ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪತಂಜಲಿಯಿಂದ ಕೊರೊನಾ ಸೋಂಕಿಗೆ 'ಪುರಾವೆ ಆಧಾರಿತ' ಕೊರೊನಿಲ್ ಮಾತ್ರೆ

|
Google Oneindia Kannada News

ನವದೆಹಲಿ,ಫೆಬ್ರವರಿ 19: ಪತಂಜಲಿಯು ಕೊರೊನಾ ಸೋಂಕಿಗೆ ಪುರಾವೆ-ಆಧಾರಿತ ಕೊರೊನಿಲ್ ಮಾತ್ರೆಯನ್ನು ಸಿದ್ಧಪಡಿಸಿದೆ ಎಂದು ಯೋಗ ಗುರು ಬಾಬಾ ರಾಮ್‌ದೇವ್ ತಿಳಿಸಿದ್ದಾರೆ.

ಬಾಬಾ ರಾಮ್‌ದೇವ್ ಮಾತನಾಡಿ, ತಮ್ಮ ಆಯುರ್ವೇದ ಬ್ರ್ಯಾಂಡ್ ಪತಂಜಲಿ ಸಂಸ್ಥೆ ಕೊರೊನಾ ಔಷಧಿ ಕೊರೊನಿಲ್ ಮಾತ್ರೆಗಳನ್ನು ಬಿಡುಗಡೆ ಮಾಡಿದ್ದು ಈ ಔಷಧಿ ಸೇವಿಸಿದವರಲ್ಲಿ ಕೊರೊನಾ ಸೋಂಕು ಗುಣಮುಖವಾಗಿರುವುದು ಪುರಾವೆ ಸಹಿತ ಸಾಬೀತಾಗಿದೆ ಎಂದು ಹೇಳಿದ್ದಾರೆ.

ಮಹಾರಾಷ್ಟ್ರದಲ್ಲಿ ರೂಪಾಂತರಿ ಕೊರೊನಾ ವೈರಸ್ ಪತ್ತೆ: ವಿಜ್ಞಾನಿಗಳು ಹೇಳಿದ್ದೇನು?ಮಹಾರಾಷ್ಟ್ರದಲ್ಲಿ ರೂಪಾಂತರಿ ಕೊರೊನಾ ವೈರಸ್ ಪತ್ತೆ: ವಿಜ್ಞಾನಿಗಳು ಹೇಳಿದ್ದೇನು?

ಈ ಬೆಳವಣಿಗೆ ಬೆನ್ನಲ್ಲೇ ಪತಂಜಲಿ ಸಂಸ್ಥೆ ತನ್ನ ಕೊರೊನಾ ಔಷಧಿಯ ಲೇಬಲ್ ಬದಲಿಸಿ, ಕೆಮ್ಮು, ಶೀತ, ಜ್ವರ ಹಾಗೂ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುವ ಔಷಧಿ ಎಂದು ಪ್ರಚಾರ ಮಾಡಿತು. ಇನ್ನು ಪತಂಜಲಿ ಸಂಸ್ಥೆ ಹೇಳಿರುವಂತೆ ಈ ಕೊರೊನಿಲ್ ಕಿಟ್ ಅನ್ನು ಅಕ್ಟೋಬರ್ ವರೆಗೂ 85 ಲಕ್ಷ ಯೂನಿಟ್ ಗಳನ್ನು ಮಾರಾಟ ಮಾಡಲಾಗಿದೆ ಎಂದು ಹೇಳಿಕೊಂಡಿದೆ.

ಕೊರೊನಾ ಸೋಂಕನ್ನು ಗುಣಪಡಿಸಬಲ್ಲದು

ಕೊರೊನಾ ಸೋಂಕನ್ನು ಗುಣಪಡಿಸಬಲ್ಲದು

ಪತಂಜಲಿ ಬಿಡುಗಡೆ ಮಾಡಿರುವ ಕೊರೊನಿಲ್ ಮಾತ್ರೆಗಳು ಕೊರೊನಾ ಸೋಂಕು ಗುಣಪಡಿಸಬಲ್ಲ ಗುಣಹೊಂದಿದೆ. ಇದು ಸಂಶೋಧನೆಗಳಲ್ಲಿ ಸಾಬೀತಾಗಿದ್ದು, ಕೊರೋನಿಲ್ ಔಷಧಿ ಕೋವಿಡ್ -19 ಗೆ ಪುರಾವೆ ಆಧಾರಿತ ಔಷಧ ಎಂದು ಕಂಪನಿ ಹೇಳಿಕೊಂಡಿದೆ. ಅಂತೆಯೇ 158 ದೇಶಗಳಲ್ಲಿ ಕೊರೊನಾಗೆ ಚಿಕಿತ್ಸೆ ನೀಡಲು ಔಷಧಿ ಸಹಾಯ ಮಾಡುತ್ತದೆ ಎಂದು ಪತಂಜಲಿ ಆಯುರ್ವೇದ ಟ್ವೀಟ್ ಮಾಡಿದೆ.

