ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅಯೋಧ್ಯೆ ವಿವಾದ: ಸಂಧಾನಕಾರರಾಗಿ ಶ್ರೀಗಳು ಬೇಡ ಎಂದ ಓವೈಸಿ, ಕಾರಣವೇನು?

|
Google Oneindia Kannada News

ನವದೆಹಲಿ, ಮಾರ್ಚ್ 08: "ಅಯೋಧ್ಯೆ ವಿವಾಧವನ್ನು ಸಂಧಾನದ ಮೂಲಕ ಬಗೆಹರಿಸಿಕೊಳ್ಳುವಂತೆ ಸುಪ್ರೀಂ ಕೋರ್ಟ್ ನೀಡಿದ ಆದೇಶ ಸ್ವಾಗತಾರ್ಹ. ಆದರೆ ಆರ್ಟ್ ಆಫ್ ಲಿವಿಂಗ್ ಸಂಸ್ಥಾಪಕ ಶ್ರೀ ರವಿಶಂಕರ್ ಗುರೂಜಿ ಅವರನ್ನು ಸಮಿತಿಯ ಸದಸ್ಯರನ್ನಾಗಿ ಮಾಡಿರುವುದು ಸರಿಯಲ್ಲ" ಎಂದು ಎಐಎಂಐಎಂ ಮುಖಂಡ ಅಸಾದುದ್ದಿನ್ ಓವೈಸಿ ಹೇಳಿದ್ದಾರೆ.

ಅಯೋಧ್ಯೆಯಲ್ಲಿ ರಾಮಜನ್ಮಭೂಮಿ ಮತ್ತು ಬಾಬ್ರಿ ಮಸೀದಿ ಭೂ ವಿವಾದಕ್ಕೆ ಸಂಬಂಧಿಸಿದಂತೆ ಕೋರ್ಟ್ ಮೇಲ್ವಿಚಾರಣೆಯಲ್ಲಿ ಸಂಧಾನದ ಮೂಲಕ ಪರಿಹಾರ ಕಂಡುಕೊಳ್ಳುವ ಕುರಿತಂತೆ ತನ್ನ ತೀರ್ಪನ್ನು ಸುಪ್ರೀಂ ಕೋರ್ಟ್ ಇಂದು(ಮಾ.08) ಬೆಳಿಗ್ಗೆ ಪ್ರಕಟಿಸಿತ್ತು. ನ್ಯಾ.ಇಬ್ರಾಹಿಂ ಖಾಲಿಫುಲ್ಲಾ, ಶ್ರೀ ರವಿಶಂಕರ್ ಗುರೂಜಿ, ಶ್ರೀರಾಮ್ ಪಂಚು ಅವರನ್ನೊಳಗೊಂಡ ತ್ರಿಸದ್ಯ ಸಮಿತಿಯನ್ನು ಸುಪ್ರೀಂ ಕೋರ್ಟ್ ನೇಮಿಸಿದ್ದು, ತೀರ್ಪು ಬಂಧ ನಾಲ್ಕು ವಾರದೊಳಗೆ ಸಂಧಾನ ಪ್ರಕ್ರಿಯೆ ಆರಂಭಿಸುವಂತೆ ಸಮಿತಿಗೆ ಸೂಚನೆ ನೀಡಿದೆ. ಎಂಟು ವಾರಗಳೊಳಗೆ ಸಂಧಾನ ಪ್ರಕ್ರಿಯೆ ಮುಕ್ತಾಯಗೊಳ್ಳಬೇಕಿದೆ.

ಅಯೋಧ್ಯೆ ವಿವಾದ : ಸುಪ್ರೀಂಕೋರ್ಟ್‌ ತೀರ್ಪಿನ 5 ಪ್ರಮುಖ ಅಂಶಗಳುಅಯೋಧ್ಯೆ ವಿವಾದ : ಸುಪ್ರೀಂಕೋರ್ಟ್‌ ತೀರ್ಪಿನ 5 ಪ್ರಮುಖ ಅಂಶಗಳು

