ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

Ayodhya Case Final Hearing Live Updates: ಅಯೋಧ್ಯೆ ವಿಚಾರಣೆ ಅಂತ್ಯ, ತೀರ್ಪು ಕಾಯ್ದಿರಿಸಿದ ಸುಪ್ರೀಂ ಕೋರ್ಟ್

|
Google Oneindia Kannada News

Recommended Video

      Ram Janmabhoomi-Babri Masjid dispute ends today | Oneindia Kannada

      ನವದೆಹಲಿ, ಅಕ್ಟೋಬರ್ 16: ಅಯೋಧ್ಯೆಯಲ್ಲಿರುವ ರಾಮಜನ್ಮ ಭೂಮಿ ಆಸ್ತಿ ಹಕ್ಕು ಪ್ರಕರಣಕ್ಕೆ ಸಂಬಂಧಿಸಿದಂತೆ ಕಳೆದ 40 ದಿನಗಳ ನಡೆದ ಪ್ರತಿದಿನ ವಿಚಾರಣೆ ಅಕ್ಟೋಬರ್ 16ಕ್ಕೆ ಅಂತ್ಯಗೊಳ್ಳುತ್ತಿದೆ.

      ಜಸ್ಟೀಸ್ ಬೊಬ್ಡೆ ಅವರಲ್ಲದೆ, ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೊಯ್, ಜಸ್ಟೀಸ್ ಚಂದ್ರಚೂಡ್, ಜಸ್ಟೀಸ್ ಭೂಷಣ್, ಜಸ್ಟೀಸ್ ಅಬ್ದುಲ್ ನಜೀರ್ ಅವರನ್ನೊಳಗೊಂಡ ನ್ಯಾಯಪೀಠವು, ಅಕ್ಟೋಬರ್ 17ರೊಳಗೆ ಈ ಕೇಸಿಗೆ ಸಂಬಂಧಿಸಿದ ಎಲ್ಲಾ ವಿಚಾರಣೆಯನ್ನು ಅಂತಿಮಗೊಳಿಸಲಿದೆ. ನವೆಂಬರ್ 4-5ರಂದು ಅಂತಿಮ ತೀರ್ಪು ಹೊರ ಬೀಳುವ ಸಾಧ್ಯತೆಯಿದೆ. ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೊಯ್ ಅವರು ನವೆಂಬರ್ 17ರಂದು ನಿವೃತ್ತಿ ಹೊಂದುತ್ತಿರುವುದರಿಂದ ಈ ಪ್ರಕರಣದ ತೀರ್ಪಿನ ಬಗ್ಗೆ ಕುತೂಹಲ ಇನ್ನಷ್ಟು ಹೆಚ್ಚಾಗಿದೆ.

      25 ವರ್ಷಗಳ ಬಾಬ್ರಿ ಮಸೀದಿ ವಿವಾದ, ಟೈಮ್ ಲೈನ್25 ವರ್ಷಗಳ ಬಾಬ್ರಿ ಮಸೀದಿ ವಿವಾದ, ಟೈಮ್ ಲೈನ್

      ಏನಿದು ಪ್ರಕರಣ?: 1992 ರ ಬಾಬ್ರಿ ಮಸೀದಿ ಧ್ವಂಸ ಪ್ರಕರಣದ ಸಮಯದಲ್ಲಿ ಒಟ್ಟು 67 ಎಕರೆ ಭೂಮಿಯನ್ನು ವಶಪಡಿಸಿಕೊಳ್ಳಲಾಗಿತ್ತು. ಅದರಲ್ಲಿ ಕೇವಲ 2.7 ಎಕರೆ ಭೂಮಿಯಷ್ಟೇ ವಿವಾದಾತ್ಮಕ ಸ್ಥಳವಾಗಿದ್ದು, ಉಳಿದವು ವಿವಾದಮುಕ್ತವಾಗಿವೆ. ಆದ್ದರಿಂದ ಈ ಭೂಮಿಯ ವಾರಸುದಾರರಾದ ರಾಮ ಜನ್ಮಭೂಮಿ ನ್ಯಾಸ್ ಟ್ರಸ್ಟ್ ಗೆ ಅದನ್ನು ಹಿಂದಿರುಗಿಸಬೇಕು ಎಂದು ಕೇಂದ್ರ ಸರ್ಕಾರ ಮನವಿ ಮಾಡಿತ್ತು.