ಕೊರೊನಿಲ್ ಉತ್ತಮ ಔಷಧಿಯಾಗಬಹುದು

ಕೊರೊನಿಲ್ ಉತ್ತಮ ಔಷಧಿಯಾಗಬಹುದು

ಇದೇ ವಿಚಾರವಾಗಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಬಾಬಾ ರಾಮ್ ದೇವ್, ಲಸಿಕೆ ಹೊರತು ಪಡಿಸಿದರೆ ವಿಶ್ವಾದ್ಯಂತ ಕೊರೊನಾ ಸೋಂಕಿಗೆ ಯಾವುದೇ ಔಷಧಿ ಇಲ್ಲ. ಆದರೆ ಕೊರೊನಿಲ್ ಕೋವಿಡ್-19ಗೆ ಉತ್ತಮ ಔಷಧವಾಗಬಹುದು ಎಂದು ಹೇಳಿದ್ದಾರೆ.

ಆರೋಗ್ಯ ಇಲಾಖೆಯ ವಿರೋಧ

ಆರೋಗ್ಯ ಇಲಾಖೆಯ ವಿರೋಧ

ಇನ್ನು ಬಾಬಾ ರಾಮ್ ದೇವ್ ಅವರು ಕೊರೊನಾ ಸೋಂಕಿಗೆ ಔಷಧಿ ಕಂಡುಹಿಡಿದಿರುವುದಾಗಿ ಹೇಳಿಕೊಂಡಿರುವುದು ಇದೇ ಮೊದಲೇನಲ್ಲ.. ಈ ಹಿಂದೆ ಲಸಿಕೆ ಆವಿಷ್ಕಾರಕ್ಕೂ ಮುನ್ನ ಇದೇ ಬಾಬಾ ರಾಮ್ ದೇವ್ ಅವರು ಇದೇ ಕೊರೊನಿಲ್ ಕಿಟ್ ಅನ್ನು ಕೊರೊನಾ ಸೋಂಕಿಗೆ ಔಷಧಿ ಎಂದು ಹೇಳಿದ್ದರು. ಆದರೆ ಈ ಪ್ರಚಾರಕ್ಕೆ ಕಿಡಿಕಾರಿದ್ದ ಕೇಂದ್ರ ಆರೋಗ್ಯ ಇಲಾಖೆ ಕೊರೊನಾ ಸೋಂಕಿಗೆ ಈ ವರೆಗೂ ಸಾಬೀತು ಪಡಿಸಿದ ಔಷಧಿ ಇಲ್ಲ, ಹೀಗಾಗಿ ಯಾವುದೇ ಔಷಧಿಯನ್ನು ಕೊರೊನಾ ಔಷಧಿ ಎಂದು ಪ್ರಚಾರ ಮಾಡಬಾರದು ಎಂದು ಹೇಳಿತ್ತು.

85 ಲಕ್ಷ ಯೂನಿಟ್‌ಗಳ ಮಾರಾಟ

85 ಲಕ್ಷ ಯೂನಿಟ್‌ಗಳ ಮಾರಾಟ

ಪತಂಜಲಿ ಸಂಸ್ಥೆ ಹೇಳಿರುವಂತೆ ಈ ಕೊರೊನಿಲ್ ಕಿಟ್ ಅನ್ನು ಅಕ್ಟೋಬರ್ ವರೆಗೂ 85 ಲಕ್ಷ ಯೂನಿಟ್ ಗಳನ್ನು ಮಾರಾಟ ಮಾಡಲಾಗಿದೆ ಎಂದು ಹೇಳಿಕೊಂಡಿದೆ.

English summary
Baba Ramdev's ayurveda brand, Patanjali, has launched Coronil tablets, which the company claims is the evidence-based medicine for Covid-19. The announcement which was tweeted by Patanjali Ayurved, says the medicine will help treat Corona in 158 countries.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X