"ಆದರೆ ಅಯೋಧ್ಯೆ ವಿವಾದಕ್ಕೆ ಸಂಬಂಧಪಟ್ಟಂತೆ ಮುಸ್ಲಿಮರ ಭಾವನೆಗಳಿಗೆ ನೋವಾಗುವಂತೆ ಮಾತನಾಡಿದ್ದ ಶ್ರೀ ರವಿಶಂಕರ್ ಗುರೂಜಿ ಅವರನ್ನು ಸಂಧಾನಕಾರರನ್ನಾಗಿ ನೇಮಿಸುವುದು ತಪ್ಪು' ಎಂದು ಓವೈಸಿ ಹೇಳಿದ್ದಾರೆ. 'ಅಯೋಧ್ಯೆಯ ಕುರಿತ ತಮ್ಮ ವಾದವನ್ನು ಮುಸ್ಲಿಮರು ಬಿಟ್ಟುಕೊಡದೆ ಇದ್ದಲ್ಲಿ ಭಾರತವೂ ಸಿರಿಯಾ ಆಗಬಹುದು' ಎಂದು ಒಮ್ಮೆ ರವಿಶಂಕರ್ ಗುರೂಜಿ ಹೇಳಿದ್ದರು ಎಂದು ದೂರಿರುವ ಓವೈಸಿ, ಆದ್ದರಿಂದ ಅವರನ್ನು ಈ ಸಮಿತಿಯಲ್ಲಿ ನೇಮಿಸುವುದು ಸರಿಯಲ್ಲ. ಒಬ್ಬ ತಟಸ್ಥ ವ್ಯಕ್ತಿಯನ್ನು ನೇಮಿಸುವುದು ಒಳಿತು'" ಎಂದಿದ್ದಾರೆ

Ayodhya dispute SC Verdict: Owaisi opposes Sri Ravi shankar as mediator

ಅಯೋಧ್ಯೆ ವಿವಾದ: ಫೈಜಾಬಾದ್ ಮೇಲೆ ಎಲ್ಲರ ಕಣ್ಣುಅಯೋಧ್ಯೆ ವಿವಾದ: ಫೈಜಾಬಾದ್ ಮೇಲೆ ಎಲ್ಲರ ಕಣ್ಣು

ಐವರು ನ್ಯಾಯಾಧೀಶರ ಸಾಂವಿಧಾನಿಕ ಪೀಠ ಈ ಕುರಿತು ಮಾ.6 ರಂದು ವಿಚಾರಣೆ ನಡೆಸಿ, ತೀರ್ಪನ್ನು ಕಾಯ್ದಿರಿಸಿತ್ತು. ಪೀಠದಲ್ಲಿ ಸುಪ್ರೀಂ ಕೋರ್ಟಿನ ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೊಯ್, ನ್ಯಾ ಎಸ್ ಎ ಬೊಬ್ದೆ, ಡಿವೈ ಚಂದ್ರಚೂಡ್, ಅಶೋಕ್ ಭೂಷಣ್, ಎಸ್ ಅಬ್ದುಲ್ ನಾಜೀರ್ ಇದ್ದಾರೆ.

ಅಯೋಧ್ಯೆ ವಿವಾದ : ಸುಪ್ರೀಂ ನೇಮಿಸಿರುವ ಮೂವರು ಸಂಧಾನಕಾರರು ಯಾರು?ಅಯೋಧ್ಯೆ ವಿವಾದ : ಸುಪ್ರೀಂ ನೇಮಿಸಿರುವ ಮೂವರು ಸಂಧಾನಕಾರರು ಯಾರು?

1992 ರ ಬಾಬ್ರಿ ಮಸೀದಿ ಧ್ವಂಸ ಪ್ರಕರಣದ ಸಮಯದಲ್ಲಿ ಒಟ್ಟು 67 ಎಕರೆ ಭೂಮಿಯನ್ನು ವಶಪಡಿಸಿಕೊಳ್ಳಲಾಗಿತ್ತು. ಅದರಲ್ಲಿ ಕೇವಲ 2.7 ಎಕರೆ ಭೂಮಿಯಷ್ಟೇ ವಿವಾದಾತ್ಮಕ ಸ್ಥಳವಾಗಿದ್ದು, ಉಳಿದವು ವಿವಾದಮುಕ್ತವಾಗಿವೆ. ಆದ್ದರಿಂದ ಈ ಭೂಮಿಯ ವಾರಸುದಾರರಾದ ರಾಮ ಜನ್ಮಭೂಮಿ ನ್ಯಾಸ್ ಟ್ರಸ್ಟ್ ಗೆ ಅದನ್ನು ಹಿಂದಿರುಗಿಸಬೇಕು ಎಂದು ಕೇಂದ್ರ ಸರ್ಕಾರ ಮನವಿ ಮಾಡಿದೆ. 2.77 ಎಕರೆ ವಿಸ್ತೀರ್ಣದ ಭೂಮಿಯನ್ನು ಸದ್ಯಕ್ಕೆ ಸುನ್ನಿ ವಕ್ಫ್ ಬೋರ್ಡ್, ನಿರ್ಮೋಹಿ ಅಖಾರ ಹಾಗು ರಾಮ್ ಲಲ್ಲಾ ಸಮಾನಾಗಿ ಹೊಂದಿವೆ.

English summary
AIMIM Chief Asaduddin Owaisi on SC order in Ayodhya case: Sri Sri Ravi Shankar who has been appointed a mediator had earlier made a statement 'if muslims don't give up their claim on Ayodhya,India will become Syria.' It would've been better if SC had appointed a neutral person.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X