ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

'ಕೈ ತೊಳೆದು ಆಟೋ ಹತ್ತಿ': ನೆಟ್ಟಿಗರಿಂದ ಆಟೋ ಡ್ರೈವರ್‌ಗೆ ಮೆಚ್ಚುಗೆ

|
Google Oneindia Kannada News

ನವ ದೆಹಲಿ, ಜೂನ್ 3: ಕೊರೊನಾ ವಿರುದ್ಧದ ಹೋರಾಟ ಮುಂದುವರೆಯುತ್ತಿದೆ. ಕೊರೊನಾ ವೈರಸ್‌ ಜೊತೆಗೆಯೇ ಜೀವನ ಮಾಡುವ ಪರಿಸ್ಥಿತಿ ನಿರ್ಮಾಣವಾಗಿದ್ದು, ಮುಂಜಾಗ್ರತೆ ಕ್ರಮಗಳನ್ನು ತೆಗೆದುಕೊಳ್ಳುವುದು ಅಗತ್ಯವಾಗಿದೆ.

Recommended Video

Good news to all you beer fans of Karnataka | Brewery | Oneindia kannada

ಸರ್ಕಾರ ಲಾಕ್‌ಡೌನ್ ಸಡಿಲಿಕೆ ನೀಡಿದೆ. ಆದರೆ, ಕೊರೊನಾ ನಮ್ಮಿಂದ ಸಂಪೂರ್ಣ ದೂರವಾಗಿಲ್ಲ ಹಾಗಾಗಿ, ಎಲ್ಲರೂ ಸುರಕ್ಷತ ಕ್ರಮಗಳನ್ನು ಪಾಲನೆ ಮಾಡಬೇಕಾಗಿದೆ. ಈ ಸಮಯದಲ್ಲಿ ಆಟೋ ಡ್ರೈವರ್‌ವೊಬ್ಬರು ತಮ್ಮ ಆಟೋದಲ್ಲಿ ಕೈ ತೊಳೆಯುವ ವ್ಯವಸ್ಥೆ ಮಾಡಿ ಎಲ್ಲರ ಗಮನ ಸೆಳೆದಿದ್ದಾರೆ.

ದೆಹಲಿಯ ತುಘಲಕಾಬಾದ್ ಸ್ಲಂನಲ್ಲಿ ಅಗ್ನಿ ಅವಘಡ: 200 ಕ್ಕೂ ಹೆಚ್ಚು ಗುಡಿಸಲು ಭಸ್ಮದೆಹಲಿಯ ತುಘಲಕಾಬಾದ್ ಸ್ಲಂನಲ್ಲಿ ಅಗ್ನಿ ಅವಘಡ: 200 ಕ್ಕೂ ಹೆಚ್ಚು ಗುಡಿಸಲು ಭಸ್ಮ

ಆರ್‌ಪಿಜಿ ಎಂಟರ್ಪ್ರೈಸಸ್ ಚೇರ್‌ಮನ್ ಹರ್ಷ ಗೋಯೆಂಕಾ ಈ ವಿಡಿಯೋವನ್ನು ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ವಿಡಿಯೋ ನೀಡಿ ಸಾಕಷ್ಟು ಮಂದಿ ಲೈಕ್ ಕಾಮೆಂಟ್‌ ನೀಡುತ್ತಿದ್ದಾರೆ. ಆಟೋ ಡ್ರೈವರ್‌ ತೆಗೆದುಕೊಂಡಿರುವ ಕ್ರಮಕ್ಕೆ ಮೆಚ್ಚುಗೆ ವ್ಯಕ್ತವಾಗಿದೆ.

Auto Rickshaw With Hand Washing And Sanitizer Facilities

ಕೊರೊನಾ ವೈರಸ್‌ನಿಂದ ದೂರ ಇರಲು ಆಗಾಗ ಕೈ ತೊಳೆಯುತ್ತಿರುವುದು ಅಗತ್ಯವಾಗಿದೆ. ಹೀಗಾಗಿ, ಆಟೋ ಡ್ರೈವರ್‌ ತಮ್ಮ ಆಟೋದಲ್ಲಿ ನೀರಿನ ಹಾಗೂ ಸ್ಯಾನಿಟೈಸರ್ ವ್ಯವಸ್ಥೆ ಮಾಡಿದ್ದಾರೆ. ಆಟೋ ಏರುವ ಮುಂಚೆ ಪ್ರಯಾಣಿಕರು ಕೈ ತೊಳೆದು ಒಳಗೆ ಬರಬೇಕಿದೆ.

ಅಂದಹಾಗೆ, ಈ ಆಟೋ ಡ್ರೈವರ್‌ ಎಲ್ಲಿಯವರು, ಎನ್ನುವುದರ ಬಗ್ಗೆ ಸ್ಪಷ್ಟ ಮಾಹಿತಿ ಸಿಕ್ಕಿಲ್ಲ. ಹರ್ಷ ಗೋಯೆಂಕಾ ಆಟೋ ಡ್ರೈವರ್‌ ವಿಡಿಯೋ ಹಂಚಿಕೊಂಡು ನಮ್ಮ ಬೆಂಗಳೂರು ಎಂದು ಟ್ಯಾಗ್ ಮಾಡಿದ್ದಾರೆ. ಆದರೆ, ವಿಡಿಯೋದಲ್ಲಿ ಮಲಯಾಳಂ ಭಾಷೆಯಲ್ಲಿ ಮಾತನಾಡುತ್ತಿದ್ದು, ಕೇರಳ ಆಟೋ ಡ್ರೈವರ್‌ ಎಂದು ಹೇಳಲಾಗುತ್ತಿದೆ.

English summary
A auto driver put hand washing and sanitizer facilities in his auto rickshaw.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X