ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download
LIVE

Ayodhya Verdict Updates: ಅಯೋಧ್ಯೆ ತೀರ್ಪು ಶಾಂತಿ-ಸೌಹಾರ್ದತೆ ಸಂಕೇತ- ಮೋದಿ

|
Google Oneindia Kannada News

ನವದೆಹಲಿ, ನವೆಂಬರ್ 09: ಅಯೋಧ್ಯೆ ಭೂವಿವಾದದ ಐತಿಹಾಸಿಕ ತೀರ್ಪು ನವೆಂಬರ್ 09 ರಂದು ಪ್ರಕಟಗೊಂಡಿದೆ. ವಿವಾದಿತ ಭೂಮಿಯನ್ನು ಸರ್ಕಾರೇತರ ಸಂಸ್ಥೆಗೆ ನೀಡಲಾಗಿದ್ದು, ಮಸೀದಿ ನಿರ್ಮಾಣಕ್ಕೆ ಪ್ರತ್ಯೇಕ ಜಾಗ ನೀಡುವ ಹೊಣೆಯನ್ನು ಕೇಂದ್ರ ಸರ್ಕಾರಕ್ಕೆ ನೀಡಲಾಗಿದೆ.

Recommended Video

      Ayodhya Verdict : Entire Disputed 2.77-Acre Land Goes to Hindus for Ram Mandir | Oneindia Kannada

      ಅಕ್ಟೋಬರ್ ತಿಂಗಳಿನಲ್ಲಿ 40 ದಿನಗಳ ಪ್ರತಿದಿನದ ವಿಚಾರಣೆ ಬಳಿಕ ಸುಪ್ರೀಂಕೋರ್ಟಿನ ಸಾಂವಿಧಾನಿಕ ಪೀಠವು ಶನಿವಾರ(ನವೆಂಬರ್ 09) ಬೆಳಗ್ಗೆ 10.30ಕ್ಕೆ ಅಂತಿಮ ತೀರ್ಪು ನೀಡಿದೆ.

      ಸುಪ್ರೀಂ ತೀರ್ಪು: ಅಯೋಧ್ಯಾ ಭೂ ವ್ಯಾಜ್ಯ ಅಂತ್ಯ, ಮಂದಿರ-ಮಸೀದಿಗೆ ಹಂಚಿಕೆಸುಪ್ರೀಂ ತೀರ್ಪು: ಅಯೋಧ್ಯಾ ಭೂ ವ್ಯಾಜ್ಯ ಅಂತ್ಯ, ಮಂದಿರ-ಮಸೀದಿಗೆ ಹಂಚಿಕೆ

      ತೀರ್ಪಿನಲ್ಲಿ ರಾಮಜನ್ಮಭೂಮಿ ವಿವಾದಿತ ಜಾಗವನ್ನು ರಾಮಜನ್ಮಭೂಮಿ ನ್ಯಾಸ ಟ್ರಸ್ಟ್ ಗೆ ನೀಡುವಂತೆ ಸುಪ್ರೀಂ ಕೋರ್ಟ್ ಸೂಚನೆ ನೀಡಿದ್ದು, ಸುನ್ನಿ ವಕ್ಫ್ ಬೋರ್ಡಿಗೆ ಮಸೀದಿ ನಿರ್ಮಾಣಕ್ಕಾಗಿ 5 ಎಕರೆ ಪರ್ಯಾಯ ಜಮೀನು ನೀಡುವಂತೆ ಸುಪ್ರೀಂ ಕೋರ್ಟ್ ಸರ್ಕಾರಕ್ಕೆ ಸೂಚನೆ ನೀಡಿದೆ.