      Ayodhya Case Final Hearing Live Updates In Kannada

      ಅಯೋಧ್ಯೆ ಪ್ರಕರಣ: ಆ 6 ರಿಂದ ಸುಪ್ರೀಂ ಕೋರ್ಟ್ ನಲ್ಲಿ ಪ್ರತಿದಿನ ವಿಚಾರಣೆಅಯೋಧ್ಯೆ ಪ್ರಕರಣ: ಆ 6 ರಿಂದ ಸುಪ್ರೀಂ ಕೋರ್ಟ್ ನಲ್ಲಿ ಪ್ರತಿದಿನ ವಿಚಾರಣೆ

      2.77 ಎಕರೆ ವಿಸ್ತೀರ್ಣದ ಭೂಮಿಯನ್ನು ಸದ್ಯಕ್ಕೆ ಸುನ್ನಿ ವಕ್ಫ್ ಬೋರ್ಡ್, ನಿರ್ಮೋಹಿ ಅಖಾರ ಹಾಗು ರಾಮ್ ಲಲ್ಲಾ ಸಮಾನಾಗಿ ಹೊಂದಿವೆ. 2010ರ ಅಲಹಾಬಾದ್ ಹೈಕೋರ್ಟ್ ಆದೇಶದ ವಿರುದ್ಧ 14ಕ್ಕೂ ಅಧಿಕ ಮೇಲ್ಮನವಿಯನ್ನು ಸುಪ್ರೀಂಕೋರ್ಟಿನಲ್ಲಿ ಸಲ್ಲಿಸಲಾಗಿತ್ತು. ಈ ಅರ್ಜಿ ವಿಚಾರಣೆ ಅಂತಿಮ ಹಂತ ತಲುಪಿದ್ದು, ತೀರ್ಪು ಹೊರಬೀಳಬೇಕಿದೆ. ಇಂದು ಕೊನೆಯದಿನದ ವಿಚಾರಣೆ ನಡೆಯುತ್ತಿದ್ದು, ಅದರ ಲಭ್ಯಮಾಹಿತಿಯ ಅಪ್ಡೇಟ್ಸ್ ಅನ್ನು 'ಒನ್ ಇಂಡಿಯಾ ಕನ್ನಡ' ನೀಡಲಿದೆ.

      Newest FirstOldest First
      4:21 PM, 16 Oct

      ಅಯೋಧ್ಯೆ ವಿಚಾರಣೆ ಅಂತ್ಯ, ತೀರ್ಪು ಕಾಯ್ದಿರಿಸಿದ ಸುಪ್ರೀಂ ಕೋರ್ಟ್
      3:39 PM, 16 Oct

      ಅಯೋಧ್ಯೆ ವಿವಾದಕ್ಕೆ ಸಂಬಂಧಿಸಿದಂತೆ ಬಿಜೆಪಿ ನಾಯಕ ಸುಬ್ರಮಣಿಯನ್ ಸ್ವಾಮಿ ಹೂಡಿದ್ದ ಅರ್ಜಿ ವಿಚಾರಣೆಗೆ ನಿರಾಕರಿಸಿದ ಸಿಜೆಐ. ದಶಕಗಳ ಹಳೆಯ ಪ್ರಕರಣ ಇದಾಗಿದ್ದು, ಇಂದೇ ವಿಚಾರಣೆ ಮುಗಿಯಬೇಕು ಎಂದಿರುವ ಗೊಗೊಯ್.
      3:07 PM, 16 Oct

