ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಚೀನಾ ವಸ್ತುಗಳ ನಿಷೇಧಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಸುಜುಕಿ, ಬಜಾಜ್

|
Google Oneindia Kannada News

ನವ ದೆಹಲಿ, ಜೂನ್ 16: ಚೀನಾ ವಸ್ತುಗಳನ್ನು ನಿ‍ಷೇಧ ಮಾಡುವ ವಿಚಾರವಾಗಿ ಭಾರತದ ಬೃಹತ್ ಆಟೋಮೊಬೈಲ್ ಕಂಪನಿಗಳಾದ ಸುಜುಕಿ, ಬಜಾಜ್ ಪ್ರತಿಕ್ರಿಯೆ ನೀಡಿವೆ. ಈ ಎರಡು ದೊಡ್ಡ ಸಂಸ್ಥೆಗಳು ಸೇರಿದಂತೆ ಕೆಲವು ಕಂಪನಿಗಳು ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿವೆ.

Recommended Video

ದೇಶದಲ್ಲಿರುವ ಎಲ್ಲಾ ಮುಖ್ಯಮಂತ್ರಿಗಳಿಗೆ ಕರೆಕೊಟ್ಟ ಮೋದಿ | Oneindia Kannada

ಚೀನಾ ವಸ್ತುಗಳ ನಿಷೇಧದ ಬಗ್ಗೆ ಬಜಾಜ್‌ ಸಂಸ್ಥೆ ಪ್ರತಿಕ್ರಿಯೆ ನೀಡಿದ್ದು, ''ಬೈಕ್‌ ಉತ್ಪಾದನೆಗಾಗಿ ಬೇಕಾದ ಕಚ್ಚಾ ವಸ್ತುಗಳಿಗಾಗಿ ನಾವು ಚೀನಾ ಮೇಲೆಯೇ ಅವಲಂಬನೆಯಾಗಿದ್ದೇವೆ. ದ್ವಿಚಕ್ರ ವಾಹನಗಳನ್ನು ಕಡಿಮೆ ದರದಲ್ಲಿ ಗ್ರಾಹಕರಿಗೆ ನೀಡಲು ಇದು ಅಗತ್ಯವಾಗಿದೆ.'' ಎಂದಿದೆ.

ಚೀನಾ-ಭಾರತ ಘರ್ಷಣೆ: ಈವರೆಗೂ ಬೆಳವಣಿಗೆಯ ಪ್ರಮುಖ ಅಂಶಗಳುಚೀನಾ-ಭಾರತ ಘರ್ಷಣೆ: ಈವರೆಗೂ ಬೆಳವಣಿಗೆಯ ಪ್ರಮುಖ ಅಂಶಗಳು

''ಚೀನಾದ ವಸ್ತುಗಳನ್ನು ಬಹಿಷ್ಕಾರ ಮಾಡುವುದರಿಂದ ಪೂರೈಕೆ ಸರಪಳಿ ಮೇಲೆ ಪರಿಣಾಮವಾಗಬಹುದು'' ಎಂದಿರುವ ಬಜಾಜ್‌ ಸಂಸ್ಥೆಯ ಎಡಿ ರಾಜೀವ್ ಚೀನಾ ವಸ್ತು ನಿಷೇಧ ಸರಿಯಲ್ಲ ಎಂದು ತಮ್ಮ ಅಭಿಪ್ರಾಯ ತಿಳಿಸಿದೆ.

Bajaj And Suzuki Companies Reaction On Boycott China

ಚೀನಾದ ಈ ಮಾರಾಟಗಾರರೊಂದಿಗೆ ಬಲವಾದ ಸಂಬಂಧವನ್ನು ಹೊಂದಿದ್ದು, 15 ವರ್ಷಗಳಿಂದ ವ್ಯವಹಾರ ನಡೆಸಿಕೊಂಡು ಬಂದಿರುವುದಾಗಿ ತಿಳಿಸಿದ್ದಾರೆ. ಕಾರ್ ಉತ್ಪಾದನಾ ಕಂಪನಿ ಸುಜುಕಿ ಸಹ ಚೀನಾ ವಸ್ತುಗಳ ಅಗತ್ಯತೆಯನ್ನು ತಿಳಿಸಿದ್ದು, ಚೀನಾ ವಸ್ತು ನಿಷೇಧಕ್ಕೆ ಆಕ್ಷೇಪ ವ್ಯಕ್ತಪಡಿಸಿದೆ.

ಕೊರೊನಾ ನಂತರ ಚೀನಾ ವಸ್ತುಗಳನ್ನು ಚೀನಾ ಅಪ್‌ಗಳನ್ನು ನಿಷೇಧ ಮಾಡುವ ಬಗ್ಗೆ ದೊಡ್ಡ ಕೂಗು ಕೇಳಿ ಬರುತ್ತಿದೆ. ಭಾರತ ಚೀನಾ ಗಡಿಯಲ್ಲಿ ಸೈನಿಕರ ಮುಖಾಮುಖಿ ನಡೆದಿದೆ. ಚೀನಾದ ಸೇನೆಯು ಗಡಿ ದಾಟಿ ಭಾರತೀಯ ಸೈನಿಕರ ಮೇಲೆ ಹಲ್ಲೆ ನಡೆಸಿರುವ ಘಟನೆ ನಡೆದಿದೆ.

English summary
Boycott China: Bajaj and Suzuki companies on Boycott China is says Chinese parts necessary for production.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X