ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನರೇಂದ್ರ ಮೋದಿಗೆ ಷರತ್ತು ಹಾಕಿದ ಬಾಬಾ ರಾಮದೇವ್!

|
Google Oneindia Kannada News

ನವದೆಹಲಿ, ಜ.4 : "ವೃದ್ಧರ ಪಕ್ಷ ದೇಶವನ್ನು ಕೊಳ್ಳೆ ಹೊಡೆದು ಇಂತಹ ಸ್ಥಿತಿಗೆ ತಂದಿಟ್ಟಿದೆ. ಆದ್ದರಿಂದ ನಾನು ಬಿಜೆಪಿ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ ಅವರಿಗೆ ಬೆಂಬಲ ನೀಡುತ್ತೇನೆ, ಅವರ ಪರವಾಗಿ ಪ್ರಚಾರ ಮಾಡುತ್ತೇನೆ. ಆದರೆ, ಅವರು ಕಪ್ಪುಹಣವನ್ನು ಭಾರತಕ್ಕೆ ತರಬೇಕು" ಎಂದು ಯೋಗಗುರು ಬಾಬಾ ರಾಮದೇವ್ ಹೇಳಿದ್ದಾರೆ.

ಶನಿವಾರ ದೆಹಲಿಯಲ್ಲಿ ಮಾತನಾಡಿದ ಬಾಬಾ ರಾಮದೇವ್, ಬಿಜೆಪಿ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ ಅವರಿಗೆ ಬೆಂಬಲ ಘೋಷಿಸಿದ್ದಾರೆ. ಆದರೆ, ಮೋದಿಗೆ ಕೆಲವೊಂದು ಷರತ್ತುಗಳನ್ನು ಹಾಕಿದ್ದಾರೆ. ಮೋದಿ ವಿದೇಶಗಳಲ್ಲಿರುವ ಕಪ್ಪುಹಣವನ್ನು ಭಾರತಕ್ಕೆ ತರುತ್ತೇನೆ ಎಂದು ಭರವಸೆ ನೀಡಿದರೆ, ಅವರಿಗೆ ಸಂಪೂರ್ಣ ಬೆಂಬಲ ನೀಡುತ್ತೇನೆ ಎಂದು ಹೇಳಿದರು.

Baba Ramdev

ವಿದೇಶಗಳಲ್ಲಿರುವ ಕಪ್ಪುಹಣವನ್ನು ನರೇಂದ್ರ ಮೋದಿ ಅವರು ದೇಶಕ್ಕೆ ತರುವ ಜೊತೆಗೆ ಅದನ್ನು ರಾಷ್ಟ್ರೀಯ ಸಂಪತ್ತು ಎಂದು ಘೋಷಿಸುವುದಾಗಿ ಭರವಸೆ ನೀಡಿದರೆ ತಮ್ಮ ಸಂಪೂರ್ಣ ಬೆಂಬಲ ನೀಡುತ್ತೇನೆ. ಜೊತೆಗೆ ಮೋದಿ ಅವರ ಪರವಾಗಿ ಮನೆ ಮನೆಗೆ ತೆರಳಿ ಪ್ರವಾರ ನಡೆಸುತ್ತೇನೆ ಎಂದು ತಿಳಿಸಿದರು.

ಬಿಜೆಪಿ ನಾಯಕರನ್ನು ಭಾನುವಾರ ತಾವು ಭೇಟಿ ಮಾಡಲಿದ್ದು, ಭೇಟಿಯ ಸಂದರ್ಭದಲ್ಲಿ ತಮ್ಮ ಬೆಂಬಲದ ಬಗ್ಗೆ ಅವರಿಗೆ ತಿಳಿಸುತ್ತೇನೆ. ಅಂತೆಯೇ ಷರತ್ತುಗಳ ಕುರಿತಾಗಿಯೂ ಮಾಹಿತಿ ನೀಡುತ್ತೇನೆ ಎಂದು ಬಾಬಾ ರಾಮದೇವ್ ಹೇಳಿದರು. ದೇಶದ ಅಭಿವೃದ್ಧಿಯಾಗಬೇಕಾದರೆ ಅದು ಮೋದಿಯಿಂದ ಮಾತ್ರ ಸಾಧ್ಯ ಎಂದು ಅವರು ಪ್ರತಿಪಾದಿಸಿದರು.

ವೃದ್ಧರ ಪಕ್ಷ ಕಾಂಗ್ರೆಸ್ : ಕಾಂಗ್ರೆಸ್ ನೇತೃತ್ವದ ಯುಪಿಎ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ ಬಾಬಾ ರಾಮದೇವ್, ಕಾಂಗ್ರೆಸ್ ಅನ್ನು ವೃದ್ಧರ ಪಕ್ಷ ಎಂದು ವ್ಯಂಗ್ಯವಾಡಿದರು. ದೇಶವನ್ನು ಹಾಳು ಮಾಡಿದ್ದು ವೃದ್ಧರ ಪಕ್ಷದ ಸಾಧನೆಯಾಗಿದೆ ಎಂದು ಆರೋಪಿಸಿದರು. [ಮೋದಿ ಪ್ರಧಾನಿಯಾದರೆ ದುರಂತ]

ಪ್ರಧಾನಿ ಮನಮೋಹನ್ ಸಿಂಗ್ ಅವರ ಪತ್ರಿಕಾಗೋಷ್ಠಿ ಬಗ್ಗೆ ಕುಟುಕಿದ ರಾಮದೇವ್, ಅವರರೂಪಕ್ಕೊಮ್ಮೆ ಪತ್ರಿಕಾಗೋಷ್ಠಿ ನಡೆಸುವ ಪ್ರಧಾನು, ಅದರಲ್ಲಿ ನರೇಂದ್ರ ಮೋದಿ ಬಗ್ಗೆ ಮಾತನಾಡಿದ್ದು, ವಿಶೇಷವಾಗಿತ್ತು. ಉಳಿದವು ಕೇವಲ ಸಮರ್ಥನೆಗಳಾಗಿತ್ತು ಎಂದರು. ದೇಶದಲ್ಲಿ ಹಣದುಬ್ಬರ ಹೆಚ್ಚಳಕ್ಕೆ ಕಾಂಗ್ರೆಸ್‌ನ ತಪ್ಪು ಆರ್ಥಿಕ ನೀತಿಗಳು ಕಾರಣ ಎಂದು ರಾಮದೇವ್ ಆರೋಪಿಸಿದರು.

English summary
Yoga Guru Baba Ramdev will perform perversion in favor of BJP's Prime Ministerial candidate Narendra Modi. Ramdev has already ordered the workers for the same. He claimed that nobody can compete with Modi.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X