      Ayodhya Verdict Live Updates: Supreme Court To Deliver Historical Judgement

      1992 ರ ಬಾಬ್ರಿ ಮಸೀದಿ ಧ್ವಂಸ ಪ್ರಕರಣದ ಸಮಯದಲ್ಲಿ ಒಟ್ಟು 67 ಎಕರೆ ಭೂಮಿಯನ್ನು ವಶಪಡಿಸಿಕೊಳ್ಳಲಾಗಿತ್ತು. ಅದರಲ್ಲಿ ಕೇವಲ 2.7 ಎಕರೆ ಭೂಮಿಯಷ್ಟೇ ವಿವಾದಾತ್ಮಕ ಸ್ಥಳವಾಗಿದ್ದು, ಉಳಿದವು ವಿವಾದಮುಕ್ತವಾಗಿವೆ. ಆದ್ದರಿಂದ ಈ ಭೂಮಿಯ ವಾರಸುದಾರರಾದ ರಾಮ ಜನ್ಮಭೂಮಿ ನ್ಯಾಸ್ ಟ್ರಸ್ಟ್ ಗೆ ಅದನ್ನು ಹಿಂದಿರುಗಿಸಬೇಕು ಎಂದು ಕೇಂದ್ರ ಸರ್ಕಾರ ಮನವಿ ಮಾಡಿತ್ತು. 2.77 ಎಕರೆ ವಿಸ್ತೀರ್ಣದ ಭೂಮಿಯನ್ನು ಸದ್ಯಕ್ಕೆ ಸುನ್ನಿ ವಕ್ಫ್ ಬೋರ್ಡ್, ನಿರ್ಮೋಹಿ ಅಖಾರ ಹಾಗು ರಾಮ್ ಲಲ್ಲಾ ಸಮಾನಾಗಿ ಹೊಂದಿವೆ.

      ಅಯೋಧ್ಯಾ ಪ್ರಕರಣ Timeline : 1528 ರಿಂದ 2019ರ ತನಕ ಕಾಲಾನುಕ್ರಮದಲ್ಲಿಅಯೋಧ್ಯಾ ಪ್ರಕರಣ Timeline : 1528 ರಿಂದ 2019ರ ತನಕ ಕಾಲಾನುಕ್ರಮದಲ್ಲಿ

      2010ರ ಅಲಹಾಬಾದ್ ಹೈಕೋರ್ಟ್ ಆದೇಶದ ವಿರುದ್ಧ 14ಕ್ಕೂ ಅಧಿಕ ಮೇಲ್ಮನವಿಯನ್ನು ಸುಪ್ರೀಂಕೋರ್ಟಿನಲ್ಲಿ ಸಲ್ಲಿಸಲಾಗಿತ್ತು. ಅಲಹಾಬಾದ್ ಕೋರ್ಟ್ ಆದೇಶವನ್ನು ಬದಿಗೊತ್ತಿ, ವಾರಸುದಾರರಾದ ರಾಮ ಜನ್ಮಭೂಮಿ ನ್ಯಾಸ್ ಟ್ರಸ್ಟ್ ಗೆ ವಿವಾದಿತ ಭೂಮಿ ಹಾಗೂ ಮಸೀದಿ ನಿರ್ಮಾಣಕ್ಕಾಗಿ ಸುನ್ನಿ ವಕ್ಫ್ ಬೋರ್ಡ್ ಗೆ ಪ್ರತ್ಯೇಕವಾಗಿ 5 ಎಕರೆ ಭೂಮಿ ನೀಡುವ ಹೊಣೆ ಕೇಂದ್ರ ಸರ್ಕಾರಕ್ಕೆ ನೀಡಲಾಗಿದೆ.

      Newest FirstOldest First
      6:54 PM, 9 Nov

      ಅಯೋಧ್ಯೆಯ ರಾಮಮಂದಿರದ ಕುರಿತು ಸುಪ್ರೀಂಕೋರ್ಟ್ ಐತಿಹಾಸಿಕ ತೀರ್ಪು ಹಿನ್ನೆಲೆ. ತೀರ್ಪನ್ನು ಸ್ವಾಗತಿಸಿದ ಬಿಜೆಪಿಯ ಹಿರಿಯ ಮುಖಂಡ ಲಾಲ್ ಕೃಷ್ಣ ಅಡ್ವಾಣಿ. ನಾನು ಕೋರ್ಟ್ ತೀರ್ಪನ್ನು ತುಂಬು ಹೃದಯದಿಂದ ಸ್ವಾಗತಿಸುತ್ತೇನೆ. ದೇಶದ ಎಲ್ಲರೂ ಕೋರ್ಟ್ ತೀರ್ಪನ್ನು ಸ್ವಾಗತಿಸಬೇಕು ಎಂದ ಎಲ್.ಕೆ.ಅಡ್ವಾಣಿ.
      6:47 PM, 9 Nov

      ಐತಿಹಾಸಿಕ ತೀರ್ಪು ನೀಡಿದ ಸುಪ್ರೀಂಕೋರ್ಟ್ ಗೆ ಧನ್ಯವಾದ. ನ್ಯಾಯಾಲಯದ ಆದೇಶ ದೇಶದ ಶಾಂತಿ ಮತ್ತು ಸೌಹಾರ್ದತೆಯ ಸಂಕೇತ ಎಂದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್.
      6:46 PM, 9 Nov

