ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅಯೋಧ್ಯೆಯಲ್ಲಿ ಶ್ರೀರಾಮ ಪ್ರತಿಮೆ ಸ್ಥಾಪನೆ: ಎತ್ತರ, ಖರ್ಚು ಪೂರ್ಣ ಮಾಹಿತಿ

|
Google Oneindia Kannada News

ನವದೆಹಲಿ, ಅಕ್ಟೋಬರ್ 16: ಅಯೋಧ್ಯೆಯಲ್ಲಿ 251 ಮೀಟರ್ ಎತ್ತರದ ಶ್ರೀರಾಮ ಪ್ರತಿಮೆ ಸ್ಥಾಪನೆಯಾಗುತ್ತಿದ್ದು, 2500 ಕೋಟಿ ರೂ ವೆಚ್ಚವಾಗಲಿದೆ.

ಒಟ್ಟು 100 ಎಕರೆ ವಿಸ್ತೀರ್ಣದಲ್ಲಿ ಶ್ರೀರಾಮ ಪ್ರತಿಮೆ ಸ್ಥಾಪನೆ ಮಾಡಲಾಗುತ್ತಿದೆ. ಕೇವಲ ಶ್ರೀರಾಮನ ಪ್ರತಿಮೆ ನಿರ್ಮಾಣವಷ್ಟೇ ಅಲ್ಲದೆ ಅಯೋಧ್ಯೆಯ ಸಂಪೂರ್ಣ ಅಭಿವೃದ್ಧಿಯನ್ನು ಕೈಗೆತ್ತಿಕೊಳ್ಳಲಾಗುವುದು ಎಂದು ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ತಿಳಿಸಿದ್ದಾರೆ.

ರಾಮಜನ್ಮ ಭೂಮಿ ಆಸ್ತಿ ಹಕ್ಕು ಪ್ರಕರಣ ಸುಪ್ರೀಂನಲ್ಲಿ ಅಂತಿಮ ವಿಚಾರಣೆರಾಮಜನ್ಮ ಭೂಮಿ ಆಸ್ತಿ ಹಕ್ಕು ಪ್ರಕರಣ ಸುಪ್ರೀಂನಲ್ಲಿ ಅಂತಿಮ ವಿಚಾರಣೆ

ಅಯೋಧ್ಯೆಯಲ್ಲಿ 251 ಮೀ. ಶ್ರೀರಾಮ ವಿಗ್ರಹ ಸ್ಥಾಪನೆಗೆ ಯೋಗಿ ಆದಿತ್ಯನಾಥ್‌ ನೇತೃತ್ವದ ಉತ್ತರ ಪ್ರದೇಶದ ಬಿಜೆಪಿ ಸರಕಾರ ಮುಂದಾಗಿದೆ. ಪ್ರಸಕ್ತ 183 ಮೀಟರ್‌ ಎತ್ತರದ ಸರ್ದಾರ್‌ ವಲ್ಲಭಭಾಯಿ ಪಟೇಲ್‌ ಪ್ರತಿಮೆಯೇ ಅತಿ ಎತ್ತರದ ವಿಗ್ರಹ ಎಂಬ ಹೆಗ್ಗಳಿಕೆಗೆ ಪಾತ್ರವಾಗಿತ್ತು. ಈಗ ಇದನ್ನು ಶ್ರೀ ರಾಮ ವಿಗ್ರಹ ಮೀರಿ ನಿಲ್ಲಲಿದೆ.

