• search
  • Live TV
ನವದೆಹಲಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಅಯೋಧ್ಯ ವಿವಾದ: ಲೆಕ್ಕವಿಲ್ಲದಷ್ಟು ಸಂಧಾನ, ಎಲ್ಲವೂ ವಿಫಲ!

|

ನವದೆಹಲಿ, ಮಾರ್ಚ್ 08: ಅಯೋಧ್ಯೆ ವಿವಾದಕ್ಕೆ ಸಂಬಂಧಿಸಿದಂತೆ ಸಂಧಾನ ಸಮಿತಿಯನ್ನು ಸುಪ್ರೀಂ ಕೋರ್ಟ್ ಇಂದು ನೇಮಿಸಿದೆ. "ಈ ಪ್ರಕರಣ ಆಸ್ತಿಗೆ ಸಂಬಧಿಸಿದ್ದಲ್ಲ, ಮನಸ್ಸು ಮತ್ತು ಹೃದಯಕ್ಕೆ ಸಂಬಂಧಿಸಿದ್ದು, ಆದ್ದರಿಂದ ಸಂಧಾನದ ಮೂಲಕ ಬಗೆಹರಿಸಿಕೊಳ್ಳಿ" ಎಂದು ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೊಯ್ ಹೇಳಿದ್ದಾರೆ.

ಎಂಟು ವಾರಗಳೊಳಗೆ ವಿವಾದಕ್ಕೆ ಸಂಬಂಧಿಸಿದಂತೆ ಈ ಸಮಿತಿ ಸಂಧಾನ ಪ್ರಕ್ರಿಯೆ ನಡೆಸಬೇಕು ಎಂದು ಕೋರ್ಟು ಹೇಳಿದೆ. ಆದರೆ ಅಯೋಧ್ಯೆ ವಿವಾದಕ್ಕೆ ಸಂಬಂಧಿಸಿದಂತೆ ಸಂಧಾನ ನಡೆಸುತ್ತಿರುವುದು ಇದೇ ಮೊದಲಲ್ಲ.

ಅಯೋಧ್ಯೆ ವಿವಾದ LIVE: ಸಂಧಾನದ ಕುರಿತು ಸುಪ್ರೀಂ ತೀರ್ಪು ಪ್ರಕಟ

ಇದುವರೆಗೂ ಕೋರ್ಟ್ ವತಿಯಿಂದ, ಖಾಸಗಿಯವರ ವತಿಯಿಂದ ಅದೆಷ್ಟು ಬಾರಿ ಅಯೋಧ್ಯೆ ವಿಷಯದಲ್ಲಿ ಸಂಧಾನವಾಗಿದೆಯೋ ಲೆಕ್ಕವಿಲ್ಲ. ಆದರೆ ಆ ಎಲ್ಲ ಸಂಧಾನಗಳೂ ವಿಫಲವಾಗಿವೆ.

ಐವರು ನ್ಯಾಯಾಧೀಶರ ಸಾಂವಿಧಾನಿಕ ಪೀಠ ಈ ಕುರಿತು ಮಾ.6 ರಂದು ವಿಚಾರಣೆ ನಡೆಸಿ, ತೀರ್ಪನ್ನು ಕಾಯ್ದಿರಿಸಿತ್ತು. ಪೀಠದಲ್ಲಿ ಸುಪ್ರೀಂ ಕೋರ್ಟಿನ ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೊಯ್, ನ್ಯಾ ಎಸ್ ಎ ಬೊಬ್ದೆ, ಡಿವೈ ಚಂದ್ರಚೂಡ್, ಅಶೋಕ್ ಭೂಷಣ್, ಎಸ್ ಅಬ್ದುಲ್ ನಾಜೀರ್ ಇದ್ದರು.

2010 ರಲ್ಲಿ....

2010 ರಲ್ಲಿ....

2010 ರಲ್ಲಿ ಅಲಹಾಬಾದ್ ಹೈಕೋರ್ಟಿನ ಮೂವರು ನ್ಯಾಯಮೂರ್ತಿಗಳ ಲಕ್ನೋ ಪೀಠ ಸಂಧಾನಕ್ಕೆ ಪ್ರಯತ್ನಿಸಿತ್ತು. ಆದರೆ ಅದು ಫಲಕಾರಿಯಾಗಲಿಲ್ಲ.

ಸಂಧಾನಕ್ಕೆ ನ್ಯಾ.ಜೆ.ಎಸ್ ಖೆಹರ್ ಯತ್ನ

ಸಂಧಾನಕ್ಕೆ ನ್ಯಾ.ಜೆ.ಎಸ್ ಖೆಹರ್ ಯತ್ನ

ಇದಾದ ನಂತರ ಆಗಿನ ಮುಖ್ಯ ನ್ಯಾಯಮೂರ್ತಿ ಜೆ ಎಸ್ ಖೆಹರ್ ಸಹ ಸಂಧಾನಕ್ಕೆ ಪ್ರಯತ್ನಿಸಿದ್ದರು. 'ಇದೊಂದು ಭಾವನಾತ್ಮಕ ವಿಷಯ. ಸಂಧಾನದ ಮೂಲಕವೇ ಬಗೆಹರಿಯಬೇಕು' ಎಂದಿದ್ದ ಖೇಹರ್, ಹಿಂದು-ಮುಸ್ಲಿಂ ಎರಡು ಸಮುದಾಯದ ಕಡೆಯಿಂದ ಸಂದಾಯದ ಸಲಹೆ ನೀಡಿದ್ದರು. ಆದರೆ ಅದೂ ವಿಫಲವಾಗಿತ್ತು.