      ಅಯೋಧ್ಯೆ ವಿವಾದ ಕುರಿತು ಸುಪ್ರೀಂಕೋರ್ಟ್ ತೀರ್ಪು ಹಿನ್ನೆಲೆಯಲ್ಲಿ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಸುದ್ದಿಗೋಷ್ಠಿ
      6:23 PM, 9 Nov

      ಭವಿಷ್ಯದ ಭಾರತಕ್ಕಾಗಿ ಈಗ ಎಲ್ಲರೂ ಒಂದಾಗಿ ಕೆಲಸ ಮಾಡಬೇಕಿದೆ. ನವೆಂಬರ್,09ರಂದು ಬರ್ಲಿನ್ ಗೋಡೆಯನ್ನು ಕೆಡವಲಾಗಿತ್ತು. ಇಂದು ಕೂಡಾ ನವೆಂಬರ್.09 ಆಗಿದ್ದು, ದೇಶ ಕಟ್ಟಲು ಸುಪ್ರೀಂಕೋರ್ಟ್ ಸಮ್ಮತಿ ನೀಡಿದೆ.
      6:21 PM, 9 Nov

      ಸುಪ್ರೀಂಕೋರ್ಟ್ ತೀರ್ಪನ್ನು ಸರ್ವಾನುಮತಗಳಿಂದ ನೀಡಲಾಗಿದೆ. ಶಾಂತಿ ಮತ್ತು ಸೌಹಾರ್ದತೆಯ ಸಂಕೇತವೇ ಇಂದಿನ ತೀರ್ಪು. ಕೋರ್ಟ್ ಇಂದು ನೀಡಿರುವ ತೀರ್ಪು ಮುಂದಿನ ಪೀಳಿಗೆ ಮೇಲೆ ಪ್ರಭಾವ ಬೀರಲಿದೆ. ನಮ್ಮ ಸ್ನೇಹ, ಸಹಬಾಳ್ವೆ, ಸಾಮರಸ್ಯ, ದೇಶದ ಅಭಿವೃದ್ಧಿಗೆ ಬಹುಮುಖ್ಯವಾಗಿದೆ. ಪ್ರಜಾಪ್ರಭುತ್ವ ಎಷ್ಟು ಪ್ರಬಲವಾಗಿದೆ ಎಂಬುದು ಸಾಬೀತಾಗಿದೆ. ದೇಶದಲ್ಲಿ ಈಗ ಎಲ್ಲರೂ ಒಂದಾಗಿ, ಒಗ್ಗಟ್ಟಾಗಿ ದೇಶವನ್ನು ಕಟ್ಟುವ ಕೆಲಸ ಮಾಡಬೇಕಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು.
      6:16 PM, 9 Nov

      ನವೆಂಬರ್.೦೯ ದೇಶದಲ್ಲಿ ಹೊಸ ಇತಿಹಾಸ ಸೃಷ್ಟಿಯಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು. ಅಯೋಧ್ಯೆ ರಾಮಮಂದಿರ ತೀರ್ಪು ಹೊರಬೀಳುತ್ತಿದ್ದಂತೆ ದೇಶವನ್ನು ಉದ್ದೇಶಿಸಿ ನರೇಂದ್ರ ಮೋದಿ ಭಾಷಣ ಮಾಡಿದರು. ದಶಕಗಳಿಂದ ನಡೆಯುತ್ತಿದ್ದ ವಿಚಾರಣೆ ಇಂದು ಮುಕ್ತಾಯವಾಗಿದೆ. ವಿಭಿನ್ನ ಪಥದಲ್ಲಿದ್ದ ಎರಡು ಸಮುದಾಯಗಳು ಒಂದಾಗಿವೆ. ಅಯೋಧ್ಯೆ ತೀರ್ಪು ಶಾಂತಿ ಮತ್ತು ಸೌಹಾರ್ದತೆಯ ಸಂಕೇತವಾಗಿದೆ ಎಂದರು.
      5:14 PM, 9 Nov

      ಸುಪ್ರೀಂ ತೀರ್ಪಿನ ಬಗ್ಗೆ ತಕರಾರಿಲ್ಲವೆಂದ ಮೂಲ ಅರ್ಜಿದಾರ ಟೈಲರ್!

