ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬಿಎಂಟಿಸಿಗೆ 2000 ಬಸ್ ನೀಡಿದ ಕೇಂದ್ರ ಸರ್ಕಾರ

|
Google Oneindia Kannada News

ನವದೆಹಲಿ, ಸೆ.19 : ಕೇಂದ್ರ ಯುಪಿಎ ಸರ್ಕಾರ ಕರ್ನಾಟಕದ ಕಾಂಗ್ರೆಸ್ ಸರ್ಕಾರಕ್ಕೆ ಭರ್ಜರಿ ಕೊಡುಗೆ ನೀಡಿದೆ. ನರ್ಮ್ ಯೋಜನೆಯಡಿ ಬೆಂಗಳೂರಿನ ಸಾರಿಗೆ ವ್ಯವಸ್ಥೆ ಸುಧಾರಣೆಗಾಗಿ 2,104 ಬಸ್ ಗಳನ್ನು ಕೊಡುಗೆಯಾಗಿ ನೀಡಿದೆ.

ಬುಧವಾರ ನಗರಾಭಿವೃದ್ಧಿ ಇಲಾಖೆ ಕಾರ್ಯದರ್ಶಿ ಸುಧೀರ್ ಕೃಷ್ಣ ನೇತೃತ್ವದ ಸಮಿತಿ, ಬೆಂಗಳೂರಿನ ಅಭಿವೃದ್ಧಿಗಾಗಿ 2,104 ಬಸ್ ಗಳನ್ನು ನೀಡಲು ಅನುಮತಿ ನೀಡಿದೆ. ಇದರಿಂದ ಬಿಎಂಟಿಸಿಗೆ ಹೊಸದಾಗಿ ಎರಡು ಸಾವಿರ ಬಸ್ ಗಳು ಸೇರ್ಪಡೆಯಾಗಲಿವೆ.

bmtc

ಕರ್ನಾಟಕ ಮೊದಲು ಕೇಂದ್ರ ನಗರಾಭಿವೃದ್ಧಿ ಇಲಾಖೆಗೆ 2000 ಬಸ್ ಗಳನ್ನು ನೀಡುವಂತೆ ಪ್ರಸ್ತಾವನೆ ಸಲ್ಲಿಸಿತ್ತು. ಈ ಪ್ರಸ್ತಾವನೆಯ ಆಧಾರದ ಮೇಲೆಯೇ ಬಸ್ ಗಳನ್ನು ನಗರಾಭಿವೃದ್ಧಿ ಇಲಾಖೆ ನೀಡಿದೆ. ದೇಶದ ಉಳಿದ ರಾಜ್ಯಗಳಿಗಿಂತ ಹೆಚ್ಚಿನ ಬಸ್ ಗಳು ಕರ್ನಾಟಕಕ್ಕೆ ದೊರಕಿವೆ.

ಸಾರ್ವಜನಿಕ ಸಾರಿಗೆ ವ್ಯವಸ್ಥೆಯನ್ನು ಅಭಿವೃದ್ಧಿ ಪಡಿಸಿರುವ ಕರ್ನಾಟಕ ರಾಜ್ಯದ ಕಾರ್ಯವನ್ನು ಶ್ಲಾಘಿಸಿರುವ ಕೇಂದ್ರ ನಗರಾಭಿವೃದ್ಧಿ ಇಲಾಖೆ, ನರ್ಮ್ ಯೋಜನೆಯಡಿ ಬಸ್ ನಿಲ್ದಾಣ, ಡಿಪೋಗಳನ್ನು ನಿರ್ಮಿಸಲು ಅನುದಾನ ನೀಡುವುದಾಗಿ ಭರವಸೆ ನೀಡಿದೆ.

2000 ಬಸ್ ಗಳನ್ನು ಉಪಯೋಗಿಸಿಕೊಂಡು ಬೆಂಗಳೂರಿನ ನಗರಸಾರಿಗೆ ವ್ಯವಸ್ಥೆಯನ್ನು ಮತ್ತಷ್ಟು ಅಭಿವೃದ್ದಿಗೊಳಿಸಲಾಗುವುದು ಬಿಎಂಟಿಸಿ ಯೋಜನೆ ರೂಪಿಸುತ್ತಿದೆ. ಎಲ್ಲಾ ಬಸ್ ಗಳು ಎಲ್ ಇಡಿ ಡಿಪ್ಲೇ ಬೋರ್ಡ್ ಸೇರಿದಂತೆ ಅತ್ಯಾಧುನಿಕ ತಂತ್ರಜ್ಞಾನ ವ್ಯವಸ್ಥೆಯನ್ನು ಹೊಂದಿರಲಿವೆ.

ಆ.16ರಂದು ನವದೆಹಲಿಯಲ್ಲಿ ನಡೆದ ಕೇಂದ್ರ ಸಚಿವ ಸಂಪುಟ ಸಭೆಯಲ್ಲಿ ಜವಾಹರಲಾಲ್ ನೆಹರು ರಾಷ್ಟ್ರೀಯ ನಗರ ನವೀಕರಣ ಯೋಜನೆ ಅಡಿ (ನರ್ಮ್) 10,000 ಬಸ್ ಖರೀದಿಗೆ ಅನುಮೋದನೆ ನೀಡಲಾಗಿತ್ತು. ಇದರ ಅನ್ವಯ ರಾಜ್ಯಕ್ಕೆ ಹೆಚ್ಚು ಬಸ್ ಗಳು ದೊರಕಿವೆ.

ನೆರೆಯ ಆಂಧ್ರಪ್ರದೇಶ ಮತ್ತು ತಮಿಳುನಾಡು ರಾಜ್ಯಗಳಿಗೂ ಯೋಜನೆಯಡಿ ಬಸ್ ಗಳನ್ನು ಕೇಂದ್ರ ಸರ್ಕಾರ ನೀಡಿದೆ. ಹೈದರಾಬಾದ್ ನಗರಕ್ಕೆ 918, ವಿಶಾಖಪಟ್ಟಣಂ ಗೆ 202 ಮತ್ತು ವಿಜಯವಾಡಕ್ಕೆ 151 ಬಸ್ ಗಳು ದೊರೆಯಲಿವೆ. ತಮಿಳುನಾಡು ರಾಜ್ಯಕ್ಕೆ 1,064 ಬಸ್ ಗಳನ್ನು ನೀಡಲು ಕೇಂದ್ರ ಒಪ್ಪಿಗೆ ನೀಡಿದೆ. (ಬೆಂಗಳೂರಿಗೆ ಬರಲಿವೆ 2000 ಹೊಸ ಬಸ್)

English summary
Hailing Karnataka’s efforts in providing better public transport system, A high-level committee headed by Sudhir Krishna, secretary, Ministry of Urban Development, sanctioned 2,104 buses to the Bangalore under Jawaharlal Nehru National Urban Renewal Mission (JnNURM) project.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X