      ದಾಖಲೆಗಳನ್ನು ಹರಿಯಲು ನನಗೆ ಸಿಜೆಐ ರಂಜನ್ ಗೊಗೊಯ್ ಅವರೇ ಅನುಮತಿ ನೀಡಿದ್ದರು ಎಂದು ರಾಜೀವ್ ಧವನ್ ಹೇಳಿದ್ದಾರೆ.
      1:41 PM, 16 Oct

      "ನಾವು ನ್ಯಾಯಾಲಯದ ಘನತೆಗೆ ಧಕ್ಕೆ ತರುವಂಥ ವರ್ತನೆಯನ್ನು ಎಂದಿಗೂ ಮಾಡುವುದಿಲ್ಲ. ನಾವು ಕೋರ್ಟಿನ ಘನತೆಯನ್ನು ಕಾಪಾಡುತ್ತೇನೆ. ನಮಗೆ ನ್ಯಾಯಾಲಯದ ಬಗ್ಗೆ ಸಾಕಷ್ಟು ಗೌರವವಿದೆ" ಎಂದು ಈ ಘಟನೆಗೆ ಹಿಂದು ಮಹಾಸಭಾ ಪ್ರತಿಕ್ರಿಯೆ ನೀಡಿತು.
      1:39 PM, 16 Oct

      ರಾಜೀವ್ ವರ್ತನೆಯಿಂದ ತೀವ್ರವಾಗಿ ಬೇಸರಗೊಂಡ ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೊಯ್, "ಆ ಹಾಳೆಗಳನ್ನು ಇನ್ನೂ ಹರಿದು, ಚೂರು ಚೂರು ಮಾಡಿಬಿಡಿ" ಎಂದು ವ್ಯಂಗ್ಯವಾಗಿ ಪ್ರತಿಕ್ರಿಯೆ ನೀಡಿದರು. ಜೊತೆಗೆ ಕೋರ್ಟಿನಲ್ಲಿ ಇಂಥ ವರ್ತನೆ ಸಹ್ಯವಲ್ಲ, ಇದು ಮುಂದುವರಿದರೆ ನಾನೇ ಇಲ್ಲಿಂದ ಹೊರಹೋಗುತ್ತೇನೆ ಎಂದರು.
      1:38 PM, 16 Oct

      ಕುನಾಲ್ ಕಿಶೋರ್ ಎಂಬುವವರು ಬರೆದ 'ಅಯೋಧ್ಯೆ ರಿವಿಸಿಟೆಡ್' ಎಂಬ ಪುಸ್ತವನ್ನು ಹಿರಿಯ ವಕೀಲ ವಿಕಾಸ್ ಸಿಂಗ್ ಅವರು ಕೋರ್ಟಿಗೆ ನೀಡಿದರು. ಈ ದಾಖಲೆಯನ್ನು ಸುನ್ನಿ ವಕ್ಫ್ ಬೋರ್ಡ್ ಪರವಾಗಿ ವಾದ ಮಂಡಿಸುತ್ತಿದ್ದ ಹಿರಿಯ ವಕೀಲ ರಾಜೀವ್ ಧನವ್ ಅವರು ಬಲವಾಗಿ ಖಂಡಿಸಿದರು. ಅವರಿಗೆ ನೀಡಲಾಗಿದ್ದ ಈ ಪುಸ್ತಕದ ಹಾಳೆಗಳನ್ನು ಹರಿಯುವ ಮೂಲಕ ಅವರು ತಮ್ಮ ವಿರೋಧವನ್ನು ವ್ಯಕ್ತಪಡಿಸಿದರು.
      1:38 PM, 16 Oct