      ದೇಶದ ಜನತೆಯ ಕುತೂಹಲ ಕೆರಳಿಸಿದ್ದ ಆಯೋಧ್ಯೆಯ ರಾಮ ಜನ್ಮಭೂಮಿ ಭೂ ವಿವಾದ ಇತ್ಯರ್ಥಗೊಂಡಿದೆ. ಅಯೋಧ್ಯೆಯಲ್ಲಿರುವ ರಾಮಜನ್ಮ ಭೂಮಿ ಆಸ್ತಿ ಹಕ್ಕು ಪ್ರಕರಣಕ್ಕೆ ಸಂಬಂಧಿಸಿದಂತೆ ಸುಪ್ರೀಂಕೋರ್ಟಿನ ಸಾಂವಿಧಾನಿಕ ನ್ಯಾಯಪೀಠವು ಶನಿವಾರ(ನವೆಂಬರ್ 09) ಬೆಳಗ್ಗೆ ಅಂತಿಮ ತೀರ್ಪು ಪ್ರಕಟಿಸಿದೆ. ವಿವಾದಿತ ಭೂಮಿ ಮಂದಿರಕ್ಕೆ, ಮಸೀದಿಗೆ ಪ್ರತ್ಯೇಕ ಜಾಗ ಹಂಚಿಕೆ ಮಾಡಿ ತೀರ್ಪು ನೀಡಲಾಗಿದೆ. ವರ್ಷಾನುವರ್ಷದಿಂದ ಕಗ್ಗಂಟಾಗಿದ್ದ ಈ ಸಿವಿಎಲ್ ಕೇಸಿಗೆ ಸಂಬಂಧಿಸಿದಂತೆ ತಕರಾರು ಅರ್ಜಿ ಸಲ್ಲಿಸಿದ್ದ ಅಯೋಧ್ಯಾ ನಿವಾಸಿ ದರ್ಜಿ ಕುಟುಂಬಸ್ಥರು ಸುಪ್ರೀಂಕೋರ್ಟಿನ ತೀರ್ಪನ್ನು ಸ್ವಾಗತಿಸಿದ್ದಾರೆ.
      Advertisement
      5:12 PM, 9 Nov

      ಮೇಲ್ಮನವಿ ಸಲ್ಲಿಸದಿರಲು ಸುನ್ನಿ ವಕ್ಫ್ ಬೋರ್ಡ್ ನಿರ್ಧಾರ

      ಅಯೋಧ್ಯಾ ಜಾಮಾ ಮಸೀದಿ ಶಾಹಿ ಇಮಾಮ್ ಅವರು ಸುಪ್ರೀಂಕೋರ್ಟಿನ ತೀರ್ಪನ್ನು ಸ್ವಾಗತಿಸಿದ್ದಾರೆ. ಇಂಡಿಯಾ ಟುಡೇ ಟಿವಿ ಜೊತೆ ಮಾತನಾಡುತ್ತಾ, ಸುಪ್ರೀಂ ತೀರ್ಪನ್ನು ಒಪ್ಪಿಕೊಳ್ಳುತ್ತೇವೆ. ಈ ಬಗ್ಗೆ ಮುಸ್ಲಿಮರಲ್ಲಿ ಯಾವುದೇ ತಕರಾರಿಲ್ಲ, ಮತ್ತೊಮ್ಮೆ ಮೇಲ್ಮನವಿ ಸಲ್ಲಿಸಬಾರದು ಎಂಬುದು ಜಮಾ ಮಸೀದಿಯ ಇಮಾಮ್ ಗಳ ಅಭಿಪ್ರಾಯ ಎಂದಿದ್ದಾರೆ.
      5:07 PM, 9 Nov

