ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಶಶಿ ತರೂರ್ ಸಂಸದರ ನಿಧಿ ಕಡಿತಕ್ಕೂ ಮುನ್ನ ಹಣವನ್ನು ಏನು ಮಾಡಿದ್ರು?

|
Google Oneindia Kannada News

ನವದೆಹಲಿ, ಏಪ್ರಿಲ್ 6: ಕೇಂದ್ರ ಸರ್ಕಾರವು ಸಂಸದರ ನಿಧಿಯನ್ನು 2 ವರ್ಷಗಳ ಕಾಲ ಕಡಿತಗೊಳಿಸಿ ಆದೇಶ ಹೊರಡಿಸಿದೆ.

ಇದಕ್ಕೂ ಮುನ್ನ ಸಂಸದರ ನಿಧಿಯನ್ನು ಸಂಸದರ ಶಶಿ ತರೂರ್ ಹೇಗೆ ಬಳಕೆ ಮಾಡಿದ್ದೆ ಎಂಬುದರ ಕುರಿತು ಹೇಳಿಕೊಂಡಿದ್ದಾರೆ.

'ಕೊರೊನಾ ಎಂದು ಕೋಮುಭಾವನೆ ಕೆರಳಿಸಿದರೆ ಸರಿ ಇರುವುದಿಲ್ಲ''ಕೊರೊನಾ ಎಂದು ಕೋಮುಭಾವನೆ ಕೆರಳಿಸಿದರೆ ಸರಿ ಇರುವುದಿಲ್ಲ'

ಕಾಂಗ್ರೆಸ್ ಸಂಸದ ಶಶಿ ತರೂರ್ ಅವರು ಕೇಂದ್ರ ಸರ್ಕಾರವು ಸಂಸದರ ನಿಧಿ ಕಡಿತಗೊಳಿಸುವ ಮುನ್ನ ರಾಪಿಡ್ ಟೆಸ್ಟ್‌ಗೆ 1 ಸಾವಿರ ಕರ್ಟನ್‌ಗಳು, ಒಂದು ಸಾವಿರ ಪರ್ಸನಲ್ ಪ್ರೊಟೆಕ್ಟೀವ್ ಇಕ್ವಿಪ್‌ಮೆಂಟ್‌ ಕಿಟ್‌ಗಳನ್ನು ಖರೀದಿಸಲಾಗಿತ್ತು.

Before Centre Scrapped MP Funds How Shashi Tharoor Spent Money

ತಿರುವನಂತಪುರಂನ ಜಿಲ್ಲಾ ಆಸ್ಪತ್ರೆಗೆ ಆ ಕಿಟ್‌ಗಳನ್ನು ರವಾನಿಸಲಾಗಿತ್ತು. ಅಂತಿಮ ಹಂತದ ಒಂದು ಸಾವಿಟ ಕಿಟ್‌ಗಳನ್ನು ಬುಧವಾರ ನೀಡಲಾಗುತ್ತದೆ. 7500 ಪಿಪಿಪಿ ಕಿಟ್‌ಗಳನ್ನು ಮುಂದಿನ ವಾರ ನೀಡಲಾಗುತ್ತದೆ. ಸಂಸದರ ನಿಧಿ ಕಡಿತಗೊಳ್ಳುವ ಮುನ್ನ ಉತ್ತಮ ಕಾರ್ಯ ಮಾಡಿದ್ದೇನೆ ಎಂಬ ಸಂತೋಷ ನನ್ನಲ್ಲಿದೆ ಎಂದು ಹೇಳಿಕೊಂಡಿದ್ದಾರೆ.

ರಾಷ್ಟ್ರಪತಿ, ಉಪರಾಷ್ಟ್ರಪತಿ, ಪ್ರಧಾನಿ, ಸಂಸದರ ಒಂದು ವರ್ಷದ ವೇತನದಲ್ಲಿ ಶೇ.30ರಷ್ಟು ಕಡಿತಗೊಳಿಸಲು ಕೇಂದ್ರ ಸರ್ಕಾರ ನಿರ್ಧಾರ ತೆಗೆದುಕೊಂಡಿದೆ. ಕೇರಳದಲ್ಲಿ ಇದುವರೆಗೆ 314 ಕೊವಿಡ್ 19 ಪ್ರಕರಣಗಳು ದಾಖಲಾಗಿವೆ. ಇಬ್ಬರು ಮೃತಪಟ್ಟಿದ್ದಾರೆ.

ಕೇಂದ್ರ ಸರ್ಕಾರವು ಸಂಸದರ ನಿಧಿಯಲ್ಲಿ ಕಡಿತ ಮಾಡಿರುವ ನಿರ್ಧಾರವನ್ನು ಸ್ವಾಗತಿಸುತ್ತೇನೆ. ದೇಶದಲ್ಲಿ ಜನರು ಸಾಕಷ್ಟು ಕಷ್ಟಗಳನ್ನು ಅನುಭವಿಸುತ್ತಿದ್ದಾರೆ. ಅಂತವರಿಗೆ ಸಹಾಯವಾದಂತಾಗಲಿದೆ. ಆದರೆ ಈ ಕಡಿತದಿಂದ ಕೇವಲ ದೆಹಲಿ ಸುತ್ತಮುತ್ತಲಿನ ಜನತೆಗೆ ಮಾತ್ರ ಅನುಕೂಲವಾದರೆ ಉಳಿದ ರಾಜ್ಯದ ಜನರಿಗೆ ಮೋಸ ಮಾಡಿದಂತಾಗುತ್ತದೆ ಎಂದಿದ್ದಾರೆ.

English summary
Congress MP Shashi Tharoor today took a swipe at the centre after it scrapped a personal fund for Members of Parliament that can be deployed for projects in their constituencies.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X