ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

Ayodhya dispute: ಐವರು ನ್ಯಾಯಮೂರ್ತಿಗಳ ಪೀಠ ಹೊಸದಾಗಿ ರಚನೆ

|
Google Oneindia Kannada News

ನವದೆಹಲಿ, ಜನವರಿ 25: ರಾಜಕೀಯವಾಗಿ ಸೂಕ್ಷ್ಮ ವಿಚಾರವಾಗಿರುವ ಅಯೋಧ್ಯಾ ಬಗ್ಗೆ ಪ್ರಕರಣದ ವಿಚಾರಣೆಯು ಮುಂದಿನ ಮಂಗಳವಾರ ನಡೆಯಲಿದ್ದು, ಐವರು ನ್ಯಾಯಮೂರ್ತಿಗಳ ಪೀಠವನ್ನು ಸುಪ್ರೀಂ ಕೋರ್ಟ್ ನ ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೊಯ್ ರಚಿಸಿದ್ದಾರೆ. ಇದೀಗ ಇಬ್ಬರು ನ್ಯಾಯಮೂರ್ತಿಗಳು ಹೊಸದಾಗಿ ಸೇರ್ಪಡೆ ಆಗಿದ್ದಾರೆ.

ರಂಜನ್ ಗೊಗೊಯ್ ನೇತೃತ್ವದ ಪೀಠವು ಪ್ರಕರಣದ ವಿಚಾರಣೆಯನ್ನು ನಿರಂತರವಾಗಿ ನಡೆಸಬೇಕೆ ಹಾಗೂ ದಿನಾಂಕಗಳನ್ನು ನಿರ್ಧರಿಸಬೇಕಿದೆ. ಜನವರಿ ಹನ್ನೊಂದನೇ ತಾರೀಕು ಕಳೆದ ಬಾರಿ ವಿಚಾರಣೆ ನಡೆದಿತ್ತು. ಆಗ ನ್ಯಾಯಮೂರ್ತಿ ಯು.ಯು.ಲಲಿತ್ ಈ ಪ್ರಕರಣದಿಂದ ಹಿಂದಕ್ಕೆ ಸರಿದಿದ್ದರು. ಸಂಬಂಧಪಟ್ಟ ಪ್ರಕರಣದಲ್ಲೇ ಈ ಹಿಂದೆ ವಕೀಲನಾಗಿದ್ದೆ ಎಂದು ತಿಳಿಸಿದ್ದರು.

ಅಯೋಧ್ಯಾ ವಿವಾದ ಸಾಂವಿಧಾನಿಕ ಪೀಠಕ್ಕೆ ನೀಡಿದ್ದೇಕೆ?: ಸಿಜೆಐ ವಿವರಣೆಅಯೋಧ್ಯಾ ವಿವಾದ ಸಾಂವಿಧಾನಿಕ ಪೀಠಕ್ಕೆ ನೀಡಿದ್ದೇಕೆ?: ಸಿಜೆಐ ವಿವರಣೆ

ನ್ಯಾ. ಅಬ್ದುಲ್ ನಜೀರ್ ಹಾಗೂ ನ್ಯಾ.ಅಶೋಕ್ ಭೂಷಣ್ ಅವರನ್ನು ಶುಕ್ರವಾರ ಸೇರ್ಪಡೆ ಮಾಡಲಾಗಿದೆ. ಈ ಹಿಂದೆ ಇದ್ದ ಮೂವರು ನ್ಯಾಯಮೂರ್ತಿಗಳ ಪೀಠದಲ್ಲಿ ಇವರಿಬ್ಬರು ಇದ್ದರು. ಇನ್ನು ಐವರು ನ್ಯಾಯಮೂರ್ತಿಗಳನ್ನು ಒಳಗೊಂಡ ಪೀಠದಲ್ಲಿ ನ್ಯಾ.ಎಸ್.ಎ.ಬೋಬಡೆ, ನ್ಯಾ.ಚಂದ್ರಚೂಡ್ ಕೂಡ ಇದ್ದಾರೆ.

Ayodhya dispute: New bench formed by chief justice, hearing on Tuesday

ಅಯೋಧ್ಯಾ ವಿವಾದ: ನ್ಯಾಯಪೀಠದಿಂದ ಉದಯ್ ಲಲಿತ್ ಹಿಂದೆ ಸರಿದಿದ್ದೇಕೆ?ಅಯೋಧ್ಯಾ ವಿವಾದ: ನ್ಯಾಯಪೀಠದಿಂದ ಉದಯ್ ಲಲಿತ್ ಹಿಂದೆ ಸರಿದಿದ್ದೇಕೆ?

ನ್ಯಾ.ಎನ್.ವಿ.ರಾಮಣ್ಣ ಅವರು ಜನವರಿ ಹತ್ತರಂದು ವಿಚಾರಣೆ ನಡೆದಾಗ ಪೀಠದ ಭಾಗವಾಗಿದ್ದರು. ಇದೀಗ ಹೊಸ ಪೀಠದಲ್ಲಿ ಅವರು ಇಲ್ಲ.

English summary
Chief Justice of India Ranjan Gogoi today reconstituted the five-judge Constitution bench of the Supreme Court that will hear the politically sensitive Ayodhya case next Tuesday by adding two new judges to it. The bench led by the Chief Justice will decide on a schedule and the frequency of hearings in the case.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X