ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕರ್ನಾಟಕ ರಾಜಕೀಯ ಬಿಕ್ಕಟ್ಟು: ಸುಪ್ರೀಂ ಸಮತೋಲಿತ ತೀರ್ಪು

|
Google Oneindia Kannada News

ನವದೆಹಲಿ, ಜುಲೈ 17: ಕರ್ನಾಟಕದ ರಾಜಕೀಯ ಬಿಕ್ಕಟ್ಟು ದಿನೇ ದಿನೇ ಹೊಸ ತಿರುವು ಪಡೆದುಕೊಳ್ಳುತ್ತಿದೆ.

ಅತೃಪ್ತ ಶಾಸಕರ ರಾಜೀನಾಮೆಗೆ ಸಂಬಂಧಿಸಿದಂತೆ ಸುಪ್ರೀಂಕೋರ್ಟ್ ಸಮತೋಲಿತ ತೀರ್ಪು ನೀಡಿದೆ. ಈ ತೀರ್ಪಿಗೆ ಸ್ಪೀಕರ್ ಆಗಲಿ ಅಥವಾ ಅತೃಪ್ತ ಶಾಸಕರಾಗಲೀ ಯಾರೂ ಕೂಡ ವಿರೋಧಿಸುವಂತಿಲ್ಲ ಅಂತಹ ತೀರ್ಪನ್ನು ಸುಪ್ರೀಂಕೋರ್ಟ್ ನೀಡಿದೆ.

ಸುಪ್ರೀಂ ಆದೇಶ LIVE: ಸ್ಪೀಕರ್‌ಗೆ ಸೂಚನೆ ಇಲ್ಲ, ಅತೃಪ್ತರಿಗೆ ವಿಪ್ ಇಲ್ಲಸುಪ್ರೀಂ ಆದೇಶ LIVE: ಸ್ಪೀಕರ್‌ಗೆ ಸೂಚನೆ ಇಲ್ಲ, ಅತೃಪ್ತರಿಗೆ ವಿಪ್ ಇಲ್ಲ

ಅತೃಪ್ತರ ರಾಜೀನಾಮೆ ಕುರಿತು ತೀರ್ಮಾನ ತೆಗೆದುಕೊಳ್ಳಲು ಸ್ಪೀಕರ್‌ಗೆ ಎಲ್ಲಾ ಹಕ್ಕು ನೀಡಲಾಗಿದ್ದು ಆದರೆ ನಿಗದಿತ ಅವಧಿಯಲ್ಲಿ ತೀರ್ಪು ಪ್ರಕಟಿಸಬೇಕು ಎಂದೂ ಸುಪ್ರೀಂಕೋರ್ಟ್ ಹೇಳಿದೆ.

 Balanced Verdict From Supreme court

ಸ್ಪೀಕರ್‌ಗೆ ಯಾವುದೇ ರೀತಿಯ ನಿರ್ದೇಶನವನ್ನು ಸುಪ್ರೀಂಕೋರ್ಟ್ ನೀಡಿದೆ. ಅತೃಪ್ತ ಶಾಸಕರಿಗೆ ವಿಪ್ ಇಲ್ಲ ಎಂದೂ ಕೂಡ ತಿಳಿಸಿದೆ. ಅನುಚ್ಛೇದ 190ರ ಅಡಿಯಲ್ಲಿ ಕ್ರಮ ಕೈಗೊಳ್ಳಲು ತಿಳಿಸಲಾಗಿದೆ.

ಒಂದೊಮ್ಮೆ ಅತೃಪ್ತರನ್ನು ಅನರ್ಹಗೊಳಿಸಿದರೆ 6 ವರ್ಷಗಳ ಕಾಲ ಅವರು ಯಾವುದೇ ಚುನಾವಣೆಗೆ ನಿಲ್ಲುವಂತಿಲ್ಲ. ಹಾಗಾದರೆ, ಅವರ ರಾಜಕೀಯ ಬದುಕು ಸಂಪೂರ್ಣವಾಗಿ ಅಧಪತನ ಕಾಣಲಿದೆ ಎನ್ನುವ ಭಯ ಇದೀಗ ಕೊಂಚ ದೂರವಾಗಿದೆ.

ಸರ್ಕಾರದ ಭವಿಷ್ಯ ನಿರ್ಧಾರ, ಸ್ಪೀಕರ್ ರಮೇಶ್ ಮುಂದಿರುವ 7 ಆಯ್ಕೆಗಳುಸರ್ಕಾರದ ಭವಿಷ್ಯ ನಿರ್ಧಾರ, ಸ್ಪೀಕರ್ ರಮೇಶ್ ಮುಂದಿರುವ 7 ಆಯ್ಕೆಗಳು

ಸ್ಪೀಕರ್ ತೀರ್ಮಾನವೇ ಅಂತಿಮ ಎಂದು ಹೇಳಲಾಗಿದೆ. ಆದರೆ ಕಾಲಮಿತಿ ಯಾವುದು ಎಂದು ಕೋರ್ಟ್ ಹೇಳಿಲ್ಲ. ಸ್ಪೀಕರ್ ನಿರ್ಧಾರ ಪ್ರಕಟಿಸುವವರೆಗೆ ಅಧಿವೇಶನದಲ್ಲಿ ಪಾಲ್ಗೊಳ್ಳಲು ಅತೃಪ್ತ ಶಾಸಕರಿಗೆ ಒತ್ತಾಯ ಮಾಡುವಂತಿಲ್ಲ ಎಂದು ತಿಳಿಸಲಾಗಿದೆ.

