ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

Breaking: ಆಲ್ಟ್‌ ನ್ಯೂಸ್‌ ಸಹಸಂಸ್ಥಾಪಕ ಮೊಹಮ್ಮದ್‌ ಜುಬೈರ್‌ಗೆ ಜಾಮೀನು

|
Google Oneindia Kannada News

ನವದೆಹಲಿ,ಜುಲೈ.15: 2018ರ ಟ್ವೀಟ್‌ ಪ್ರಕರಣಕ್ಕೆ ಸಂಬಂಧಿಸಿದಂತೆ ಮೊಹಮ್ಮದ್ ಜುಬೈರ್‌ಗೆ ದೆಹಲಿ ನ್ಯಾಯಾಲಯ ಜಾಮೀನು ನೀಡಿದೆ. ಜುಬೈರ್ ಜಾಮೀನು ಅರ್ಜಿಯ ಆದೇಶವನ್ನು ನ್ಯಾಯಾಲಯ ಗುರುವಾರ ಕಾಯ್ದಿರಿಸಿತ್ತು.

ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದ ಆರೋಪದ ಮೇಲೆ ಉತ್ತರ ಪ್ರದೇಶದ ಹಲವು ಜಿಲ್ಲೆಗಳಲ್ಲಿ ತನ್ನ ವಿರುದ್ಧ ದಾಖಲಾಗಿರುವ ಆರು ಎಫ್‌ಐಆರ್‌ಗಳನ್ನು ರದ್ದುಗೊಳಿಸುವಂತೆ ಕೋರಿ ಜುಬೇರ್ ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು. ಎಲ್ಲಾ ಪ್ರಕರಣಗಳಲ್ಲಿ ಮಧ್ಯಂತರ ಜಾಮೀನು ಕೋರಿದ್ದರು.

ಹಿಂದೂ ದೇವತೆಯ ವಿರುದ್ಧ 2018ರಲ್ಲಿ ಮಾಡಿದ್ದ ಆಕ್ಷೇಪಾರ್ಹ ಟ್ವೀಟ್‌ಗೆ ಸಂಬಂಧಿಸಿದ ಪ್ರಕರಣದಲ್ಲಿ ದೆಹಲಿಯಲ್ಲಿ ನ್ಯಾಯಾಂಗ ಬಂಧನದಲ್ಲಿದ್ದ ಜುಬೇರ್ ಅವರನ್ನು ದೆಹಲಿ ಪೊಲೀಸ್ ಬೆಂಗಾವಲುನೊಂದಿಗೆ ತಿಹಾರ್ ಜೈಲಿನಿಂದ ಹತ್ರಾಸ್ ನ್ಯಾಯಾಲಯಕ್ಕೆ ಕರೆತರಲಾಗಿತ್ತು. ಬಳಿಕ ಅವರ ವಕೀಲ ಉಮಂಗ್ ರಾವತ್ ಅವರು ಈ ವಿಷಯವು ನಾಲ್ಕು ವರ್ಷಗಳಷ್ಟು ಹಳೆಯದಾಗಿರುವ ಕಾರಣ ಪತ್ರಕರ್ತನ ಬಂಧನವನ್ನು ರಾಜಕೀಯ ಒತ್ತಡದಿಂದ ಮಾಡಲಾಗಿದೆ ಎಂದು ವಾದಿಸಿದರು.

Bail for Alt News co-founder Mohammad Zubair

ದೆಹಲಿ ಪೊಲೀಸ್ ವಿಶೇಷ ಪಬ್ಲಿಕ್ ಪ್ರಾಸಿಕ್ಯೂಟರ್ ಅತುಲ್ ಶ್ರೀವಾಸ್ತವ ಅವರು ಮೊಹಮ್ಮದ್ ಜುಬೇರ್ ಅವರ ಜಾಮೀನು ಅರ್ಜಿಯನ್ನು ವಿರೋಧಿಸಿ ಈ ಹಂತದಲ್ಲಿ ಜಾಮೀನು ನೀಡಬಾರದು ಎಂದು ಸಲ್ಲಿಸಿದ್ದರು. ದೆಹಲಿ ಪೊಲೀಸರು, ಮೊಹಮ್ಮದ್ ಜುಬೇರ್ ನಿರ್ದೇಶಕರಾಗಿರುವ ಸಂಸ್ಥೆಯಿಂದ ಎಫ್‌ಸಿಆರ್‌ಎ ಉಲ್ಲಂಘಿಸಿ 56 ಲಕ್ಷ ರೂಪಾಯಿಗಳನ್ನು ಸ್ವೀಕರಿಸಲಾಗಿದೆ. ನಾವು ಈ ಸಂಬಂಧ ನೋಟಿಸ್ ನೀಡಿದ್ದೇವೆ. ಈ ಪ್ರಕರಣದಲ್ಲಿ ನಕಲಿ ಸಹಿ ಕೂಡ ಇದೆ. ಹೀಗಾಗಿ ಬ್ಯಾಂಕಿನ ನೋಟಿಸ್‌ ಅನ್ನು ಈಗಾಗಲೇ ನೀಡಲಾಗಿದೆ ಎಂದು ತಿಳಿಸಿದ್ದರು.

Bail for Alt News co-founder Mohammad Zubair

ಈ ಕೃತ್ಯವನ್ನು ಯೋಜಿತವಾಗಿ ಮಾಡಲಾಗಿದೆ ಎಂದು ಪೊಲೀಸರು ಆರೋಪಿಸಿದ್ದಾರೆ. ಜುಬೈರ್ ಅವರ ವಕೀಲರು ಯೋಜಿಸಿದಂತೆ ಇದು ಸರಳವಲ್ಲ ಎಂದು ದೆಹಲಿ ಪೊಲೀಸ್ ವಕೀಲರು ಹೇಳಿದ್ದರು. ದೆಹಲಿ ಪೊಲೀಸ್ ವಿಶೇಷ ಪಬ್ಲಿಕ್ ಪ್ರಾಸಿಕ್ಯೂಟರ್ ಅತುಲ್ ಶ್ರೀವಾಸ್ತವ ಅವರು ಸೆಷನ್ಸ್ ನ್ಯಾಯಾಲಯದ ಮುಂದೆ ಜುಬೈರ್ ಟ್ವೀಟ್ ಮೂಲಕ ಸಮುದಾಯದ ಭಾವನೆಗಳಿಗೆ ಧಕ್ಕೆ ತಂದಿದ್ದಾರೆ ಎಂದು ವಾದಿಸಿದ್ದರು.

English summary
A Delhi court has granted bail to Mohammad Zubair in a case related to his offensive tweet against a Hindu deity in 2018.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X