      ಮುಸ್ಲಿಂ ಅರ್ಜಿದಾರರನ್ನು ಪ್ರತಿನಿಧಿಸುತ್ತಿದ್ದ ವಕೀಲ ರಾಜೀವ್ ಧವನ್, ರಾಮಜನ್ಮಸ್ಥಾನದ ನಕ್ಷೆಯನ್ನು ಕೋರ್ಟಿನಲ್ಲೇ ಹರಿದುಹಾಕುವ ಮೂಲಕ ಸಿಜೆಐ ರಂಜನ್ ಗೊಗೊಯ್ ಅವರ ಕೆಂಗಣ್ಣಿಗೆ ಗುರಿಯಾದರು.
      Advertisement
      1:17 PM, 16 Oct

      ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣವಾಗುವುದೇ ಸರಿ. ಏಕೆಂದರೆ ಹಿಂದುಗಳ ವಾದದಂತೆ ಅದು ರಾಮನ ಜನ್ಮಸ್ಥಳ ಎಂದು ಶಿವಾ ವಕ್ಫ್ ಬೋರ್ಡ್ ನ ಚೇರ್ ಪರ್ಸನ್ ವಾಸಿಮ್ ರಿಜ್ವಿ ಹೇಳುವ ಮೂಲಕ ಹಿಂದುಗಳ ವಾದಕ್ಕೆ ಬೆಂಬಲ ನೀಡಿದ್ದಾರೆ.
      12:41 PM, 16 Oct

      ವಿಚಾರಣೆಯನ್ನು 1:30 ಕ್ಕೆ ಮುಂದೂಡಿದ ರಂಜನ್ ಗೊಗೊಯ್
      12:27 PM, 16 Oct

      ನೀವು ಹೀಗೆ ಮಾಡಿದರೆ ಕೋರ್ಟಿನಿಂದ ಎದ್ದು ಹೋಗುತ್ತೇನೆ ಎಂದು ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೊಯ್ ಆಕ್ರೋಶ
      12:26 PM, 16 Oct

      ಹಿಂದು ಮಹಾಸಭಾದಿಂದ ನಕ್ಷೆ ಸಲ್ಲಿಕೆ, ಕೋರ್ಟ್‌ನಲ್ಲಿ ಅಯೋಧ್ಯೆ ನಕ್ಷೆ ಹರಿದು ಹಾಕಿದ ಮುಸ್ಲಿಂ ಕಕ್ಷಿದಾರರ ಪರ ವಕೀಲ ರಾಜೀವ್ ಧವನ್
      12:10 PM, 16 Oct

      "ವಿಚಾರಣೆ ಸಮಯದಲ್ಲಿ ನಮ್ಮನ್ನು ಮಾತ್ರ ಪ್ರಶ್ನೆ ಕೇಳಲಾಗುತ್ತಿತ್ತು, ಹಿಂದುಗಳನ್ನು ಪ್ರಶ್ನಿಸಲೇ ಇಲ್ಲ" ವಿಚಾರಣೆ ವೇಳೆ ಮುಸ್ಲಿಂ ಪಾರ್ಟಿಗಳ ಹೇಳಿಕೆ
      Advertisement
      11:52 AM, 16 Oct

      ಇಂದು 5 ಗಂಟೆಯೊಳಗೆ ವಿಚಾರಣೆಯನ್ನು ಮುಗಿಸಲೇಬೇಕು: ಮುಖ್ಯನ್ಯಾಯಮೂರ್ತಿ ರಂಜನ್ ಗೊಗೊಯ್ ತಾಕೀತು
      11:23 AM, 16 Oct

      ಸುಪ್ರೀಂಕೋರ್ಟ್‌ನಿಂದ ಅಯೋಧ್ಯೆ ಪ್ರಕರಣ ಹಿಂಪಡೆಯಲು ಸುನ್ನಿ ವಕ್ಫ್‌ ಬೋರ್ಡ್ ನಿರ್ಧಾರ
      10:49 AM, 16 Oct