      ಅಯೋಧ್ಯಾ ಪ್ರಕರಣದಲ್ಲಿ ಸುಪ್ರೀಂನಿಂದ ಅಂತಿಮ ತೀರ್ಪು ಬಂದಿರುವುದು ಅಯೋಧ್ಯಾ ನಿವಾಸಿಯಾಗಿ ನನಗೆ ನೆಮ್ಮದಿ ತಂದಿದೆ. ಬಹುಕಾಲದಿಂದ ವಿಚಾರಣೆ ಹಂತದಲ್ಲೇ ಮುಂದುವರೆದಿದ್ದ ಈ ಪ್ರಕರಣವು ಅಂತ್ಯಗೊಂಡಿದ್ದು ದೊಡ್ಡ ಸಂತಸದ ವಿಷ್ಯವಾಗಿದೆ ಎಂದರು. ಸುಪ್ರೀಂ ತೀರ್ಪನ್ನು ಗೌರವಿಸುತ್ತೇವೆ, ಸರ್ಕಾರವು ತನ್ನ ಹೊಣೆಯನ್ನು ಅರಿತು ಮಸೀದಿಗೆ ಸೂಕ್ತ ಜಾಗವನ್ನು ನೀಡಿದರೆ, ಮುಸ್ಲಿಮರಿಗೂ ವಿಜಯ ಸಿಕ್ಕಂತಾಗುತ್ತದೆ ಎಂದು ಹೇಳಿದರು. **
      4:47 PM, 9 Nov

      "ಅಯೋಧ್ಯೆ ತೀರ್ಪಿನ ನಂತರ ನಾನು ಎಲ್ ಕೆ ಅಡ್ವಾಣಿ ಅವರಿಗೆ ಅಭಿನಂದನೆ ಸಲ್ಲಿಸಲು ತೆರಳಲಿದ್ದೇನೆ. ಅವರ ರಥ ಯಾತ್ರೆಯಿಂದಲೇ ಇವೆಲ್ಲ ಸಾಧ್ಯವಾಗಿದ್ದು. ನಾನು ಅವರನ್ನು ಭೇಟಿ ಮಾಡಿ, ಆಶೀರ್ವಾದ ಪಡೆಯುತ್ತೇನೆ"- ಉದ್ಧವ್ ಠಾಕ್ರೆ
      4:22 PM, 9 Nov

      "ಇಡೀ ದೇಶವೇ ಅಯೋಧ್ಯೆ ತೀರ್ಪನ್ನು ಸ್ವಾಗತಿಸಿದೆ. ಬಿಜೆಪಿಗೆ ಇದನ್ನು ರಾಜಕೀಯಕ್ಕೆ ಬಳಸಿಕೊಳ್ಳುವ ಅವಶ್ಯಕತೆ ಇಲ್ಲ"-ನಳೀನ್ ಕುಮಾರ್ ಕಟೀಲ್, ಬಿಜೆಪಿ ರಾಜ್ಯಾಧ್ಯಕ್ಷ
      4:20 PM, 9 Nov

      ಅಯೋಧ್ಯಾ ತೀರ್ಪು: ಗಮನಿಸಬೇಕಾದ ಕುತೂಹಲಕಾರಿ 10 ಸಂಗತಿಗಳು

      ಏಳು ದಶಕದಷ್ಟು ಹಳೆಯದಾದ ರಾಮಜನ್ಮಭೂಮಿ- ಬಾಬ್ರಿ ಮಸೀದಿ ಭೂ ವಿವಾದ ಪ್ರಕರಣದ ಕುರಿತು ಸುಪ್ರೀಂಕೋರ್ಟ್‌ನ ಐವರು ನ್ಯಾಯಮೂರ್ತಿಗಳನ್ನು ಒಳಗೊಂಡ ಸಾಂವಿಧಾನಿಕ ಪೀಠ ಒಮ್ಮತದ ತೀರ್ಪು ಪ್ರಕಟಿಸಿದೆ. ಸುಪ್ರೀಂಕೋರ್ಟ್ ಪ್ರಕಟಿಸಿದ ತೀರ್ಪಿನಲ್ಲಿ ಇರುವ ಪ್ರಮುಖ ಅಂಶಗಳೇನು? ಇಲ್ಲಿವೆ ಓದಿ.
      Advertisement
      3:37 PM, 9 Nov

      "ಇಂದು ಸುಪ್ರೀಂ ಕೋರ್ಟ್ ಐತಿಹಾಸಿಕ ತೀರ್ಪು ನೀಡಿದೆ. ಕಳೆದ ಎಪ್ಪತ್ತು ವರ್ಷಗಳಿಂದ ವಿವಾದದಲ್ಲಿದ್ದ ಪ್ರಕರಣಕ್ಕೆ ಅಂತ್ಯ ದೊರಕಿದೆ. ಈ ತೀರ್ಪನ್ನು ನಾನು ಗೌರವಿಸುತ್ತೇನೆ"- ರವಿಶಂಕರ್ ಗುರೂಜಿ
      3:02 PM, 9 Nov

