ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಆಯುಷ್ ವೈದ್ಯರಿಗೆ ಕೇವಲ ಕೊರೊನಾ ಬೂಸ್ಟರ್‌ಗಳನ್ನು ನೀಡಲು ಮಾತ್ರ ಅನುಮತಿ

|
Google Oneindia Kannada News

ನವದೆಹಲಿ, ಡಿಸೆಂಬರ್1: ಕೊವಿಡ್ 19 ರೋಗ ನಿವಾರಣೆಗೆ ಔಷಧಿ ನೀಡುತ್ತಿದ್ದೇವೆ ಎಂದು ಆಯುರ್ವೇದ, ಹೋಮಿಯೋಪತಿ ವೈದ್ಯರು ಚಿಕಿತ್ಸೆ ಅಥವಾ ಪ್ರಚಾರ ಮಾಡುವಂತಿಲ್ಲ. ಆದರೆ ರೋಗನಿರೋಧಕ ಔಷಧವನ್ನು ನೀಡಬಹುದಾಗಿದೆ ಎಂದು ಸುಪ್ರೀಂಕೋರ್ಟ್‌ಗೆ ಕೇಂದ್ರ ಸರ್ಕಾರ ತಿಳಿಸಿದೆ.

ಕೊವಿಡ್ 19 ರೋಗಕ್ಕೆ ಔಷಧಿ ಎಂದು ಚಿಕಿತ್ಸೆ ಅಥವಾ ಪ್ರಚಾರ ಮಾಡುವುದನ್ನು ನಿಷೇಧಿಸಿ ಕೇರಳ ಹೈಕೋರ್ಟ್ ನೀಡಿದ್ದ ಆದೇಶವನ್ನು ಪ್ರಶ್ನಿಸಿ ಸುಪ್ರೀಂಕೋರ್ಟ್‌ಗೆ ಅರ್ಜಿ ಸಲ್ಲಿಸಲಾಗಿದೆ.

ಭಾರತದಲ್ಲಿ ಮೊದಲ ಕೊರೊನಾ ಲಸಿಕೆ ಯಾವುದು, ಸಿಗುವುದು ಯಾವಾಗ? ಭಾರತದಲ್ಲಿ ಮೊದಲ ಕೊರೊನಾ ಲಸಿಕೆ ಯಾವುದು, ಸಿಗುವುದು ಯಾವಾಗ?

ಈ ಅರ್ಜಿಗೆ ಸಂಬಂಧಿಸಿ ಸುಪ್ರೀಂಕೋರ್ಟ್‌ಗೆ ಪ್ರಮಾಣಪತ್ರ ಸಲ್ಲಿಸಿರುವ ಕೇಂದ್ರ ಆಯುಷ್ ಇಲಾಖೆ ಈಗಾಗಲೇ ಈ ಸಂಬಂಧ ಎರಡು ಮಾರ್ಗಸೂಚಿ ಹೊರಡಿಸಲಾಗಿದೆ.

Ayush Doctors Can Prescribe Medicine As Immunity Booster, Not Covid Cure

ಕೊವಿಡ್ ರೋಗ ನಿವಾರಕ ಔಷಧವೆಂದು ರೋಗಿಗಳಿಗೆ ಚಿಕಿತ್ಸೆ ನೀಡಬಾರದು, ಕೇಂದ್ರ ಸರ್ಕಾರ ಅನುಮೋದನೆ ನೀಡಿರುವ ಮಾತ್ರೆಗಳನ್ನು ಮಾತ್ರ ರೋಗನಿರೋಧಕರ ಔಷಧವೆಂದು ರೋಗಿಗಳಿಗೆ ನೀಡಬಹುದು ಎಂದು ಹೇಳಿದೆ.ಆದರೆ ಎಲ್ಲಿಯೂ ಕೊರೊನಾ ನಿವಾರಕ ಎಂದು ಹೇಳುವಂತಿಲ್ಲ ಎಂದು ಹೇಳಿದೆ.

ಭಾರತ ಹಾಗೂ ವಿಶ್ವವು ವಿಶೇಷ ತುರ್ತು ವೈದ್ಯಕೀಯ ಪರಿಸ್ಥಿತಿ ಎದುರಿಸುತ್ತಿದೆ, ಹೀಗಿರುವಾಗ ಭಾರತದ ಪಾರಂಪರಿಕ ಚಿಕಿತ್ಸಾ ವಿಧಾನಗಳಿಗೆ ಅವಕಾಶ ನೀಡುವುದು ಅಗತ್ಯ ಹೀಗಾಗಿ ಕೇಂದ್ರ ಸರ್ಕಾರ ತನ್ನ ಮಾರ್ಗಸೂಚಿಯಲ್ಲಿ ಈಗಾಗಲೇ ಸ್ಪಷ್ಟಪಡಿಸಿದಂತೆ ಇಮ್ಯೂನಿಟಿ ಬೂಸ್ಟರ್‌ಗಳನ್ನು ಆಯುಷ್ , ಹೋಮಿಯೋಪತಿ ಹಾಗೂ ಸಿದ್ಧ ಯುನಾನಿ ಔಷಧಗಳನ್ನು ನೀಡಬಹುದಾಗಿದೆ. ಈ ಕುರಿತು ಕೇಂದ್ರ ಸರ್ಕಾರದಲ್ಲಿ ಯಾವುದೇ ಗೊಂದಲವಿಲ್ಲ ಎಂದು ಸ್ಪಷ್ಟಪಡಿಸಿದೆ.

English summary
Qualified AYUSH doctors and homoeopaths can prescribe government-approved tablets and mixtures only as immunity booster for Covid-19, the Ministry of Ayush told the Supreme Court Tuesday.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X