      ಅಯೋಧ್ಯೆಯ ರಾಮಮಂದಿರ ಭೂ ವಿವಾದ ಪ್ರಕರಣ, ಮಧ್ಯಸ್ಥಿಕೆದಾರರಿಂದ ಇಂದು ಹೊಸ ಅರ್ಜಿ ಸಲ್ಲಿಕೆ ಸಾಧ್ಯತೆ
      10:02 AM, 16 Oct

      ವಿಚಾರಣೆ ಅಂತ್ಯಗೊಳ್ಳುತ್ತಿರುವ ಹಿನ್ನೆಲೆಯಲ್ಲಿ ಅಯೋಧ್ಯೆಯ ವಿವಾದಿತ ಜಾಗದಲ್ಲಿ ಸೆಕ್ಷನ್ 144 ಜಾರಿಗೊಳಿಸಲಾಗಿದೆ.
      9:47 AM, 16 Oct

      ಪ್ರಕರಣದ ತೀರ್ಪು ನವೆಂಬರ್ 4-5ರಂದು ಹೊರಬೀಳಬಹುದು ಎಂದು ಅಂದಾಜಿಸಲಾಗಿದೆ.
      9:27 AM, 16 Oct

      ಅಕ್ಟೋಬರ್ 17ಕ್ಕೆ ನಿಗದಿಯಾದ ಕಡೆ ದಿನದ ವಿಚಾರಣೆಯನ್ನು ನಿಗದಿಗಿಂತ ತ ಒಂದು ದಿನ ಮುಂಚಿತವಾಗಿ ಮುಗಿಸುವುದಾಗಿ ಉನ್ನತ ನ್ಯಾಯಾಲಯ ಇತ್ತೀಚೆಗೆ ಹೇಳಿತ್ತು.
      9:13 AM, 16 Oct

      ಮಂಗಳವಾರ ಸುಪ್ರೀಂ ಕೋರ್ಟ್‌ನಲ್ಲಿ ನಡೆದ ವಿಚಾರಣೆಯ ವೇಳೆ ನ್ಯಾಯಮೂರ್ತಿ ಗೊಗೊಯ್ "ಇಂದು 39 ನೇ ದಿನ. ನಾಳೆ 40 ನೇ ದಿನ ಮತ್ತು ಪ್ರಕರಣದ ವಿಚಾರಣೆಯ ಕಡೆಯ ದಿನವಾಗಿರಲಿದೆ" ಎಂದಿದ್ದರು.
      9:01 AM, 16 Oct

      1934ರಲ್ಲೇ ಮುಸ್ಲಿಮರು ಬಾಬ್ರಿ ಕಟ್ಟಡದ ಜಾಗದಲ್ಲಿ ಪ್ರತಿ ದಿನ 5 ಬಾರಿ ನಮಾಜ್ ಮಾಡುವುದನ್ನು ಬಿಟ್ಟಿದ್ದರು. 1949ರ ಡಿಸೆಂಬರ್ 22-23ರಂದು ರಾತ್ರಿ ವಿವಾದಿತ ಕಟ್ಟಡದಲ್ಲಿ ರಾಮನ ವಿಗ್ರಹಗಳನ್ನು ಸ್ಥಾಪಿಸಲಾಯಿತು, 1949ರ ಡಿಸೆಂಬರ್ ವೇಳೆಗೆ ಶುಕ್ರವಾರದ ಪ್ರಾರ್ಥನೆಯನ್ನು ನಿಲ್ಲಿಸಲಾಗಿದೆ. 1961 ರಲ್ಲಿ ಸುನ್ನಿ ವಕ್ಪ ಬೋರ್ಡ್ ಆ ಜಾಗದ ಮೇಲೆ ಹಕ್ಕು ಪ್ರತಿಪಾದನೆ ಮಾಡಿತ್ತು ಎಂದು ನಿರ್ಮೋಹಿ ಅಖಾಡದ ಪರ ವಕೀಲರು ವಾದ ಮಂಡಿಸಿದ್ದಾರೆ.
      8:38 AM, 16 Oct

