ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಚಿತ್ರಗಳಲ್ಲಿ ನೋಡಿ : ಒಬಾಮಾ ಭಾರತ ಭೇಟಿ ಮೊದಲ ದಿನ

By Mahesh
|
Google Oneindia Kannada News

ನವದೆಹಲಿ, ಜ.25: ಏರ್ ಫೋರ್ಸ್ ಒನ್ ವಿಮಾನ, ಬೀಸ್ಟ್ ಕಾರು, ಶಿಷ್ಟಾಚಾರ ಬದಿಗೊತ್ತಿ ಅಮೆರಿಕ ಅಧ್ಯಕ್ಷ ಬರಾಕ್ ಹುಸೇನ್ ಒಬಾಮಾರನ್ನು ಅಪ್ಪಿಕೊಂಡ ನರೇಂದ್ರ ಮೋದಿ, ರಾಜ್ ಘಾಟ್ ಗೆ ಗೈರು ಹಾಜರಾದ ಮಿಶೆಲ್, ಹೈದರಾಬಾದ್ ಹೌಸ್ ಭೋಜನಕೂಟದ ಮೆನು, ಗಾರ್ಡನ್ ನಲ್ಲಿ ಉಭಯ ನಾಯಕರ ಗುಪ್ತ್ ಗುಪ್ತ್ ಮಾತುಕತೆ ಎಲ್ಲವೂ ಒಬಾಮಾ ಭಾರತ ಪ್ರವಾಸದ ಮೊದಲ ದಿನದ ಮುಖ್ಯಾಂಶಗಳಾಗಿವೆ.

ಪ್ರಧಾನಿ ನರೇಂದ್ರ ಮೋದಿ ಅವರ ಆಹ್ವಾನದ ಮೇರೆಗೆ ಗಣರಾಜ್ಯೋತ್ಸವ ಸಂದರ್ಭದಲ್ಲಿ ಮುಖ್ಯ ಅತಿಥಿಯಾಗಿ ಅಮೆರಿಕ ಅಧ್ಯಕ್ಷ ಬರಾಕ್ ಒಬಾಮಾ ಅವರು ಭಾರತಕ್ಕೆ ಭಾನುವಾರ ಬೆಳಗ್ಗೆ ಆಗಮಿಸಿದರು. ನಿಗದಿತ ವೇಳೆ 10ಗಂಟೆಗಿಂತಲೂ 20 ನಿಮಿಷ ಮುಂಚಿತವಾಗಿ ಪಾಲಂ ವಿಮಾನ ನಿಲ್ದಾಣಕ್ಕೆ ಬರಾಕ್ ಒಬಾಮಾ ಬಂದಿದ್ದು ವಿಶೇಷ.[ಒಬಾಮಾ ಭಾರತ ಪ್ರವಾಸ ವೇಳಾಪಟ್ಟಿ]

ಮೊದಲ ದಿನದ ಐಟಿಸಿ ಮೌರ್ಯ ಶೆರಟಾನ್ ಹೋಟೆಲ್ ನಲ್ಲಿ ತಂಗಿರುವ ಬರಾಕ್ ಒಬಾಮಾ ಅವರು ನಂತರ ರಾಷ್ಟ್ರಪತಿ ಭವನಕ್ಕೆ ಬೀಸ್ಟ್ ಕಾರಿನಲ್ಲಿ ಆಗಮಿಸಿದರು. ವಿಂಗ್ ಕಮಾಂಡರ್ ಪೂಜಾ ಠಾಕೂರ್ ಅವರ ನೇತೃತ್ವದ ಭದ್ರತಾ ಪಡೆ ಬರಾಕ್ ಒಬಾಮಾ ಅವರಿಗೆ ಗೌರವ ವಂದನೆ ನೀಡಿತು. [ಒಬಾಮಾ ಲಂಚ್ ಮೆನು]

ನಂತರ ರಾಷ್ಟ್ರಪತಿ ಪ್ರಣಬ್ ಮುಖರ್ಜಿ, ಪ್ರಧಾನಿ ಮೋದಿ ಜೊತೆ ಒಬಾಮಾ ಫೋಟೋ ಸೆಷನ್ಸ್ ಅಲ್ಲಿಂದ ರಾಜ್ ಘಾಟ್ ಗೆ ತೆರಳಿದ ಒಬಾಮಾ ಮಹಾತ್ಮಾ ಗಾಂಧಿ ಸಮಾಧಿಗೆ ನಮಿಸಿದರು. ಮುಂದಿನ ಅಪ್ಡೇಟ್ಸ್ ಚಿತ್ರಗಳಲ್ಲಿ

