಾಂಪಿಯನ್ ಷಿಪ್ ಟೈಟಿಲ್ ಪುರಸ್ಕಾರಕ್ಕೆ ಪಾತ್ರರಾಗಿದ್ದಾರೆ.

ಬೆಂಗಳೂರಿನ ಆರ್ನಾಲ್ಡ್ ಎಂದೇ ಕರೆಯಪ್ಪಡುವ ಬಾಲಕೃಷ್ಣ ಅವರು ಚಿಕ್ಕಂದಿನಲ್ಲೇ ತಂದೆಯನ್ನು ಕಳೆದುಕೊಂಡು ತಾಯಿಯ ಆರೈಕೆಯಲ್ಲೇ ಬೆಳದವನು. ಬಾಲಕೃಷ್ಣ ಸಾಧನೆಗೆ ತಮ್ಮ ರಾಜೇಶ್ ಸಹ ಅಣ್ಣನ ಆಶಯಕ್ಕೆ ಸಾಕರಕ್ಕೆ ಶ್ರಮಿಸಿದ್ದಾರೆ.

Bengaluru water tanker driver crowned Mr.Asia

ಬಾಲಕೃಷ್ಣ ದೇದದಾರ್ಢ್ಯ ಸ್ಪರ್ಧೆಯಲ್ಲಿ ಹಲವು ಪುರಸ್ಕಾರಗಳಿಗೆ ಪಾತ್ರರಾಗಿದ್ದು, ಇತ್ತೀಚೆಗೆ ಜರ್ಮನಿಯಲ್ಲಿ ನಡೆದ ಅಂಡರ್-24 ಕೆಟಗಿರಿಯಲ್ಲಿ ಮಿಸ್ಟರ್ ಯುನಿವರ್ಸ್ ಆಗಿ ಆಯ್ಕೆಯಾಗಿದ್ದರು.

ಈ ಕುರಿತು ಪ್ರತಿಕ್ರಿಯೆ ನೀಡಿದ ಬಾಲಕೃಷ್ಣ, ಮೀಸ್ಟರ್ ಏಷ್ಯಾ ಆಗಿ ನಾನು ಆಯ್ಕೆಯಾಗಿರುವುದಕ್ಕೆ ತುಂಬಾ ಸಂತೋಷವಾಗುತ್ತಿದೆ. ಹೆಮ್ಮೆ ಎನಿಸುತ್ತಿದೆ. ನನಗೆ ಸಹಾಯ ಮಾಡಿದ ಪ್ರತಿಯೊಬ್ಬರಿಗೂ ಧನ್ಯವಾದ ಹೇಳ ಬಯಸುತ್ತೇನೆ ಎಂದು ಹೇಳಿದರು.

ನಾನು ಈ ಮಟ್ಟಕ್ಕೆ ಬೆಳೆಯುವಲ್ಲಿ ನನ್ನ ತಾಯಿ ಪಾರ್ವತಮ್ಮ ಹಾಗೂ ನನ್ನ ತಮ್ಮ ರಾಜೇಶ್ ನ ಸಹಕಾರ ಸಾಕಷ್ಟಿದೆ. ಅವರಿಂದಲೇ ನನ್ನ ಜೀವನ ಸಂತೋಷದಿಂದ ಸ್ಮರಿಸಿದರು.

2014ರಲ್ಲಿ ಎಥೆನ್ಸ್ ನಲ್ಲಿ ನಡೆದ ಸ್ಪರ್ಧೆಯಲ್ಲೂ ಅಂಡರ್-24 ಕೆಟಗಿರಿಯಲ್ಲಿ ಇವರು ಮಿಸ್ಟರ್ ವರ್ಡ್ ಆಗಿ ಆಯ್ಕೆಯಾಗಿದ್ದರು. ಮುಂಬೈ ಮೂಲದ ಸಂಗ್ರಾಮ್ ಚೌಗ್ಲಾ ಹಾಗೂ ಪಂಜಾಬ್ ನ ಮನೀಷ್ ಕುಮಾರ್ ಬಳಿ ಇವರು ಶಿಕ್ಷಣ ಪಡೆದುಕೊಂಡಿದ್ದಾರೆ.

ಪ್ರಸ್ತುತ ಬಾಲಕೃಷ್ಣ ಅವರು ಜಿಮ್ ತರಬೇತುದಾರರಾಗಿ, ವಾಟರ್ ಟ್ಯಾಂಕ್ ಡ್ರೈವರ್ ಆಗಿ ಕೆಲಸ ನಿರ್ವಹಿಸುತ್ತಿದ್ದಾರೆ.

English summary
This 25-year-old could have passed by you as just another water tanker driver, rushing through the choked traffic in Whitefield. In the last week or so, he has become a sensation — “Arnold Schwarzenegger of Whitefield
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X