ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬ್ಯಾಂಕಿಂಗ್ ಕ್ಷೇತ್ರ ತೊರೆದು ರಾಜಕಾರಣಿಯಾಗಿದ್ದ ಮೀರಾ ಇನ್ನಿಲ್ಲ

|
Google Oneindia Kannada News

ನವದೆಹಲಿ, ಜನವರಿ 12: ಬ್ಯಾಂಕಿಂಗ್ ಕ್ಷೇತ್ರ ತೊರೆದು ರಾಜಕಾರಣಿಯಾಗಿದ್ದ ಮೀರಾ ಅವರು ಕೆಲಕಾಲದ ಅನಾರೋಗ್ಯದಿಂದ ಗುಣಮುಖರಾಗದೆ ಶುಕ್ರವಾರ ಮೃತರಾಗಿದ್ದಾರೆ.

57 ವರ್ಷ ವಯಸ್ಸಿನ ಸನ್ಯಾಲ್ ಅವರು ರಾಯಲ ಬ್ಯಾಂಕ್ ಆಫ್ ಸ್ಕಾಟ್ಲೆಂಡ್ ನ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಹುದ್ದೆಯನ್ನು ತೊರೆದು ಆಮ್ ಆದ್ಮಿ ಪಕ್ಷ ಸೇರಿದ್ದರು. 2014ರ ಲೋಕಸಭೆ ಚುನಾವಣೆಯಲ್ಲೂ ಸ್ಪರ್ಧಿಸಿದ್ದರು.

Banker-turned-politician Meera Sanyal dies at 57

ದೆಹಲಿಯ ಉಪ ಮುಖ್ಯಮಂತ್ರಿ ಆಮ್ ಆದ್ಮಿ ಪಕ್ಷದ ಮುಖಂದ ಮನೀಶ್ ಸಿಸೋಡಿಯಾ ಅವರು ಟ್ವೀಟ್ ಮಾಡಿ, ಸನ್ಯಾಲ್ ಅವರ ನಿಧನದ ಸುದ್ದಿಯನ್ನು ಖಚಿತಪಡಿಸಿದ್ದಾರೆ. ದೇಶವು ತೀಕ್ಷ್ಣ ಬುದ್ಧಿಮತ್ತೆ ಹೊಂದಿದ್ದ ಆರ್ಥಿಕ ತಜ್ಞೆಯೊಬ್ಬರನ್ನು ಇಂದು ಕಳೆದುಕೊಂಡಿದೆ ಎಂದಿದ್ದಾರೆ.

ಆಮ್ ಆದ್ಮಿ ಪಕ್ಷದ ಮುಖ್ಯಸ್ಥ, ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರು ಕೂಡಾ ತಮ್ಮ ಸಂತಾಪವನ್ನು ಟ್ವೀಟ್ ಮಾಡಿ ವ್ಯಕ್ತಪಡಿಸಿದ್ದಾರೆ.

ಸುಮಾರು 30 ವರ್ಷಗಳ ಕಾಲ ಬ್ಯಾಂಕಿಂಗ್ ಕ್ಷೇತ್ರದಲ್ಲಿ ವಿವಿಧ ಉನ್ನತ ಹುದ್ದೆಗಳನ್ನು ಅಲಂಕರಿಸಿದ್ದ ಸನ್ಯಾಲ್ ಅವರು ಮೂಲತಃ ಕೇರಳದ ಕೊಚ್ಚಿಯವರು. ಎಬಿಎನ್ ಅಮ್ರೋದ ಏಷ್ಯಾ ವಿಭಾಗದ ಕಾರ್ಪೊರೇಟ್ ವಿತ್ತ ವಿಭಾಗದ ಸಿಒಒ ಆಗಿದ್ದರು. 2014ರ ಸಾರ್ವತ್ರಿಕ ಚುನಾವಣೆಯಲ್ಲಿ ಮುಂಬೈ ದಕ್ಷಿಣ ಕ್ಷೇತ್ರದಿಂದ ಸ್ಪರ್ಧಿಸಿ, ಸೋಲು ಕಂಡಿದ್ದರು.

English summary
Banker-turned-politician Meera Sanyal died on Friday after a brief illness. Sanyal, 57, had joined the Aam Aadmi Party after quitting her job as the country chief executive of Royal Bank of Scotland and contested the Lok Sabha election in 2014.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X