ಪಾಲಂ ವಿಮಾನ ನಿಲ್ದಾಣದಲ್ಲಿ ಒಬಾಮಾ- ಮಿಶೆಲ್

ಪಾಲಂ ವಿಮಾನ ನಿಲ್ದಾಣದಲ್ಲಿ ಒಬಾಮಾ- ಮಿಶೆಲ್

ಪಾಲಂ ವಿಮಾನ ನಿಲ್ದಾಣದಲ್ಲಿ ಒಬಾಮಾ- ಮಿಶೆಲ್ ಜೊತೆಗೆ ಪ್ರಧಾನಿ ಮೋದಿ. ಪಿಟಿಐ ಚಿತ್ರ

ಮೋದಿಯಿಂದ ಅಮೆರಿಕಕ್ಕೆ ಆತ್ಮೀಯ ಅಪ್ಪುಗೆ

ಮೋದಿಯಿಂದ ಅಮೆರಿಕಕ್ಕೆ ಆತ್ಮೀಯ ಅಪ್ಪುಗೆ

ನವದೆಹಲಿ: ಮೋದಿಯಿಂದ ಅಮೆರಿಕಕ್ಕೆ ಆತ್ಮೀಯ ಅಪ್ಪುಗೆ ಸಿಕ್ಕಿದ್ದು ಹೀಗೆ

ರೈಸಿನಾ ಹಿಲ್ಸ್ ನಲ್ಲಿ ಗಣತಂತ್ರ ದಿನಕ್ಕಾಗಿ ತಯಾರಿ

ರೈಸಿನಾ ಹಿಲ್ಸ್ ನಲ್ಲಿ ಗಣತಂತ್ರ ದಿನಕ್ಕಾಗಿ ತಯಾರಿ

ರಾಷ್ಟ್ರಪತಿಗಳ ಅಧಿಕೃತ ನಿವಾಸ ರೈಸಿನಾ ಹಿಲ್ಸ್ ನಲ್ಲಿ ಗಣತಂತ್ರ ದಿನಕ್ಕಾಗಿ ತಯಾರಿ ಜೋರಾಗಿ ನಡೆದಿದೆ. PTI Photo by Atul Yadav

ರಾಜಪಥದಲ್ಲಿ ಸಂದರ್ಶಕರಿಗೆ ಪ್ರವೇಶ ನಿಷೇಧ

ರಾಜಪಥದಲ್ಲಿ ಸಂದರ್ಶಕರಿಗೆ ಪ್ರವೇಶ ನಿಷೇಧ

ಗಣತಂತ್ರ ದಿನದ ಅಂಗವಾಗಿ ರಾಜಪಥದಲ್ಲಿ ಸಂದರ್ಶಕರಿಗೆ ಪ್ರವೇಶ ನಿಷೇಧಿಸಲಾಗಿದೆ. ಬದಲಿ ಮಾರ್ಗವನ್ನು ತೋರಿಸುತ್ತಿರುವ ಪೊಲೀಸ್ ಸಿಬ್ಬಂದಿ. PTI Photo by Atul Yadav

ಏರಿದೆ ಹಾರಿದೆ ನೋಡು ನಮ್ಮ ಬಾವುಟ

ಏರಿದೆ ಹಾರಿದೆ ನೋಡು ನಮ್ಮ ಬಾವುಟ

ಭಾರತ ಹಾಗೂ ಅಮೆರಿಕ ಬಾವುಟಗಳನ್ನು ಏರಿಸುತ್ತಿರುವ ಚಿತ್ರ. ಪಿಟಿಐ

ವಿದ್ಯುತ್ ದೀಪಗಳಿಂದ ಅಲಂಕೃತಗೊಂಡ ರಾಷ್ಟ್ರಪತಿ ಭವನ

ವಿದ್ಯುತ್ ದೀಪಗಳಿಂದ ಅಲಂಕೃತಗೊಂಡ ರಾಷ್ಟ್ರಪತಿ ಭವನ

ವಿದ್ಯುತ್ ದೀಪಗಳಿಂದ ಅಲಂಕೃತಗೊಂಡ ರಾಷ್ಟ್ರಪತಿ ಭವನ

ಒಬಾಮಾ ಕಾವಲು ಕಾಯಲು ಸಶಸ್ತ್ರ ಪಡೆ

ಒಬಾಮಾ ಕಾವಲು ಕಾಯಲು ಸಶಸ್ತ್ರ ಪಡೆ

ನವದೆಹಲಿಯಲ್ಲಿ ಒಬಾಮಾ ಅವರ ಕಾರ್ಯಕ್ರಮ ನಡೆಯುವ ಎಲ್ಲಾ ಕಡೆ ಸಶಸ್ತ್ರ ಕಮಾಂಡೋ ಪಡೆ ಗಸ್ತು ತಿರುಗುತ್ತಿದ್ದು, ರಾಜ್ ಘಾಟ್ ಬಳಿ ತೆರಳುತ್ತಿದ್ದ ಪಡೆಯ ಚಿತ್ರ ಇದಾಗಿದೆ. PTI Photo by Shahbaz Khan