ಅಯೋಧ್ಯೆ ವಿವಾದ : ಸುಪ್ರೀಂ ನೇಮಿಸಿರುವ ಮೂವರು ಸಂಧಾನಕಾರರು ಯಾರು?

ವಿಫಲವಾದ ಎಲ್ಲಾ ಸಂಧಾನಗಳು

ವಿಫಲವಾದ ಎಲ್ಲಾ ಸಂಧಾನಗಳು

* ಅದಲ್ಲದೆ 1990 ರಲ್ಲಿ ಆಗಿನ ಪ್ರಧಾನಿ ಚಂದ್ರಶೇಖರ್ ಅವರೂ ಸಂಧಾನಕ್ಕೆ ಪ್ರಯತ್ನಿಸಿದ್ದರು. ಆದರೆ ಅದು ಫಲಕೊಡಲಿಲ್ಲ.

* 1992 ರಲ್ಲಿ ಪಿ ವಿ ನರಸಿಂಹರಾವ್ ಅವರು ಪ್ರಧಾನಿಯಾಗಿದ್ದಾಗಲೂ ಹಿಂದು ಮತ್ತು ಮುಸ್ಲಿಂ ಸಮುದಾಯಗಳು ಮಾತುಕತೆಯಾಗಿ ಬಗೆಹರಿಸಿಕೊಳ್ಳಲು ಸೂಚಿಸಿದ್ದರು. ಸಂಧಾನ ನಡೆದಿತ್ತಾದರೂ ಅದರಿಂದ ಯಾವುದೇ ಫಲ ಸಿಕ್ಕಿರಲಿಲ್ಲ.

2003 ರಲ್ಲಿ ಆಗಿನ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರೂ ಸಂಧಾನದ ಮೂಲಕ ಈ ಸಮಸ್ಯೆಯನ್ನು ಬಗೆಹರಿಸಲು ಸಾಕಷ್ಟು ಪ್ತರಯತ್ನ ಮಾಡಿದ್ದರು. ಫಲ ಮಾತ್ರ ದೊರೆಯಲಿಲ್ಲ.

ಇದರೊಟ್ಟಿಗೆ ಇನ್ನೂ ಹಲವು ಸಂಧಾನದ ಯತ್ನಗಳು ನಡೆದಿದ್ದು, ಎಲ್ಲವೂ ವೈಫಲ್ಯ ಕಂಡಿವೆ.

ಅಯೋಧ್ಯೆ ವಿವಾದ: ಫೈಜಾಬಾದ್ ಮೇಲೆ ಎಲ್ಲರ ಕಣ್ಣು

ಪ್ರಕರಣವೇನು?

ಪ್ರಕರಣವೇನು?

1992 ರ ಬಾಬ್ರಿ ಮಸೀದಿ ಧ್ವಂಸ ಪ್ರಕರಣದ ಸಮಯದಲ್ಲಿ ಒಟ್ಟು 67 ಎಕರೆ ಭೂಮಿಯನ್ನು ವಶಪಡಿಸಿಕೊಳ್ಳಲಾಗಿತ್ತು. ಅದರಲ್ಲಿ ಕೇವಲ 2.7 ಎಕರೆ ಭೂಮಿಯಷ್ಟೇ ವಿವಾದಾತ್ಮಕ ಸ್ಥಳವಾಗಿದ್ದು, ಉಳಿದವು ವಿವಾದಮುಕ್ತವಾಗಿವೆ. ಆದ್ದರಿಂದ ಈ ಭೂಮಿಯ ವಾರಸುದಾರರಾದ ರಾಮ ಜನ್ಮಭೂಮಿ ನ್ಯಾಸ್ ಟ್ರಸ್ಟ್ ಗೆ ಅದನ್ನು ಹಿಂದಿರುಗಿಸಬೇಕು ಎಂದು ಕೇಂದ್ರ ಸರ್ಕಾರ ಮನವಿ ಮಾಡಿದೆ. 2.77 ಎಕರೆ ವಿಸ್ತೀರ್ಣದ ಭೂಮಿಯನ್ನು ಸದ್ಯಕ್ಕೆ ಸುನ್ನಿ ವಕ್ಫ್ ಬೋರ್ಡ್, ನಿರ್ಮೋಹಿ ಅಖಾರ ಹಾಗೂ ರಾಮ್ ಲಲ್ಲಾ ಸಮಾನಾಗಿ ಹೊಂದಿವೆ.

ಅಯೋಧ್ಯೆ ವಿವಾದ : ಸುಪ್ರೀಂಕೋರ್ಟ್‌ ತೀರ್ಪಿನ 5 ಪ್ರಮುಖ ಅಂಶಗಳು

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Ayodhya dispute: the Babri Masjid demolition case had witnessed several attempts to mediate a compromise between the opposing sides, all of which were unsuccessful
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more