      ತೀರ್ಪು ಸ್ವಾಗತಾರ್ಹ, ಮಸೀದಿ ಕಟ್ಟಲು ಹಿಂದುಗಳೂ ನೆರವಾಗಲಿ: ಬಾಬಾ ರಾಮದೇವ್
      2:27 PM, 9 Nov

      ದೇಶದ ಅತ್ಯುಚ್ಚ ನ್ಯಾಯಾಲಯ ನೀಡಿದ ತೀರ್ಪು ದೇಶದ ನಂಬಿಕೆಯ ಪರಂಪರೆಯನ್ನು ಎತ್ತಿ ಹಿಡಿದಿದೆ . ಇದು ಯಾರ ಪರವೂ ಅಲ್ಲ ವಿರುದ್ದವೂ ಅಲ್ಲ . ಈ ತೀರ್ಪನ್ನು ಎಲ್ಲ ಧರ್ಮದ ಜನರು ದೂರ ದೃಷ್ಟಿಯಿಂದ ಸಮಾನ ಚಿತ್ತರಾಗಿ ಸ್ವೀಕರಿಸಿದರೆ ಅದರಲ್ಲೇ ದೇಶದ ಉಜ್ವಲ ಭವಿಷ್ಯ ಅಡಗಿದೆ-ಸದಾನಂದ ಗೌಡ, ಕೇಂದ್ರ ಸಚಿವ
      2:25 PM, 9 Nov

      ಆರೆಸ್ಸೆಸ್ ನ ಅಡಿಪಾಯವಿಲ್ಲದೆ ರಾಮ ಚಳವಳಿ ಇಷ್ಟು ಸುದೀರ್ಘ ಕಾಲ ಮುಂದುವರಿಯುತ್ತಿರಲಿಲ್ಲ-ಸುಬ್ರಮಣಿಯನ್ ಸ್ವಾಮಿ, ಬಿಜೆಪಿ ಮುಖಂಡ
      2:08 PM, 9 Nov

      ಸುಪ್ರೀಂಕೋರ್ಟ್ ತೀರ್ಪು ತೃಪ್ತಿ ತಂದಿಲ್ಲ. ನಮಗೆ ಸಂವಿಧಾನದ ಮೇಲೆ ನಂಬಿಕೆ ಇದೆ. ನಮ್ಮ ಹಕ್ಕಿಗಾಗಿ ಹೋರಾಡುತ್ತೇವೆ. ನಮಗೆ 5 ಎಕರೆ ದಾನ ಬೇಡ-ಅಸಾದುದ್ದೀನ್ ಓವೈಸಿ
      2:05 PM, 9 Nov

      ಪ್ರತಿಯೊಬ್ಬರು ಅಯೋಧ್ಯಾ ಕುರಿತು ಸುಪ್ರೀಂಕೋರ್ಟ್ ತೀರ್ಪನ್ನು ಗೌರವಿಸಿ- ಪ್ರಿಯಾಂಕಾ ಗಾಂಧಿ
      1:27 PM, 9 Nov

      "ಈ ತೀರ್ಪು ಸಾಮಾನ್ಯ ವ್ಯಕ್ತಿಗೆ ನ್ಯಾಯಾಂಗದ ಮೇಲಿನ ಭರವಸೆ ಹೆಚ್ಚುವಂತೆ ಮಾಡಿದೆ. ನಾವೆಲ್ಲರೂ ಭ್ರಾತೃತ್ವದ ಭಾವದಿಂದ ಈ ತೀರ್ಪನ್ನು ಸ್ವೀಕರಿಸಿ, 130 ಕೋಟಿ ಭಾರತೀಯರು ಶಾಂತಿಯನ್ನು ಪ್ರತಿಪಾದಿಸಬೇಕು. ಶಾಂತಿಯೇ ನಮ್ಮ ಸ್ಫೂರ್ತಿ" ನರೇಂದ್ರ ಮೋದಿ
      1:24 PM, 9 Nov

