ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ವಿಮಾನಯಾನ ಹಗರಣ: ಯುಪಿಎ ಸರ್ಕಾರದ ಮಾಜಿ ಸಚಿವ ಪ್ರಫುಲ್ ಪಟೇಲ್‌ಗೆ ಸಂಕಷ್ಟ

|
Google Oneindia Kannada News

ನವದೆಹಲಿ, ಜೂನ್ 1: ಮನಮೋಹನ್ ಸಿಂಗ್ ನೇತೃತ್ವದ ಯುಪಿಎ ಸರ್ಕಾರದ 2008-09ರ ಅವಧಿಯಲ್ಲಿ ನಡೆದಿದೆ ಎನ್ನಲಾದ ವಿಮಾನಯಾನ ಹಗರಣಕ್ಕೆ ಸಂಬಂಧಿಸಿದಂತೆ ಕೇಂದ್ರದ ಮಾಜಿ ಸಚಿವ, ಎನ್‌ಸಿಪಿ ನಾಯಕ ಪ್ರಫುಲ್ ಪಟೇಲ್ ಅವರಿಗೆ ಜಾರಿ ನಿರ್ದೇಶನಾಲಯ ಸಮನ್ಸ್ ಜಾರಿ ಮಾಡಿದೆ.

ಆಗ ನಾಗರಿಕ ವಿಮಾನಯಾನ ಸಚಿವರಾಗಿದ್ದ ಪ್ರಫುಲ್ ಪಟೇಲ್ ಪ್ರಸ್ತುತ ರಾಜ್ಯಸಭೆ ಸದಸ್ಯರಾಗಿದ್ದಾರೆ. ಜೂನ್ 6ರಂದು ವಿಚಾರಣೆಗೆ ಹಾಜರಾಗುವಂತೆ ಜಾರಿ ನಿರ್ದೇಶನಾಲಯ ಸೂಚನೆ ನೀಡಿದೆ.

ಮಮತಾ ಆಪ್ತ ಪೊಲೀಸ್ ಅಧಿಕಾರಿ ವಿರುದ್ಧ ಲುಕೌಟ್ ನೋಟಿಸ್ಮಮತಾ ಆಪ್ತ ಪೊಲೀಸ್ ಅಧಿಕಾರಿ ವಿರುದ್ಧ ಲುಕೌಟ್ ನೋಟಿಸ್

ಸರ್ಕಾರಿ ಸ್ವಾಮ್ಯದ ಏರ್ ಇಂಡಿಯಾದ ಲಾಭದಾಯಕ ಮಾರ್ಗಗಳನ್ನು ಖಾಸಗಿ ವಿಮಾನಯಾನ ಸಂಸ್ಥೆಗಳಿಗೆ ವರ್ಗಾಯಿಸಲು ವಿಮಾನಯಾನ ಲಾಬಿಕೋರ ದೀಪಕ್ ತಲ್ವಾರ್ ಪಾತ್ರದ ಬಗ್ಗೆ ಇಡಿ ತನಿಖೆ ನಡೆಸುತ್ತಿದೆ.

aviation scam ED summoned former upa union minister praful patel

ಪ್ರಕರಣದ ಪ್ರಮುಖ ಆರೋಪಿ ದೀಪಕ್ ತಲ್ವಾರ್ ಮತ್ತು ಅವರ ಮಗ ಆದಿತ್ಯ ತಲ್ವಾರ್ ಅವರೊಂದಿಗೆ ಪ್ರಫುಲ್ ಪಟೇಲ್ ನಿಕಟ ಸಂಪರ್ಕ ಹೊಂದಿದ್ದರು ಎಂದು ಆರೋಪಿಸಲಾಗಿದೆ. ತಮಗೆ ಅನುಕೂಲಕರ ವಿಮಾನಯಾನ ಮಾರ್ಗಗಳನ್ನು ಪಡೆದುಕೊಳ್ಳಲು ಮೂರು ವಿದೇಶಿ ಸಂಸ್ಥೆಗಳಿಂದ ದೀಪಕ್ ತಲ್ವಾರ್ 272 ಕೋಟಿ ರೂಪಾಯಿ ಪಡೆದುಕೊಂಡಿದ್ದ ಎಂದು ಇಡಿ ಆರೋಪಪಟ್ಟಿಯಲ್ಲಿ ಆರೋಪಿಸಿದೆ.

ನನ್ನನ್ನು ಝೂನಲ್ಲಿರುವ ಕೋತಿ ಥರ ನೋಡಿಕೊಳ್ತಾರೆ ಎಂದು ದೂರು ಹೇಳಿಕೊಂಡ ಮೈಖೇಲ್ ಕ್ರಿಶ್ಚಿಯನ್ನನ್ನನ್ನು ಝೂನಲ್ಲಿರುವ ಕೋತಿ ಥರ ನೋಡಿಕೊಳ್ತಾರೆ ಎಂದು ದೂರು ಹೇಳಿಕೊಂಡ ಮೈಖೇಲ್ ಕ್ರಿಶ್ಚಿಯನ್

ಎಮಿರೇಟ್ಸ್ ಮತ್ತು ಏರ್ ಅರೇಬಿಯಾದ ಪರವಾಗಿ ತಲ್ವಾರ್, ಪಟೇಲ್ ಅವರೊಂದಿಗೆ ಹಲವು ಬಾರಿ ಸಂವಹನ ನಡೆಸಿದ್ದ ಎಂದು ಹೇಳಿದೆ.

ಅಪ್ಪ-ಮಗ ಇಬ್ಬರ ವಿರುದ್ಧವೂ ಜಾಮೀಉ ರಹಿತ ವಾರಂಟ್ ಹೊರಡಿಸಲಾಗಿದೆ. ಇಬ್ಬರೂ ಆಂಟಿಗುವಾದಲ್ಲಿ ಇದ್ದಾರೆ ಎನ್ನಲಾಗಿದೆ.

English summary
ED has summoned former Union Minister of aviation of UPA government Praful patel regarding alleged aviation scam.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X