Ayodhyas Ram Statue Will Be Tallest In The World

ವಿಗ್ರಹ ಜೊತೆ, ಲೈಬ್ರರಿ, ವಸ್ತು ಸಂಗ್ರಹಾಲಯ, ಪಾರ್ಕಿಂಗ್, ಫುಡ್‌ ಪ್ಲಾಜಾ ನಿರ್ಮಿಸಲಾಗುತ್ತಿದೆ. ಗುಜರಾತ್ ಸರ್ಕಾರದೊಂದಿಗೆ ಒಪ್ಪಂದ ಮಾಡಿಕೊಳ್ಳಲಾಗಿದೆ. 100 ಎಕರೆ ಪ್ರದೇಶದ ಆವರಣದೊಳಗೆ ಈ ವಿಗ್ರಹ ಸ್ಥಾಪನೆಯಾಗಲಿದ್ದು, ಇದಕ್ಕೆ ಸಂಬಂಧಿಸಿದ ತಾಂತ್ರಿಕ ವಿಷಯಗಳ ಬಗ್ಗೆ ಗುಜರಾತ್‌ನೊಂದಿಗೆ ಉತ್ತರ ಪ್ರದೇಶ ಸರಕಾರದ ಉನ್ನತ ಮಟ್ಟದ ನಿಯೋಗ ಮಾತುಕತೆ ನಡೆಸಿದೆ.

. ವಿಗ್ರಹ ನಿರ್ಮಾಣ ಮಾಡುವ ಪ್ರದೇಶದಲ್ಲಿ ಡಿಜಿಟಲ್‌ ಮ್ಯೂಸಿಯಂ, ಲೈಬ್ರೆರಿ ಸೇರಿದಂತೆ ಆಧ್ಯಾತ್ಮಕ್ಕೆ ಸಂಬಂಧಪಟ್ಟ ಹಲವಾರು ಕೇಂದ್ರಗಳನ್ನು ತೆರೆಯಲು ನಿರ್ಧರಿಸಲಾಗಿದೆ.

ಈ ಕಾಮಗಾರಿಯಾಗಿ ರಾಜ್ಯ ಉತ್ಪಾದನಾ ನಿಗಮದದ ಪ್ರತ್ಯೇಕ ವಿಭಾಗವೊಂದು ಕಾರ್ಯ ನಿರ್ವಹಿಸಲಿದೆ. ಐಐಟಿ ಕಾನ್ಪುರ ಮತ್ತು ನಾಗ್ಪುರ ಮೂಲದ ರಾಷ್ಟ್ರೀಯ ಪರಿಸರ ಎಂಜಿನಿಯರಿಂಗ್‌ ಸಂಶೋಧನಾ ಸಂಸ್ಥೆಯ ನೆರವು ಪಡೆಯಲು ನಿರ್ಧರಿಸಲಾಗಿದೆ.

ವಿಶ್ವದ ಅತ್ಯಂತ ಎತ್ತರದ ವಿಗ್ರಹ ಎನ್ನುವ ಖ್ಯಾತಿಗೆ ಪಾತ್ರವಾಗಲಿದೆ. ನ್ಯೂಯಾರ್ಕ್‌ನಲ್ಲಿರುವ ಸ್ಟಾಚ್ಯೂ ಆಫ್ ಲೈಬ್ರರಿ 93 ಮೀಟರ್ ಎತ್ತರವಿದೆ. ಮುಂಬೈನಲ್ಲಿರುವ ಡಾ. ಬಿಆರ್ ಅಂಬೇಡ್ಕರ್ ಪ್ರತಿಮೆ 137.2 ಮೀಟರ್ ಎತ್ತರವಿದೆ.

ಸರ್ದಾರ್ ವಲ್ಲಭಬಾಯ್ ಪಟೇಲ್ ಪ್ರತಿಮೆ 183 ಮೀಟರ್ ಹಾಗೆಯೇ ಚೀನಾದಲ್ಲಿರುವ ಗೌತಮ ಬುದ್ಧ ಪ್ರತಿಮೆ 208 ಮೀಟರ್, ಮುಂಬೈನಲ್ಲಿರುವ ಛತ್ರಪತಿ ಶಿವಾಜಿ ಪ್ರತಿಮೆ 212 ಮೀಟರ್ ಎತ್ತರದ್ದಾಗಿದೆ.

English summary
It is now building a gigantic statue of Lord Ram in Ayodhya on the banks of the Saryu River. If and when ready, it will be the world’s tallest statu 251 Meters.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X