ಗಾಂಧೀಜಿಗೆ ನಮನ ಸಲ್ಲಿಸಿದ ಒಬಾಮಾ

ಗಾಂಧೀಜಿಗೆ ನಮನ ಸಲ್ಲಿಸಿದ ಒಬಾಮಾ

ರಾಜ್ ಘಾಟ್ ನಲ್ಲಿರುವ ಮಹಾತ್ಮಾ ಗಾಂಧೀಜಿ ಸಮಾಧಿಗೆ ನಮನ ಸಲ್ಲಿಸಿದ ಒಬಾಮಾ, ಅವರ ಜೊತೆಯಲ್ಲಿ ಇಂಧನ ಖಾತೆ ರಾಜ್ಯ ಸಚಿವ ಪಿಯೂಷ್ ಗೋಯಲ್. PTI Photo by Shahbaz Khan

ಅಶ್ವಥ ಗಿಡ ನೆಟ್ಟು ನೀರುಣಿಸಿದ ಒಬಾಮಾ

ಅಶ್ವಥ ಗಿಡ ನೆಟ್ಟು ನೀರುಣಿಸಿದ ಒಬಾಮಾ

ರಾಜ್ ಘಾಟ್ ಭೇಟಿ ಸ್ಮರಣೆಗಾಗಿ ಅಶ್ವಥ ಗಿಡ ನೆಟ್ಟು ನೀರುಣಿಸಿದ ಒಬಾಮಾ ನಂತರ ಸಂದರ್ಶಕರ ಪುಸ್ತಕದಲ್ಲಿ ಹಸ್ತಾಕ್ಷರ ಹಾಕಿದರು. PTI Photo by Kamal Singh

ರಾಷ್ಟ್ರಪತಿ ಭವನದಲ್ಲಿ ಒಬಾಮಾಗೆ ಗೌರವ ವಂದನೆ

ರಾಷ್ಟ್ರಪತಿ ಭವನದಲ್ಲಿ ಒಬಾಮಾಗೆ ಗೌರವ ವಂದನೆ

ರಾಷ್ಟ್ರಪತಿ ಭವನದಲ್ಲಿ ಒಬಾಮಾಗೆ ವಿಂಗ್ ಕಮಾಂಡೆರ್ ಪೂಜಾ ಠಾಕೂರ್ ಅವರ ನೇತೃತ್ವದ ಭದ್ರತಾ ಪಡೆಯಿಂದ ಗೌರವ ವಂದನೆ ನೀಡಲಾಯಿತು.

ಬೀಸ್ಟ್ ಎದುರಿನಲ್ಲಿ ಮುಖಂಡರು

ಬೀಸ್ಟ್ ಎದುರಿನಲ್ಲಿ ಮುಖಂಡರು

ಬರಾಕ್ ಒಬಾಮಾ ಅವರ ಬೀಸ್ಟ್ ಕಾರಿನ ಎದುರಿನಲ್ಲಿ ನಿಂತ ಒಬಾಮಾ, ಮೋದಿ, ಪ್ರಣಬ್ PTI Photo by Subhav Shukla

ಪ್ರಣಬ್, ಒಬಾಮಾ, ಮೋದಿ ಉಭಯ ಕುಶಲೋಪರಿ

ಪ್ರಣಬ್, ಒಬಾಮಾ, ಮೋದಿ ಉಭಯ ಕುಶಲೋಪರಿ

ರಾಷ್ಟ್ರಪತಿ ಭವನದಲ್ಲಿ ಪ್ರಣಬ್, ಒಬಾಮಾ, ಮೋದಿ ಉಭಯ ಕುಶಲೋಪರಿ. PTI Photo by Vijay Verma

ಊಟದ ನಂತರ ಚರ್ಚೆ, ಸುದ್ದಿಗೋಷ್ಠಿ

ಊಟದ ನಂತರ ಚರ್ಚೆ, ಸುದ್ದಿಗೋಷ್ಠಿ

ಹೈದರಾಬಾದ್ ಹೌಸ್ ನಲ್ಲಿ ಮೋದಿ ಅವರು ನೀಡಿದ ಲಂಚ್ ನಂತರ ಉಭಯ ದೇಶಗಳ ನಡುವೆ ದ್ವಿಪಕ್ಷೀಯ ಮಾತುಕತೆ ನಡೆಸಲಾಯಿತು. ನಂತರ ಮೋದಿ- ಒಬಾಮಾ ಅವರು ಜಂಟಿ ಸುದ್ದಿಗೋಷ್ಠಿಗೆ ತೆರಳುತ್ತಿರುವ ಚಿತ್ರ. PTI Photo by Atul Yadav

English summary
US President Barack Obama arrived at the Palam airport today and was greeted by Prime Minister Narendra Modi. Here are the news updates in Pictures
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X