      ಆಸಗ್ಟ್ 1 ರಂದು ತನ್ನ ಅಂತಿಮ ವರದಿಯನ್ನು ಈ ಸಮಿತಿ ಮುಚ್ಚಿದ ಲಕೋಟೆಯಲ್ಲಿ ಸುಪ್ರೀಂ ಕೋರ್ಟ್ ಮುಂದಿರಿಸಿತ್ತು.
      8:19 AM, 16 Oct

      ಸಂಧಾನಕಾರರ ತ್ರಿಸದಸ್ಯ ಸಮಿತಿಯಲ್ಲಿ ನ್ಯಾ.ಇಬ್ರಾಹಿಂ ಖಾಲಿಫುಲ್ಲಾ, ಶ್ರೀ ರವಿಶಂಕರ್ ಗುರೂಜಿ ಮತ್ತು ಶ್ರೀರಾಮ್ ಕಂಚು ಇದ್ದರು. ಆದರೆ ಸಂಧಾನ ವಿಫಲವಾದ ಹಿನ್ನೆಲೆಯಲ್ಲಿ ಸುಪ್ರೀಂ ಕೋರ್ಟ್ ಮತ್ತೆ ಪ್ರಕರಣವನ್ನು ಕೈಗೆತ್ತಿಕೊಂಡಿತ್ತು.
      7:57 AM, 16 Oct

      ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಸಂಧಾನದ ಮೂಲಕ ಸಮಸ್ಯೆ ಬಗೆ ಹರಿಸಿಕೊಳ್ಳುವಂತೆ ಸುಪ್ರೀಂ ಕೋರ್ಟ್ ಈ ಮೊದಲು ತಿಳಿಸಿತ್ತು. ಆ ಹಿನ್ನೆಲೆಯಲ್ಲಿ ಮೂವರು ಸಂಧಾನಕಾರರನ್ನು ಸುಪ್ರೀಂ ಕೋರ್ಟ್ ನೇಮಿಸಿತ್ತು.
      12:27 AM, 16 Oct

      ವಿಚಾರಣೆ ಆರಂಭವಾಗಿ ಅಕ್ಟೋಬರ್ 16 ಕ್ಕೆ 40 ದಿನವಾಗಲಿದೆ. ಅಕ್ಟೋಬರ್ 18 ರಂದು ವಿಚಾರಣೆಯನ್ನು ಮುಗಿಸಬೇಕು ಎಂದು ಸುಪ್ರೀಂ ಕೋರ್ಟ್ ತನ್ನ ಪೀಠಕ್ಕೆ ಸೂಚನೆ ನೀಡಿತ್ತು.
      12:27 AM, 16 Oct

      1992 ರ ಬಾಬ್ರಿ ಮಸೀದಿ ಧ್ವಂಸ ಪ್ರಕರಣದ ಸಮಯದಲ್ಲಿ ಒಟ್ಟು 67 ಎಕರೆ ಭೂಮಿಯನ್ನು ವಶಪಡಿಸಿಕೊಳ್ಳಲಾಗಿತ್ತು. ಅದರಲ್ಲಿ ಕೇವಲ 2.7 ಎಕರೆ ಭೂಮಿಯಷ್ಟೇ ವಿವಾದಾತ್ಮಕ ಸ್ಥಳವಾಗಿದ್ದು, ಉಳಿದವು ವಿವಾದಮುಕ್ತವಾಗಿವೆ.

      English summary
      Ayodhya Case Final Hearing Live Updates: Supreme Court sets October 18 deadline for completion of Ayodhya hearing, judgment likely in November first week(November 4-5). Chief Justice Ranjan Gogoi to retire on November 17.
      ತಾಜಾ ಸುದ್ದಿ ತಕ್ಷಣ ಪಡೆಯಿರಿ
      Enable
      x
      Notification Settings X
      Time Settings
      Done
      Clear Notification X
      Do you want to clear all the notifications from your inbox?
      Settings X