      "ಸುಪ್ರೀಂ ಕೋರ್ಟ್ ನ ಈ ತೀರ್ಪು ಹಲವು ಕಾರಣಗಳಿಂದ ಮಹತ್ವದ್ದು. ಇದು ಒಂದು ವಿವಾದವನ್ನು ಬಗೆಹರಿಸಲು ಕಾನೂನಾತ್ಮಕ ಅಂಶಗಳು ಎಷ್ಟು ಮುಖ್ಯ ಎಂಬುದನ್ನು ತೋರಿಸಿದೆ. ತಮ್ಮ ತಮ್ಮ ವಾದವನ್ನು ಪ್ರಚುರಪಡಿಸಲು ಎರಡು ಕಡೆಯವರಿಗೂ ಸಾಕಷ್ಟು ಕಾಲ, ಅವಕಾಶ ನೀಡಲಾಗಿದೆ. ದಶಕಗಳಷ್ಟು ಹಳೆಯ ವಿವಾದವನ್ನು ನ್ಯಾಯಾಂಗದ ದೇವಾಲಯ ಸೌಹಾರ್ದಯುತವಾಗಿ ಬಗೆಹರಿಸಿದೆ"- ನರೇಂದ್ರ ಮೋದಿ
      1:10 PM, 9 Nov

      "ಅಯೋಧ್ಯೆಯ ಕುರಿತು ಸುಪ್ರೀಂ ಕೋರ್ಟ್ ಇಂದು ತನ್ನ ತೀರ್ಪನ್ನು ನೀಡಿದೆ. ಈ ತೀರ್ಪನ್ನು ನೋದಿದರೆ ಇದು ಯಾರ ಗೆಲುವೂ ಅಲ್ಲ, ಸೋಲೂ ಅಲ್ಲ. ಅದು ರಾಮಭಕ್ತಿಯಿರಲಿ, ರಹೀಮಭಕ್ತಿಯಿರಲಿ, ಭಕ್ತಿಯ ಭಾವವನ್ನು ಗಟ್ಟಿಗೊಳಿಸುವುದು ನಮ್ಮ ಕರ್ತವ್ಯ. ದೇಶಬಾಂಧವರಲ್ಲಿ ನನ್ನ ವಿನಂತಿ ಏನಂದರೆ, ದಯವಿಟ್ಟು ಶಾಂತಿ, ಸೌಹಾರ್ದ ಮತ್ತು ಒಗ್ಗಟ್ಟನ್ನು ಕಾಪಾಡಿ"- ನರೇಂದ್ರ ಮೋದಿ
      12:29 PM, 9 Nov

      "ನಾವು ಸುಪ್ರೀಂ ಕೋರ್ಟ್ ತೀರ್ಪನ್ನು ಗೌರವಿಸುತ್ತೇನೆ. ಆದರೆ ಈ ತೀರ್ಪು ನಮಗೆ ತೃಪ್ತಿ ತಂದಿಲ್ಲ"- ಜಫಾರ್ಯಾಬ್ ಜಿಲಾನಿ, ಅಖಿಲ ಭಾರತ ಮುಸ್ಲಿಂ ಪರ್ಸನಲ್ ಲಾ ಬೋರ್ಡ್
      12:22 PM, 9 Nov

      "ಸುಪ್ರೀಂ ಕೋರ್ಟ್ ಕೊನೆಗೂ ಒಂದು ತೀರ್ಪು ನೀಡಿದೆ ಎಂದು ನನಗೆ ಸಂತಸವಾಗಿದೆ. ನಾನು ಈ ತರ್ಪನ್ನು ಗೌರವಿಸುತ್ತೇನೆ" ಇಕ್ಬಾಲ್ ಅನ್ಸಾರಿ, ಸ್ವತಂತ್ರ ಅರ್ಜಿದಾರ
      12:12 PM, 9 Nov

      ಶ್ರೀರಾಮನ ಪರ ಸುಪ್ರೀಂ ಕೋರ್ಟ್ ತೀರ್ಪು. ನಾವು ಅದನ್ನು ಗೌರವಿಸುತ್ತೇವೆ- ರಣದೀಪ್ ಸಿಂಗ್ ಸುರ್ಜೇವಾಲಾ, ಕಾಂಗ್ರೆಸ್ ವಕ್ತಾರ
      12:05 PM, 9 Nov

