ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪತಂಜಲಿಯ ಕೊರೊನಿಲ್‌ಗೆ ಅನುಮತಿ ನೀಡಿದ ಆಯುಷ್ ಸಚಿವಾಲಯ

|
Google Oneindia Kannada News

ದೆಹಲಿ, ಜುಲೈ 1: ಕೊರೊನಾ ವೈರಸ್‌ಗೆ ಔಷಧ ಎಂದು ಪ್ರಚಾರ ಪಡೆದುಕೊಂಡಿದ್ದ ಪತಂಜಲಿಯ ಕೊರೊನಿಲ್ ಔಷಧ ಮಾರಾಟಕ್ಕೆ ಕೇಂದ್ರ ಆಯುಷ್ ಸಚಿವಾಲಯ ಅಂತಿಮವಾಗಿ ಅನುಮತಿ ನೀಡಿದೆ. ಆದರೆ, ಕೊರೊನಾ ಔಷಧಿ ಎಂದಲ್ಲ, ರೋಗ ನಿರೋಧಕ ಶಕ್ತಿ ಹೆಚ್ಚಿಸುವ ಔಷಧ ಎಂದು ಗುರುತಿಸಿದೆ.

Recommended Video

Zameer Ahmed Khan : ವಿವಾದಕ್ಕೆ ಕಾರಣವಾಯ್ತು ಶಾಸಕ ಜಮೀರ್ ಅಹಮ್ಮದ್ ಖಾನ್ 'ಪಾದಪೂಜೆ'! | Oneindia Kannada

ಈ ಕುರಿತು ಬುಧವಾರ ಒಪ್ಪಿಗೆ ಸೂಚಿಸಿದ್ದು, ರೋಗ ನಿರೋಧಕ ಶಕ್ತಿ ಹೆಚ್ಚಿಸುವ ಔಷಧ ಎಂದು ಪ್ರಚಾರ ಮಾಡಿ ಮಾರಾಟ ಮಾಡಬಹುದು ಎಂದಿದೆ. ಯಾವುದೇ ಕಾರಣಕ್ಕೂ ಕೊವಿಡ್‌ಗೆ ಔಷಧಿ ಎನ್ನುಂವತಿಲ್ಲ ಎಂದು ಹೇಳಿದೆ.

ಕೊರೊನಿಲ್ ನಿಷೇಧಿಸಲು ಅರ್ಜಿ: ಬಾಬಾ ರಾಮದೇವ್‌ಗೆ ಕೋರ್ಟ್ ನೋಟಿಸ್ಕೊರೊನಿಲ್ ನಿಷೇಧಿಸಲು ಅರ್ಜಿ: ಬಾಬಾ ರಾಮದೇವ್‌ಗೆ ಕೋರ್ಟ್ ನೋಟಿಸ್

ಯೋಗಗುರು ಬಾಬಾ ರಾಮದೇವ್ ಸಹ ಬುಧವಾರ ಈ ಬಗ್ಗೆ ಪ್ರತಿಕ್ರಿಯೆ ನೀಡಿದ್ದು, ಕೊರೊನಿಲ್ ಬಗ್ಗೆ ಈಗ ಯಾವುದೇ ವಿವಾದ ಇಲ್ಲ, ಆಯುಷ್ ಸಚಿವಾಲಯ ಅನುಮತಿ ನೀಡಿದೆ. ಕೊರೊನಿಲ್ ವಿಚಾರವಾಗಿ ಪತಂಜಲಿ ಕಾರ್ಯವನ್ನು ಶ್ಲಾಘಿಸಿದೆ ಎಂದು ಹೇಳಿದ್ದಾರೆ.

Ayush Ministry Allowed To Sale Of Coronil As Immunity Booster

ಈ ಮೂಲಕ ದೇಶಾದ್ಯಂತ ಪತಂಜಲಿ ಕೊರೊನಿಲ್ ಔಷಧ ಲಭ್ಯವಾಗಲಿದೆ. ಇದಕ್ಕೆ ಯಾವುದೇ ಮಿತಿಯಿಲ್ಲ ಎಂದು ಬಾಬಾ ರಾಮದೇವ್ ಸ್ಪಷ್ಟಪಡಿಸಿದ್ದಾರೆ. ಇದಕ್ಕೂ ಮುಂಚೆ ಕೊರೊನಿಲ್ ಬಿಡುಗಡೆ ಮಾಡಿದಾಗ ಕೊರೊನಾ ವೈರಸ್ ರೋಗವನ್ನು ಗುಣಪಡಿಸುವ ಸಾಮರ್ಥ್ಯ ಹೊಂದಿದೆ ಎಂದು ಬಾಬಾ ರಾಮದೇವ್ ಹೇಳಿಕೊಂಡಿದ್ದರು.

ಮತ್ತೊಂದೆಡೆ ಉತ್ತರಾಖಂಡ್ ಹೈ ಕೋರ್ಟ್‌ನಲ್ಲಿ ಪತಂಜಲಿ ಕೊರೊನಿಲ್ ಔಷಧಿಯನ್ನು ನಿಷೇಧಿಸುವಂತೆ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಲಾಗಿದೆ. ಅರ್ಜಿ ಸ್ವೀಕರಿಸಿರುವ ಉತ್ತರಾಖಂಡ್ ನ್ಯಾಯಾಲಯ ಪತಂಜಲಿ ಸಂಸ್ಥೆ ಮಾಲೀಕ ಯೋಗಗುರು ಬಾಬಾ ರಾಮದೇವ್, ದಿವ್ಯ ಫಾರ್ಮಸಿ, ನಿಮ್ಸ್ ವಿಶ್ವವಿದ್ಯಾಲಯ, ರಾಜ್ಯ ಸರ್ಕಾರ ಹಾಗೂ ಕೇಂದ್ರ ಸರ್ಕಾರಕ್ಕೆ ವಿವರಣೆ ನೀಡುವಂತೆ ನೋಟಿಸ್ ಜಾರಿ ಮಾಡಿದೆ.

English summary
After one week full of controversy, Ayush ministry allowed to sale of Patanjali Coronil as immunity booster.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X