ಸುಪ್ರೀಂಕೋರ್ಟ್ ಆದೇಶದ ಅನ್ವಯ ಅತೃಪ್ತ ಶಾಸಕರು, ಗುರುವಾರ ನಡೆಯುವ ವಿಶ್ವಾಸಮತ ಯಾಚನೆಯಲ್ಲಿ ರಾಜೀನಾಮೆ ನೀಡಿರುವ ಅತೃಪ್ತ ಶಾಸಕರು ಭಾಗವಹಿಸಲೇ ಬೇಕು ಎಂದು ವಿಪ್ ಮೂಲಕ ಒತ್ತಾಯ ಮಾಡುವಂತಿಲ್ಲ.
ಸ್ಪೀಕರ್ ಅವರು ತಮ್ಮ ವಿವೇಚನೆಗೆ ತಕ್ಕಂತೆ ನಿರ್ಧಾರ ತೆಗೆದುಕೊಳ್ಳಲು ಸಂಪೂರ್ಣ ಸ್ವಾತಂತ್ರ್ಯವಿದ್ದು, ಅನರ್ಹತೆ ಮತ್ತು ರಾಜೀನಾಮೆ ಅಂಗೀಕಾರ ಎರಡೂ ಸಹ ಸ್ಪೀಕರ್ ಅವರ ಬಳಿಯೇ ಇದ್ದು, ನಿಗದಿತ ಅವಧಿಯಲ್ಲಿ ಅವರು ನಿರ್ಧಾರ ತೆಗೆದುಕೊಳ್ಳಬೇಕಿದೆ.

ರಾಜೀನಾಮೆ ಇತ್ಯರ್ಥಪಡಿಸುವ ವರೆಗೆ ವಿಧಾನಸಭೆಯ ಯಾವುದೇ ಪ್ರಕ್ರಿಯೆಗಳು ಅತೃಪ್ತರಿಗೆ ಅನ್ವಯವಾಗುವುದಿಲ್ಲವಾದ್ದ ರಿಂದ ಅತೃಪ್ತ ಶಾಸಕರ ಮೇಲೆ ವಿಪ್ ಸಹ ಜಾರಿ ಆಗುವುದಿಲ್ಲ. ಹೀಗಾಗಿ ಅತೃಪ್ತ ಶಾಸಕರು ನಿರಾಳವಾಗಿರಬಹುದಾಗಿದೆ.

ಗುರುವಾರ ಮುಖ್ಯಮಂತ್ರಿ ಎಚ್‌ಡಿ ಕುಮಾರಸ್ವಾಮಿ ವಿಶ್ವಾಸಮತ ಯಾಚನೆ ಮಾಡಲಿದ್ದು, ಎಷ್ಟು ಶಾಸಕರ ವಿಶ್ವಾಸ ಮತ ಗಳಿಸಲಿದ್ದಾರೆ ಎಂದು ಕಾದು ನೋಡಬೇಕಿದೆ.

ಸ್ಪೀಕರ್ ನಮ್ಮ ರಾಜೀನಾಮೆಯನ್ನು ಅಂಗೀಕರಿಸಲೇಬೇಕು ಹಾಗೆಯೇ ವಿಶ್ವಾಸಮತ ಯಾಚನೆ ಅಥವಾ ಸದನಕ್ಕೆ ಹಾಜರಾಗಬೇಕು ಎಂದು ಒತ್ತಾಯಿಸುವಂತಿಲ್ಲ ಎಂದು ಕೋರ್ಟ್ ಮುಂದೆ ಅತೃಪ್ತ ಶಾಸಕರು ತಿಳಿಸಿದ್ದರು.

ಒಂದೊಮ್ಮೆ ರಾಜೀನಾಮೆ ಅಂಗೀಕಾರವಾದರೆ ಸಮ್ಮಿಶ್ರ ಸರ್ಕಾರದ ಸದಸ್ಯರ ಸಂಖ್ಯೆ 118ರಿಂದ 100ಕ್ಕೆ ಇಳಿಕೆಯಾಗಲಿದೆ. ಬಿಜೆಪಿಯ ಬಳಿ ಸದ್ಯಕ್ಕೆ 105 ಸದಸ್ಯರು ಹಾಗೂ ಇಬ್ಬರು ಪಕ್ಷೇತರ ಸದಸ್ಯರು ಬಿಜೆಪಿಗೆ ಬೆಂಬಲವಿದೆ.

English summary
Balanced Verdict From Supreme court , whose resignations endanger the ruling Congress-Janata Dal Secular coalition.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X