      ಸುಪ್ರೀಂ ತೀರ್ಪು: ಅಯೋಧ್ಯಾ ಭೂ ವ್ಯಾಜ್ಯ ಅಂತ್ಯ, ಮಂದಿರ-ಮಸೀದಿಗೆ ಹಂಚಿಕೆ

      ಉತ್ತರಪ್ರದೇಶ ರಾಜ್ಯದ ಅಯೋಧ್ಯೆಯಲ್ಲಿರುವ ರಾಮಜನ್ಮ ಭೂಮಿ ಆಸ್ತಿ ಹಕ್ಕು ಪ್ರಕರಣಕ್ಕೆ ಸಂಬಂಧಿಸಿದಂತೆ ಸುಪ್ರೀಂಕೋರ್ಟಿನ ಸಾಂವಿಧಾನಿಕ ನ್ಯಾಯಪೀಠವು ಶನಿವಾರ(ನವೆಂಬರ್ 09) ಬೆಳಗ್ಗೆ ಅಂತಿಮ ತೀರ್ಪು ಪ್ರಕಟಿಸಿದೆ. ವಿವಾದಿತ ಭೂಮಿ ಮಂದಿರಕ್ಕೆ, ಮಸೀದಿಗೆ ಪ್ರತ್ಯೇಕ ಜಾಗ ಹಂಚಿಕೆ ಮಾಡಿ ತೀರ್ಪು ನೀಡಲಾಗಿದೆ.
      11:42 AM, 9 Nov

      ಅಯೋಧ್ಯೆ ವಿವಾದದ ಕುರಿತು ಸುಪ್ರೀಮ್ ಕೋರ್ಟ್ ನೀಡಿರುವ ಐತಿಹಾಸಿಕ ತೀರ್ಪನ್ನು ಸ್ವಾಗತಿಸೋಣ. ಇದು ಯಾರೊಬ್ಬರ ಗೆಲುವು ಅಥವಾ ಸೋಲು ಎಂದು ಭಾವಿಸಬೇಡಿ . ಉದ್ವೇಗಕ್ಕೆ ಒಳಗಾಗಬೇಡಿ , ಯಾರೂ ವಿಜೃಂಭಿಸಬೇಡಿ. ಸಮಾಜದ ಸಾಮರಸ್ಯ ಕದಡದೆ, ಶಾಂತಿ ಕಾಪಾಡಿಕೊಳ್ಳಿ: ಬಿ.ಎಸ್.ಯಡಿಯೂರಪ್ಪ, ಮುಖ್ಯಮಂತ್ರಿ
      11:41 AM, 9 Nov

      ಪ್ರತಿಯೊಬ್ಬರು ಅಯೋಧ್ಯೆ ಕುರಿತ ಸುಪ್ರೀಂ ಕೋರ್ಟ್ ತೀರ್ಪನ್ನು ಒಪ್ಪಿಕೊಳ್ಳಬೇಕು ಮತ್ತು ಶಾಂತಿ ಕಾಯ್ದುಕೊಳ್ಳಬೇಕು: ನಿತಿನ್ ಗಡ್ಕರಿ, ಕೇಂದ್ರ ಸಚಿವ
      11:39 AM, 9 Nov

      ತೀರ್ಪು ಹೊರಬೀಳುತ್ತಿದ್ದಂತೆಯೇ ಸುಪ್ರೀಂ ಕೋರ್ಟ್ ಆವರಣದಲ್ಲಿ ಜೈ ಶ್ರೀರಾಮ್ ಘೋಷಣೆ ಕೂಗಿದ ವಕೀಲರು
      11:28 AM, 9 Nov

      ಇದೊಂದು ಐತಿಹಾಸಿಕ ತೀರ್ಪು. ಈ ತೀರ್ಪಿನ ಮೂಲಕ ಸುಪ್ರೀಂ ಕೋರ್ಟ್ ವಿವಿಧತೆಯಲ್ಲಿ ಏಕತೆಯ ಸಂದೇಶ ನೀಡಿದೆ: ವರುಣ್ ಕುಮಾರ್ ಸಿನ್ಹಾ, ಹಿಂದು ಮಹಾಸಭಾ ವಕೀಲ
      11:15 AM, 9 Nov

      ಸುನ್ನಿ ವಕ್ಫ್ ಬೋರ್ಡ್ ಗೆ ಬೇರೆ ಎಲ್ಲಾದರೂ ಐದು ಎಕರೆ ಭೂಮಿ ನೀಡಬೇಕು: ಸುಪ್ರೀಂ ಕೋರ್ಟ್
      READ MORE

      English summary
      Ayodhya Verdict Live Updates in Kannada:"Supreme Court To deliver Ayodhya Land Dispute Verdict On November 09: Here are Live Updates
      ತಾಜಾ ಸುದ್ದಿ ತಕ್ಷಣ ಪಡೆಯಿರಿ
      Enable
      x
      Notification Settings X
      Time Settings
      Done
      Clear Notification X
      Do you want to clear all the notifications from your inbox?
      Settings X